ನಿಗದಿತ ಸಮಯಕ್ಕೆ ಆಟೋಮೆಟಿಕಲಿ ಕಂಪ್ಯೂಟರ್ ಶಟ್‌ಡೌನ್ ಹೇಗೆ?
ಇಂಟರ್ನೆಟ್ ಮೂಲಕ ಯಾವುದೇ ಒಂದು ಸಾಫ್ಟ್‌ವೇರ್, ಸಿನಿಮಾ ಡೌನ್‌ಲೋಡ್ ಮಾಡಿದರೂ ಸಹ , ಅದು ಡೌನ್‌ಲೋಡ್ ಆಗಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದು ತಿಳಿಯುತ್ತದೆ. ಅಥವಾ ಯಾವುದೇ ಸಾಪ್ಟ್‌ವೇರ್ ನಿಮ್ಮ ಕಂಪ್ಯೂಟರ್‌ಗೆ ಇನ್‌ಸ್ಟಾಲ್ ಆಗಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದು ಸಹ ತಿಳಿಯುತ್ತದೆ. ಆದರೆ ಡೌನ್‌ಲೋಡ್ ಮತ್ತು ಇನ್‌ಸ್ಟಾಲ್ ಕೊಟ್ಟ ನಮಗೆ ಸಾಫ್ಟ್‌ವೇರ್ ಸಿನಿಮಾಗಳು ಡೌನ್‌ಲೋಡ್ ಆಗುವ ಸಮಯದವರೆಗೆ ಕಂಪ್ಯೂಟರ್ ಮುಂದೆ ಕೂರಲು ಸಾಧ್ಯವಿಲ್ಲ. ಇಂತಹ ಸಮಯದಲ್ಲಿ ಏನು ಮಾಡುವುದು ಎಂಬ ಪ್ರಶ್ನೆಗಳು ಕಂಪ್ಯೂಟರ್ ಬಳಸುವ ಎಲ್ಲರಿಗೂ ಕಾಡದೇ ಇರಲಾರವು. ಅಂತಹರಿಗೆ ಗಿಜ್‌ಬಾಟ್ ಇಂದಿನ ಲೇಖನದಲ್ಲಿ ಕಂಪ್ಯೂಟರ್ ಆಟೋಮೆಟಿಕ್ ಆಗಿ ನಿಗದಿತ ಸಮಯಕ್ಕೆ ಶಟ್‌ಡೌನ್ ಮಾಡುವುದು ಹೇಗೆ ಎಂದು ತಿಳಿಸುತ್ತಿದೆ.
ಹೇಗಿದ್ದರೂ ನೀವು ಡೌನ್‌ಲೋಡ್ ಕೊಟ್ಟ ಸಾಫ್ಟ್‌ವೇರ್, ಸಿನಿಮಾಗಳು ಡೌನ್‌ಲೋಡ್ ಆಗಲು ಎಷ್ಟು ಸಮಯ ತೆಗೆದುಕೊಳ್ಳುತ್ತವೆ ಎಂಬುದು ತಿಳಿದಿರುತ್ತದೆ ಅಲ್ಲವೇ. ಈ ಮಾಹಿತಿ ಆಧಾರದ ಮೇಲೆ ಡೌನ್‌ಲೋಡ್ ಮುಗಿದ ಮೇಲೆ ನಿಮ್ಮ ಕಂಪ್ಯೂಟರ್ ಶಟ್‌ಡೌನ್ ಆಗಲು ಸಮಯ ನಿಗದಿ ಸೆಟ್ ಮಾಡಬಹುದು. ನೀವು ನಿಗದಿ ಪಡಿಸಿದ ಸಮಯಕ್ಕೆ ಕಂಪ್ಯೂಟರ್ ಶಟ್‌ಡೌನ್ ಆಗುತ್ತದೆ. ಆದರೆ ನಾವು ಲೇಖನದಲ್ಲಿ ತಿಳಿಸುತ್ತಿರುವ ಮಾಹಿತಿ ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ಬಳಸುತ್ತಿರುವ ಕಂಪ್ಯೂಟರ್ ಬಳಕೆದಾರರಿಗೆ ಮಾತ್ರ.

ನಿಗದಿತ ಸಮಯಕ್ಕೆ ಆಟೋಮೆಟಿಕಲಿ ಕಂಪ್ಯೂಟರ್ ಶಟ್‌ಡೌನ್ ಹೇಗೆ?
ಮೊದಲಿಗೆ, ವಿಂಡೋಸ್ ಆಪರೇಟಿಂಗ್ ಹೊಂದಿರುವ ಕಂಪ್ಯೂಟರ್ ಬಳಕೆದಾರರಾದ ನೀವು Start ಮೆನು ಮೇಲೆ ಕ್ಲಿಕ್ ಮಾಡಿ notepad ಎಂದು ಟೈಪ್ ಮಾಡಿ ಎಂಟರ್ ಮಾಡಿ. notepad ಓಪನ್ ಆಗುತ್ತದೆ. ನಂತರ "shudown-s-t 60" ಇದನ್ನು ನಕಲಿಸಿ(Copy) notepad ನಲ್ಲಿ ಪೇಸ್ಟ್(paste) ಮಾಡಿ.

