Home
ಟೆಕ್ ನೌಕರಿ

ಗೂಗಲ್‌ ಕ್ರೋಮ್‌ನಲ್ಲಿ ಬರುತ್ತಿರುವ ಜಾಹಿರಾತುಗಳನ್ನು ಸ್ಟಾಪ್‌ ಮಾಡುವುದು ಹೇಗೆ?

ಗೂಗಲ್‌ ಕ್ರೋಮ್‌ ತೆರೆಯುತ್ತಿದ್ದ ಹಾಗೇ ಜಾಹಿರಾತುಗಳು ಬರುತ್ತಿದೆಯಾ. ನೀವು ನೋಡಲು ಬಯಸದ ಜಾಹಿರಾತುಗಳಿಂದ ಕಿರಿಕಿರಿ ಅನುಭವಿಸುತ್ತಿದ್ದೀರಾ. ಇದಕ್ಕಾಗಿ ನೀವು ಚಿಂತಿಸಬೇಕಾದ ಅವಶ್ಯಕತೆಯಿಲ್ಲ, ನೀವು ಕ್ರೋಮ್‌ನಲ್ಲಿ ಕೆಲವು ಸೆಟ್ಟಿಂಗ್ಸ್‌ಗಳನ್ನು ಅನುಸರಿಸಿದರೆ ಜಾಹಿರಾತುಗಳನ್ನು ತಡೆಗಟ್ಟಬಹುದಾಗಿದೆ.

ಹೌದು, ಗೂಗಲ್‌ ಕ್ರೋಮ್‌ನಲ್ಲಿ ನಿಮ್ಮ ಆನ್‌ಲೈನ್‌ ಆ್ಯಕ್ಟಿವಿಟಿಗಳನ್ನು ಟ್ರ್ಯಾಕ್‌ ಮಾಡುವ ವ್ಯವಸ್ಥೆಯಿದೆ. ಇದರ ಆಧಾರದ ಮೇಲೆ ನಿಮ್ಮ ಆಸಕ್ತಿಗಳಿಗೆ ಅನುಗುಣವಾದ ಜಾಹಿರಾತುಗಳು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಆದರೆ ಇದು ಕೆಲವು ಸಂದರ್ಭದಲ್ಲಿ ನಿಮಗೆ ಕಿರಿಕಿರಿ ಎನಿಸಿಬಿಡುತ್ತದೆ. ಇಂತಹ ಸಮಯದಲ್ಲಿ ನಿಮ್ಮ ಆಕ್ಟಿವಿಟಿ ಟ್ರ್ಯಾಕ್‌ ಮಾಡುವ ಫೀಚರ್ಸ್‌ ಅನ್ನು ಆಫ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌ ಕ್ರೋಮ್‌ನಲ್ಲಿ ಬರುತ್ತಿರುವ ಜಾಹಿರಾತುಗಳನ್ನು ಸ್ಟಾಪ್‌ ಮಾಡುವುದು ಹೇಗೆ?

