Paytm: ಯುಪಿಐ ಪಿನ್, ಮತ್ತು ಪಾಸ್‌ವರ್ಡ್ ಅನ್ನು ಬದಲಾಯಿಸುವುದು ಹೇಗೆ?

|

ಇತ್ತಿಚಿನ ದಿನಗಳಲ್ಲಿ ಡಿಜಿಟಲ್ ಬ್ಯಾಕಿಂಗ್‌, ಆನ್‌ಲೈನ್‌ ಪಾವತಿ, ಮೊಬೈಲ್ ಬ್ಯಾಂಕಿಂಗ್‌ ಸೇವೆ ಜಾಗತಿಕವಾಗಿ ಸಾಕಷಟ್ಉ ಜನಪ್ರಿಯತೆಯನ್ನ ಪಡೆದುಕೊಂಡಿದೆ. ಭಾರತದಲ್ಲಿಯೂ ಸಹ ಡಿಜಿಟಲ್‌ ಪೇಮೆಂಟ್‌ ದಿನೇ ದಿನೇ ತನ್ನ ಜನಪ್ರಿಯತೆಯನ್ನ ವಿಸ್ತರಿಸಿಕೊಳ್ಳುತ್ತಿದೆ. ಆದರಲ್ಲೂ ಕೊರೋನಾ ಹಾವಳಿ ಶುರುವಾದ ನಂತರ ಭಾರತದಲ್ಲಿ ಮೊಬೈಲ್ ಬ್ಯಾಂಕಿಂಗ್ ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಆಗುತ್ತಿದೆ. ಸದ್ಯ ಮೊಬೈಲ್‌ ಬ್ಯಾಕಿಂಗ್‌ ವ್ಯವಹಾರ ಹೆಚ್ಚಿನ ದೈನಂದಿನ ವ್ಯವಹಾರಗಳಿಗೆ ಗೋ-ಟು ಪ್ಲಾಟ್‌ಫಾರ್ಮ್ ಆಗಿ ಮಾರ್ಪಟ್ಟಿದೆ. ಆದರಲ್ಲೂ Google Pay, Paytm, ಮತ್ತು ಇತರ ಪಾವತಿ ಪ್ಲಾಟ್‌ಫಾರ್ಮ್‌ಗಳು ಗ್ರಾಹಕರ ನೆಚ್ಚಿನ ಆಪ್‌ಗಳಾಗಿ ಗುರುತಿಸಿಕೊಂಡಿವೆ.

ಪೇಟಿಎಂ

ಹೌದು, ಮೊಬೈಲ್‌ ಬ್ಯಾಂಕಿಂಗ್‌ ವ್ಯವಹಾರ ಕೇವಲ ದೈನಂದಿನ ವ್ಯವಹಾರಕ್ಕೆ ಮಾತ್ರವಲ್ಲ ಎಲ್ಲಾ ಮಾದರಿಯ ಹಣಕಾಸು ಪಾವತಿಗೂ ಕುಡ ಒಮದು ವೇದಿಕೆ ಆಗಿ ಮಾರ್ಪಾಡಾಗುತ್ತಿದೆ. ಇದೇ ಕಾರಣಕ್ಕೆ ಸುಲಭವಾಗಿ ಆನ್‌ಲೈನ್‌ ಬ್ಯಾಕಿಂಗ್‌, ಮೊಬೈಲ್‌ ಬ್ಯಾಂಕಿಂಗ್‌ ಆಪ್‌ಗಳಾಗಿ ಗೂಗಲ್‌ಪೇ, ಪೋನ್‌ಪೇ, ಪೇಟಿಎಂ ಅಂತಹ ಅಪ್ಲಿಕೇಶನ್‌ಗಳು ಗುರುತಿಸಿಕೊಂಡಿದೆ. ಇನ್ನು ಯುಪಿಐ ಮೂಲಕ ನಮ್ಮ ಬ್ಯಾಂಕ್ ಖಾತೆಯೊಂದಿಗೆ ಸಂಪರ್ಕ ಹೊಂದಿರುವ ಹಾಗೂ ಹಣಕಾಸು ವಯವಹಾರಕ್ಕೆ ಸೂಕ್ತವಾದ ಜನಪ್ರಿಯ ಅಪ್ಲಿಕೇಶನ್‌ಗಳಲ್ಲಿ ಪೇಟಿಎಂ ಕೂಡ ಒಂದು. ಸದ್ಯ Paytm ಗೆ ಸಂಬಂಧಿಸಿದಂತೆ ಬಳಕೆದಾರರಲ್ಲಿ ಹಲವು ಪ್ರಶ್ನೆಗಳು ಕಾಡುತ್ತವೆ. ಅವುಗಳಲ್ಲಿ Paytm ನಲ್ಲಿ ಯುಪಿಐ ಪಿನ್ ಅನ್ನು ಹೇಗೆ ಬದಲಾಯಿಸುವುದು? ಅಥವಾ ದಿನಕ್ಕೆ ವಹಿವಾಟಿನ ಮಿತಿಯನ್ನು ಹೇಗೆ ಬದಲಾಯಿಸುವುದು, ಹೀಗೆ ಹಲವು ಪ್ರಶ್ನೆಗಳು ಕಾಡಲಿವೆ. ಇಂತಹ ಗೊಂದಲಗಳಿಗೆ ಉತ್ತರವನ್ನು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Paytm ನಲ್ಲಿ ಯುಪಿಐ ಪಿನ್ ಅನ್ನು ಬದಲಾಯಿಸುವುದು ಹೇಗೆ ?

