ರೇಷನ್ ಕಾರ್ಡ್‌ನಲ್ಲಿ ಮನೆ ಯಜಮಾನಿ ಅಂತಾ ಹೆಸರು ಬದಲಾಯಿಸಲು ಹೀಗೆ ಮಾಡಿ!
ಗೃಹಲಕ್ಷ್ಮಿ ಯೋಜನೆ ಲಾಭ ಪಡೆದುಕೊಳ್ಳಬೇಕಾದರೆ ರೇಷನ್ ಕಾರ್ಡ್‌ನಲ್ಲಿ ಕುಟುಂಬದ ಯಜಮಾನಿ ಅಂತಾ ಹೆಸರು ನಮೂದಾಗಿರುವುದು ಅತಿ ಅವಶ್ಯಕವಾಗಿದೆ. ಒಂದು ವೇಳೆ ನಿಮ್ಮ ಮನೆಯ ರೇಷನ್ ಕಾರ್ಡ್‌ನಲ್ಲಿ ಕುಟುಂಬದ ಮುಖ್ಯಸ್ಥರಾಗಿ ಪುರುಷರ ಹೆಸರು ಇದ್ದರೆ ಗೃಹಲಕ್ಷ್ಮಿ ಯೋಜನೆಯ ಲಾಭ ಸಿಗುವುದಿಲ್ಲ ಎಂದು ಹೇಳಲಾಗಿದೆ.
ಹೌದು, ರೇಷನ್ ಕಾರ್ಡ್‌ನಲ್ಲಿ ನಿಮ್ಮ ಮನೆಯ ಪುರುಷರು ಕುಟುಂಬದ ಮುಖ್ಯಸ್ಥರಾಗಿ ಹೆಸರು ನೋಂದಾಯಿಸಿದ್ದರೆ ನಿಮಗೆ ಗೃಹಲಕ್ಷ್ಮಿ ಯೋಜನೆಯ ಲಾಭ ದೊರೆಯುವುದಿಲ್ಲ. ಆದರಿಂದ ಕೂಡಲೇ ನಿಮ್ಮ ರೇಷನ್ ಕಾರ್ಡ್‌ನಲ್ಲಿ ಕುಟುಂಬದ ಮುಖ್ಯಸ್ಥರ ಹೆಸರನ್ನು ಬದಲಾಯಿಸಬೇಕಿದೆ. ಈ ಸಾಲಿನಲ್ಲಿ ನಿಮ್ಮ ತಾಯಿ ಅಥವಾ ಹೆಂಡತಿಯ ಹೆಸರನ್ನು ಕುಟುಂಬದ ಯಜಮಾನಿಯಾಗಿ ಸೇರಿಸಬೇಕಾದ ಅನಿವಾರ್ಯತೆಯಿದೆ. ಹಾಗಾದ್ರೆ ರೇಷನ್ ಕಾರ್ಡ್‌ನಲ್ಲಿ ಕುಟುಂಬದ ಯಜಮಾನಿಯ ಹೆಸರನ್ನು ಬದಲಾಯಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೃಹಲಕ್ಷ್ಮಿ ಯೋಜನೆಗೆ ಇಂದು ಚಾಲನೆ ಸಿಗುತ್ತಿದೆ. ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬೇಕಾದರೆ ರೇಷನ್ ಕಾರ್ಡ್‌ನಲ್ಲಿ ನಿಮ್ಮ ಹೆಸರು ಕುಟುಂಬದ ಯಜಮಾನಿ ಅಂತಾ ನೋಂದಾಯಿಸಿರಬೇಕು. ಇಲ್ಲದಿದ್ದ ಪಕ್ಷದಲ್ಲಿ ನೀವು ಗೃಹಲಕ್ಷ್ಮಿ ಯೋಜನೆಗೆ ಎರಡು ಸಾವಿರ ರೂ ಪಡೆಯುವುದಕ್ಕೆ ಸಾಧ್ಯವಾಗುವುದಿಲ್ಲ. ಒಂದು ವೇಳೆ ನಿಮ್ಮ ಕುಟುಂಬದ ಮುಖ್ಯಸ್ಥರಾಗಿ ಮನೆಯ ಪುರುಷರ ಹೆಸರಿದ್ದರೂ ಕೂಡ ಮನೆಯ ಯಜಮಾನಿಗೆ ಇದರ ಲಾಭ ದೊರೆಯುವುದಿಲ್ಲ.