ಗೂಗಲ್‌ ಕ್ರೋಮ್‌ನಲ್ಲಿ ಹೊಸ ಉದ್ದೇಶಿತ ಜಾಹೀರಾತು ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಪರಿಚಯಿಸಿದೆ. ಈ ಸಿಸ್ಟಂ ನಿಮ್ಮ ಬ್ರೌಸಿಂಗ್ ಹಿಸ್ಟರಿ ಆಧಾರದ ಮೇಲೆ ಬಳಕೆದಾರರ ಆಸಕ್ತಿಗಳನ್ನು ಕ್ಯುರೇಟ್ ಮಾಡಲಿದೆ. ಇದು ಥರ್ಡ್‌ ಪಾರ್ಟಿ ಕುಕ್ಕೀಗಳನ್ನು ಬದಲಾಯಿಸಲಿದೆ. ಇದರಿಂದ ನಿಮ್ಮ ಬ್ರೌಸಿಂಗ್‌ ಹಿಸ್ಟರಿಯನ್ನು ಟ್ರ್ಯಾಕ್‌ ಮಾಡುವುದನ್ನು ತಪ್ಪಿಸಬೇಕಾದರೆ ಜಾಹೀರಾತು ಟ್ರ್ಯಾಕಿಂಗ್‌ ಸಿಸ್ಟಂ ಅನ್ನು ನಿಷ್ಕ್ರೀಯಗೊಳಿಸಬೇಕಾಗುತ್ತದೆ. ಇದಕ್ಕಾಗಿ ನೀವು ಯಾವೆಲ್ಲಾ ಮಾರ್ಗಗಳನ್ನು ಅನುಸರಿಸಬೇಕು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌ ಕ್ರೋಮ್‌ನಲ್ಲಿ ಜಾಹೀರಾತು ಟ್ರ್ಯಾಕಿಂಗ್‌ ಸಿಸ್ಟಂ ಅನ್ನು ನಿಷ್ಕ್ರೀಯಗೊಳಿಸಲು ಹೀಗೆ ಮಾಡಿ
* ಮೊದಲಿಗೆ ಗೂಗಲ್‌ ಕ್ರೋಮ್‌ನಲ್ಲಿ ಸೆಟ್ಟಿಂಗ್ಸ್‌ ತೆರೆಯಿರಿ
* ನಂತರ ಮೇಲಿನ ಬಲ ಮೂಲೆಯಲ್ಲಿರುವ ಮೂರು ಚುಕ್ಕೆಗಳನ್ನು ಕ್ಲಿಕ್ ಮಾಡಿ.
* ಇದರಲ್ಲಿ ಪ್ರೈವೆಸಿ ಮತ್ತು ಸೆಕ್ಯುರಿಟಿ ಆಯ್ಕೆಯನ್ನು ಟ್ಯಾಪ್‌ ಮಾಡಿ
* ನಂತರ ಆಡ್‌ ಪ್ರೈವೆಸಿ ಸೆಟ್ಟಿಂಗ್ಸ್‌ ಅನ್ನು ಸರ್ಚ್‌ ಮಾಡಿ ಟ್ಯಾಪ್‌ ಮಾಡಿ
* ನೀವು ಉದ್ದೇಶಿಸಿರುವ ಜಾಹೀರಾತು ಟ್ರ್ಯಾಕಿಂಗ್ ಅನ್ನು ಆಫ್ ಮಾಡಿ
* ಆಡ್‌ ಪ್ರೈವೆಸಿ ಸೆಟ್ಟಿಂಗ್ಸ್‌ನಲ್ಲಿ ಮೂರು ರೀತಿಯ ವರ್ಗಗಳು ಕಾಣಲಿವೆ
- ಜಾಹೀರಾತು ವಿಷಯಗಳು (ನಿಮ್ಮ ಬ್ರೌಸಿಂಗ್ ಹಿಸ್ಟರಿ ಆಧಾರದ ಮೇಲೆ).
- ಸೈಟ್ ಸೂಚಿಸಿದ ಜಾಹೀರಾತುಗಳು (ಭೇಟಿ ನೀಡಿದ ಸೈಟ್‌ಗಳನ್ನು ಆಧರಿಸಿ).
- ಜಾಹೀರಾತು ಮಾಪನ (ಜಾಹೀರಾತು ಪರಿಣಾಮಕಾರಿತ್ವಕ್ಕಾಗಿ).
* ಇದರಲ್ಲಿ ನೀವು ಯಾವ ವಿವರಗಳನ್ನು ಅನ್ವೇಷಿಸಲು ಬಯಸುವಿರೋ ಆ ವರ್ಗದ ಮೇಲೆ ಕ್ಲಿಕ್ ಮಾಡಿ.
* ಇದೀಗ ನೀವು ಉದ್ದೇಶಿಸಿರುವ ಜಾಹೀರಾತು ಟ್ರ್ಯಾಕಿಂಗ್ ಅನ್ನು ನಿಲ್ಲಿಸಲು, ಪ್ರತಿ ವರ್ಗವನ್ನು ಪ್ರತ್ಯೇಕವಾಗಿ ಟಾಗಲ್ ಮಾಡಬೇಕಾಗುತ್ತದೆ.
* ಈ ಮೂಲಕ ನೀವು ಆಯ್ಕೆ ಮಾಡಿದ ವರ್ಗಕ್ಕೆ ಸಂಬಂಧಿಸಿದ ಡೇಟಾವನ್ನು ಹಂಚಿಕೊಳ್ಳುವುದನ್ನು ಕ್ರೋಮ್‌ ಸ್ಟಾಪ್‌ ಮಾಡಲಿದೆ.

