Home
ಟೆಕ್ ನೌಕರಿ

ಆಂಡ್ರಾಯ್ಡ್ ಹೋಮ್ ಸ್ಕ್ರೀನ್ ನಲ್ಲಿ ಐಕಾನ್ ಗಳ ಹೆಸರನ್ನು ಬದಲಿಸುವುದು ಹೇಗೆ?

By Gizbot Bureau

ಮೊಬೈಲ್ ಆಪರೇಟಿಂಗ್ ಸಿಸ್ಟಮ್ ಗಳಲ್ಲಿ ಆಂಡ್ರಾಯ್ಡ್ ಗೆ ಬಹಳ ಮಹತ್ವ. ಯಾಕಂದ್ರೆ ಇತರೆ ಆಪರೇಟಿಂಗ್ ಸಿಸ್ಟಮ್ ಗಳಿಗೆ ಹೋಲಿಕೆ ಮಾಡಿದರೆ ಬಳಕೆದಾರರಿಗೆ ಅನುಕೂಲವಾಗುವಂತಹ ಮತ್ತು ಸುಲಭವಾಗುವಂತಹ ಹಲವು ವೈಶಿಷ್ಟ್ಯತೆಗಳು ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ನಲ್ಲಿ ಲಭ್ಯವಾಗುತ್ತದೆ. ಗ್ರಾಹಕರಿಗೆ ನೀಡುವ ಅನಿಯಮಿತ ಫೀಚರ್ ಗಳ ಕಾರಣದಿಂದಲೇ ಇಂದು ಆಂಡ್ರಾಯ್ಡ್ ವ್ಯವಸ್ಥೆ ಮೊಬೈಲ್ ಜಗತ್ತನ್ನು ಆಳುತ್ತಿದೆ ಎಂದರೆ ಅತಿಶಯೋಕ್ತಿ ಆಗಲಾರದು.

ಆಂಡ್ರಾಯ್ಡ್

ನೀವು ಕೂಡ ಆಂಡ್ರಾಯ್ಡ್ ಬಳಕೆದಾರರಾಗಿದ್ದಲ್ಲಿ ನೀವು ಯಾವುದೇ ಹೊಸ ಆಪ್ ನ್ನು ಇನ್ಸ್ಟಾಲ್ ಮಾಡಿದಾಗ ಹೊಸ ಐಕಾನ್ ವೊಂದು ಆಪ್ ಗಾಗಿ ಮೊಬೈಲ್ ನಲ್ಲಿ ಸೃಷ್ಟಿಯಾಗುತ್ತದೆ. ಇದು ಸ್ವಯಂಚಾಲಿತವಾಗಿ ಡೀಫಾಲ್ಟ್ ಐಕಾನ್ ಮತ್ತು ಹೆಸರಾಗಿ ಹೋಮ್ ಸ್ಕ್ರೀನ್ ನಲ್ಲಿ ಕಾಣಿಸಿಕೊಳ್ಳುತ್ತದೆ. ಆಪ್ ಗೆ ಎಂಟ್ರಿ ಆಗುವುದಕ್ಕಾಗಿ ಆಪ್ ಐಕಾನ್ ಬಹಳ ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂಬುದನ್ನು ವಿಶೇಷವಾಗಿ ಹೇಳಬೇಕಾಗಿಲ್ಲ. ಆದರೆ ಈ ಆಪ್ ಐಕಾನ್ ನ ಹೆಸರನ್ನು ಅಥವಾ ಆಪ್ ಐಕಾನ್ ನ್ನು ನಿಮ್ಮಿಚ್ಛೆಯಂತೆ ನೀವು ಬದಲಾಯಿಸಿಕೊಳ್ಳಬಹುದು ಎಂಬ ಬಗ್ಗೆ ನಿಮಗೆ ತಿಳಿದಿದೆಯೇ?

