Home
ಟೆಕ್ ನೌಕರಿ

ನಿಮ್ಮ ಆಂಡ್ರಾಯ್ಡ್ ಫೋನಿನಲ್ಲಿ ನೊಟಿಫಿಕೇಶನ್ ಬ್ಲಾಕ್ ಮಾಡುವುದು ಹೇಗೆ ಗೊತ್ತಾ?!

ನೀವು ಯಾವುದೇ ಮೊಬೈಲ್ ಆಪ್‌ಗಳನ್ನು ತರೆದರೂ ಅವುಗಳಿಂದ ನಿಮಗೆ ಅಧಿಸೂಚನೆಗಳು (notification) ಬರುತ್ತಿರುತ್ತವೆ. ಅದು ಫೇಸ್ ಬುಕ್ ಇರಬಹುದು, ಯೂಟ್ಯೂಬ್ ಇರಬಹುದು, ಲಿಂಕ್ಡ್ ಇನ್, ಟ್ವಿಟರ್, ಯಾವುದೇ ಇರಬಹುದು. ನೀವು ಈ ಖಾತೆಗಳಲ್ಲಿ ಏನೇ ಚಟುವಟಿಕೆ ಮಾಡಿದರೂ, ಬೇರೆಯವರು ಏನೇ ಚಟುವಟಿಕೆ ಮಾಡಿ ನಿಮ್ಮ ಹೆಸರು ಉಲ್ಲೇಖ ಮಾಡಿದರೂ, ಅದೆಲ್ಲ ವಿವರ ನಿಮ್ಮ ಫೋನಿಗೆ ಬರುತ್ತದೆ. ಈ ರೀತಿಯ ನೊಟಿಫಿಕೇಶನ್ ಫೀಚರ್ ಉಪಯುಕ್ತವಾದರೂ ಕೂಡ, ನಿಮ್ಮ ಚಟುವಟಿಕೆ ಜಾಸ್ತಿಯಾದಷ್ಟೂ ದಿನಂಪ್ರತಿ ಕಿರಿಕಿರಿ ಮಾಡುತ್ತವೆ.

ನಿಮ್ಮ ಆಂಡ್ರಾಯ್ಡ್ ಫೋನಿನಲ್ಲಿ ನೊಟಿಫಿಕೇಶನ್ ಬ್ಲಾಕ್ ಮಾಡುವುದು ಹೇಗೆ ಗೊತ್ತಾ?!

ಇಂತಹ ಸಮಸ್ಯೆಯನ್ನು ನಿರ್ವಹಿಸಲು ಆಂಡ್ರಾಯ್ಡ್ ನಿಮಗೆ ಬಹುಕಾಲದಿಂದ ಅವಕಾಶ ಮಾಡಿಕೊಟ್ಟಿದೆ. ಹೆಚ್ಚಿನ ಅಪ್ಲಿಕೇಶನ್‌ಗಳು ತಮ್ಮದೇ ಆದ ಸೆಟ್ಟಿಂಗ್‌ಗಳನ್ನು ಹೊಂದಿದ್ದು, ನಿಮಗೆ ತಿಳಿಸುವದನ್ನು ತಿರುಚಲು ಅಥವಾ ಕಸ್ಟಮೈಸ್ ಮಾಡಲು ನಿಮಗೆ ಅವಕಾಶ ಮಾಡಿಕೊಡುತ್ತವೆ. ಆದರೆ ಆಂಡ್ರಾಯ್ಡ್ 9.0 ಪೈ ನಂತರ ಅಪ್‌ಡೇಟ್‌ ಮಾತ್ರ ಅಧಿಸೂಚನೆಗಳನ್ನು ನಿರ್ವಹಿಸಲು ಹೊಸ ವ್ಯವಸ್ಥೆಯನ್ನು ತಂದಿದೆ. ಪ್ರತಿ ಅಪ್ಲಿಕೇಶನ್‌ಗೆ ವಿವಿಧ ವರ್ಗದ ಅಧಿಸೂಚನೆಗಳನ್ನು ಗುರುತಿಸಲು ಅನುಮತಿ ನೀಡಿ ಗ್ರಾಹಕರಿಗೆ ಸಹಾಯವಾಗುವಂತೆ ಬದಲಾವಣೆಯನ್ನು ತಂದಿದೆ.

