Google Pay ನಲ್ಲಿ ಇಮೇಲ್ ID ಅನ್ನು ಬದಲಾಯಿಸುವುದು ಹೇಗೆ?

|

ಗೂಗಲ್ ಪೇ ಜನಪ್ರಿಯ ಯುಪಿಐ ನಗದು ಪಾವತಿ ಸೇವೆಗಳಲ್ಲಿ ಒಂದಾಗಿದೆ. ಡಿಜಿಟಲ್‌ ಮನಿ ಟ್ರಾನ್ಸಫರ್‌ ಅಪ್ಲಿಕೇಶನ್‌ಗಳಲ್ಲಿ ಪ್ರಮುಖ ಅಪ್ಲಿಕೇಶನ್‌ ಆಗಿರುವ ಗೂಗಲ್‌ಪೇ ಹೆಚ್ಚಿನ ಬಳಕೆದಾರರನ್ನ ಸೆಳೆದಿದೆ. ಅಷ್ಟೇ ಅಲ್ಲ ಹಣ ವರ್ಗಾವಣೆ ಮಾಡಿದಾಗ ಹಲವಾರು ಕ್ಯಾಶ್‌ಬ್ಯಾಕ್ ಪ್ರಯೋಜನಗಳನ್ನು ಸಹ ನೀಡುತ್ತಿದೆ. ಇನ್ನು ಗೂಗಲ್ ಪೇ ಅಪ್ಲಿಕೇಶನ್‌ ಯುಪಿಐ ಪಾವತಿಗಳನ್ನು ಆಧರಿಸಿ, ದೊಡ್ಡ ಮತ್ತು ಸಣ್ಣ ವ್ಯವಹಾರಗಳಿಗೆ ಹೋಗಬೇಕಾದ ಮೊಬೈಲ್ ಅಪ್ಲಿಕೇಶನ್ ಆಗಿ ಮಾರ್ಪಟ್ಟಿದೆ. ಭಾರತದಲ್ಲಿ ಗೂಗಲ್‌ಪೇ ಸೇವೆಯನ್ನು ಹೆಚ್ಚಿನ ಜನರು ಬಳಸುತ್ತಿದ್ದು, ಆನ್‌ಲೈನ್‌ ಮನಿ ಟ್ರಾನ್ಸಫರ್‌ ಸೇವೆಯಲ್ಲಿ ಮುಂಚೂಣಿಯಲ್ಲಿದೆ.

Google Pay

ಹೌದು, ಜನಪ್ರಿಯ ನಗದು ಪಾವತಿ ಸೇವೆಗಳಲ್ಲಿ ಗೂಗಲ್‌ ಪೇ ಕೂಡ ಒಂದಾಗಿದೆ. ಗೂಗಲ್‌ಪೇ ನಂತಹ ಅಪ್ಲಿಕೇಶನ್‌ಗಳ ಬಳಕೆಯಿಂದ ದೇಶದಲ್ಲಿ ಯುಪಿಐ ನಗದು ಪಾವತಿ ಸೇವೆ ಹೆಚ್ಚು ಜನಪ್ರಿಯತೆ ಗೊಳ್ಳುತ್ತಿದೆ. ಇನ್ನು ಇತರ ಅಪ್ಲಿಕೇಶನ್‌ಗಳಂತೆ, Google Pay ಅಪ್ಲಿಕೇಶನ್‌ ಅನ್ನು ಸಹ ನಿಮ್ಮ ಫೋನ್ ಸಂಖ್ಯೆ ಮತ್ತು ಇಮೇಲ್ ID ಗೆ ಲಿಂಕ್ ಮಾಡಲಾಗಿರುತ್ತದೆ. ಒಂದು ವೇಳೆ ನೀವು ನಿಮ್ಮ Google Pay ನಲ್ಲಿ ಲಿಂಕ್‌ ಮಾಡಿರುವ ಇಮೇಲ್ ID ಬದಲಾಯಿಸಬೇಕು ಎಂದುಕೊಂಡರೆ ಅದಕ್ಕೂ ಕೂಡ ಅವಕಾಶವಿದ್ದು, ಅದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌ ಪೇ

ಗೂಗಲ್‌ ಪೇ ಅಪ್ಲಿಕೇಶನ್‌ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ಬದಲಾಯಿಸುವುದು ಅಥವಾ ಇನ್ನೊಂದು ಬ್ಯಾಂಕ್ ಖಾತೆಯನ್ನು ಸೇರಿಸುವುದು ತುಂಬಾ ಸರಳವಾಗಿದೆ. ಆದಾಗ್ಯೂ, ಆರಂಭಿಕ ಸೆಟಪ್ ಪೂರ್ಣಗೊಂಡ ನಂತರ, ನಿಮ್ಮ ಇಮೇಲ್ ಐಡಿಯನ್ನು ಬದಲಾಯಿಸಲು ಯಾವುದೇ ಸರಳ ಆಯ್ಕೆಗಳಿಲ್ಲ. ಬದಲಾಗಿ, ಗೂಗಲ್ ಪೇನಲ್ಲಿ ತಮ್ಮ ಇಮೇಲ್ ಐಡಿಯನ್ನು ಬದಲಾಯಿಸಲು ಒಂದೆರಡು ಪರಿಹಾರೋಪಾಯಗಳಿವೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ಪ್ರಮುಖ ಅಂಶವೆಂದರೆ, ಗೂಗಲ್ ಪೇ ಸೆಟ್ಟಿಂಗ್‌ಗಳು ಬಳಕೆದಾರರು ತಮ್ಮ ಖಾತೆಗೆ ಲಿಂಕ್ ಮಾಡಲಾದ ಇಮೇಲ್ ವಿಳಾಸವನ್ನು ನವೀಕರಿಸಲು ಅನುಮತಿಸುವುದಿಲ್ಲ. ಹಾಗಾದ್ರೆ Google Pay ನಲ್ಲಿ ಇಮೇಲ್ ID ಅನ್ನು ಹೇಗೆ ಬದಲಾಯಿಸುವುದು ಅನ್ನೊದನ್ನ ಕೆಳಗಿನ ಹಂತಗಳಲ್ಲಿ ತಿಳಿಯಿರಿ.

Google Pay ನಲ್ಲಿ ಇಮೇಲ್ ID ಅನ್ನು ಬದಲಾಯಿಸುವುದು ಹೇಗೆ?

Google Pay ನಲ್ಲಿ ಇಮೇಲ್ ID ಅನ್ನು ಬದಲಾಯಿಸುವುದು ಹೇಗೆ?

ಹಂತ 1: ಸೆಟ್ಟಿಂಗ್ಸ್‌ ಅಪ್ಲಿಕೇಶನ್ ತೆರೆಯಿರಿ> ಅಪ್ಲಿಕೇಶನ್‌ಗಳು> ಮ್ಯಾನೇಜ್‌ ಆಪ್ಸ್‌ > ಗೂಗಲ್ ಪೇ ತೆರೆಯಿರಿ

ಹಂತ 2: ಕ್ಲಿಯರ್‌ ಡೇಟಾ ಆಯ್ಕೆಯನ್ನು ಆರಿಸಿ. ನಿಮ್ಮ ಫೋನ್‌ಗೆ ಅನುಗುಣವಾಗಿ ಈ ಹಂತವು ಬದಲಾಗಬಹುದು ಎಂಬುದನ್ನು ಗಮನಿಸಿ.

ಹಂತ 3: ಡೇಟಾವನ್ನು ತೆರವುಗೊಳಿಸಿದ ನಂತರ Google Pay ಅಪ್ಲಿಕೇಶನ್ ತೆರೆಯಿರಿ. ಇಲ್ಲಿ, Google Pay ಅಪ್ಲಿಕೇಶನ್ ಅನ್ನು ಮೊದಲಿನಿಂದಲೂ ಬಳಸಲು ನಿಮಗೆ ಅವಕಾಶ ಸಿಗುತ್ತದೆ. ಪ್ರಾರಂಭಿಸಲು, ನಿಮ್ಮ ಬ್ಯಾಂಕಿನೊಂದಿಗೆ ಲಿಂಕ್ ಮಾಡಲಾದ ನಿಮ್ಮ ಮೊಬೈಲ್ ಸಂಖ್ಯೆಯನ್ನು ನೀವು ನಮೂದಿಸಬೇಕಾಗಿದೆ.

ಹಂತ 4: ಮುಂದೆ, ನಿಮ್ಮ ಫೋನ್ ಸ್ವಯಂಚಾಲಿತವಾಗಿ ನಿಮ್ಮ Google Pay ಖಾತೆಗೆ ಸಂಪರ್ಕಗೊಂಡಿರುವ Gmail ವಿಳಾಸಗಳನ್ನು ತೋರಿಸುತ್ತದೆ. ನೀವು ಅದನ್ನು ಬದಲಾಯಿಸಲು ಬಯಸಿದರೆ, ಅದನ್ನು ಮಾಡಲು ಇಲ್ಲಿ ಅವಕಾಶ ದೊರೆಯಲಿದೆ.

ಹಂತ 5:ಇಲ್ಲಿ ಎಡಿಟ್‌ ಬಟನ್ ಆಯ್ಕೆಮಾಡಿ ಮತ್ತು ಇಮೇಲ್ ಐಡಿ ಬದಲಾಯಿಸಿ. Change Google Account' > Add Account > enter the new email ID.
ಈ ಮೂಲಕ ನಿಮ್ಮ ಗೂಗಲ್‌ ಪೇ ಖಾತೆಯಲ್ಲಿ ಇಮೇಲ್‌ ಐಡಿಯನ್ನು ಬದಲಾಯಿಸಬಹುದಾಗಿದೆ.

Best Mobiles in India

English summary
Here are the detailed step-by-step instructions to change your email ID on Google Pay. Do note these instructions are for Android smartphones.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X