ಆಪಲ್ ಐಫೋನ್‌ನಲ್ಲಿ ಡೇಟಾ ಬ್ಯಾಕ್‌ಅಪ್ ಮಾಡಲು ಈ ಕ್ರಮ ಅನುಸರಿಸಿ!

|

ಪ್ರಸ್ತುತ ಬಹುತೇಕ ಬಳಕೆದಾರರು ಮುಖ್ಯ ಮಾಹಿತಿ/ಡೇಟಾಗಳನ್ನು ಸ್ಮಾರ್ಟ್‌ಫೋನ್‌ಗಳಲ್ಲಿ ಸ್ಟೋರ್ ಮಾಡಿಕೊಂಡಿರುತ್ತಾರೆ. ನಾನಾ ಕಾರಣಗಳಿಂದಾಗಿ ಸಂಗ್ರಹಿತ ಡೇಟಾ ಹಾಳಾಗುವ ಅಥವಾ ನಾಶವಾಗುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಡೇಟಾ ಸುರಕ್ಷಿತವಾಗಿ ಉಳಿಸಿಕೊಳ್ಳಬೇಕಾದರೇ ಬ್ಯಾಕ್‌ಅಪ್‌ ಮಾಡಿಕೊಳ್ಳುವುದು ಉಪಯುಕ್ತ ಕೆಲಸವಾಗಿದೆ. ಆಂಡ್ರಾಯ್ಡ್‌ ಹಾಗೂ ಐಫೋನ್‌ ಎರಡರಲ್ಲಿಯೂ ಬ್ಯಾಕ್‌ಅಪ್‌ಗೆ ಅವಕಾಶ ಇದೆ.

ಡೇಟಾ

ಹೌದು, ಪ್ರಮುಖ ಡೇಟಾ ರಕ್ಷಣೆಗೆ ಬಳಕೆದಾರರು ಬ್ಯಾಕ್‌ಅಪ್‌ ಪಡೆಯುವುದು ಉತ್ತಮ. ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಸ್ಟೋರೇಜ್‌ಗೆ ಸ್ಥಳ ನೀಡಿರುವಂತೆ, ಆಪಲ್‌ ಐಫೋನ್‌ಗಳಲ್ಲಿಯೂ ಡೇಟಾ ಸ್ಟೋರೇಜ್ ಆಯ್ಕೆ ಒದಗಿಸಲಾಗಿದೆ. ಬಳಕೆದಾರರು ಕಂಪನಿಯ ಈ ಅವಕಾಶದ ಮೂಲದ ಮೂಲಕ ತಮ್ಮ ಪೋಟೊಗಳನ್ನು, ಮೇಲ್‌ಗಳನ್ನು, ಕಾಂಟ್ಯಾಕ್ಟ್ಸ್‌ಗಳನ್ನು ಮತ್ತು ಕ್ಯಾಲೆಂಡರ ಮಾಹಿತಿಗಳನ್ನು ಬ್ಯಾಕ್‌ಅಪ್ ಸ್ಟೋರೇಜ್ ಮಾಡಿಕೊಳ್ಳಬಹುದು. ಹಾಗಾದರೇ ಐಫೋನ್‌ನಲ್ಲಿ ಡೇಟಾ ಬ್ಯಾಕ್‌ಅಪ್‌ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಐ ಕ್ಲೌಡ್ ಫೀಚರ್

ಐ ಕ್ಲೌಡ್ ಫೀಚರ್

ಆಪಲ್ ಕಂಪನಿಯು ಬ್ಯಾಕ್‌ಅಪ್‌ ಸ್ಟೋರೇಜ್‌ಗಾಗಿ 'ಐ ಕ್ಲೌಡ್‌' ಫೀಚರ್‌ ಅನ್ನು ತನ್ನ ಐಫೋನ್‌ಗಳಲ್ಲಿ ಪರಿಚಯಿಸಿದ್ದು, ದತ್ತಾಂಶಗಳನ್ನು ಸ್ಟೋರೇಜ್ ಮಾಡಲು ಆನ್‌ಲೈನ್‌ ಸ್ಥಳಾವಕಾಶ ಒದಗಿಸಲಿದೆ. ಬ್ಯಾಕ್‌ಅಪ್‌ ದತ್ತಾಂಶಗಳು ಸೆಕ್ಯುರ್‌ ಆಗಿರಲಿದ್ದು, ಫೈಲ್‌ಗಳನ್ನು ಮೂಲ ರೆಸಲ್ಯೂಶನ್‌ನಲ್ಲಿಯೇ ಸ್ಟೋರ್‌ ಮಾಡಿಕೊಳ್ಳುತ್ತದೆ. ಐಫೋನ್ ಆಂತರಿಕ ಸಂಗ್ರಹ ಫುಲ್‌ ಆದಾಗ ಸ್ಟೋರ್‌ ಆದ ಫೈಲ್‌ಗಳು ಕಡಿಮೆ ಗಾತ್ರಕ್ಕೆ ಬದಲಾಯಿಸಿಕೊಳ್ಳುತ್ತದೆ.

