Home
ಟೆಕ್ ನೌಕರಿ

Instagram ನಲ್ಲಿ ಲೋಗೋವನ್ನು ಬದಲಾಯಿಸುವುದು ಹೇಗೆ?

ಜನಪ್ರಿಯ ಸೊಶೀಯಲ್‌ ಮೀಡಿಯಾ ಫ್ಲಾಟ್‌ಫಾರ್ಮ್‌ಗಳಲ್ಲಿ ಒಂದಾದ Instagram ಇತ್ತೀಚಿಗಷ್ಟೇ ತನ್ನ 10 ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದೆ. ಬಳಕೆದಾರರಿಗೆ ಲಭ್ಯವಾಗಿ ಹತ್ತು ವರ್ಷಗಳು ಕಳೆದ ಹಿನ್ನೆಲೆಯಲ್ಲಿ ಜನಪ್ರಿಯ ಫೋಟೋ-ಶೇರ್‌ ಅಪ್ಲಿಕೇಶನ್ ಇನ್‌ಸ್ಟಾಗ್ರಾಮ್‌ ಹಲವು ಫೀಚರ್ಸ್‌ಗಳನ್ನು ಪರಿಚಯಿಸಿದೆ. ಇನ್ನು ಈ ಹೊಸ ಫೀಚರ್ಸ್‌ಗಳಲ್ಲಿ ಅಪ್ಲಿಕೇಶನ್ ಈಸ್ಟರ್ ಎಗ್ ಕೂಡ ಒಂದಾಗಿದೆ. ಇದು ಇನ್‌ಸ್ಟಾಗ್ರಾಮ್ ಲೋಗೊಗಳ ಪಟ್ಟಿಯಿಂದ ನಮಗೆ ಬೇಕಾದ ಲೋಗಗಳನ್ನ ಆಯ್ಕೆ ಮಾಡಲು ಅವಕಾಶ ನೀಡಲಿದೆ.

ಹೌದು, ಜನಪ್ರಿಯ ಫೋಟೋ-ಶೇರ್‌ ಅಪ್ಲಿಕೇಶನ್ ಇನ್‌ಸ್ಟಾಗ್ರಾಮ್‌ ತನ್ನ ಬಳಕೆದಾರರಿಗೆ ತನ್ನ ಹತ್ತನ್ನೇ ವರ್ಷದ ಹುಟ್ಟಹಬ್ಬದ ಪ್ರಯುಕ್ತ ಹೊಸ ಫೀಚರ್ಸ್‌ಗಳನ್ನ ಪರಿಚಯಿಸಿದೆ. ಅಲ್ಲದೆ ತನ್ನ ಬಳಕೆದಾರರು ಇನ್‌ಸ್ಟಾಗ್ರಾಮ್‌ ಲೋಗೋವನ್ನ ಬೇಕಾದಂತೆ ಬದಲಾಯಿಸಲು ಅನುವು ಮಾಡಿಕೊಡುತ್ತದೆ. ಹಾಗಾದ್ರೆ ಆಂಡ್ರಾಯ್ಡ್ ಮತ್ತು ಐಒಎಸ್‌ ಡಿವೈಸ್‌ನಲ್ಲಿ ಇನ್‌ಸ್ಟಾಗ್ರಾಮ್‌ ಲೋಗೊವನ್ನು ಬದಲಾಯಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Instagram ಲೋಗೋವನ್ನು ಬದಲಾಯಿಸುವುದು ಹೇಗೆ?

Instagram ಲೋಗೋವನ್ನು ಬದಲಾಯಿಸುವುದು ಹೇಗೆ?

ಇನ್‌ಸ್ಟಾಗ್ರಾಮ್‌ ತನ್ನ ಬಳಕೆದಾರರಿಗೆ ಲೋಗೋ ಬದಲಾಯಿಸಲು ಅವಕಾಶ ನಿಡಿದೆ ನಿಜ. ಆದರೆ ಲೋಗೋ ಆಯ್ಕೆಗಳನ್ನು ಅಪ್ಲಿಕೇಶನ್‌ನಲ್ಲಿ ಸುಲಭವಾಗಿ ಕಂಡುಹಿಡಿಯಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ ಬಳಕೆದಾರರು ಸೆಟ್ಟಿಂಗ್ಸ್‌ ಮೆನುವಿನಲ್ಲಿ ಈಸ್ಟರ್ ಎಗ್ ಅನ್ನು ಆಯ್ಕೆ ಮಾಡಬೇಕು. ಇದರಲ್ಲಿ ಇನ್‌ಸ್ಟಾಗ್ರಾಮ್ ಲೋಗೋವನ್ನು ಬದಲಾಯಿಸಬಹುದಾಗಿದೆ. ಇದಕ್ಕಾಗಿ ನೀವು ಕೆಲವು ಸರಳ ಹಂತಗಳನ್ನು ಅನುಸರಿಸಬೇಕು. ಅದು ಹೇಗೆ ಅನ್ನೊದನ್ನ ಈ ಕೆಳಗಿನ ಹಂತಗಳಲ್ಲಿ ತಿಳಿಯಿರಿ.