ಒಟ್ಟಾರೆ ಹೇಳುವುದಾದರೆ ಗೂಗಲ್‌ ಕ್ರೋಮ್‌ನಲ್ಲಿ ಹೊಸ ಆಡ್‌ ಟ್ರ್ಯಾಕಿಂಗ್‌ ಸಿಸ್ಟಂ ಅನ್ನು ನಿಷ್ಕ್ರೀಯಗೊಳಿಸುವುದರಿಂದ ನಿಮ್ಮ ಆನ್‌ಲೈನ್ ಗೌಪ್ಯತೆಯನ್ನು ರಕ್ಷಿಸಬಹುದಾಗಿದೆ. ಆದರಿಂದ ಈ ಹಂತಗಳನ್ನು ಅನುಸರಿಸುವ ಮೂಲಕ, ನಿಮ್ಮ ಆನ್‌ಲೈನ್ ಪ್ರೈವೆಸಿ ಕಂಟ್ರೋಲ್‌ ಅನ್ನು ನೀವು ತೆಗೆದುಕೊಳ್ಳಬಹುದಾಗಿದೆ.

ಇನ್ನು ಗೂಗಲ್ ಈ ವರ್ಷದ ಆರಂಭದಲ್ಲಿ ಇ-ಸಿಮ್‌ ವರ್ಗಾವಣೆ ಫೀಚರ್ಸ್‌ನಲ್ಲಿ(eSIM Transfer Features) ಕೆಲಸ ಮಾಡುತ್ತಿದೆ. ಈ ಮೂಲಕ ಬಳಕೆದಾರರು ಈ ಸಿಮ್‌ಅನ್ನು ಒಂದು ಡಿವೈಸ್‌ನಿಂದ ಮತ್ತೊಂದು ಡಿವೈಸ್‌ಗೆ ಸ್ಥಳೀಯವಾಗಿ ಬದಲು ಮಾಡಲು ಅನುವು ಮಾಡಿಕೊಡಲಿದೆ. ಸದ್ಯಕ್ಕೆ ಎರಡು ಡಿವೈಸ್‌ಗಳ ನಡುವೆ ಇ-ಸಿಮ್‌ ಗಳನ್ನು ಅದಲು ಬದಲು ಮಾಡಲು ಯಾವುದೇ ಆಯ್ಕೆ ಇಲ್ಲ. ಒಂದು ಡಿವೈಸ್‌ನಿಂದ ಇ-ಸಿಮ್‌ ಅನ್ನು ಅನ್ನು ನಿಷ್ಕ್ರಿಯಗೊಳಿಸಬೇಕು ಎಂದರೆ ಅದನ್ನು ಇನ್ನೊಂದು ಡಿವೈಸ್‌ನಲ್ಲಿ ಮತ್ತೆ ಸಕ್ರಿಯಗೊಳಿಸಬೇಕು. ಸ್ಥಳೀಯ ಇ-ಸಿಮ್‌ ವರ್ಗಾವಣೆ ಬೆಂಬಲವು ಕ್ಯೂಆರ್ ಕೋಡ್‌ಗಳನ್ನು(QR code) ಆಧರಿಸಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದ್ದು, ಈ ಕ್ಯೂಆರ್ ಒಂದು ಡಿವೈಸ್‌ನಿಂದ ಇನ್ನೊಂದು ಡಿವೈಸ್‌ಗೆ ಇ-ಸಿಮ್‌ ಅನ್ನು ಆಡ್‌ ಮಾಡಲು ಅನುಮತಿಸುತ್ತದೆ.

Best Mobiles in India

English summary
How to block Chrome's targeted ad tracking feature: Details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+