ಐ ಕ್ಲೌಡ್ ಆಕ್ಟಿವ್ ಮಾಡಿ

ಐ ಕ್ಲೌಡ್ ಆಕ್ಟಿವ್ ಮಾಡಿ

ಐ ಕ್ಲೌಡ್ ಆಯ್ಕೆಯು ಆಕ್ಟಿವ್ ಆಗಿದ್ದರೇ ಮಾತ್ರ ಫೋಟೊ, ಕಾಂಟ್ಯಾಕ್ಟ್ಸ್, ಕ್ಯಾಲೆಂಡರ್ ಮಾಹಿತಿಗಳು ಬ್ಯಾಕ್‌ಅಪ್ ಸ್ಟೋರೇಜ್ ಆಗುತ್ತವೆ. ಹೀಗಾಗಿ ಐಫೋನಿನಲ್ಲಿ ಐ ಕ್ಲೌಡ್ ಆಕ್ಟಿವ್ ಆಗಿರುವ ಬಗ್ಗೆ ಚೆಕ್ ಮಾಡಿ. ಒಂದು ವೇಳೆ ಆಕ್ಟಿವ್ ಆಗಿರದಿದ್ದರೇ ಸೆಟ್ಟಿಂಗ್ಸ್‌ಗೆ ಆಯ್ಕೆಯಲ್ಲಿ ನಿಮ್ಮ ಹೆಸರಿನ ಐಕಾನ್‌ ಮೇಲೆ ಕ್ಲಿಕ್ ಮಾಡಿ ನಂತರ ಕಾಣಿಸುವ ಲಿಸ್ಟ್‌ನಲ್ಲಿ ಐ ಕ್ಲೌಡ್ ಆಯ್ಕೆ ಮಾಡಿಕೊಂಡು ಆನ್ ಮಾಡಿರಿ.

ಸ್ಟೋರೇಜ್‌ನಲ್ಲಿ

ಐಫೋನ್‌ನ ಐ ಕ್ಲೌಡ್‌ ಆನ್‌ಲೈನ್‌ ಸ್ಟೋರೇಜ್‌ನಲ್ಲಿ 5GB ಸ್ಥಳಾವಕಾಶ ಇರಲಿದ್ದು, ಇದನ್ನು 2TB ವರೆಗೂ ವಿಸ್ತರಿಸಿಕೊಳ್ಳಬಹುದಾದ ಅವಕಾಶವಿದೆ ಆದರೆ ಅದಕ್ಕೆ ಹಣ ನೀಡಬೇಕಿದೆ. ಸೆಟ್ಟಿಂಗ್ಸ್‍ > ಮ್ಯಾನೆಜ್‌ > ಸ್ಟೋರೇಜ್‌ ಪ್ಲ್ಯಾನ್‌ > ಚೇಂಜ್‌ ಸ್ಟೋರೇಜ್‌ ಪ್ಲ್ಯಾನ್‌ ಆಯ್ಕೆ ಹೋಗಿ ಮೆಮೊರಿ ಹೆಚ್ಚಿಸಿಕೊಳ್ಳಬಹುದು.

ಹೊರತುಪಡೆಸಿ

ಐಫೋನ್‌ ಐ ಕ್ಲೌಡ್‌ ಹೊರತುಪಡೆಸಿ ಗೂಗಲ್ ಫೋಟೊಸ್ ಮೂಲಕ ಸಹ ಫೋಟೋಗಳ ಬ್ಯಾಕ್‌ಅಪ್‌ ಮಾಡಿಕೊಳ್ಳಬಹುದಾಗಿದೆ. ಆದರೆ ಬಳಕೆದಾರರು ಗೂಗಲ್ ಪೋಟೊಸ್‌ ಆಪ್‌ ಅನ್ನು ಆಪ್‌ ಸ್ಟೋರ್‌ನಿಂದ ಇನ್‌ಸ್ಟಾಲ್‌ ಮಾಡಿಕೊಳ್ಳಬೇಕು. ಪೋಟೋಸ್‌ ಸ್ಟೋರೇಜ್‌ಗಾಗಿ ಗೂಗಲ್‌ನಲ್ಲಿ 15GB ಆನ್‌ಲೈನ್‌ ಸ್ಥಳಾವಕಾಶ ಸೀಗಲಿದೆ.

 ಐ ಟ್ಯೂನ್ ಆಯ್ಕೆ

ಐ ಟ್ಯೂನ್ ಆಯ್ಕೆ

ಐಫೋನ್ ಐ ಕ್ಲೌಡ್‌ ಆನ್‌ಲೈನ್‌ ಸ್ಟೋರೇಜ್ ನಂತಯೇ ಐ ಟ್ಯೂನ್ ಆಯ್ಕೆಯನ್ನು ಬಳಸಬಹುದಾಗಿದೆ. ಚಾರ್ಜ್‌ ಕೇಬಲ್ ಮೂಲಕ ಐಫೋನ್‌ ಅನ್ನು ಲ್ಯಾಪ್‌ಟಾಪ್‌ಗೆ ಕನೆಕ್ಟ್‌ ಮಾಡಿ ಐ ಟ್ಯೂನ್ ರನ್‌ ಮಾಡಿರಿ. ನಂತರ ಬ್ಯಾಕ್‌ಅಪ್ ಬಾಕ್ಸ್‌ನಲ್ಲಿ ದತ್ತಾಂಶಗಳನ್ನು ಸ್ಟೋರ್‌ ಮಾಡಬಹುದಾಗಿದೆ.

Most Read Articles
Best Mobiles in India

English summary
All iPhones can easily backup all your data to iCloud everyday automatically. All you need to do is enable the iCloud backup from the Settings menu.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X