ಫೋನ್‌ಪೇಯಲ್ಲಿ ಯುಪಿಐ ಪಿನ್ ಅನ್ನು ಬದಲಾಯಿಸುವುದು ಹೇಗೆ?

|

ಇತ್ತೀಚಿನ ದಿನಗಳಲ್ಲಿ ದೇಶದೆಲ್ಲಡೆ ಡಿಜಿಟಲ್‌ ಪೇಮೆಂಟ್‌ ವ್ಯವಸ್ಥೆ ಸಾಕಷ್ಟು ಜನಪ್ರಿಯತೆಯನ್ನ ಗಳಿಸಿದೆ. ಅದರಲ್ಲೂ ಕೊರೊನಾ ವೈರಸ್‌ನ ಹಾವಳಿಯ ನಂತರ ಹೆಚ್ಚಿನ ಪ್ರಮಾನದಲ್ಲಿ ಡಿಜಿಟಲ್‌ ಪೇಮೆಂಟ್‌ ಜಾಸ್ತಿಯಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಡಿಜಿಟಲ್‌ ವಹಿವಾಟಿನತ್ತ ಆಸಕ್ತಿಯನ್ನು ತೊರುತ್ತಿದ್ದಾರೆ. ಇದೇ ಕಾರಣಕ್ಕೆ ಮೊಬೈಲ್‌ ವ್ಯಾಲೆಟ್‌ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ಸದ್ಯ ಭಾರತದಲ್ಲಿ ಯುಪಿಐ ಪಾವತಿ ಸೇವೆಯನ್ನು ಫೋನ್ ಪೇ, ಗೂಗಲ್‌ ಪೇ, ಪೇಟಿಎಂ ನಂತಹ ಆಪ್‌ಗಳು ನೀಡುತ್ತಿವೆ. ಇದರಲ್ಲಿ ಫೋನ್‌ ಪೇ ಜನಪ್ರಿಯ ಆಪ್‌ಗಳಲ್ಲಿ ಒಂದಾಗಿದೆ.

ಫೋನ್ ಪೇ

ಹೌದು, ಫೋನ್ ಪೇ, ಗೂಗಲ್‌ ಪೇ ಮೂಲಕ ಡಿಜಟಲ್‌ ಪೇಮೆಂಟ್‌ ಮಾಡುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇನ್ನು ಮೊಬೈಲ್ ವ್ಯಾಲೆಟ್‌ಗಳ ವಿಷಯಕ್ಕೆ ಬಂದರೆ, ಮೇ ತಿಂಗಳಲ್ಲಿ ಗೂಗಲ್ ಪೇ 7.5 ಕೋಟಿ ವಹಿವಾಟು ನಡೆಸಿದ್ದರೆ, ಫೋನ್‌ಪೇ ಒಂದೇ ತಿಂಗಳಲ್ಲಿ ಆರು ಕೋಟಿ ಬಳಕೆದಾರರನ್ನು ತಲುಪಿದೆ. ಸದ್ಯ ದೇಶದಲ್ಲಿ ಗೂಗಲ್‌ ಪೇ ಮತ್ತು ಫೋನ್‌ ಪೇ ಮುಂಚೂಣಿ ಯುಪಿಐ ಪಾವತಿ ಆಪ್‌ಗಳಾಗಿವೆ. ಹಾಗಾದ್ರೆ ಫೋನ್‌ ಪೇಯಲ್ಲಿ ಯುಪಿಐ ಪಿನ್‌ ಬದಲಾಯಿಸುವುದು ಹೇಗೆ? ವಹಿವಾಟು ಮಿತಿ ಹೆಚ್ಚಿಸುವುದು ಹೇಗೆ? ಅನ್ನೊದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿರಿ.

ಫೋನ್‌ಪೇ

ನಿಮ್ಮ ಫೋನ್‌ಗಳನ್ನು ರೀಚಾರ್ಜ್ ಮಾಡಲು, ಬಿಲ್‌ಗಳನ್ನು ಪಾವತಿಸಲು, ಡಿಟಿಎಚ್ ಕನೆಕ್ಟಿವಿಟಿ ಮತ್ತು ಫುಡ್‌ ಆರ್ಡರ್‌ ಸೇರಿದಂತೆ ಇತರೆ ವಿಷಯಗಳಲ್ಲಿ ಫೋನ್‌ಪೇ ನಿಮಗೆ ಅನುಮತಿಸುತ್ತದೆ. ಇನ್ನು ಫೋನ್‌ಪೇಯನ್ನು ಹೊಂದಿರುವ ಬಳಕೆದಾರರು ತಮ್ಮದೇ ಆದ ಪಾಸ್‌ವರ್ಡ್‌ ಅನ್ನು ಕ್ರಿಯೆಟ್‌ ಮಾಡಬೇಕಿರುತ್ತದೆ. ಆದರೆ ಈ ಪಾಸ್‌ವರ್ಡ್ ಅನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಒಂದು ವೇಳೆ ನಿಮ್ಮ ಪಾಸ್‌ವರ್ಡ್‌ ಮರೆತು ಹೋಗಿದ್ದರೆ ನೀವು ನಿಮ್ಮ ಯುಪಿಐ ಪಿನ್ ಅನ್ನು ಬದಲಾಯಿಸಬೇಕಾಗುತ್ತದೆ. ಹಾಗಾದ್ರೆ ನೀವು ನಿಮ್ಮ ಪಿನ್ ಬದಲಾಯಿಸುವುದು ಹೇಗೆ ಅನ್ನೊದನ್ನ ಹಂತಹಂತವಾಗಿ ತಿಳಿಸಿಕೊಡ್ತೀವಿ ಓದಿರಿ.

