Home
ಟೆಕ್ ನೌಕರಿ

ಮಾಲ್‌ವೇರ್‌ಗಳಿಂದ ಮೊಬೈಲ್‌ ಕಾಪಾಡಿಕೊಳ್ಳುವುದು ಹೇಗೆ? ಈ ಟಿಪ್ಸ್ ಬಳಸಿದ್ರೆ ನೀವು ಸೇಫ್!‌

ದಿನವಿಡೀ ಮೊಬೈಲ್(Smartphone) ನಮ್ಮ ಕೈಯಲ್ಲೇ ಇರುತ್ತೆ. ಜೊತೆಗೆ ಇಂಟರ್ನೆಟ್ ಇದ್ದರೆ ಸಾಕು, ಗೂಗಲ್, ವೆಬ್‌ಸೈಟ್, ಅಪ್ಲಿಕೇಶನ್‌ ಇತ್ಯಾದಿ ಬಳಸ್ತೀವಿ. ಇವೆಲ್ಲವೂ ನಮಗೆ ಸುರಕ್ಷಿತವಲ್ಲ. ಯಾಕಂದ್ರೆ, ವಂಚನೆ ಮಾಡಲು ಸೈಬರ್ ಕಳ್ಳರು, ಹ್ಯಾಕರ್‌ಗಳು ಕಾಯುತ್ತಿರುತ್ತಾರೆ. ಆನ್‌ಲೈನ್‌ ಮೂಲಕವೇ ಲಕ್ಷ ಲಕ್ಷ ಪಂಗನಾಮ ಹಾಕ್ತಾರೆ. ಇವರಿಗೆ ಆನ್‌ಲೈನ್‌ ಮೋಸ, ಮಾಹಿತಿ ಕದಿಯಲು, ಬ್ಯಾಂಕ್‌ ಖಾತೆಗೆ ಖನ್ನಹಾಕಲು ಇರುವ ದಾರಿಗಳಲ್ಲಿ ಮೊದಲ ಸಾಲಿನಲ್ಲಿ ಇರುವುದೇ ಈ ಡೆಡ್ಲಿ Malware.

ಹೌದು, ಈ ಮಾಲ್‌ವೇರ್‌(Malware) ಒಮ್ಮೆ ಮೊಬೈಲ್‌ಗೆ ಅಟ್ಯಾಕ್‌ ಆದ್ರೆ, ನಿಮಗೆ ಅಪಾಯ ಗ್ಯಾರಂಟಿ! ಏನಿದು ಮಾಲ್‌ವೇರ್‌? ಯಾವ ಮಾದರಿಯ ಮಾಲ್‌ವೇರ್‌ ಹರಡುವ ಸಾಧ್ಯತೆಯಿದೆ? ಈ ಮಾಲ್‌ವೇರ್‌ ನಮ್ಮ ಮೊಬೈಲ್‌ಗೆ ಹರಡುವುದು ಹೇಗೆ? ಮಾಲ್‌ವೇರ್‌ ಹರಡದಂತೆ ತಡೆಗಟ್ಟುವುದು ಹೇಗೆ? ಅನ್ನೋದನ್ನು ನೀವು ತಿಳಿದುಕೊಳ್ಳಲೇಬೇಕು. ಮೊಬೈಲ್ ಪ್ರಿಯರು ಈ Malwareನಿಂದ ಸೇಫ್‌ ಆಗಿರಲೆಂದೇ ಗೂಗಲ್ ಕೆಲವು ಟಿಪ್ಸ್‌ಗಳನ್ನು ನೀಡಿದೆ. ಈ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಮಾಲ್‌ವೇರ್‌ಗಳಿಂದ ಮೊಬೈಲ್‌ ಕಾಪಾಡಿಕೊಳ್ಳುವುದು ಹೇಗೆ? ಈ ಟಿಪ್ಸ್ ಬಳಸಿ

ಏನಿದು ಮಾಲ್‌ವೇರ್‌? ಇದರಿಂದ ಏನು ಅಪಾಯ?

