ನಿಮ್ಮ ಅಮೆಜಾನ್ ಪ್ರೈಮ್ ಸದಸ್ಯತ್ವವನ್ನು ರದ್ದುಗೊಳಿಸಲು ಹೀಗೆ ಮಾಡಿ!

|

ಪ್ರಸ್ತುತ ದಿನಗಳಲ್ಲಿ ಒಟಿಟಿ ಪ್ಲಾಟ್‌ಫಾರ್ಮ್‌ಗಳು ಭಾರಿ ಜನಪ್ರಿಯತೆಯನ್ನು ಪಡೆದುಕೊಂಡಿವೆ. ಇದರಲ್ಲಿ ಅಮೆಜಾನ್ ಪ್ರೈಮ್ ಭಾರತದಲ್ಲಿ ಹೆಚ್ಚು ಜನಪ್ರಿಯ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾಗಿದೆ. ಇನ್ನು ಅಮೆಜಾನ್‌ ಪ್ರೈಮ್‌ ಸದಸ್ಯತ್ವವನ್ನು ಹಣ ಪಾವತಿಸುವ ಮೂಲಕ ಪಡೆದುಕೊಳ್ಳಬಹುದಾಗಿದೆ. ಪ್ಲ್ಯಾನ್‌ಗಳಿಗೆ ಅನುಗುಣವಾಗಿ ಸದಸ್ಯತ್ವ ಶುಲ್ಕವನ್ನು ವಿಧಿಸಲಾಗುತ್ತೆ. ಇದರ ಪ್ರಧಾನ ಸದಸ್ಯತ್ವ ಬೆಲೆ 329 ರೂ. 3 ತಿಂಗಳ ಅವಧಿಯನ್ನು ಹೊಂದಿದೆ. ಜೊತೆಗೆ ಇಡೀ ವರ್ಷಕ್ಕೆ 999 ರೂ. ಚಂದದಾರಿಕೆಯನ್ನು ಹೊಂದಿದೆ.

ಟ್ರಯಲ್‌

ಹೌದು,ಅಮೆಜಾನ್ ಪ್ರೈಮ್ ಚಂದಾದಾರಿಕೆಯನ್ನು ರದ್ದುಗೊಳಿಸಲು ನೀವು ಬಯಸಲು ಹಲವು ಕಾರಣಗಳು ಇರುತ್ತೆ. ಅದರಲ್ಲಿ ಫ್ರಿ ಟ್ರಯಲ್‌ ಮುಗಿದಿರಬಹುದು ಮತ್ತು ಶುಲ್ಕಗಳನ್ನು ತಪ್ಪಿಸಲು ನೀವು ಚಂದಾದಾರಿಕೆಯನ್ನು ರದ್ದುಗೊಳಿಸಬೇಕಾಗಬಹುದು. ಇನ್ನು ಹಲವು ಕಾರಣಗಳಿಂದ ಅಮೆಜಾನ್ ಪ್ರೈಮ್ ಸದಸ್ಯತ್ವ ಚಂದಾದಾರಿಕೆಯನ್ನು ಸರಳ ರೀತಿಯಲ್ಲಿ ರದ್ದು ಮಾಡುವುದು ಹೇಗೆ? ಅನ್ನೊದನ್ನ ಈ ಕೆಳಗಿನ ಹಂತಗಳಲ್ಲಿ ತಿಳಿಯಿರಿ.

ಅಮೆಜಾನ್

ಭಾರತದಲ್ಲಿ ನೀವು ನಿಮ್ಮ ಅಮೆಜಾನ್ ಚಂದಾದಾರಿಕೆಯನ್ನು ರದ್ದುಗೊಳಿಸಲು ನೀವು ಆಯ್ಕೆಮಾಡಿದರೆ, ನೀವು ಈಗಾಗಲೇ ಪಾವತಿಸಿದ ಚಂದಾದರಿಕಯೆ ಅವಧಿ ಮುಗಿಯುವ ತನಕ ಇದು ಮುಂದುವರಿಯುತ್ತದೆ. ಅಂದರೆ ನೀವು ವಾರ್ಷಿಕ ಸದಸ್ಯತ್ವಕ್ಕಾಗಿ ಪಾವತಿಸಿದರೆ, ನಿಮ್ಮ ಮೆಂಬರ್‌ಶಿಪ್‌ ರದ್ದುಗೊಳಿಸಿದ ನಂತರ, ನಿಮ್ಮ ಚಂದಾರಿಕೆಯ ಅವಧಿಯವರೆಗೂ ನಿಮ್ಮ ಮೆಂಬರ್‌ಶಿಪ್‌ ಮುಂದುವರೆಯಲಿದೆ. ಎಲ್ಲಾ ಚಂದಾದಾರಿಕೆಯನ್ನು ರದ್ದುಗೊಳಿಸುವುದರಿಂದ ಇದು ಆಟೋ-ಅಪ್ಡೇಟ್‌ ಅನ್ನು ತಡೆಯುತ್ತದೆ.

