ಗೂಗಲ್ ಒನ್ ಬಳಸಿ ಬ್ಯಾಕಪ್, ರಿಸ್ಟೋರ್ ಮಾಡೋದು ಹೇಗೆ..?
ಗೂಗಲ್ ಇತ್ತೀಚೆಗೆ ತನ್ನ ಕ್ಲೌಡ್ ಸ್ಟೊರೇಜ್ ಪರಿಹಾರ ಪ್ರಕಟಿಸಿದ್ದು, ಬಳಕೆದಾರರಿಗೆ ತಮ್ಮ ಗೂಗಲ್ ಒನ್ ಮತ್ತು ಗೂಗಲ್ ಡ್ರೈವ್‌ನ್ನು ವಿಲೀನಗೊಳಿಸಲು ಕೇಳಿಕೊಂಡಿದೆ. ಫೋಟೋಗಳ ಬ್ಯಾಕಪ್‌ನಿಂದಿಡಿದು ಡಾಕ್ಸ್, ಶೀಟ್‌ಗಳು ಮತ್ತು ಇತರ ಗೂಗಲ್ ಸಂಬಂಧಿತ ಸೇವೆಗಳಿಗೆ ಪ್ರಾರಂಭವಾಗುವ ಎಲ್ಲಾ ಚಟುವಟಿಕೆಗಳಿಗೆ ಗೂಗಲ್ ಒನ್ ಏಕೀಕೃತ ಕ್ಲೌಡ್ ಸ್ಟೊರೇಜ್ ಪ್ಲಾಟ್‌ಫಾರ್ಮ್ ಆಗಿದೆ.

ಗೂಗಲ್‌ನ ಹೊಸ ಕ್ಲೌಡ್ ಸ್ಟೊರೇಜ್ ಗೂಗಲ್ ಡ್ರೈವ್‌ನಿಂದ ಅಸ್ತಿತ್ವದಲ್ಲಿರುವ 15 ಜಿಬಿ ಉಚಿತ ಸ್ಟೊರೇಜ್ ಸ್ಥಳವನ್ನು ಬಳಕೆ ಮಾಡುತ್ತಿದ್ದು, ಇತರ ಆನ್‌ಲೈನ್ ಕ್ಲೌಡ್ ಸ್ಟೊರೇಜ್ ಸೇವೆಯಂತೆ ಹೆಚ್ಚಿನ ಸ್ಟೊರೇಜ್ ಸ್ಥಳ ಖರೀದಿಸಲು ಸಹ ಬಳಕೆದಾರರಿಗೆ ಗೂಗಲ್ ಅವಕಾಶ ಮಾಡಿಕೊಟ್ಟಿದೆ. ಇಷ್ಟೆ ಅಲ್ಲದೆ, ಬಳಕೆದಾರರು ತಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಡೇಟಾವನ್ನು (ಮಲ್ಟಿಮೀಡಿಯಾ, ಸಂಪರ್ಕಗಳು, ಸಂದೇಶಗಳು ಮತ್ತು ಇತರ ವಿಷಯಗಳು) ಬ್ಯಾಕಪ್ ಮಾಡಬಹುದು. ಬ್ಯಾಕಪ್ ಮಾಡಲು ಕೆಳಗಿನ ಹಂತಗಳನ್ನು ಅನುಸರಿಸಿ..

ಅಗತ್ಯತೆ
ನಿಮ್ಮ ಸ್ಮಾರ್ಟ್‌ಪೋನ್‌ನಲ್ಲಿ ಗೂಗಲ್ ಒನ್ ಅಪ್ಲಿಕೇಶನ್‌ನ್ನು ಇನ್‌ಸ್ಟಾಲ್ ಮಾಡಿ. ಇದರ ಜೊತೆ ನಿಮ್ಮ ಸ್ಮಾರ್ಟ್‌ಫೋನ್‌ಗೆ ಇಂಟರ್‌ನೆಟ್ ಸಂಪರ್ಕ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಹಾಗೂ ನಿಮ್ಮ ಮೊಬೈಲ್‌ನಲ್ಲಿ
ಸ್ಟೊರೇಜ್ ಪ್ಲಾನ್ ಸಕ್ರಿಯವಾಗಿದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಿ.

