ರೇಷನ್ ಕಾರ್ಡ್‌ನಲ್ಲಿ ನಿಮ್ಮ ಮೊಬೈಲ್ ನಂಬರ್ ಅನ್ನು ಬದಲಾಯಿಸುವುದು ಹೇಗೆ?
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವುದಕ್ಕೆ ರಾಜ್ಯ ಸರ್ಕಾರ ಹೊಸ ಮಾನದಂಡಗಳನ್ನು ಪರಿಚಯಿಸಿದೆ. ಅದರಂತೆ ನೀವು ಅರ್ಜಿ ಸಲ್ಲಿಸಬೇಕಾದರೆ ನಿಮ್ಮ ರೇಷನ್ ಕಾರ್ಡ್‌ನಲ್ಲಿರುವ ಮೊಬೈಲ್ ಸಂಖ್ಯೆಗೆ ಅರ್ಜಿ ಸಲ್ಲಿಸಬೇಕಾದ ದಿನಾಂಕ ಮತ್ತು ಸ್ಥಳದ ಬಗ್ಗೆ ಮಾಹಿತಿ ಸಂದೇಶ ಬರಲಿದೆ. ಆದರೆ ಎಷ್ಟೋ ಮಂದಿ ತಮ್ಮ ರೇಷನ್ ಕಾರ್ಡ್‌ಗೆ ನೀಡಿರುವ ಮೊಬೈಲ್ ನಂಬರ್ ಅನ್ನು ಕಳೆದುಕೊಂಡಿರುವ ಸಾಧ್ಯತೆಯಿದೆ.
ಹೌದು, ನಿಮ್ಮ ರೇಷನ್ ಕಾರ್ಡ್‌ನಲ್ಲಿರೋದು ಹಳೆ ಮೊಬೈಲ್ ನಂಬರ್. ಇದೀಗ ನಿಮ್ಮ ಬಳಿ ಆ ಮೊಬೈಲ್ ನಂಬರ್ ಬಳಕೆಯಲ್ಲಿ ಇಲ್ಲ. ಇದೀಗ ಮೊಬೈಲ್ ನಂಬರ್ ಅನ್ನು ಚೇಂಜ್ ಮಾಡಿಸಬೇಕಾದ ಅನಿವಾರ್ಯತೆ ಎದುರಾಗಿದೆದೆ. ಹಾಗಾದ್ರೆ ನಿಮ್ಮ ರೇಷನ್ ಕಾರ್ಡ್‌ನಲ್ಲಿರುವ ಮೊಬೈಲ್ ನಂಬರ್ ಅನ್ನು ಬದಲಾಯಿಸುವುದು ಹೇಗೆ? ಈ ಗೊಂದಲಕ್ಕೆ ಪರಿಪೂರ್ಣ ಉತ್ತರವನ್ನು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ರೇಷನ್ ಕಾರ್ಡ್‌ನಲ್ಲಿರುವ ನಿಮ್ಮ ಮೊಬೈಲ್ ನಂಬರ್ ಕಳೆದುಹೋಗಿದ್ದು, ನಿಮಗೆ ಯಾವುದೇ ಸಂದೇಶ ಬರುತ್ತಿಲ್ಲ ಎಂದಾದರೆ ನೀವು ನಿಮ್ಮ ನಂಬರ್ ಅನ್ನು ಬದಲಾಯಿಸಬೇಕಾದ ಅನಿವಾರ್ಯತೆಯಿದೆ. ಅದರಲ್ಲೂ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬೇಕಾದರೆ ರೇಷನ್ ಕಾರ್ಡ್‌ನಲ್ಲಿರುವ ನಿಮ್ಮ ಮೊಬೈಲ್ ನಂಬರ್‌ಗೆ ಸಂದೇಶ ಬರುವುದು ಕಡ್ಡಾಯವಾಗಿದೆ. ಇಲ್ಲದಿದ್ದರೆ ಕೂಡಲೇ ನೀವು ನಿಮ್ಮ ಮೊಬೈಲ್ ನಂಬರ್ ಅನ್ನು ರೇಷನ್ ಕಾರ್ಡ್ ನಲ್ಲಿ ಅಪ್ಡೇಟ್ ಮಾಡುವುದು ಸೂಕ್ತವಾಗಿದೆ.
ರೇಷನ್ ಕಾರ್ಡ್‌ನಲ್ಲಿ ನಿಮ್ಮ ಮೊಬೈಲ್ ನಂಬರ್ ಬದಲಾಯಿಸುವುದು ಹೇಗೆ?
* ಮೊದಲಿಗೆ ರಾಷ್ಟ್ರೀಯ ಆಹಾರ ಭದ್ರತಾ ಪೋರ್ಟಲ್ಗೆ ಬೇಟಿ ನೀಡಿರಿ
* 'ನಾಗರಿಕರ ಕಾರ್ನರ್' ಅಡಿಯಲ್ಲಿ, 'ನೋಂದಣಿ/ಮೊಬೈಲ್ ಸಂಖ್ಯೆಯನ್ನು ಬದಲಾಯಿಸಿ' ಬಟನ್ ಕ್ಲಿಕ್ ಮಾಡಿರಿ.