ಆಂಡ್ರಾಯ್ಡ್

ಹೌದು, ಆಂಡ್ರಾಯ್ಡ್ ಫೋನಿನ ಹೋಮ್ ಸ್ಕ್ರೀನಿನಲ್ಲಿ ಲಭ್ಯವಾಗುವ ಆಪ್ ಐಕಾನಿನ ಹೆಸರನ್ನು ನಿಮ್ಮಿಚ್ಛೆಯಂತೆ ಬದಲಿಸಿಕೊಳ್ಳುವುದಕ್ಕೆ ಅವಕಾಶವಿರುತ್ತದೆ. ಆದರೆ ಇದು ಸಾಧ್ಯವಾಗುವುದು ಮತ್ತೊಂದು ಆಪ್ ಗಳ ಸಹಾಯದಿಂದ ಮಾತ್ರ.ಈ ಲೇಖನದಲ್ಲಿ ನಾವು ಹೇಗೆ ಸರಳವಾಗಿ ಮತ್ತು ಸುಲಭವಾಗಿ ನೀವು ಆಂಡ್ರಾಯ್ಡ್ ಫೋನಿನ ಐಕಾನಿನ ಹೆಸರನ್ನು ಬದಲಿಸಿಕೊಳ್ಳಬಹುದು ಎಂಬ ಬಗ್ಗೆ ತಿಳಿಸಿಕೊಡುತ್ತಿದ್ದೇವೆ. ಮುಂದೆ ಓದಿ.

ತೀರಾ ಆಳವಾದ ಯಾವುದೇ ನಿಯಮಗಳನ್ನು ಪಾಲಿಸದೇ ಸುಲಭವಾಗಿ ಆಪ್ ಐಕಾನ್ ನ್ನು ಬದಲಿಸುವುದಕ್ಕೆ ಇರುವ ಕೆಲವು ಸುಲಭ ಮಾರ್ಗಗಳು ಇಲ್ಲಿವೆ.

1. ಕ್ವಿಕ್ ಶಾರ್ಟ್ ಕಟ್ ಮೇಕರ್ ನ್ನು ಬಳಸಿ

1. ಕ್ವಿಕ್ ಶಾರ್ಟ್ ಕಟ್ ಮೇಕರ್ ನ್ನು ಬಳಸಿ

ಹೆಸರೇ ಸೂಚಿಸುವಂತೆ, ಕ್ವಿಕ್ ಶಾರ್ಟ್ ಕಟ್ ಮೇಕರ್ ಬಳಕೆದಾರರಿಗೆ ಕಂಪ್ಯೂಟರ್ ನಲ್ಲಿ ಇನ್ಸ್ಟಾಲ್ ಆಗಿರುವ ಆಪ್ಸ್ ಗಳ ಶಾರ್ಟ್ ಕಟ್ ಗಳನ್ನು ಸೃಷ್ಟಿಸುವುದಕ್ಕೆ ನೆರವು ನೀಡುತ್ತದೆ.ಈ ಆಪ್ ನ ವೈಶಿಷ್ಟ್ಯತೆಯೇನೆಂದರೆ ಬಳಕೆದಾರರಿಗೆ ಹೋಮ್ ಸ್ಕ್ರೀನ್ ಶಾರ್ಟ್ ಕಟ್ ಜೊತೆಗೆ ಕಸ್ಟಮ್ ಹೆಸರು ಮತ್ತು ಐಕಾನ್ ನ್ನು ಸ್ವತಂತ್ರ್ಯವಾಗಿ ನಿರ್ಮಿಸುವುದಕ್ಕೆ ಅವಕಾಶ ನೀಡುತ್ತದೆ. ಹಾಗಾದ್ರೆ ಇದರಲ್ಲಿ ಅನುಸರಿಸಬೇಕಾಗಿರುವ ಹಂತಗಳು ಯಾವುವು ತಿಳಿಯೋಣ ಬನ್ನಿ

• ಮೊದಲನೆಯದಾಗಿ ಕ್ವಿಕ್ ಶಾರ್ಟ್ ಕಟ್ ಮೇಕರ್ ನ್ನು ನಿಮ್ಮ ಆಂಡ್ರಾಯ್ಡ್ ಫೋನಿನಲ್ಲಿ ಡೌನ್ ಲೋಡ್ ಮಾಡಿಕೊಳ್ಳಿ.

• ಒಮ್ಮೆ ಇದು ಇನ್ಸ್ಟಾಲ್ ಆದ ನಂತರ ನಿಮ್ಮ ಫೋನಿನಲ್ಲಿ ಇನ್ಸ್ಟಾಲ್ ಆಗಿರುವ ಆಪ್ ಲಿಸ್ಟ್ ನ್ನು ನೋಡುವುದಕ್ಕೆ ಸಾಧ್ಯವಾಗುತ್ತದೆ.

•ಹೆಸರನ್ನು ಬದಲಾಯಿಸುವುದಕ್ಕೆ ನೀವು ಇಚ್ಛಿಸುವ ಆಪ್ ನ ಮೇಲೆ ಟ್ಯಾಪ್ ಮಾಡಿ.

