ಅಡ್ರೆಸ್ ಪ್ರೂಫ್ ಇಲ್ಲದೇ ಆಧಾರ್ ಕಾರ್ಡ್‌ನಲ್ಲಿ ಅಡ್ರೆಸ್ ಚೇಂಜ್ ಮಾಡಿಸುವುದು ಹೇಗೆ?
ಇಂದಿನ ದಿನಗಳಲ್ಲಿ ಆಧಾರ್ ಕಾರ್ಡ್ ಪ್ರಮುಖ ದಾಖಲೆಯಾಗಿ ಗುರುತಿಸಿಕೊಂಡಿದೆ. ಸರ್ಕಾರದ ಯಾವುದೆ ಸೌಲಭ್ಯಗಳನ್ನು ಪಡೆದುಕೊಳ್ಳಬೇಕಾದರೂ ಕೂಡ ಆಧಾರ್ ಕಾರ್ಡ್ ಅತ್ಯಗತ್ಯವಾಗಿದೆ. ಇನ್ನು ನೀವು ನಿಮ್ಮ ವಿಳಾಸವನ್ನು ಬದಲಾಯಿಸಿದರೆ ಆಧಾರ್ ಕಾರ್ಡ್‌ನಲ್ಲಿ ಕೂಡ ಅಡ್ರೆಸ್ ಚೇಂಜ್ ಮಾಡಿಸುವುದು ಸೂಕ್ತವಾಗಿದೆ.
ಹೌದು, ಆಧಾರ್ ಕಾರ್ಡ್‌ನಲ್ಲಿ ಅಡ್ರೆಸ್ ಚೇಂಜ್ ಮಾಡುವುದಕ್ಕೆ UIDAI ಅವಕಾಶ ನೀಡಿದೆ. ಆದರೆ ಆಧಾರ್ ಕಾರ್ಡ್‌ನಲ್ಲಿ ಅಡ್ರೆಸ್ ಚೇಂಜ್ ಮಾಡಬೇಕಾದರೆ ಅಡ್ರೆಸ್ ಪ್ರೂಫ್ ಅವಶ್ಯಕವಾಗಿದೆ. ಒಂದು ವೇಳೆ ನಿಮ್ಮ ಬಳಿ ಅಡ್ರೆಸ್ ಪ್ರೂಫ್ ಇಲ್ಲದಿದ್ದರೂ ಅಡ್ರೆಸ್ ಅನ್ನು ಬದಲಾಯಿಸುವುದಕ್ಕೆ ಸಾಧ್ಯವಿದೆ. ಅದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅಡ್ರೆಸ್ ಪ್ರೂಫ್ ಇಲ್ಲದೆ ಹೋದರು ಕೂಡ ನಿಮ್ಮ ಆಧಾರ್ ಕಾರ್ಡ್‌ನಲ್ಲಿ ಅಡ್ರೆಸ್ ಚೇಂಜ್ ಮಾಡಲು ಸಾಧ್ಯವಿದೆ. ಆದರೆ ಇದಕ್ಕಾಗಿ ನಿಮ್ಮ ಕುಟುಂಬದ ಮುಖ್ಯಸ್ಥರ ಒಪ್ಪಿಗೆ ಪಡೆದುಕೊಳ್ಳೋಬೇಕಾಗುತ್ತದೆ. ಹೆಡ್ ಆಫ್ ದಿ ಫ್ಯಾಮಿಲಿ ಒಪ್ಪಿಗೆ ಪಡೆದುಕೊಂಡರೆ ಅಡ್ರೆಸ್ ಪ್ರೂಫ್ ಇಲ್ಲದೆ ಹೋದರೂ ಸಹ ಆಧಾರ್‌ನಲ್ಲಿ ನಿಮ್ಮ ವಿಳಾಸವನ್ನು ಬದಲಾಯಿಸಬಹುದಾಗಿದೆ. ಆಧಾರ್‌ನಲ್ಲಿ ವಿಳಾಸವನ್ನು ಅಪ್ಡೇಟ್ ಮಾಡುವುದಕ್ಕೆ ಸಹಾಯ ಮಾಡುವ ನಿವಾಸಿ ಸ್ನೇಹಿ ಸೌಲಭ್ಯವನ್ನು ಜಾರಿಗೆ ತಂದಿದೆ.
ಅಂದರೆ ಆಧಾರ್‌ನಲ್ಲಿನ ಕುಟುಂಬದ ಮುಖ್ಯಸ್ಥರ ವಿಳಾಸದ ಆಧಾರದ ಮೇಲೆ ನಿಮ್ಮ ವಿಳಾಸವನ್ನು ಬದಲಾಯಿಸಿಕೊಳ್ಳಬಹುದು. ಹೆಡ್ ಆಫ್ ದ ಫ್ಯಾಮಿಲಿ ಆಧಾರಿತ ಆನ್‌ಲೈನ್ ವಿಳಾಸದ ಬದಲಾವಣೆಯ ಆಯ್ಕೆಯ ಮೂಲಕ ಯಾವುದೇ ಅಡ್ರೆಸ್ ಪ್ರೂಫ್ ಹೊಂದಿರದ ನಾಗರಿಕರ ಅಡ್ರೆಸ್ ಚೇಂಜ್ ಮಾಡಬಹುದು ಯುಐಡಿಎಐ ಕೂಡ ಹೇಳಿದೆ. ಈ ಆಯ್ಕೆಯಲ್ಲಿ ನೀವು ಯಾವುದೇ ವಿಳಾಸದ ದಾಖಲೆಗಳು ನಿಮ್ಮ ಬಳಿ ಇಲ್ಲದೆ ಹೋದಾಗ, UIDAI ನಿಗದಿ ಪಡಿಸಿರುವ ಸ್ವರೂಪದಲ್ಲಿ ಕುಟುಂಬದ ಮುಖ್ಯಸ್ಥರಿಂದ ಸ್ವಯಂ ಘೋಷಣೆಯನ್ನು ಸಲ್ಲಿಸಬೇಕಾಗುತ್ತದೆ.