Paytm ನಲ್ಲಿ ಯುಪಿಐ ಪಿನ್ ಅನ್ನು ಬದಲಾಯಿಸುವುದು ಹೇಗೆ ?

ಯುಪಿಐ- ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ ಇದು ಸ್ಮಾರ್ಟ್‌ಫೋನ್‌ನಲ್ಲಿ ಎರಡು ಬ್ಯಾಂಕ್ ಖಾತೆಗಳ ನಡುವೆ instant money ವರ್ಗಾವಣೆಗೆ ಪ್ರಮುಖ ಅಂಶವಾಗಿದೆ. ಇನ್ನು ನಿಮಗೆಲ್ಲಾ ತಿಳಿದಿರುವಂತೆ Paytm ಭಾರತದ ಅತ್ಯುತ್ತಮ ಪೇಮೆಂಟ್‌ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ತ್ವರಿತ ಮತ್ತು ಸುರಕ್ಷಿತವಾದ ಹಣ ವರ್ಗಾವಣೆಗೆ ಯುಪಿಐನೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಸದ್ಯ ಪ್ರತಿ Paytm ಖಾತೆಗೆ ಯುಪಿಐ ಪಿನ್ ಅಗತ್ಯವಿರುತ್ತದೆ. ಇನ್ನು ನೀವು ನೀಡಿರುವ ಯುಪಿಐ ಪಿನ್‌ ಅನ್ನು ನೀವು ಬದಲಿಸಬೇಕಾದರೆ ಈ ಕೆಳಗಿನ ಹಂತಗಳನ್ನು ಅನುಸರಿಸಿ.

Paytm ನಲ್ಲಿ ನಿಮ್ಮ ಯುಪಿಐ ಪಿನ್ ಬದಲಾಯಿಸುವ ಹಂತಗಳು ಇಲ್ಲಿವೆ:

Paytm ನಲ್ಲಿ ನಿಮ್ಮ ಯುಪಿಐ ಪಿನ್ ಬದಲಾಯಿಸುವ ಹಂತಗಳು ಇಲ್ಲಿವೆ:

ಹಂತ 1: Paytm ಅಪ್ಲಿಕೇಶನ್ ತೆರೆಯಿರಿ ಮತ್ತು ಪುಟದ ಮೇಲಿನ ಎಡ ಮೂಲೆಯಲ್ಲಿರುವ ಐಕಾನ್ ಕ್ಲಿಕ್ ಮಾಡುವ ಮೂಲಕ ನಿಮ್ಮ ಪ್ರೊಫೈಲ್‌ಗೆ ಹೋಗಿ.
ಹಂತ 2: ಸೆಟ್ಟಿಂಗ್‌ಗಳ ಆಯ್ಕೆಗೆ ಹೋಗಿ ಮತ್ತು ಪಾವತಿ ಸೆಟ್ಟಿಂಗ್> ಉಳಿಸಿದ ಪಾವತಿ ವಿವರಗಳ ಮೇಲೆ ಕ್ಲಿಕ್ ಮಾಡಿ.
ಹಂತ 3: ಮುಂದೆ, ಯುಪಿಐ ಪಿನ್ ಬದಲಾಯಿಸಲು ನೀವು ಬಯಸುವ ಬ್ಯಾಂಕ್ ಖಾತೆಯ ಮೇಲೆ ಕ್ಲಿಕ್ ಮಾಡಿ
ಹಂತ 4: 'ಹೊಸ ಯುಪಿಐ ಪಿನ್ ರಚಿಸಿ' ಆಯ್ಕೆಯನ್ನು ಟ್ಯಾಪ್ ಮಾಡಿ
ಹಂತ 5: ಇಲ್ಲಿ, ನಿಮ್ಮ ಡೆಬಿಟ್ / ಕ್ರೆಡಿಟ್‌ನ ಕೊನೆಯ ಆರು ಡಿಜಿಟಲ್ ಅನ್ನು ನೀವು ನಮೂದಿಸಬೇಕಾಗುತ್ತದೆ.ಹಾಗೂ ಕಾರ್ಡ್ ಮತ್ತು ಮುಕ್ತಾಯ ದಿನಾಂಕವನ್ನು ಸಹ ನಮೂದಿಸಬೇಕು
ಹಂತ 6: ನಂತರ, ನೀವು ಹೊಸ ಯುಪಿಐ ಪಿನ್ ಅನ್ನು ನಮೂದಿಸಿ ಮತ್ತು ಅದನ್ನು ದೃಡೀಕರಿಸಬಹುದು. ಮುಂದಿನ ವಹಿವಾಟುಗಳಿಗೆ ನೀವು ಹೊಸ ಪಿನ್ ಅನ್ನು ಬಳಸಲು ಪ್ರಾರಂಭಿಸಬಹುದು.