• ನಿಮ್ಮ ಡಿವೈಸ್ ನಲ್ಲಿ ಈ ಆಪ್ ನ ಎಲ್ಲಾ ಮಾಹಿತಿಗಳನ್ನು ತೋರಿಸಲಾಗುತ್ತದೆ ಮತ್ತು ಚೇಂಜ್ ದಿ ಲೇಬಲ್ ಅನ್ನೋ ಆಯ್ಕೆಯನ್ನು ನಿಮಗೆ ನೀಡಲಾಗುತ್ತದೆ.

•ಇದಾದ ನಂತರ ಪಾಪ್ ಅಪ್ ಬರುತ್ತದೆ ಮತ್ತು ಆಪ್ ನಲ್ಲಿ ನೀವು ಬದಲಿಸಬೇಕು ಎಂದುಕೊಂಡಿರುವ ಹೆಸರನ್ನು ನಮೂದಿಸಿ ಓಕೆಯನ್ನು ಕ್ಲಿಕ್ಕಿಸಿ.,

• ಇದೀಗ ಆಪ್ ಶಾರ್ಟ್ ಕಟ್ ನ್ನು ಸೃಷ್ಟಿಸುವುದಕ್ಕಾಗಿ ನಿಮಗೆ ಕ್ರಿಯೇಟ್ ಆಪ್ಶನ್ ಅನ್ನೋ ಆಯ್ಕೆಯು ನಿಮ್ಮ ಡಿವೈಸ್ ನಲ್ಲಿ ಕಾಣಿಸುತ್ತದೆ. ಒಮ್ಮೆ ಈ ಹಂತ ಮುಗಿದ ನಂತರ ಆಪ್ ಡ್ರಾಯರ್ ನಲ್ಲಿ ರ್ಯಾಂಕಿಂಗ್ ನ್ನು ಸೆಟ್ ಮಾಡಬೇಕಾಗುತ್ತದೆ.

ಇದೀಗ ಎಲ್ಲಾ ಪ್ರೊಸೀಜರ್ ಮುಕ್ತಾಯವಾದಂತಾಗಿದೆ ಮತ್ತು ಹೋಮ್ ಸ್ಕ್ರೀನ್ ನಲ್ಲಿ ನೀವು ಬದಲಾವಣೆ ಮಾಡಿದ ಹೆಸರಿನೊಂದಿಗೆ ನಿರ್ಧಿಷ್ಟ ಆಪ್ ಕಾಣಿಸಿಕೊಳ್ಳುತ್ತದೆ.

2. ನೋವಾ ಲಾಂಚರ್ ಬಳಸಿ

2. ನೋವಾ ಲಾಂಚರ್ ಬಳಸಿ

ನೋವಾ ಲಾಂಚರ್ ಪರಿಪೂರ್ಣ ಕಾರ್ಯಕ್ಷಮತೆ ಹೊಂದಿರುವ ಮತ್ತು ಹೆಚ್ಚು ಗ್ರಾಹಕೀಯಗೊಳಿಸಬಹುದಾದ ಲಾಂಚರ್ ಆಪ್ ಆಗಿದೆ. ಇದು ಗ್ರಾಹಕರಿಗಾಗಿ ಹಲವು ಫೀಚರ್ ಗಳನ್ನು ನೀಡುತ್ತದೆ . ಇದರಲ್ಲಿ ಐಕಾನ್ ಹೆಸರು ಬದಲಾವಣೆ ಮತ್ತು ಐಕಾನ್ ಕಸ್ಟಮೈಜೇಷನ್ ಗೂ ಕೂಡ ಅವಕಾಶವಿದೆ. ಹಾಗಾದ್ರೆ ಯಾವ ಹಂತಗಳನ್ನು ಅನುಸರಿಸಬೇಕು ತಿಳಿದುಕೊಳ್ಳೋಣ ಬನ್ನಿ.

• ನೋವಾ ಲಾಂಚರ್ ನ್ನು ಡೌನ್ ಲೋಡ್ ಮಾಡಿ.