ಬ್ಯಾಕಪ್ ಹೇಗೆ..?
ಮೊದಲು ಗೂಗಲ್ ಪ್ಲೇ ಸ್ಟೋರ್‌ಗೆ ಹೋಗಿ, ಗೂಗಲ್ ಒನ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ. ನಂತರ ಗೂಗಲ್ ಒನ್ ಆಪ್ ಒಪನ್ ಮಾಡಿ, ಗೂಗಲ್ ಐಡಿ ಮತ್ತು ಪಾಸ್‌ವರ್ಡ್ ಬಳಸಿ ಲಾಗಿನ್ ಆಗಿ. ನಂತರ ಸ್ಟೊರೇಜ್ ಪ್ಲಾನ್‌ನ್ನು ಆಯ್ಕೆ ಮಾಡಿಕೊಳ್ಳಿ. ನಂತರ ಆಪ್‌ನ ಹೋಮ್ ವಿಭಾಗದಲ್ಲಿ 'ಬ್ಯಾಕಪ್ ನೌ' ಎಂಬ ಆಯ್ಕೆಯನ್ನು ಟ್ಯಾಪ್ ಮಾಡಿ.

ಬ್ಯಾಕಪ್ ವಿಷಯ ಆಯ್ಕೆ
ಬ್ಯಾಕಪ್ ನೌ ಆಯ್ಕೆಯನ್ನು ಟ್ಯಾಪ್ ಮಾಡಿದ ನಂತರ, ನೀವು ಬ್ಯಾಕಪ್ ಮಾಡಲು ಬಯಸುವ ವಿಷಯವನ್ನು ಆಯ್ಕೆ ಮಾಡಲು ಆಪ್ ಕೇಳುತ್ತದೆ. ನಿಮ್ಮ ಆಯ್ಕೆಯ ವಿಷಯವನ್ನು ಆಯ್ದುಕೊಂಡು, ನೆಕ್ಸ್ಟ್ ಎಂಬ ಬಟನ್ ಕ್ಲಿಕ್ ಮಾಡಿ. ಬ್ಯಾಕಪ್ ಪ್ರಕ್ರಿಯೆಯನ್ನು ಪ್ರಾರಂಭಿಸಲು ಮತ್ತೆ 'ಬ್ಯಾಕಪ್ ನೌ' ಬಟನ್ ಟ್ಯಾಪ್ ಮಾಡಿ. ನಂತರ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಕಾಯಿರಿ.

ರಿಸ್ಟೋರ್ ಮಾಡುವುದು ಹೇಗೆ..?
ಅಪ್ಲಿಕೇಶನ್‌ನ ಮುಖಪುಟ ವಿಭಾಗದಡಿಯಲ್ಲಿ ರಿಸ್ಟೋರ್ ಆಯ್ಕೆಯನ್ನು ನೋಡಿ. ಅಲ್ಲಿರುವ 'ರಿಸ್ಟೋರ್ ಬ್ಯಾಕಪ್' ಆಯ್ಕೆಯನ್ನು ಟ್ಯಾಪ್ ಮಾಡಿ. ನಂತರ ಅಲ್ಲಿ, ಲಭ್ಯವಿರುವ ಎಲ್ಲಾ ಬ್ಯಾಕಪ್ ಡೇಟಾವನ್ನು ತೋರಿಸುತ್ತದೆ, ರಿಸ್ಟೋರ್ ಪ್ರಕ್ರಿಯೆ ಪ್ರಾರಂಭಿಸಲು ಪ್ರತಿ ವಿಭಾಗದ ಮುಂದೆ ರಿಸ್ಟೋರ್ ಬಟನ್ ಟ್ಯಾಪ್ ಮಾಡಿ. ಮೂಲ ಸಂಗ್ರಹಣೆಯು ಕೇವಲ 15GB ಮಾತ್ರ ಇದ್ದು, ಅದಕ್ಕಿಂತ ಹೆಚ್ಚಿನ ಸ್ಟೊರೇಜ್ ಬಳಸಲು ಬಳಕೆದಾರರು ಹೆಚ್ಚುವರಿ ಶೇಖರಣಾ ಸ್ಥಳವನ್ನು ಖರೀದಿಸುವ ಅಗತ್ಯವಿದೆ.


Click it and Unblock the Notifications








