Home
ಟೆಕ್ ನೌಕರಿ

mPassport Seva: ಹೀಗೆ ಮಾಡಿದ್ರೆ 5 ದಿನಗಳಲ್ಲಿ ಪಾಸ್‌ಪೋರ್ಟ್ ನಿಮ್ಮ 'ಕೈ' ಸೇರುತ್ತದೆ: ಅರ್ಜಿ ಸಲ್ಲಿಸುವುದು ಹೇಗೆ?

ನೀವು ಇನ್ನೂ ಪಾಸ್‌ಪೋರ್ಟ್‌ (Passport) ಪಡೆದಿಲ್ಲವೇ? ಹಾಗಿದ್ರೆ, ಹೆಚ್ಚು ಚಿಂತಿಸಬೇಕಿಲ್ಲ. ಆನ್‌ಲೈನ್‌ನಲ್ಲಿ ಸಾಧ್ಯವಾದಷ್ಟು ಬೇಗ ಪಾಸ್‌ಪೋರ್ಟ್‌ ಅನ್ನು ಪಡೆಯಬಹುದು. ಕೇಂದ್ರ ಸರ್ಕಾರ ಪರಿಚಯಿಸಿರುವ ಹೊಸ ಮೊಬೈಲ್ ಅಪ್ಲಿಕೇಶನ್ mPassport ಸೇವಾ ಅನ್ನು ಬಳಸಿ ಹೊಸ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವುದು ತುಂಬಾ ಸುಲಭ. ಇದರಿಂದ ಒಂದು ವಾರ ಅಥವಾ 10 ದಿನಗಳಲ್ಲಿ ಪಾಸ್‌ಪೋರ್ಟ್ ನಿಮ್ಮ ಕೈ ಸೇರುತ್ತೆ. mPassport ಸೇವಾ ಅಪ್ಲಿಕೇಶನ್ ಅನ್ನು ಬಳಸುವುದು ಹೇಗೆ? ಮತ್ತು ಅರ್ಜಿ ಸಲ್ಲಿಸುವುದು ಹೇಗೆ? ಎಂಬ ಬಗ್ಗೆ ನಾವಿಂದು ನಿಮಗೆ ತಿಳಿಸುತ್ತೇವೆ.

ಸರ್ಕಾರಿ ದಾಖಲೆಗಳ ಪೈಕಿ ಪಾಸ್‌ಪೋರ್ಟ್‌ ಪ್ರಮುಖವಾದುದು. ಇದು ವಿದೇಶಿ ಪ್ರಯಾಣಕ್ಕೆ ಮಾತ್ರವಲ್ಲದೆ, ದೇಶದಲ್ಲಿಯೂ ಅಧಿಕೃತ ಐಡೆಂಟಿಟಿ ಪ್ರೂಫ್‌ ಆಗಿ ಪರಿಗಣಿಸಲಾಗಿದೆ. ಇದುವೆರೆಗೆ ಪಾಸ್‌ಪೋರ್ಟ್‌ ಸೇವಾ ಕೇಂದ್ರಗಳ ಮೂಲಕ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪಾಸ್‌ಪೋರ್ಟ್‌ ವಿತರಿಸುತ್ತಿತ್ತು. ಇದೀಗ, ಮೊಬೈಲ್ ಅಪ್ಲಿಕೇಶನ್‌ಗಳಲ್ಲಿ ಪಾಸ್‌ಪೋರ್ಟ್ ಸಂಬಂಧಿತ ಸೇವೆಗಳು ಲಭ್ಯವಾಗುವಂತೆ ಮಾಡಿದೆ. ಅದರಂತೆ, mPassport ಸೇವಾ ಅಪ್ಲಿಕೇಶನ್ ಅನ್ನು ಓಪನ್‌ ಮಾಡುವುದರೊಂದಿಗೆ ಪಾಸ್‌ಪೋರ್ಟ್‌ ಅನ್ನು ತುಂಬಾ ಸುಲಭವಾಗಿ ಪಡೆಯಬಹುದಾಗಿದೆ.

ಹೀಗೆ ಮಾಡಿದ್ರೆ 5 ದಿನಗಳಲ್ಲಿ ಪಾಸ್‌ಪೋರ್ಟ್ ನಿಮ್ಮ 'ಕೈ' ಸೇರುತ್ತದೆ

mPassport ಸೇವಾ ಅಪ್ಲಿಕೇಶನ್ ಬಳಸುವುದು ಹೇಗೆ?

