Driving Licence: ಖುಷಿ ಸುದ್ದಿ.. ಇನ್ಮುಂದೆ ಇರಲ್ಲ ಟೆಸ್ಟ್ ಡ್ರೈವ್! ಅರ್ಜಿ ಸಲ್ಲಿಕೆ ತುಂಬಾ ಸರಳ
ಹೊಸದಾಗಿ ಡ್ರೈವಿಂಗ್ ಲೈಸೆನ್ಸ್‌ಗೆ (Driving Licence) ಅರ್ಜಿ ಸಲ್ಲಿಸುವವರಿಗೆ ಖುಷಿ ಸುದ್ದಿ! ಇನ್ಮುಂದೆ ನೀವು ಆರ್‌ಟಿಒ ಕಚೇರಿಗೆ ಹೋಗಿ ಟೆಸ್ಟ್ ಡ್ರೈವ್ ಕೊಡಬೇಕಿಲ್ಲ. ಚಾಲನಾ ಪರವಾನಗಿ ಮತ್ತು ತರಬೇತಿಗೆ ಸಂಬಂಧಿಸಿದ ರೂಲ್ಸ್‌ಗಳಲ್ಲಿ ಸರ್ಕಾರ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಈ ಹೊಸ ರೂಲ್ಸ್‌ಗಳು ಜೂನ್ 1, 2024 ರಿಂದಲೇ ಜಾರಿಗೆ ಬಂದಿವೆ. ಹಾಗಿದ್ರೆ, ಹೊಸ ನಿಯಮಗಳಲ್ಲಿ ಯಾವ ಬದಲಾವಣೆಗಳು ಬಂದಿವೆ? ಕೂತಲ್ಲೇ ಆನ್‌ಲೈನ್‌ನಲ್ಲಿ ಡ್ರೈವಿಂಗ್ ಲೈಸೆನ್ಸ್‌ಗೆ ಹೇಗೆ ಅರ್ಜಿ ಸಲ್ಲಿಸಬೇಕು? ಎಂಬುದನ್ನು ನಾವಿಂದು ನಿಮಗೆ ತಿಳಿಸುತ್ತೇವೆ. ಮುಂದೆ ಓದಿ.
ಹೊಸ ರೂಲ್ಸ್‌ಗಳ ಪ್ರಕಾರ ಇನ್ಮುಂದೆ ನೀವು ಆರ್‌ಟಿಒ ಕಚೇರಿಗೆ ಹೋಗುವ ಪ್ರಮೆಯವೇ ಇಲ್ಲ. ಬದಲಿಗೆ ಖಾಸಗಿ ಟ್ರೈನಿಂಗ್ ಸೆಂಟರ್‌ಗಳಲ್ಲಿ ಚಾಲನಾ ಪರೀಕ್ಷೆಗೆ ಹಾಜರಾಗಬಹುದು. ಅವರು ಚಾಲನಾ ಪರೀಕ್ಷೆ ನಡೆಸಿ ಪ್ರಮಾಣಪತ್ರ ಕೊಡ್ತಾರೆ. ಬಳಿಕ, RTO ಕಚೇರಿಯಿಂದ ಡ್ರೈವಿಂಗ್ ಲೈಸೆನ್ಸ್ ಪಡೆಯಬಹುದು. ಈ ಹೊಸ ನಿಯಮಗಳ ಮುಖ್ಯ ಉದ್ದೇಶವೆಂದರೆ, ಡ್ರೈವಿಂಗ್ ಲೈಸೆನ್ಸ್‌ಗಾಗಿ ಅರ್ಜಿದಾರರು ನೇರವಾಗಿ ಆರ್‌ಟಿಒ ಕಚೇರಿಗಳಿಗೆ ಹೋಗುವುದನ್ನು ತಪ್ಪಿಸುವುದೇ ಆಗಿದೆ. ಇನ್ಮುಂದೆ, Driving Licence ಅನ್ನು ಆನ್‌ಲೈನ್‌ನಲ್ಲೇ ನೀಡಲಾಗುತ್ತೆ.

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?