ಫೋನ್‌ಪೇಯಲ್ಲಿ ಯುಪಿಐ ಪಿನ್ ಅನ್ನು ಬದಲಾಯಿಸುವುದು ಹೇಗೆ?

ಫೋನ್‌ಪೇಯಲ್ಲಿ ಯುಪಿಐ ಪಿನ್ ಅನ್ನು ಬದಲಾಯಿಸುವುದು ಹೇಗೆ?

ಹಂತ 1: ಮೊದಲು, ನೀವು ಪೋನ್‌ಪೇ ಡಿಸ್‌ಪ್ಲೇ ಮೇಲೆ ಬಲ ಮೂಲೆಯಲ್ಲಿ ಇರುವ ಮೆನುವನ್ನು ತೆರೆಯಬೇಕು.
ಹಂತ 2: ನೀವು ಬ್ಯಾಂಕ್‌ ಅಕೌಂಟ್‌ ವಿಭಾಗದ ಮೇಲೆ ಕ್ಲಿಕ್ ಮಾಡಬೇಕು, ನಂತರ ನೀವು ವ್ಯಾಲೆಟ್‌ ಜೊತೆಗೆ ಕನೆಕ್ಟ್‌ ಆಗಿರುವ ಬ್ಯಾಂಕ್‌ ಖಾತೆಗಳನ್ನು ಕಾಣಬಹುದು.
ಹಂತ 3: ಅದರ ನಂತರ, ನೀವು ಪಿನ್ ಬದಲಾಯಿಸಲು ಬಯಸುವ ಬ್ಯಾಂಕ್ ಖಾತೆಯನ್ನು ನೀವು ಆರಿಸಬೇಕಾಗುತ್ತದೆ.
ಹಂತ 4: ನಂತರ, ಪಾಸ್‌ವರ್ಡ್ ಬದಲಾಯಿಸಲು ಅಪ್ಲಿಕೇಶನ್ ನಿಮಗೆ ಅನುಮತಿಸುತ್ತದೆ, ಅಲ್ಲದೆ ಅಲ್ಲಿ ರಿಸೆಟ್‌ ಬಟನ್‌ ಕಂಡುಬರಲಿದೆ.
ಹಂತ 5: ನಂತರ, ನೀವು ರಿಸೆಟ್‌ ಬಟನ್‌ ಅನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಡೆಬಿಟ್‌ ಅಥವಾ ಕ್ರೆಡಿಟ್‌ ಕಾರ್ಡ್‌ಗಳ ಕೊನೆಯ ಅಂಕಿಗಳನ್ನು ನಮೂದಿಸಬೇಕು. ಜೊತೆಎ ವ್ಯಾಲಿಡಿಟಿ ಡೇಟ್ ಅನ್ನು ಸಹ ನಮೂದಿಸಬೇಕು.
ಹಂತ 6: ಇದೀಗ ನಿಮ್ಮ ಬ್ಯಾಂಕಿನಿಂದ ನಿಮ್ಮ ಫೋನ್‌ ನಂಬರ್‌ಗೆ OTP ನಂಬರ್‌ ಬರಲಿದೆ ನಂತರ ನೀವು ಹೊಸ ಪಿನ್ ಜೊತೆಗೆ ಒಟಿಪಿಯನ್ನು ನಮೂದಿಸಬೇಕು.
ಹೀಗೆ ಹಂತಹಂತವಾಗಿ ಮಾಹಿತಿಯನ್ನು ಅನುಸರಿಸುವ ಮೂಲಕ ನಿಮ್ಮ ಫೋನ್‌ಪೇ ಯುಪಿಐ ಪಿನ್‌ ಅನ್ನು ನೀವು ಯಶಸ್ವಿಯಾಗಿ ಬದಲಾಯಿಸಬಹುದಾಗಿದೆ.

Best Mobiles in India

English summary
PhonePe allows you to recharge your phones, pay bills, DTH connections, and many more things.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X