  • ಹಂತ 1: ನಿಮ್ಮ ಬಳಿಯಿರುವ ಮೊಬೈಲ್, ಕಂಪ್ಯೂಟರ್ ಅಥವಾ ಟ್ಯಾಬ್ಲೆಟ್ ಬಳಸಿ mPassport ಸೇವಾ ಸೌಲಭ್ಯವನ್ನು ಬಳಸಬಹುದು. ಮೊದಲು mPassport ಸೇವಾ ಅಪ್ಲಿಕೇಶನ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. (ನಿಮ್ಮ Android ಮೊಬೈಲ್‌ನಲ್ಲಿ mPassport Seva app ಡೌನ್‌ಲೋಡ್‌ ಮಾಡಿಕೊಂಡು ಸಹ ಅರ್ಜಿ ಸಲ್ಲಿಸಬಹುದು)
  • ಹಂತ 2: ಇದರ ಬಳಿಕ ನೀವು 'Login' (ಲಾಗ್ ಇನ್) ಆಗಬೇಕು. ಮತ್ತು 'ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಿ' ಎಂಬ ಲಿಂಕ್ ಅನ್ನು ಕ್ಲಿಕ್ ಮಾಡಬೇಕು.
  • ಹಂತ 3: ಬಳಿಕ ನೀವು ನಿಮ್ಮ ವಿವರಗಳನ್ನು ಭರ್ತಿ ಮಾಡಬೇಕು. ಮತ್ತು 'ಪಾವತಿಸಿ ಮತ್ತು ನೇಮಕಾತಿಯನ್ನು ನಿಗದಿಪಡಿಸಿ' ಎಂಬ ಲಿಂಕ್‌ ಮೇಲೆ ಕ್ಲಿಕ್ ಮಾಡಬೇಕು. ಅಪಾಯಿಂಟ್‌ಮೆಂಟ್ ಕಾಯ್ದಿರಿಸಲು ನೀವು ಮುಂಚಿತವಾಗಿ ಶುಲ್ಕ ಪಾವತಿಸಬಹುದು.
  • ಹಂತ 4: ಒಮ್ಮೆ ಶುಲ್ಕ ಪಾವತಿ ಯಶಸ್ವಿಯಾದರೆ ಬಳಕೆದಾರರು 'ಅಪ್ಲಿಕೇಶನ್ ರಶೀದಿಯನ್ನು ಮುದ್ರಿಸು' ಎಂಬ ಲಿಂಕ್‌ ಅನ್ನು ಕ್ಲಿಕ್ ಮಾಡಬೇಕು ಅಥವಾ ಅವರು ತೋರಿಸಬಹುದಾದ ರಶೀದಿಯ ಮೆಸೇಜ್‌ಗಾಗಿ (SMS) ಕಾಯಬೇಕು.
  • ಹಂತ 5: ಇದರ ಬಳಿಕ ಅವರು ನೇಮಕಾತಿಯನ್ನು ನಿಗದಿಪಡಿಸಿದ ಪಾಸ್‌ಪೋರ್ಟ್ ಸೇವಾ ಕೇಂದ್ರಕ್ಕೆ ಹೋಗಬೇಕು. ನೀವು (ಬಳಕೆದಾರರು) ಅಲ್ಲಿ ಎಲ್ಲಾ ಅಗತ್ಯ ದಾಖಲೆಗಳನ್ನು ತೆಗೆದುಕೊಂಡುಬೇಕಾಗುತ್ತದೆ.

ಪಾಸ್‌ಪೋರ್ಟ್ ಅರ್ಜಿ ಸ್ಟೇಟಸ್ 'ಟ್ರ್ಯಾಕ್' ಮಾಡುವುದು ಹೇಗೆ?

