ನಿರ್ದಿಷ್ಟ ವೆಬ್‌ಸೈಟ್‌ಗಳನ್ನು ಬ್ಲಾಕ್ ಮಾಡುವುದು ಹೇಗೆ?
ನಿಮ್ಮ್ ಮಕ್ಕಳು ಇಂಟರ್‌ನೆಟ್‌ನಲ್ಲಿ ಯಾವ ವೆಬ್‌ಸೈಟ್‌ಗಳನ್ನು ವೀಕ್ಷಿಸುತ್ತಾರೆ ಎಂಬುರ ಕುರಿತು ಕಣ್ಣಿಡಲು ಸಾಧ್ಯವಾಗುತ್ತಿಲ್ಲವೆ? ನಿಮ್ಮ್ ಕಚೇರಿಯಲ್ಲಿ ಸೋಷಿಯಲ್ ನೆಟ್ವರ್ಕಿಂಗ್ ಸೈಟ್ಸ್‌ಗಳ ಮಿತಿಮೀರಿದ ಬಳಕೆಯಿಂದ ಸಾಕಾಗಿ ಹೋಗಿದೆಯೆ? ಇದಕ್ಕಾಗಿ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ ಇಂತಹ ಸಮಸ್ಯೆಯ ಪರಿಹಾರಕ್ಕಾಗಿ ಗಿಗ್ಬಾಟ್ ಸುಲಭವಾದ ಮಾರ್ಗವೊಂದನ್ನು ನಿಮಗಾಗಿ ತಂದಿದೆ ಓದಿ ನೋಡಿ. ಈ ಸಲಹೆಯಂತೆ ನೀವು ನಿಮ್ಮ ಕಂಪ್ಯೂಟರ್‌ನಲ್ಲಿ ಯಾವುದೇ ಸೈಟ್‌ಗಳನ್ನು ಬ್ಲಾಕ್ ಮಾಡಬಹುದಾಗಿದೆ. ಅಂದಹಾಗೆ ವೆಬ್‌ಸೈಟ್ ಬ್ಲಾಕ್ ಮಾಡುವ ಈ ಫೀಚರ್ ಎಲ್ಲಾ ಕಂಪ್ಯೂಟರ್ ಹಾಗೂ ಲ್ಯಾಪ್‌ಟಾಪ್‌ಗಳಲ್ಲಿ ಲಭ್ಯವಿದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು ಆದರೆ ಇದು ಸತ್ಯ, ಬಹುತೇಕ ಮಂದಿಗೆ ಇಂತಹ ಫೀಚರ್‌ಗಳ ಅರಿವೇ ಇಲ್ಲದ ಕಾರಣ ಬಳಸದೇ ಹೋಗುತ್ತಾರೆ

- ನಿಮ್ಮ ಕಂಪ್ಯೂಟರ್‌ನಲ್ಲಿ ಇಂಟರ್‌ನೆಟ್ ಎಕ್ಸಪ್ಲೋರ್ ಇಲ್ಲವಾದ್ದಲ್ಲಿ ಅದನ್ನು ಡೌನ್ಲೋಡ್ ಮಾಡಿಕೊಳ್ಳಿ.
- ಪೀಜ್ ಮೇಲೆ ನೀಡಲಾಗಿರುವ ಟೂಲ್ ಆಪ್ಷನ್ಸ್ ಮೇಲೆ ಕ್ಲಿಕ್ ಮಾಡಿ.
- ಟೂಲ್ಸ್ ಆಪ್ಷನ್ಸ್‌ನಲ್ಲಿ ಹೋಗಿ ಇಂಟರ್‌ನೆಟ್ ಆಪ್ಷನ್ ಕ್ಲಿಕ್ ಮಾಡಿ.
- ಇಂಟರ್‌ನೆಟ್ ಆಪ್ಷನ್‌ನಲ್ಲಿ ಪ್ರೈವೆಸಿ ಸೆಟ್ಟಿಂಗ್ ಮೇಲೆ ಕ್ಲಿಕ್ ಮಾಡಿ.
- ಪ್ರೈವೆಸಿ ಸೆಟ್ಟಿಂಗ್ಸ್‌ಗೆ ತೆರಳಿ ಬ್ಲಾಕ್ ಬ್ಲಾಕ್ ಮಾಡಬೇಕಾದ ವೆಬ್ ಅಡ್ರಸ್‌ಗಳನ್ನು ಹಾಕಿ ಈಕೆ ಕ್ಲಿಕ್ ಮಾಡಿ.
ಈ ಎಲ್ಲಾ ಸ್ಟೆಪ್ಸ್‌ಗಳನ್ನು ಫಾಲೋ ಮಾಡುವ ಮೂಲಕ ನೀವು ನಿಮ್ಮ ಕಂಪ್ಯೂಟರ್ ನಲ್ಲಿ ನಿರ್ದಿಷ್ಟ ವೆಬ್‌ಸೈಟ್‌ಗಳನ್ನು ಬ್ಲಾಕ್ ಮಾಡಬಹುದಾಗಿದೆ.


Click it and Unblock the Notifications