ಮೊದಲೇ ಹೇಳಿದಂತೆ ವಂಚನೆ ಮಾಡುವ ಹ್ಯಾಕ್‌ರಗಳ ಮೊದಲ ಅಸ್ತ್ರವೇ ಮಾಲ್‌ವೇರ್. Malware ಒಂದು ರೀತಿಯ ಸಾಫ್ಟ್‌ವೇರ್‌. ಇದನ್ನು ಮೊಬೈಲ್, ಟ್ಯಾಬ್‌, ಲ್ಯಾಪ್‌ಟಾಪ್‌, ಕಂಪ್ಯೂಟರ್‌ ಸಾಫ್ಟ್‌ವೇರ್‌ ಆಧಾರಿತ ಗ್ಯಾಜೆಟ್‌ಗಳಿಗೆ ತೊಂದರೆ ಉಂಟುಮಾಡಲು ಅಭಿವೃದ್ಧಿಪಡಿಸಲಾಗಿದೆ. ಮಾಲ್‌ವೇರ್‌ಗಳು ನಿಮ್ಮ ಯಾವುದೇ ಈ ಇಲೆಕ್ಟ್ರಾನಿಕ್ಸ್‌ ಗ್ಯಾಜೆಟ್‌ಗಳಲ್ಲಿನ ಸೂಕ್ಷ್ಮ ವಿಚಾರಗಳನ್ನು ಕದಿಯುತ್ತದೆ. ನಿಮ್ಮ ಮೊಬೈಲ್‌ ಅನ್ನು ಸ್ಲೋ ಮಾಡುತ್ತದೆ. ನಿಮಗೆ ಗೊತ್ತಿಲ್ಲದಂತೆ ಫೇಕ್‌ ಇ-ಮೇಲ್‌ ಅನ್ನು ನಿಮ್ಮ ಇ-ಮೇಲ್‌ಗೆ ಕಳುಹಿಸಿ, ಅಪಾಯ ಸೃಷ್ಟಿಸುತ್ತದೆ.

ಮೊಬೈಲ್‌ಗೆ ಅಟ್ಯಾಕ್ ಆಗುವ ಸಾಮಾನ್ಯ ಮಾದರಿಗಳು

Malware ಹರಡುವ ಸಾಮಾನ್ಯ ಮಾದರಿಗಳಲ್ಲಿ 'ವೈರಸ್' ಮೊದಲನೆಯದು. ಇದು ಹಾನಿಕಾರಕ ಕಂಪ್ಯೂಟರ್ ಪ್ರೋಗ್ರಾಂ. ಇದು ನಮ್ಮ ಮೊಬೈಲ್ (ಸಿಸ್ಟಮ್‌)ನಲ್ಲಿನ ಡಾಟಾ ಕಾಪಿ ಮಾಡಿಕೊಳ್ಳಬಲ್ಲದು ಮತ್ತು ಮೊಬೈಲ್‌ಗೆ ಹಾನಿ ಮಾಡಬಲ್ಲದು. 'Worm' ಎರಡನೇ ಮಾದರಿಯ ಮಾಲ್‌ವೇರ್‌. ಇದು ದುರುದ್ದೇಶಪೂರಿತ ಕಂಪ್ಯೂಟರ್ ಪ್ರೋಗ್ರಾಂ ಆಗಿದ್ದು, ಇತರೆ ಕಂಪ್ಯೂಟರ್‌ಗಳಿಗೆ ಕಾಪಿಗಳನ್ನು ಕಳುಹಿಸಬಲ್ಲದು.

ಮೂರನೇಯ ಮಾದರಿ 'ಸ್ಪೈವೇರ್'. ಇದು ನಮಗೆ ಗೊತ್ತಿಲ್ಲದಂತೆ ಸೂಕ್ಷ್ಮ ಡಾಟಾ ಸ್ಟೋರ್‌ ಮಾಡಬಲ್ಲದು. 'Adware' ನಾಲ್ಕನೇ ಮಾದರಿಯಾಗಿದ್ದು, ಇದೊಂದು ಸಾಫ್ಟ್‌ವೇರ್‌ ಆಗಿದೆ. ಸ್ವಯಂಚಾಲಿತವಾಗಿ ಕೆಲಸ ಮಾಡಬಲ್ಲದು. ನಮ್ಮ ಮೊಬೈಲ್‌/ಕಂಪ್ಯೂಟರ್‌ಗೆ ಜಾಹೀರಾತುಗಳನ್ನು ಡೌನ್‌ಲೋಡ್‌ ಮಾಡುತ್ತದೆ. ಇನ್ನೂ, 'ಟ್ರೋಜನ್ ಹಾರ್ಸ್‌' ಕೊನೆಯ Malware ಮಾದರಿ. ಇದು ನಿಮ್ಮ ಪಿಸಿಯಲ್ಲಿ ಇನ್‌ಸ್ಟಾಲ್‌ ಆದ ನಂತರ ಹಾನಿ ಮಾಡುವುದಲ್ಲದೇ, ನಮ್ಮ ಮಾಹಿತಿಗಳನ್ನು ಕದಿಯುತ್ತದೆ.

ಮಾಲ್‌ವೇರ್‌ಗಳು ಮೊಬೈಲ್‌ಗೆ ಹೇಗೆ ಹರಡುತ್ತವೆ?