• ಸೆಲೆಕ್ಟ್ ಬ್ಯಾಕ್ ಅಪ್ ಕಾಣುವ ಕಡೆಯಲ್ಲಿ ಸ್ಕ್ರೀನ್ ಕಾಣಿಸುತ್ತದೆ. ಮುಂದುವರಿಯುವುದಕ್ಕಾಗಿ ನೆಕ್ಸ್ಟ್ ಬಟನ್ ನ್ನು ಟ್ಯಾಪ್ ಮಾಡಿ.

• ಪ್ರೀಸೆಟ್ ನ್ನು ಆಯ್ಕೆ ಮಾಡುವಂತೆ ನಿಮಗೆ ಮನವಿ ಮಾಡಲಾಗುತ್ತದೆ. ಮುಂದುವರಿಯುವುದಕ್ಕಾಗಿ ಡಾರ್ಕ್ ಅಥವಾ ಲೈಟ್ ಥೀಮ್ ನ್ನು ಆಯ್ಕೆ ಮಾಡಿ.

• ಡ್ರಾಯರ್ ಸ್ಟೈಲ್ ನ್ನು ಸೆಲೆಕ್ಟ್ ಮಾಡುವಂತೆ ನಿಮಗೆ ಹೇಳಲಾಗುತ್ತದೆ. ನಿಯಮದಂತೆ ಸೆಲೆಕ್ಟ್ ಮಾಡಿ ಮತ್ತು ಮುಂದುವರಿಯಿರಿ

•ಆಂಡ್ರಾಯ್ಡ್ ಫೋನಿನಲ್ಲಿ ನೋವಾ ಲಾಂಚರ್ ಫಿಕ್ಸ್ ಆದ ನಂತರ ಹೋಮ್ ಸ್ಕ್ರೀನ್ ಗೆ ತೆರಳಿ. ನೀವು ಬದಲಾಯಿಸಬೇಕು ಎಂದುಕೊಂಡಿರುವ ಆಪ್ ನ ಐಕಾನ್ ನ್ನು ಸೆಲೆಕ್ಟ್ ಮಾಡಿ ಮತ್ತು ಅದರ ಮೇಲೆ ಲಾಂಗ್ ಪ್ರೆಸ್ ಮಾಡಿ.

• ನೀವು ರಿಮೂವ್, ಎಡಿಟ್ ಮತ್ತು ಆಪ್ ಇನ್ಫೋ ಅನ್ನೋ ಮೂರು ಆಯ್ಕೆಗಳನ್ನು ಗಮನಿಸುತ್ತೀರಿ.ಪ್ರೊಸೆಸ್ ನ್ನು ಮುಂದುವರಿಸುವುದಕ್ಕಾಗಿ ಎಡಿಟ್ ಆಯ್ಕೆಯನ್ನು ಟ್ಯಾಪ್ ಮಾಡಿ.

• ನೀವು ಐಕಾನ್ ಹೆಸರನ್ನು ಬದಲಾಯಿಸುವುದಕ್ಕಾಗಿ ಮನವಿ ಮಾಡಲಾಗುತ್ತದೆ. ನೀವು ಅಂದುಕೊಂಡಿರುವ ಹೆಸರನ್ನು ಆಯ್ಕೆ ಮಾಡಿ.

ಇಲ್ಲಿಗೆ ಮುಕ್ತಾಯವಾಯಿತು. ನೀವು ಸರಳವಾದ ಪ್ರೊಸೆಸ್ ಮೂಲಕ ಐಕಾನ್ ಹೆಸರನ್ನು ಬದಲಾಯಿಸಿದ್ದೀರಿ. ಇದೇ ರೀತಿ ಐಕಾನ್ ಹೆಸರು ಬದಲಾವಣೆ ಮಾಡುವುದಕ್ಕಾಗಿ ಹಲವು ಆಪ್ ಗಳು ಲಭ್ಯವಿದೆ. ಆದರೆ ನಾವಿಲ್ಲಿ ಎರಡು ಸರಳವಾಗಿರುವ ಆಪ್ ಗಳ ಬಗ್ಗೆ ನಿಮಗೆ ವಿವರಣೆ ನೀಡಿದ್ದೇವೆ ಅಷ್ಟೇ.. ನಿಮಗೂ ಐಕಾನ್ ಹೆಸರು ಬದಲಾಯಿಸುವ ಇಚ್ಛೆಯಿದ್ದಲ್ಲಿ ಖಂಡಿತ ಮೇಲಿನ ವಿಧಾನವನ್ನು ಅನುಸರಿಸಬಹುದು.

Best Mobiles in India

English summary
How To Change Icon Names On Android Homescreen
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+