ಇನ್‌ಸ್ಟಾಗ್ರಾಮ್

ಹಂತ:1 ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇನ್‌ಸ್ಟಾಗ್ರಾಮ್ ಅಪ್ಲಿಕೇಶನ್ ತೆರೆಯಿರಿ
ಹಂತ:2 ನಿಮ್ಮ 'ಪ್ರೊಫೈಲ್' ವಿಭಾಗಕ್ಕೆ ಹೋಗಿ ಮತ್ತು ಮೇಲಿನ ಬಲ ಮೂಲೆಯಲ್ಲಿರುವ ಹ್ಯಾಂಬರ್ಗರ್ ಮೆನು ಕ್ಲಿಕ್ ಮಾಡಿ
ಹಂತ:3 ಈಗ, ಸೆಟ್ಟಿಂಗ್ಸ್ ಆಯ್ಕೆಯನ್ನು ಆರಿಸಿ
ಹಂತ:4 ಒಮ್ಮೆ ನೀವು ಸೆಟ್ಟಿಂಗ್‌ಗಳ ಮೆನುವಿನಲ್ಲಿರುವಾಗ, ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಪುಟವನ್ನು ರಿಫ್ರೆಶ್ ಮಾಡಲು ನೀವು ಮಾಡುವಂತೆಯೇ ನೀವು ಪುಟವನ್ನು ಕೆಳಗೆ ಎಳೆಯಬೇಕಾಗುತ್ತದೆ
ಹಂತ:5 ಸೆಟ್ಟಿಂಗ್ಸ್‌ ಪೇಜ್‌ ಅನ್ನು ರಿಫ್ರೆಶ್‌ ಮಾಡಿದ ನಂತರ ಲಂಬವಾಗಿ ಜೋಡಿಸಲಾದ ಎಮೋಜಿಗಳ ಮಿಶ್ರಣವನ್ನು ನೀವು ಕಾಣಬಹುದು. ಆದರೆ ಪೇಜ್‌ ಅನ್ನು ಸಂಪೂರ್ಣವಾಗಿ ಕೆಳಕ್ಕೆ ಎಳೆದ ನಂತರ, ನಿಮ್ಮನ್ನು ಅಪ್ಲಿಕೇಶನ್ ಐಕಾನ್ ಪುಟಕ್ಕೆ ಕರೆದೊಯ್ಯಲಾಗುತ್ತದೆ.
ಹಂತ:5 ಇಲ್ಲಿ 13 ಇನ್‌ಸ್ಟಾಗ್ರಾಮ್ ಲೋಗೊಗಳನ್ನು ಪಟ್ಟಿ ಕಾಣಲಿದೆ. ಇಲ್ಲಿ ಅಪ್ಲಿಕೇಶನ್ ಲೋಗೋವನ್ನು ಬದಲಾಯಿಸಲು ನಿಮಗೆ ಅವಕಾಶ ನೀಡುವ ಮೂಲಕ ಅಪ್ಲಿಕೇಶನ್ ತನ್ನ ಜನ್ಮದಿನವನ್ನು ನಿಮ್ಮೊಂದಿಗೆ ಆಚರಿಸಲು ಬಯಸುತ್ತದೆ ಎಂದು ಸೂಚಿಸುವ ಸಂದೇಶವನ್ನು ಸಹ ಪಟ್ಟಿಯು ಹೊಂದಿದೆ. ಇದರಲ್ಲಿ ನೀವು ಇಷ್ಟಪಡುವ ಲೋಗೋವನ್ನು ಆರಿಸಿ ಮತ್ತು ನಿಮ್ಮ ಸ್ಮಾರ್ಟ್‌ಫೋನ್‌ಗಾಗಿ ಅಪ್ಲಿಕೇಶನ್ ಲೋಗೊ ಸ್ವಯಂಚಾಲಿತವಾಗಿ ಬದಲಾಗುತ್ತದೆ

ಇನ್‌ಸ್ಟಾಗ್ರಾಮ್‌

ಸದ್ಯ ಇನ್‌ಸ್ಟಾಗ್ರಾಮ್‌ 13 ವಿವಿಧ ಮಾದರಿಯ ಲೋಗೊಗಳನ್ನ ನೀಡಿದೆ. ಈ ಲೋಗೋ ಆಯ್ಕೆಗಳಲ್ಲಿ ಪ್ರಸ್ತುತ ಲೋಗೊ, ಕ್ಲಾಸಿಕ್ 2 ಲೋಗೊ, ಕ್ಲಾಸಿಕ್ ಲೋಗೊ, ಒರಿಜಿನಲ್ ಲೋಗೊ, ಕೋಡ್ ನೇಮ್ ಲೋಗೊ, ಟ್ವಿಲೈಟ್ ಲೋಗೊ, ಸನ್‌ರೈಸ್ ಲೋಗೊ, ಅರೋರಾ ಲೋಗೊ, ಪ್ರೈಡ್ ಲೋಗೊ, ಗೋಲ್ಡ್ ಲೋಗೊ, ಡಾರ್ಕ್ ಲೋಗೊ, ಲೈಟ್ ಲೋಗೊ ಮತ್ತು ವೆರಿ ಡಾರ್ಕ್ ಲೋಗೊ ಸೇರಿವೆ . ಈ ಲೋಗಗಳು ಎಲ್ಲಿಯವರೆಗೆ ಲಭ್ಯವಿರುತ್ತೆ ಎಂದು ಮಾಹಿತಿ ಇಲ್ಲವಾದರೂ ಒಂದು ತಿಂಗಳವರೆಗೆ ಲಭ್ಯವಾಗಬಹುದು ಎಂದು ಅಂದಾಜಿಸಲಾಗಿದೆ.

Best Mobiles in India

English summary
The logo options aren't easily discoverable on the app. You need to look for them, which is why I am here to help.downwards.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+