ಗೃಹಲಕ್ಷ್ಮಿ ಯೋಜನೆಯ ಲಾಭ ನಿಮಗೆ ಸಿಗಬೇಕಾದರೆ ನೀವು ಕಡ್ಡಾಯವಾಗಿ ರೇಷನ್ ಕಾರ್ಡ್‌ನಲ್ಲಿ ನಿಮ್ಮನ್ನು ಕುಟುಂಬದ ಯಜಮಾನಿ ಅಂತಾ ನಮೂದಿಸಬೇಕಾಗುತ್ತದೆ. ಇದಕ್ಕಾಗಿ ನೀವು ನಿಮ್ಮ ಹತ್ತಿರದ ಪಡಿತರ ಚೀಟಿ ಸೇವಾಕೇಂದ್ರಗಳಿಗೆ ಬೇಟಿ ನೀಡಿ ನಿಮ್ಮ ರೇಷನ್ ಕಾರ್ಡ್ ಮಾಹಿತಿಯನ್ನು ಅಪ್ಡೇಟ್ ಮಾಡಿಸಬೇಕಾಗುತ್ತದೆ. ನಿಮ್ಮ ಬಯೋಮೆಟ್ರಿಕ್ ದೃಢೀಕರಣದ ಮೂಲಕ ನೀವು ಪಡಿತರ ಚೀಟಿಯಲ್ಲಿ ಕುಟುಂಬದ ಮುಖ್ಯಸ್ಥರ ಹೆಸರನ್ನು ಬದಲಾಯಿಸುವುದಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.
ರೇಷನ್ ಕಾರ್ಡ್‌ನಲ್ಲಿ ಯಜಮಾನಿಯ ಹೆಸರನ್ನು ಬದಲಾಯಿಸಲು ಹೀಗೆ ಮಾಡಿ!
* ಮೊದಲಿಗೆ ನಿಮ್ಮ ಹತ್ತಿರದ ಪಡಿತರ ಚೀಟಿ ಸೇವಾಕೇಂದ್ರಗಳಿಗೆ ಬೇಟಿ ನೀಡಿರಿ
* ಮುಖ್ಯಸ್ಥರ ಹೆಸರು ಬದಲಾಯಿಸುವುದಕ್ಕೆ ಒಂದು ಅರ್ಜಿ ನಮೂನೆಯನ್ನು ತುಂಬಿರಿ
* ಜೊತೆಗೆ ಅರ್ಜಿ ನಮೂನೆಯೊಂದಿಗೆ ಅಗತ್ಯವಿರುವ ದಾಖಲೆಗಳನ್ನು ಸಲ್ಲಿಸಿ.
* ನಂತರ ನಿಮ್ಮ ಬಯೋಮೆಟ್ರಿಕ್ ದೃಡೀಕರಣದ ಮೂಲಕ ದಾಖಲೆಗಳನ್ನು ದೃಡೀಕರಿಸಿ
* ಇದೀಗ ನಿಮ್ಮ ಪಡಿತರ ಸೇವಾ ಕೇಂದ್ರದಲ್ಲಿ ನಿಮಗೆ ಅಗತ್ಯವಿರುವ ಮಾರ್ಪಾಡುಗಳನ್ನು ಸೇವ್ ಮಾಡುವ ಮೂಲಕ ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡುತ್ತಾರೆ.
* ನಂತರ ಅವರು ನೀಡುವ ಸ್ವೀಕೃತಿಯನ್ನು ನಿಮ್ಮ ಬಳಿ ಇಟ್ಟುಕೊಳ್ಳಿರಿ
* ಮುಂದಿನ ದಿನಗಳಲ್ಲಿ ಆಹಾರ ಕಚೇರಿಯಿಂದ ನಿಮಗೆ SMS ಬರಲಿದೆ
* ಎಸ್‌ಎಂಎಸ್ ಸ್ವೀಕರಿಸಿದ ನಂತರ ನೀವು ಸ್ವೀಕರಿಸಿದ ಸ್ವೀಕೃತಿಯೊಂದಿಗೆ ನಿಮ್ಮ ಪಡಿತರ ಚೀಟಿಯನ್ನು ಪ್ರಿಂಟ್ ತೆಗೆದುಕೊಳ್ಳಿ

ಆನ್‌ಲೈನ್ ಮೂಲಕ ರೇಷನ್ ಕಾರ್ಡ್‌ನಲ್ಲಿ ಮನೆ ಯಜಮಾನಿಯ ಹೆಸರು ಬದಲಾಯಿಸುವುದು ಹೇಗೆ?