- ನಿಮ್ಮ ಮೊಬೈಲ್‌ನಲ್ಲಿ (ಲ್ಯಾಪ್‌ಟಾಪ್‌ನಲ್ಲಿ) ಅಧಿಕೃತ ಸರ್ಕಾರಿ ವೆಬ್‌ಸೈಟ್ https://parivahan.gov.in/parivahan/ಗೆ ಭೇಟಿ ನೀಡಿ.
- ಆನ್‌ಲೈನ್ ಸರ್ವಿಸ್ ಆಯ್ಕೆಗೆ ಹೋಗಿ ಮತ್ತು ಡ್ರೈವಿಂಗ್ ಲೈಸೆನ್ಸ್ ಸಂಬಂಧಿತ ಸೇವೆಗಳ ಮೇಲೆ ಕ್ಲಿಕ್ ಮಾಡಿ.
- ನೀವು ವಾಸಿಸುವ ರಾಜ್ಯವನ್ನು ಆಯ್ಕೆ ಮಾಡಿಕೊಳ್ಳಿ.
- ಬಳಿಕ 'Learner's Licence Application' ಆಯ್ಕೆಯನ್ನು ಕ್ಲಿಕ್ ಮಾಡಿ.
- ತಕ್ಷಣ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ. ಅಗತ್ಯವಿದ್ದರೆ ಪ್ರಿಂಟ್ ತೆಗೆದುಕೊಳ್ಳಿ.
- ಇಲ್ಲಿ ನಿಮಗೆ ಕಾಣಿಸುವ ಮಾರ್ಗಸೂಚಿಗಳನ್ನು ಓದಿ ಮತ್ತು ಅರ್ಜಿ ನಮೂನೆಯಲ್ಲಿ ಕೇಳಲಾದ ಎಲ್ಲಾ ವಿವರಗಳನ್ನು ಭರ್ತಿ ಮಾಡಿ.
- ಬಳಿಕ, ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
- ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯನ್ನು ನಮೂದಿಸಿ.
- ಕೊನೆಯದಾಗಿ ಟೆಸ್ಟ್ ಡ್ರೈವ್ ಡೇಟ್ ಅನ್ನು ಆಯ್ಕೆಮಾಡಿ ಮತ್ತು ಅರ್ಜಿ ಶುಲ್ಕವನ್ನು ಪಾವತಿಸಿ.
- ನಿಮ್ಮ ಆದ್ಯತೆಗೆ ಅನುಗುಣವಾಗಿ ನೀವು ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
- ಅರ್ಜಿಯ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ, ಅಗತ್ಯ ದಾಖಲೆಗಳೊಂದಿಗೆ RTO ಕಚೇರಿಗೆ ಭೇಟಿ ನೀಡಿ.
- ನಿಮ್ಮ ಡ್ರೈವಿಂಗ್ ಸ್ಕಿಲ್ (ಚಾಲನಾ ಕೌಶಲ್ಯ) ಫ್ರೂಪ್ ಅನ್ನು RTO ಅಧಿಕಾರಿಗಳಿಗೆ ತೋರಿಸಿ.
- ನಿಮ್ಮ ಚಾಲನಾ ಕೌಶಲ್ಯವು ಪರಿಪೂರ್ಣವಾಗಿದ್ದರೆ, ಡ್ರೈವಿಂಗ್ ಲೈಸೆನ್ಸ್ ಕೊಡಲಾಗುತ್ತದೆ.
ಡ್ರೈವಿಂಗ್ ಲೈಸೆನ್ಸ್ ಶುಲ್ಕ ಎಷ್ಟು?
- ಕಲಿಕಾ ಪರವಾನಗಿ : 200 ರೂ.
- ಕಲಿಕಾ ಪರವಾನಗಿ ನವೀಕರಣ : 200ರೂ.
- ಅಂತರಾಷ್ಟ್ರೀಯ ಪರವಾನಗಿ : 1000 ರೂ.
- ಶಾಶ್ವತ ಪರವಾನಗಿ : 200 ರೂ.