ನಿಮ್ಮ ಅಮೆಜಾನ್ ಪ್ರೈಮ್ ಸದಸ್ಯತ್ವವನ್ನು ರದ್ದುಗೊಳಿಸುವುದು ಹೇಗೆ

ನಿಮ್ಮ ಅಮೆಜಾನ್ ಪ್ರೈಮ್ ಸದಸ್ಯತ್ವವನ್ನು ರದ್ದುಗೊಳಿಸುವುದು ಹೇಗೆ

ಹಂತ: 1 Amazon.in ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ನಿಮ್ಮ ಖಾತೆಯೊಂದಿಗೆ ಸೈನ್ ಇನ್ ಮಾಡಿ.
ಹಂತ: 2 ಮೇಲಿನ ಎಡಭಾಗದಿಂದ ಹ್ಯಾಂಬರ್ಗರ್ ಮೆನು ಬಟನ್ ಕ್ಲಿಕ್ ಮಾಡಿ ಮತ್ತು ನಿಮ್ಮ ಖಾತೆಯನ್ನು ಆಯ್ಕೆ ಮಾಡಿ.
ಹಂತ: 3 ಈಗ, ಪ್ರೈಮ್ ಆಯ್ಕೆಯನ್ನು ಒತ್ತಿರಿ.
ಹಂತ: 4 Manage membership ಲಿಂಕ್ ಅನ್ನು ಕ್ಲಿಕ್ ಮಾಡಿ. ಡ್ರಾಪ್-ಡೌನ್ ಪಟ್ಟಿ ಕಾಣಿಸುತ್ತದೆ. Manage membership ಆಯ್ಕೆಮಾಡಿ.
ಹಂತ: 5 end membership ಆಯ್ಕೆಯನ್ನು ಒತ್ತಿರಿ.
ಹಂತ: 6 ನೀವು ಸದಸ್ಯತ್ವಕ್ಕೆ ಸೇರಿದಾಗಿನಿಂದ ವಿತರಣಾ ಶುಲ್ಕದಲ್ಲಿ ನೀವು ಎಷ್ಟು ಉಳಿಸಿದ್ದೀರಿ ಎಂಬುದನ್ನು ಹೈಲೈಟ್ ಮಾಡಲು ಅಮೆಜಾನ್ ಈಗ ಡಿಸ್‌ಪ್ಲೇ ತೋರಿಸುತ್ತದೆ. ಅಲ್ಲಿ ಕ್ಯಾನ್ಸಲ್‌ ಮಾಡಲು ಮುಂದುವರಿಸಿ ಕ್ಲಿಕ್ ಮಾಡಿ.
ಹಂತ: 7 ಬಟನ್‌ನಲ್ಲಿ ಎಂಡ್‌ ತೋರಿಸುವ ಪರದೆಯನ್ನು ನೀವು ಈಗ ನೋಡುತ್ತೀರಿ. ಅಪ್ಡೇಟ್‌ ದಿನಾಂಕವನ್ನು ತಲುಪಿದ ನಂತರ ಇದು ನಿಮ್ಮ ಪ್ರಧಾನ ಸದಸ್ಯತ್ವವನ್ನು ಕೊನೆಗೊಳಿಸುತ್ತದೆ.

ವಾರ್ಷಿಕ

ಇನ್ನು ಅಮೆಜಾನ್‌ ಪ್ರೈಮ್‌ ಸದಸ್ಯತ್ವದ ಮರುಪಾವತಿ ನೀತಿಗಳು ಗಮನಿಸಿದಂತೆ, ಪ್ರಧಾನ ಸದಸ್ಯತ್ವವನ್ನು ಪ್ರವೇಶಿಸಲು ನೀವು ಮಾಸಿಕ ಅಥವಾ ವಾರ್ಷಿಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಸಿಂಧುತ್ವ ಅವಧಿ ಮುಗಿಯುವ ಮೊದಲೇ ನೀವು ಚಂದಾದಾರಿಕೆಯನ್ನು ರದ್ದುಗೊಳಿಸಲು ಬಯಸುತ್ತೀರಿ ಎಂದು ಭಾವಿಸೋಣ. ಅಂತಹ ಸಂದರ್ಭಗಳಲ್ಲಿ, ನೀವು ಮರುಪಾವತಿಗೆ ಅರ್ಹರಾಗಿರುತ್ತೀರಿ ಅನ್ನೊದನ್ನ ನೀವು ಗಮನಿಸಬೇಕು.

Best Mobiles in India

English summary
Amazon Prime membership cancellation is easy and takes just a few steps.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X