* ಮೊದಲಿಗೆ ನೀವು https://ahara.kar.nic.in/ಗೆ ಲಾಗ್ ಇನ್ ಆಗಿ
* ಇದರಲ್ಲಿ ಕಾಣುವ ಮೇನ್ ಪೇಜ್‌ನಲ್ಲಿ ಇ-ಸೇವೆಗಳ ಮೇಲೆ ಕ್ಲಿಕ್ ಮಾಡಿ
* ನಂತರ ತಿದ್ದುಪಡಿ/ಹೊಸ ಸೇರ್ಪಡೆಗೆ ವಿನಂತಿ ಆಯ್ಕೆ ಕಾಣಿಸಲಿದೆ, ಅಲ್ಲಿ ಕ್ಲಿಕ್ ಮಾಡಿರಿ
* ಇದೀಗ ಹೊಸ ಪೇಜ್ ತೆರೆಯಲಿದೆ
* ನಂತರ ನಿಮ್ಮ ಜಿಲ್ಲೆಗೆ ಅನುಗುಣವಾಗಿ ಕಾಣಿಸುವ ಲಿಂಕ್ ಮೇಲೆ ಕ್ಲಿಕ್ ಮಾಡಿರಿ
* ನೀವು ಆಯ್ಕೆ ಮಾಡುವ ಅಂದರೆ ಹೊಸ ಸೇರ್ಪಡೆ/ ತಿದ್ದುಪಡಿ ಫಾರ್ಮ್‌ನಲ್ಲಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ
* ತಿದ್ದುಪಡಿಗೆ ಬೇಕಾದ ಅಗತ್ಯ ದಾಖಲೆಗಳ ಸ್ಕ್ಯಾನ್ ಪ್ರತಿಯನ್ನು ಅಪಲೋಡ್ ಮಾಡಿ
* ಅಪ್ಲೋಡ್ ಮಾಡಿದ ನಂತರ ಫಾರ್ಮ್ ಅನ್ನು(ಸಬ್ಮೀಟ್) ಮಾಡಿರಿ
* ಅರ್ಜಿ ಸಲ್ಲಿಕೆಯ ರಿಜಿಸ್ಟರ್ ನಂಬರ್ ಸಿಗಲಿದೆ
* ಈ ನಂಬರ್ ಮೂಲಕ ನಿಮ್ಮ ಅರ್ಜಿಯ ಸ್ಟೇಟಸ್ ಅನ್ನು ಟ್ರ್ಯಾಕ್ ಮಾಡಲು ಸಾಧ್ಯವಿದೆ
ರೇಷನ್ ಕಾರ್ಡ್‌ನಲ್ಲಿ ಕುಟುಂಬದ ಮುಖ್ಯಸ್ಥರ ಹೆಸರು ಬದಲಾಯಿಸಲು ಬೇಕಾದ ದಾಖಲೆಗಳು
* ಕುಟುಂಬದ ಮುಖ್ಯಸ್ಥ ಮರಣ ಹೊಂದಿದ್ದರೆ ಅವರ ಮರಣ ಪ್ರಮಾಣಪತ್ರ
* ಮೂಲ ಪಡಿತರ ಚೀಟಿ
* ಅರ್ಜಿದಾರರ ವಿಳಾಸದ ಪುರಾವೆಯಾಗಿ ಆಧಾರ್ ಕಾರ್ಡ್ ಪ್ರತಿ ಅಥವಾ ಇತರೆ ಪೂರಕ ದಾಖಲೆಗಳು
* ಅರ್ಜಿದಾರರ ಗುರುತಿನ ಪುರಾವೆಯಾಗಿ ಆಧಾರ್ ಕಾರ್ಡ್ ಪ್ರತಿ ಅಥವಾ ಇತರೆ ಪೂರಕ ದಾಖಲೆಗಳು
* ಸ್ವಯಂ ಘೋಷಣೆ (ಅನ್ವಯವಾಗುವಂತೆ)
* ಹೊಸ ಕುಟುಂಬದ ಮುಖ್ಯಸ್ಥರ ಪಾಸ್‌ಪೋರ್ಟ್ ಗಾತ್ರದ ಫೋಟೋ
* ಅವರ ಆಧಾರ್ ಕಾರ್ಡ್
ಪ್ರಸ್ತುತ ರೇಷನ್ ಕಾರ್ಡ್‌ಗೆ ಸಂಬಂಧ ಪಟ್ಟ ಎಲ್ಲಾ ಅಪ್ಡೇಟ್‌ಗಳನ್ನು ಸರ್ಕಾರ ತಡೆಹಿಡಿದಿದೆ. ಆಗಸ್ಟ್ 1ರ ನಂತರ ನಿಮ್ಮ ರೇಷನ್ ಕಾರ್ಡ್‌ಗೆ ಸಂಬಂಧಪಟ್ಟ ಅಪ್ಡೇಟ್‌ಗಳನ್ನು ಮಾಡಿಸಲು ಸಾಧ್ಯವಾಗಲಿದೆ ಎನ್ನಲಾಗಿದೆ.


Click it and Unblock the Notifications