ನಿಗದಿತ ಸಮಯಕ್ಕೆ ಆಟೋಮೆಟಿಕಲಿ ಕಂಪ್ಯೂಟರ್ ಶಟ್‌ಡೌನ್ ಹೇಗೆ?
ಮೇಲೆ ತಿಳಿಸಿದ "shudown-s-t 60" ಕೋಡ್‌ನಲ್ಲಿ 60 ಎಂಬುದು ಸಮಯವನ್ನು ಪ್ರತಿನಿಧಿಸುತ್ತದೆ. ಇಲ್ಲಿ 60 ಎಂಬುದು 60 ಸೆಕೆಂಡುಗಳು. 60 ಸೆಕೆಂಡ್‌ಗಳ ನಂತರ ಕಂಪ್ಯೂಟರ್ ಶಟ್‌ಡೌನ್ ಆಗುತ್ತದೆ ಎಂದು.

ನಿಗದಿತ ಸಮಯಕ್ಕೆ ಆಟೋಮೆಟಿಕಲಿ ಕಂಪ್ಯೂಟರ್ ಶಟ್‌ಡೌನ್ ಹೇಗೆ?
ನೀವು ಕಂಪ್ಯೂಟರ್ ಶಟ್‌ಡೌನ್ ಆಗುವ ಸಮಯವನ್ನು ಸೆಕೆಂಡ್‌ಗಳಲ್ಲೇ ನಿಗದಿಪಡಿಸಬೇಕು. ಉದಾಹರಣೆಗೆ ಕಂಪ್ಯೂಟರ್ 2 ಗಂಟೆಗಳ ನಂತರ ಶಟ್‌ಡೌನ್ ಆಗಲು "shudown-s-t 7200" ಎಂದು ನೋಟ್‌ಪ್ಯಾಡ್‌ನಲ್ಲಿ ಬರೆಯಬೇಕು.

ನಿಗದಿತ ಸಮಯಕ್ಕೆ ಆಟೋಮೆಟಿಕಲಿ ಕಂಪ್ಯೂಟರ್ ಶಟ್‌ಡೌನ್ ಹೇಗೆ?
ಮೇಲೆ ತಿಳಿಸಿದಂತೆ ನಮೂದಿಸಿದ ಮೇಲೆ ಆ ಫೈಲ್ ಅನ್ನು ಡೆಸ್ಕ್ಟಾಪ್‌ನಲ್ಲಿ ನಿಮಗೆ ಇಚ್ಚಿಸಿದ ಹೆಸರಲ್ಲಿ ಉಳಿಸಿ (save) ಮಾಡಿ. ಆದರೆ ನೀವು ಉಳಿಸಲು ನೀಡಿದ ಹೆಸರಿನ ಮುಂದೆ .bat ಎಂಬುದನ್ನು ನಮೂದಿಸುವುದು ಕಡ್ಡಾಯ.

ನಿಗದಿತ ಸಮಯಕ್ಕೆ ಆಟೋಮೆಟಿಕಲಿ ಕಂಪ್ಯೂಟರ್ ಶಟ್‌ಡೌನ್ ಹೇಗೆ?
ಈ ಹಂತದಲ್ಲಿ ನೀವು ಉಳಿಸಿದ (save) ಫೈಲ್ ಮೇಲೆ ಕ್ಲಿಕ್ ಮಾಡಿದರೆ ನೀವು ನಿಗದಿ ಮಾಡಿದ ಸಮಯಕ್ಕೆ ಕಂಪ್ಯೂಟರ್ ಶಟ್‌ಡೌನ್ ಆಗುತ್ತದೆ. ಅಲ್ಲದೇ ನೋಟಿಫಿಕೇಶನ್ ಒಂದು ಚಿತ್ರದಲ್ಲಿರುವ ರೀತಿ ಬರುತ್ತದೆ.

ಗಿಜ್‌ಬಾಟ್

ಗಿಜ್‌ಬಾಟ್
ಗಿಜ್‌ಬಾಟ್‌ನ ಲೇಖನಗಳನ್ನು ಫೇಸ್‌ಬುಕ್‌ನಲ್ಲಿ ಓದಲು ಲೈಕ್ ಮಾಡಿ ಫೇಸ್‌ಬುಕ್ ಪೇಜ್ ಮತ್ತು ಓದಿರಿ ವೆಬ್‌ಸೈಟ್ ಗಿಜ್‌ಬಾಟ್.ಕನ್ನಡ.ಕಾಂ


Click it and Unblock the Notifications