* ಇದೀಗ ಹೊಸ ವಿಂಡೋ ತೆರೆಯಲಿದೆ
* ನಂತರ ನಿಮ್ಮ ಮನೆಯ ಮುಖ್ಯಸ್ಥರ ಆಧಾರ್ ಸಂಖ್ಯೆ ಸೇರಿಸಿ
* ಇದಾದ ಮೇಲೆ ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ
* ಇದೀಗ ಪಡಿತರ ಚೀಟಿಯಲ್ಲಿ ನಮೂದಿಸಿರುವಂತೆ ನಿಮ್ಮ ಮನೆಯ ಮುಖ್ಯಸ್ಥನ ಹೆಸರನ್ನು ಟೈಪ್ ಮಾಡಿರಿ
* ನಂತರ ನಿಮ್ಮ ಮೊಬೈಲ್ ನಂಬರ್ ಸೇರ್ಪಡೆ ಮಾಡುವ ಆಯ್ಕೆ ಕಾಣಿಸಲಿದೆ
* ಇದರಲ್ಲಿ ನಿಮ್ಮ ಹೊಸ ಫೋನ್ ಸಂಖ್ಯೆಯನ್ನು ಟೈಪ್ ಮಾಡಿ.
* ನಂತರ, ನೀವು ನಿಮ್ಮ ಮೊಬೈಲ್ ನಂಬರ್ ಅನ್ನು ಸೇವ್ ಮಾಡುವ ಆಯ್ಕೆಯನ್ನು ಟ್ಯಾಪ್ ಮಾಡಿರಿ
ಇದೆಲ್ಲವೂ ಮುಗಿದ ನಂತರ ನಿಮ್ಮ ಹೊಸ ಮೊಬೈಲ್ ನಂಬರ್ ರೇಷನ್ ಕಾರ್ಡ್‌ನಲ್ಲಿ ನೋಂದಣಿಯಾಗಿರಲಿದೆ.

ರೇಷನ್ ಕಾರ್ಡ್‌ನಲ್ಲಿ ನಿಮ್ಮ ಮನೆಯ ಸದಸ್ಯರ ಹೆಸರನ್ನು ಸೇರ್ಪಡೆ ಮಾಡುವುದು ಹೇಗೆ?
* ಮೊದಲಿಗೆ ಅಧಿಕೃತ ವೆಬ್‌ಸೈಟ್ https://ahara.kar.nic.in/ಗೆ ಲಾಗ್ ಇನ್ ಆಗಬೇಕು
* ನಂತರ ಮೇನ್ ಪೇಜ್‌ನಲ್ಲಿ ಇ-ಸೇವೆಗಳ ಮೇಲೆ ಕ್ಲಿಕ್ ಮಾಡಿರಿ
* ಇದೀಗ ತಿದ್ದುಪಡಿ/ಹೊಸ ಸೇರ್ಪಡೆಗೆ ವಿನಂತಿ ಆಯ್ಕೆ ಕಾಣಿಸಲಿದೆ
* ಅದರ ಮೇಲೆ ಕ್ಲಿಕ್ ಮಾಡಿರಿ
* ತಕ್ಷಣವೇ ನಿಮಗೆ ಹೊಸ ಪೇಜ್ ತೆರೆಯಲಿದೆ
* ನಿಮ್ಮ ಜಿಲ್ಲೆಗೆ ಅನುಗುಣವಾಗಿ ಕಾಣಿಸುವ ಲಿಂಕ್ ಮೇಲೆ ಕ್ಲಿಕ್ ಮಾಡಿರಿ
* ಇದರಲ್ಲಿ ಹೊಸ ಸೇರ್ಪಡೆ/ ತಿದ್ದುಪಡಿ ಫಾರ್ಮ್‌ನಲ್ಲಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿರಿ
* ಇದೀಗ ಅಗತ್ಯ ದಾಖಲೆಗಳ ಸ್ಕ್ಯಾನ್ ಪ್ರತಿಯನ್ನು ಅಪಲೋಡ್ ಮಾಡಿರಿ
* ಅಪ್ಲೋಡ್ ಮಾಡಿದ ನಂತರ ಫಾರ್ಮ್ ಅನ್ನು(ಸಬ್ಮೀಟ್) ಮಾಡಿರಿ
* ಇದೀಗ ಅರ್ಜಿ ಸಲ್ಲಿಸಿರುವುದಕ್ಕೆ ರಿಜಿಸ್ಟರ್ ನಂಬರ್ ಸಿಗಲಿದೆ
* ಈ ರಿಜಿಸ್ಟರ್ ನಂಬರ್ ಬಳಸಿಕೊಂಡು ನಿಮ್ಮ ಅರ್ಜಿ ಸಲ್ಲಿಕೆಯ ಸ್ಟೇಟಸ್ ಅನ್ನು ಟ್ರ್ಯಾಕ್ ಮಾಡಬಹುದಾಗಿದೆ.


Click it and Unblock the Notifications