ಮೇಲಿನಂತೆ, ಮಾಲ್‌ವೇರ್‌ಗಳು ವಿವಿಧ ಮಾದರಿಯಲ್ಲಿ ನಮ್ಮ ಮೊಬೈಲ್‌ಗೆ ಅಟ್ಯಾಕ್‌ ಆಗಬಲ್ಲವು. ಇಂಟರ್‌ನೆಟ್‌ನಲ್ಲಿ ಉಚಿತ ಸಾಫ್ಟ್‌ವೇರ್‌ಗಳ ಮೂಲಕ ನಮಗೆ ಅರಿವಿಲ್ಲದೆಯೇ ಹರಡಬಹುದು. ಸಾಫ್ಟ್‌ವೇರ್‌ಗಳ ಗುಂಪುಗಳೊಂದಿಗೂ ಹರಡಬಹುದು. Malwareನಿಂದ ಹಾನಿಗೊಳಗಾದ ವೆಬ್‌ಸೈಟ್‌ಗೆ ಭೇಟಿ ನೀಡುವುದರಿಂದ ಹರಡಬಹುದು. ಫೇಕ್‌ ಎರರ್ ಮೆಸೇಜ್, ಪಾಪಪ್ ವಿಂಡೋ ಮೇಲೆ ಕ್ಲಿಕ್ ಮಾಡಿದಾಗ ಮಾಲ್‌ವೇರ್‌ ಡೌನ್‌ಲೋಡ್‌ ಆಗುತ್ತದೆ. Malware ಇರುವ ಇ-ಮೇಲ್‌ ಅಟ್ಯಾಚ್‌ಮೆಂಟ್‌ ಓಪನ್‌ ಮಾಡುವುದರಿಂದ ಅಟ್ಯಾಕ್ ಆಗುತ್ತದೆ. ಹೀಗೆ, ಹಲವು ವಿಧಾನಗಳಲ್ಲಿ Malware ಪ್ರವೇಶ ಮಾಡಬಹುದು.

ಮಾಲ್‌ವೇರ್‌ ಹರಡದಂತೆ ತಡೆಗಟ್ಟುವ ವಿಧಾನಗಳು

ಈ ಡೆಡ್ಲಿ Malwareಗಳನ್ನು ತಡೆಗಟ್ಟಲು ಸಾಧ್ಯವಿದೆ. ನಮ್ಮ ಸ್ಮಾರ್ಟ್‌ಫೋನ್‌ ಅನ್ನು ಹಾಗೂ ಅವುಗಳಲ್ಲಿನ ಸಾಫ್ಟ್‌ವೇರ್‌ಗಳನ್ನು ಅಪ್‌ಡೇಟ್‌ ಮಾಡುತ್ತೇವೆ. ಕೆಲವು OSಗಳು ಮಲ್ಟಿಪಲ್ ಅಕೌಂಟ್‌ಗಳನ್ನು ಬಳಕೆ ಮಾಡಲು ಅವಕಾಶ ನೀಡುತ್ತವೆ. ಒಂದೊಂದು ಖಾತೆಗೆ ಒಂದೊಂದು ರೀತಿ ಸೆಟ್ಟಿಂಗ್ ಮಾಡಿಕೊಳ್ಳಬಹುದು. ಇದನ್ನು ಟ್ರೈ ಮಾಡಿ, ನಾನ್‌ ಅಡ್ಮಿನಿಸ್ಟ್ರೇಟರ್ ಖಾತೆ ಬಳಕೆ ಮಾಡಿದರೆ ಮಾಲ್‌ವೇರ್‌ ಅಟ್ಯಾಕ್‌ನಿಂದ ಪಾರಾಗಬಹುದು.

ಆಂಟಿವೈರಸ್‌ ಸಾಫ್ಟ್‌ವೇರ್‌ ಇನ್‌ಸ್ಟಾಲ್ ಮಾಡಿಕೊಳ್ಳಿ

ಇನ್ನೂ, ನಿಮ್ಮ ಮೊಬೈಲ್‌ನಲ್ಲಿ ಬರುವ ಲಿಂಕ್‌ಗಳನ್ನು ಕ್ಲಿಕ್ ಮಾಡುವ ಎಚ್ಚರ ವಹಿಸಿ. ಯಾವುದೇ ಸಾಫ್ಟ್‌ವೇರ್‌, ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡುವ ಮೊದಲು ಪರಿಶೀಲಿಸಿ. ಹೆಚ್ಚು ಫೈಲ್‌ ಶೇರ್‌ ಮಾಡುವುದಕ್ಕೆ ಕಡಿವಾಣ ಹಾಕಿ. ಮೊಬೈಲ್‌ ಸುರಕ್ಷತೆಗೆ ಕಡ್ಡಾಯವಾಗಿ ಆಂಟಿವೈರಸ್‌ ಸಾಫ್ಟ್‌ವೇರ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳಿ. ನೀವು ಹೀಗೆ ಮಾಡಿದ್ರೆ, Malware ಹರಡುವುದನ್ನು ತಡೆಗಟ್ಟಬಹುದು. ನಿಮ್ಮ ಮೊಬೈಲ್‌ ಸಹ ಸೇಫ್‌ ಆಗಿರುತ್ತದೆ.

Best Mobiles in India

English summary
malware is a kind of software. It can slow down our smartphone. To prevent this, use antivirus software on mobile.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+