ವೈಫೈ ಆಂಟೆನಾ ನೀವೇ ಸಿದ್ಧಪಡಿಸಿ
ಕೆಲವೊಮ್ಮೆ ವೈಫೈ ಸಿಗ್ನಲ್ ನೀವಿರುವಲ್ಲಿಗೆ ತಲುಪುವುದಿಲ್ಲ. ವೈರ್‌ಲೆಸ್ ಅಡಾಪ್ಟರ್ ಅನ್ನು ನೀವು ಅಂಗಡಿಗಳಲ್ಲಿ ಕಂಡಿರುತ್ತೀರಿ, ಆದರೆ ಇವುಗಳು ತುಂಬಾ ದುಬಾರಿಯಾಗಿರುತ್ತದೆ. ಹಾಗಿದ್ದರೆ ಕಡಿಮೆ ಬೆಲೆಯಲ್ಲಿ ವೈಫೈ ಆಂಟೆನಾವನ್ನು ಸಿದ್ಧಪಡಿಸುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಸಲಿದ್ದೇವೆ.
ಸರಳ ಹಂತಗಳಲ್ಲಿ ಈ ವಿಧಾನಗಳನ್ನು ನಾವು ನಿಮಗೆ ವಿವರಿಸಿದ್ದು ನಿಮ್ಮ ವೈಫೈ ಆಂಟೆನಾವನ್ನು ನಿಮಗೆ ಸಿದ್ಧಪಡಿಸಿಕೊಳ್ಳಬಹುದಾಗಿದೆ. ಹಾಗಿದ್ದರೆ ಆ ಹಂತಗಳನ್ನು ಇಲ್ಲಿ ತಿಳಿದುಕೊಳ್ಳೋಣ.

#1
ನಿಮ್ಮ ಹೆಬ್ಬರಳಿನ ಗಾತ್ರದಲ್ಲಿರುವ ಈ ಡಿವೈಸ್ ನಿಮ್ಮ ಕಂಪ್ಯೂಟರ್‌ಗೆ ವೈಫೈ ಸಾಮರ್ಥ್ಯವನ್ನು ಒದಗಿಸಲಿದೆ.

#2
ನಿಮ್ಮ ಕಂಪ್ಯೂಟರ್‌ನ ಯುಎಸ್‌ಬಿ ಪೋರ್ಟ್‌ಗೆ ಇದು ಯುಎಸ್‌ಬಿ ವೈಫೈ ಅಡಾಪ್ಟರ್ ಅನ್ನು ಸಂಪರ್ಕಪಡಿಸುತ್ತದೆ.

#3
ಆಹರಧಾನ್ಯಗಳನ್ನು ಹುರಿಯಲು ನೀವು ಬಳಸುವ ಅಡುಗೆ ಪರಿಕರ ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ವೈಫೈ ಡಾಂಗಲೆ ಮತ್ತು ಯುಎಸ್‌ಬಿ ಎಕ್ಸ್‌ಟೆನ್ಶನ್ ಕೇಬಲ್ ಅನ್ನು ಡಿಶ್‌ಗೆ ಟ್ವಿಸ್ಟ್ ಮಾಡಿ ಅಂಟಿಸಿ.

#4
ಯುಎಸ್‌ಬಿ ಎಕ್ಸ್‌ಟೆನ್ಶನ್‌ನ ಮೇಲ್ ಎಂಡ್ ಅನ್ನು ನಿಮ್ಮ ಕಂಪ್ಯೂಟರ್‌ಗೆ ಸಂಪರ್ಕಪಡಿಸಿ ಮತ್ತು ನೆಟ್‌ವರ್ಕ್ ಸೆಟ್ಟಿಂಗ್ ಅನ್ನು ಬಳಸಿಕೊಂಡು ನಿಮ್ಮ ವೈಫೈ ಕಾರ್ಡ್‌ನಂತೆ ಅದನ್ನು ಹೊಂದಿಸಿ.

#5
ನೀವು ಪ್ರವೇಶಿಸಬೇಕೆಂದಿರುವಲ್ಲಿ ರಿಮೋಟ್ ವೈಫೈ ಟ್ರಾನ್ಸ್‌ಮೀಟರ್ ಅನ್ನು ಲೊಕೇಟ್ ಮಾಡಿ.

#6
ನೀವು ಸಂಪರ್ಕಪಡಿಸಿದ ನಂತರ, ಡಿಶ್ ಅನ್ನು ಟ್ಯೂನ್ ಮಾಡಿ ಇದಕ್ಕೆ ಡಾಂಗಲ್‌ನ ಪೊಸಿಶನ್ ಅಗತ್ಯವಿದೆ.



Click it and Unblock the Notifications