- ಶಾಶ್ವತ ಪರವಾನಗಿ ನವೀಕರಣ : 200 ರೂ.
- ಡ್ರೈವಿಂಗ್ ಸ್ಕೂಲ್ ಲೈಸೆನ್ಸ್ ವಿತರಣೆ ಮತ್ತು ಅಪ್ಡೇಟ್ : 10,000 ರೂ.
- ಡ್ರೈವಿಂಗ್ ಸ್ಕೂಲ್ ನಕಲು ಪರವಾನಗಿ : 5000 ರೂ.
ನಿಯಮ ಉಲ್ಲಂಘಿಸಿದ್ರೆ 25 ವರ್ಷ DL ಇಲ್ಲ!
ಹೊಸ ರೂಲ್ಸ್‌ಗಳ ಪ್ರಕಾರ 9 ಲಕ್ಷ ಹಳೆಯ ಸರ್ಕಾರಿ ವಾಹನಗಳನ್ನು ಬ್ಯಾನ್ ಮಾಡಲಾಗುತ್ತದೆ. ಪರಿಸರ ಮಾಲಿನ್ಯವನ್ನು ಕಡಿಮೆ ಮಾಡುವುದು ಇದರ ಉದ್ದೇಶ. ಇನ್ನೂ, ಮಿತಿಮೀರಿದ ಸ್ಪೀಡ್‌ನಲ್ಲಿ ವಾಹನ ಚಲಾಯಿಸುವವರಿಗೆ 1,000 ರೂ.ನಿಂದ 2,000 ರೂ.ವರೆಗೆ ಫೈನ್ ಹಾಕಲಾಗುತ್ತದೆ. ಅಪ್ರಾಪ್ತರು ಡ್ರೈವಿಂಗ್ ಮಾಡುವಾಗ ಸಿಕ್ಕಿಬಿದ್ರೆ, 25 ಸಾವಿರ ರೂ. ಮತ್ತು ವಾಹನ ಮಾಲೀಕರ ಡ್ರೈವಿಂಗ್ ನೋಂದಣಿ ಕಾರ್ಡ್ ಕ್ಯಾನ್ಸಲ್ ಮಾಡಲಾಗುತ್ತೆ. ಸಿಕ್ಕಿಬಿದ್ದ ಅಪ್ರಾಪ್ತರಿಗೆ 25 ವರ್ಷ ವಯಸ್ಸಾಗುವವರೆಗೆ ಡ್ರೈವಿಂಗ್ ಲೈಸೆನ್ಸ್ ನೀಡುವುದಿಲ್ಲ.
ಒಟ್ಟಾರೆ ಹೊಸ ರೂಲ್ಸ್‌ನ ಪ್ರಕಾರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು, ಈಗ ಆನ್‌ಲೈನ್‌ನಲ್ಲಿ ಡ್ರೈವಿಂಗ್ ಲೈಸೆನ್ಸ್‌ಗಾಗಿ ಅರ್ಜಿ ಸಲ್ಲಿಸುವ ಅವಕಾಶವನ್ನು ನೀಡಿದೆ. ಈ ಪ್ರಕ್ರಿಯೆಯು ತುಂಬಾ ಸುಲಭ ಮತ್ತು ಸರಳವಾಗಿದೆ. ನಾವು ಮೇಲೆ ತಿಳಿಸಿದ ವಿಧಾನಗಳನ್ನು ಬಳಸಿ ಮನೆಯಲ್ಲಿ ಕುಳಿತಲ್ಲೇ ಡ್ರೈವಿಂಗ್ ಲೈಸೆನ್ಸ್ ಪಡೆಯಬಹುದು. ಆದರೆ, ನೀವು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ರೂ ಸಹ ನಿಮ್ಮ ಡ್ರೈವಿಂಗ್ ಲೈಸೆನ್ಸ್ ಪಡೆಯಲು ನೀವು ಹತ್ತಿರದ ಆರ್‌ಟಿಒ ಕಚೇರಿಗೆ ಹೋಗಲೇಬೇಕು.


Click it and Unblock the Notifications