ಮೇಲೆ ತಿಳಿಸಿದ ಹಂತಗಳನ್ನು ಬಳಸಿ ಹೊಸ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಬಹುದು. ಬಳಿಕ, ನಿಮ್ಮ ಮೊಬೈಲ್‌ನಲ್ಲಿ ಡೌನ್‌ಲೋಡ್‌ ಆದ mPassport Seva ಅಪ್ಲಿಕೇಶನ್‌ ಬಳಸಿಕೊಂಡು ಅಥವಾ ಗೂಗಲ್‌ ಕ್ರೋಮ್‌ನಲ್ಲಿ ಅಪ್ಲಿಕೇಶನ್‌ನ ಸ್ಥಿತಿಯನ್ನು ಟ್ರ್ಯಾಕ್‌ ಮಾಡಬಹುದು. mPassport Seva ಆಪ್‌ನಲ್ಲಿರುವ 'ಸ್ಟೇಟಸ್‌ ಟ್ರ್ಯಾಕರ್‌' ಐಕಾನ್ ಮೇಲೆ ಕ್ಲಿಕ್ ಮಾಡಿ, 'ಅಪ್ಲಿಕೇಶನ್‌ ಸ್ಟೇಟಸ್‌' ಆಯ್ಕೆ ಮಾಡಬೇಕು. ನಂತರ ಪೈಲ್ ಸಂಖ್ಯೆ, ಜನ್ಮದಿನಾಂಕವನ್ನು ನಮೂದಿಸಿ ಮತ್ತು 'ಟ್ರ್ಯಾಕ್‌' ಮೇಲೆ ಕ್ಲಿಕ್ ಮಾಡಿ. ನಿಮಗೆ ಗೊಂದಲಗಳಿದ್ದರೆ, ಈ ಕೆಳಗಿನ ಸರಳ ವಿಧಾನಗಳನ್ನು ಫಾಲೋ ಮಾಡಿ.

  • ನಿಮ್ಮ ಮೊಬೈಲ್‌ನಲ್ಲಿ ಗೂಗಲ್ ಕ್ರೋಮ್‌ ಓಪನ್ ಮಾಡಿ
  • ಭಾರತ ಸರ್ಕಾರದ 'ಪಾಸ್‌ಪೋರ್ಟ್ ಸೇವಾ' (www.passportindia.gov.in) ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
  • ಅಲ್ಲಿ, 'ನಿಮ್ಮ ಅಪ್ಲಿಕೇಶನ್ ಅನ್ನು ಟ್ರ್ಯಾಕ್ ಮಾಡಿ' ಎಂಬ ಲಿಂಕ್‌ ಅನ್ನು ಆಯ್ಕೆ ಮಾಡಿ.
  • ಡ್ರಾಪ್-ಡೌನ್ ಮೆನುವಿನಲ್ಲಿ ಲಭ್ಯವಿರುವ ಆಯ್ಕೆಗಳಿಂದ ನಿಮ್ಮ ಪಾಸ್‌ಪೋರ್ಟ್ ಪ್ರಕಾರವನ್ನು ಆಯ್ಕೆಮಾಡಿ.
  • ನಿಮ್ಮ ಜನ್ಮ ದಿನಾಂಕ ಮತ್ತು ನಿಮ್ಮ ಫೈಲ್ ಸಂಖ್ಯೆಯನ್ನು (15 ಅಂಕಿಯುಳ್ಳ ಸಂಖ್ಯೆ) ಅಲ್ಲಿ ನಮೂದಿಸಿ.
  • ನೀವು 'ಟ್ರ್ಯಾಕ್ ಸ್ಟೇಟಸ್' ಅನ್ನು ಆಯ್ಕೆ ಮಾಡಿದಾಗ ನಿಮ್ಮ ಅಪ್ಲಿಕೇಶನ್‌ನ ಪ್ರಸ್ತುತ ಸ್ಟೇಟಸ್ ಅನ್ನು ವಿವರಿಸುವ ಆನ್-ಸ್ಕ್ರೀನ್ ಮೆಸೇಜ್‌ ಕಾಣಿಸುತ್ತದೆ.