ನೀವು ಆಂಡ್ರಾಯ್ಡ್ 9.0 ಪೈ ನಂತರದ ಓಎಸ್ ಬಳಸುತ್ತಿದ್ದರೆ ನೊಟಿಫಿಕೇಶನ್ ಬರುವುದನ್ನು ತಡೆಯುವುದು ಸುಲಭವಾಗಿದೆ. ನೀವು ನಿಮ್ಮ ಆಂಡ್ರಾಯ್ಡ್ ಫೋನಿನಲ್ಲಿ ಸೆಟ್ಟಿಂಗ್ಸ್ ಕ್ಲಿಕ್ ಮಾಡಿ. ನಂತರ ತೆರೆಯುವ ಆಯ್ಕೆಗಳಲ್ಲಿ ಆಪ್ಸ್ ಮತ್ತು ನೊಟಿಫಿಕೇಶನ್ ಎಂಬ ಆಯ್ಕೆ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿ. ನಂತರ ಆಪ್ಸ್ ಮತ್ತು ನೊಟಿಫಿಕೇಶನ್ ಕ್ಲಿಕ್ ಮಾಡಿದಾಗ ತೆರೆಯುವ ಪುಟದ ಕೆಳಬಾಗದಲ್ಲಿ ನೊಟಿಫಿಕೇಶನ್ ಎಂಬ ಆಯ್ಕೆ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿದರೆ ನೀವು ಯಾವೆಲ್ಲಾ ಆಪ್‌ಗಳನ್ನು ಸುಮ್ಮನಿರುವಂತೆ ಮಾಡಬೇಕು ಎಂಬುದು ತಿಳಿಯುತ್ತದೆ.

ನೀವು ಹೀಗೆಯೇ ನೇರವಾಗಿ ಆಪ್‌ಗಳಲ್ಲೂ ಸಹ ನೊಟಿಫಿಕೇಷನ್‌ಗಳನ್ನು ಬರದಂತರೆ ಮಾಡಬಹುದು. ಉದಾಹರಣೆಗೆ ಹುಟ್ಟುಹಬ್ಬ, ಕಾರ್ಯಕ್ರಮ, ಟ್ಯಾಗ್ ಮಾಡಿದ ಪೋಸ್ಟ್, ಹೊಸ ಫ್ರೆಂಡ್ ರಿಕ್ವೆಸ್ಟ್ ಹೀಗೆ ಎಲ್ಲದರ ಬಗ್ಗೆಯೂ ಫೇಸ್‌ಬುಕ್ ನೊಟಿಫಿಕೇಶನ್ ನೀಡುತ್ತದೆ. ಬೇರೆಯವರ ಪೋಸ್ಟ್‌ಗೆ ನಾವು ಕಾಮೆಂಟಿಸಿದಾಗ ಮುಂದಿನ ಕಾಮೆಂಟ್‌ಗಳ ಬಗ್ಗೆ ನಮಗೆ ನೋಟಿಫಿಕೇಶನ್ ಬರುತ್ತಿರುತ್ತದೆ. ಈ ರೀತಿ ನೋಟಿಫಿಕೇಶನ್ ಬೇಡ ಅಂದರೆ Turn off Notification ಆಯ್ಕೆಯೂ ಇರುತ್ತದೆ. ಇದನ್ನು ನೀವು ಸುಲಭವಾಗಿ ಆಪ್‌ನಲ್ಲಿಯೇ ನಿಲ್ಲಿಸುವ ಆಯ್ಕೆ ಕೂಡ ಇದೆ.

ನಿಮ್ಮ ಫೇಸ್‌ಬುಕ್‌ನಲ್ಲಿ ನೊಟಿಫಿಕೇಶನ್ ಬರುವುದು ಬೇಡ ಎಂದು ನೀವು ಬಯಸುವುದಾದರೆ Birthdays ಕ್ಲಿಕ್ ಮಾಡಿ. ಅಲ್ಲಿ Allow notifications on Facebook ಎಂಬ ಆಪ್ಶನ್ ಇರುತ್ತದೆ. ಅದು ಎನೇಬಲ್ ಆಗಿದ್ದರೆ ಡಿಸೇಬಲ್ ಮಾಡಿ. ಒಂದು ವೇಳೆ ನೀವು ಡಿಸೇಬಲ್ ಆಗಿದ್ದ ಆಪ್ಶನ್ ಎನೇಬಲ್ ಮಾಡಿದರೆ ಅಲ್ಲಿ ಅಲ್ಲಿ Push, Email, SMS ಎಂಬ ಆಪ್ಶನ್ ಇರುತ್ತದೆ. ಇವುಗಳಲ್ಲಿ ಒಂದನ್ನು ಸಹ ನೀವು ಆಯ್ಕೆ ಮಾಡಿಕೊಳ್ಳಬಹುದು. ಸದ್ಯ ನೋಟಿಫಿಕೇಶನ್ ರಗಳೆ ಏನೂ ಬೇಡ ಎಂದಾದರೆ ನೋಟಿಫಿಕೇಶನ್ ಮ್ಯೂಟ್ ಮಾಡಿದರೆ ಸಾಕು.

Best Mobiles in India

English summary
Block Notifications on Android Phone. Now, Pie's new system for managing notifications allows each app to identify different categories of notifications. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+