ಇನ್ನು ಈ ಆಯ್ಕೆಯ ಮೂಲಕ ನಿಮ್ಮ ಅಡ್ರೆಸ್ ಚೇಂಜ್ ಮಾಡಲು ಬಯಸಿದರೆ ಕುಟುಂಬದ ಮುಖ್ಯಸ್ಥರ ದಾಖಲೆಯನ್ನು ಬಳಸಿಕೊಳ್ಳಬೇಕಾಗುತ್ತದೆ. ಇದರಲ್ಲಿ ನೀವು ವಿಳಾಸ ಬದಲಾಯಿಸುವಾಗ ನಿಮ್ಮ ಕುಟುಂಬದ ಮುಖ್ಯಸ್ಥರ ಒಪ್ಪಿಗೆಯನ್ನು ಆನ್‌ಲೈನ್‌ನಲ್ಲಿ ಪಡೆಯಬೇಕಾಗುತ್ತದೆ. ಇದನ್ನು ದೃಡೀಕರಿಸುವುದಕ್ಕೆ ಅವರ ಸಂಖ್ಯೆಗೆ ಬರುವ ಒಟಿಪಿಯನ್ನು ನಮೂದಿಸಬೇಕಾಗುತ್ತದೆ. ಈ ಪ್ರಕ್ರಿಯೆಯ ಮೂಲಕ ಅವರ ಸಂಬಂಧಿಕರೊಂದಿಗೆ ತಮ್ಮ ವಿಳಾಸವನ್ನು ಹಂಚಿಕೊಳ್ಳಬಹುದಾಗಿದೆ.

ಅಡ್ರೆಸ್ ಪ್ರೂಫ್ ಇಲ್ಲದೆ ಆಧಾರ್ ಕಾರ್ಡ್ ವಿಳಾಸವನ್ನು ಬದಲಾಯಿಸುವುದು ಹೇಗೆ?
* ಮೊದಲಿಗೆ https://myaadhaar.uidai.gov.in ಮೂಲಕ ಆಧಾರ್ ಅಧಿಕೃತ ವೆಬ್‌ಸೈಟ್‌ಗೆ ಬೇಟಿ ನೀಡಿ.
* ಆನ್‌ಲೈನ್‌ನಲ್ಲಿ ಅಡ್ರೆಸ್ ಅಪ್ಡೇಟ್ ಮಾಡಲು ಹೊಸ ಆಯ್ಕೆಯನ್ನು ಆರಿಸಿಕೊಳ್ಳಬೇಕು.
* ನಂತರ ನಿಮ್ಮ HOF ಅವರ ಆಧಾರ್ ಸಂಖ್ಯೆಯನ್ನು ನಮೂದಿಸಿರಿ
* HOF ನ ಆಧಾರ್ ಸಂಖ್ಯೆಯ ದೃಡೀಕರಣ ಮಾಡಬೇಕಾಗುತ್ತದೆ.
* ಇದಕ್ಕಾಗಿ ಅವರ ಸಂಖ್ಯೆಗೆ ಬರುವ ಒಟಿಪಿಯನ್ನು ನಮೂದಿಸಿ
* ನಂತರ, ನೀವು ಸಂಬಂಧದ ಪುರಾವೆ ದಾಖಲೆಯನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ.
* ಇದೀಗ ಅಡ್ರೆಸ್ ಚೇಂಜ್ ಮಾಡುವ ಸೇವೆಗಾಗಿ 50ರೂ. ಶುಲ್ಕವನ್ನು ಪಾವತಿಸಿರಿ.
* ಹಣ ಪಾವತಿ ಯಶಸ್ವಿಯಾದ ನಂತರ SRN ನಂಬರ್ ದೊರೆಯಲಿದೆ.
* ಜೊತೆಗೆ ವಿಳಾಸ ವಿನಂತಿಯ ಕುರಿತು HOF ಗೆ SMS ಕಳುಹಿಸಲಾಗುತ್ತದೆ
* ಅಧಿಸೂಚನೆಯನ್ನು ಸ್ವೀಕರಿಸಿದ ನಂತರ ನಿಮ್ಮ ಕುಟುಂಬದ ಮುಖ್ಯಸ್ತರು 30 ದಿನಗಳ ಒಳಗೆ ಮೈ ಆಧಾರ್ ಪೋರ್ಟಲ್‌ಗೆ ಲಾಗ್ ಇನ್ ಮಾಡುವ ಮೂಲಕ HOF ವಿನಂತಿಯನ್ನು ಅನುಮೋದಿಸಬೇಕಾಗುತ್ತದೆ.
* ಅವರು ಒಪ್ಪಿಗೆಯನ್ನು ನೀಡಿದರೆ ಮಾತ್ರ ನಿಮ್ಮ ವಿಳಾಸ ಬದಲಾಗಲಿದೆ.
*SRN ನಂಬರ್ ಮೂಲಕ ನಿಮ್ಮ ಅರ್ಜಿ ಸ್ಥಿತಿಯನ್ನು ಟ್ರ್ಯಾಕ್ ಮಾಡುವುದಕ್ಕೆ ಕೂಡ ಸಾಧ್ಯವಿದೆ.


Click it and Unblock the Notifications