ಪಾಸ್‌ಪೋರ್ಟ್‌ ಪಡೆಯಲು ಬೇಕಾದ ದಾಖಲೆಗಳು

mPassport Seva ಅಪ್ಲಿಕೇಶನ್‌ನಲ್ಲಿ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಹಲವು ದಾಖಲೆಗಳು ಅಗತ್ಯವಿರುತ್ತದೆ. ಆಧಾರ್‌ ಕಾರ್ಡ್‌, ಪ್ಯಾನ್‌ ಕಾರ್ಡ್‌, ಜನನ ಪ್ರಮಾಣ ಪತ್ರ, ಈಗಿನ ವಿಳಾಸದ ದಾಖಲೆ ಇತ್ಯಾದಿ ದಾಖಲೆಗಳ ಅಗತ್ಯವಿರುತ್ತದೆ. ಈ ಪಾಸ್‌ಪೋರ್ಟ್‌ನಲ್ಲಿ ವ್ಯಕ್ತಿಯ ಹೆಸರು, ಜನ್ಮ ದಿನಾಂಕ, ಜನ್ಮ ಸ್ಥಳ, ರಾಷ್ಟ್ರೀಯತೆ, ಪಾಸ್‌ಪೋರ್ಟ್‌ ಎಕ್ಸ್‌ಪಯರಿ ದಿನಾಂಕ, ಪಾಸ್‌ಪೋರ್ಟ್‌ ಸಂಖ್ಯೆ, ವ್ಯಕ್ತಿಯ ಭಾವಚಿತ್ರ, ಸಹಿ ಇತ್ಯಾದಿ ಅಂಶಗಳು ಇರುತ್ತವೆ.

ದಿನದ ಕೆಲವು ಗಂಟೆಗಳನ್ನು ಮೀಸಲಿಟ್ಟರೆ ಸಾಕು

ಒಟ್ನಲ್ಲಿ, ಟೆಕ್ನಾಲಜಿ ತುಂಬಾ ವೇಗವಾಗಿದೆ ಮತ್ತು ಸುಲಭವೂ ಹೌದು. ಕೇಂದ್ರ ಸರ್ಕಾರ, ಮೊಬೈಲ್ (mPassport Seva) ಅಪ್ಲಿಕೇಶನ್‌ಗಳಲ್ಲಿ ಪಾಸ್‌ಪೋರ್ಟ್ ಸಂಬಂಧಿತ ಸೇವೆಗಳನ್ನು ಒದಗಿಸಿದೆ. ನೀವು ಆನ್‌ಲೈನ್‌ ಮೂಲಕ ಅರ್ಜಿ ಪಾಸ್‌ಪೋರ್ಟ್‌ಗೆ ಸಲ್ಲಿಸಿ ನಿಗದಿತ ದಿನದಂದು ಕಚೇರಿಗೆ ಹೋಗಿ ಪಾಸ್‌ಪೋರ್ಟ್‌ ಪಡೆಯಬಹುದು. ಈಗ ಪಾಸ್‌ಪೋರ್ಟ್‌ ಪಡೆಯುವುದು ಕೆಲವು ವರ್ಷಗಳ ಹಿಂದಿನಷ್ಟು ಕಷ್ಟವಲ್ಲ. ತುಂಬಾ ಸರಳವಾಗಿ ಅರ್ಜಿ ಸಲ್ಲಿಸಿ, ಹೊಸ ಪಾಸ್‌ಪೋರ್ಟ್‌ ಪಡೆಯಬಹುದು. ಇದಕ್ಕೆ ದಿನದ ಕೆಲವು ಗಂಟೆಗಳನ್ನು ಮೀಸಲಿಟ್ಟರೆ ಸಾಕು.

ಗಿಜ್‌ಬಾಟ್‌ ಕನ್ನಡ ವೆಬ್‌ಸೈಟ್ ತಂತ್ರಜ್ಞಾನ ಸಂಬಂಧಿಸಿದ ಸುದ್ದಿಗಳನ್ನು ತ್ವರಿತವಾಗಿ ನೀಡುತ್ತದೆ. ಜೊತೆಗೆ, ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚೆಗೆ ಬಿಡುಗಡೆಯಾದ ಸ್ಮಾರ್ಟ್‌ಪೋನ್, ಕಂಪ್ಯೂಟರ್, ಗ್ಯಾಡ್ಜೆಟ್‌ಗಳ ಮತ್ತು ಆನ್‌ಲೈನ್ ಜಗತ್ತಿನ ಕ್ಷಣ-ಕ್ಷಣದ ಸುದ್ದಿ, ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಎಕ್ಸ್‌ ಖಾತೆ, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳನ್ನು ತಪ್ಪದೇ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Best Mobiles in India

English summary
Now you can easily apply for passport in mPassport Seva app. Here are the documents required for passport online application and how to apply.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+