Paytm ನಲ್ಲಿ ವಹಿವಾಟು ಮಿತಿಯನ್ನು ಬದಲಾಯಿಸುವುದು ಹೇಗೆ?

Paytm ನಲ್ಲಿ ವಹಿವಾಟು ಮಿತಿಯನ್ನು ಬದಲಾಯಿಸುವುದು ಹೇಗೆ?

ಪ್ರತಿ ಪಾವತಿ ಪ್ಲಾಟ್‌ಫಾರ್ಮ್ ಅನುಸರಿಸಬೇಕಾದ ಆರ್‌ಬಿಐ ಸಿದ್ಧಪಡಿಸಿದ ಒಂದೆರಡು ಬ್ಯಾಂಕ್ ನಿಯಮಗಳಿವೆ. ಅವುಗಳಲ್ಲಿ ಒಂದು ವಹಿವಾಟು ಮಿತಿಯಾಗಿದ್ದು, ಬಳಕೆದಾರರು ಪೇಟಿಎಂ ವಾಲೆಟ್ ಮೂಲಕ 20,000 ರೂ.ಟ್ರಾನ್ಸಕ್ಷನ್‌ ಮಾಡಬಹುದಾಗಿದೆ. ಆದಾಗ್ಯೂ ಬಳಕೆದಾರರು Paytm ನಲ್ಲಿ ವಹಿವಾಟು ಮಿತಿಯನ್ನು ಬದಲಾಯಿಸಲು ಬಯಸಿದರೆ, ಖಾತೆಯನ್ನು ಅಪ್‌ಗ್ರೇಡ್ ಮಾಡಬೇಕಾಗುತ್ತದೆ. ನಿಮ್ಮ ಕೆವೈಸಿ ವಿವರಗಳನ್ನು ಆಧಾರ್, ಪ್ಯಾನ್ ಕಾರ್ಡ್ ಮುಂತಾದ ದಾಖಲೆಗಳೊಂದಿಗೆ ಸಲ್ಲಿಸಿ ನವೀಕರಿಸುವ ಮೂಲಕ ಇದನ್ನು ಮಾಡಬಹುದು. ವಹಿವಾಟಿನ ಮಿತಿಯಲ್ಲಿನ ಬದಲಾವಣೆಗೆ Paytm ಅಪ್ಲಿಕೇಶನ್‌ನಲ್ಲಿ ವಿನಂತಿಯನ್ನು ಸಲ್ಲಿಸಬೇಕಾಗುತ್ತದೆ. ಅನುಮೋದನೆ ಪಡೆದ ನಂತರ, Paytm ನಲ್ಲಿನ ವ್ಯವಹಾರ ಮಿತಿಯನ್ನು ರೂ. 1,00,000 ರೂ. Paytm Wallet ಬಳಕೆದಾರರು ರೂ. 25,000.ರೂ ಗಳಿಗೆ ಬದಲಾಯಿಸಬಹುದು.

Paytm ನಲ್ಲಿ ಪಾಸ್‌ವರ್ಡ್ ಅನ್ನು ಮರುಹೊಂದಿಸುವುದು ಹೇಗೆ?

Paytm ನಲ್ಲಿ ಪಾಸ್‌ವರ್ಡ್ ಅನ್ನು ಮರುಹೊಂದಿಸುವುದು ಹೇಗೆ?

ಇನ್ನು ಯಾವುದೇ ಡಿಜಿಟಲ್‌ ಪೇಮೆಂಟ್‌ಗಳಲ್ಲಿ ಪಾಸ್‌ವರ್ಡ್‌ಗಳು ಅವಶ್ಯಕತೆಯಾಗಿದ್ದು, ಪಾಸ್‌ವರ್ಡ್ ಅನ್ನು ಬಲಪಡಿಸಿದರೆ ಉತ್ತಮ. ಒಂದು ವೇಳೆ ನೀವು ನಿಮ್ಮ ಪಾಸ್‌ವರ್ಡ್‌ಗಳನ್ನು ಮರೆತು ಅದನ್ನು ರಿ ಸೆಟ್‌ ಮಾಡಬೇಕಾದರೆ Paytm ನಲ್ಲಿ ಈ ಹಂತಗಳನ್ನು ಅನುಸರಿಸಬೇಕಾಗುತ್ತದೆ.

ಹಂತ 1: ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ Paytm ಕಸ್ಟಮರ್‌ ಕೇರ್‌ ನಂಬರ್‌ 0120-4888-488 ಗೆ ಕರೆ ಮಾಡಿ.
ಹಂತ 2: ನಿಮ್ಮ ಆದ್ಯತೆಯ ಭಾಷೆಯನ್ನು ಆರಿಸಿ ಮತ್ತು ಪಾಸ್‌ವರ್ಡ್ ಮರುಹೊಂದಿಸಲು 1 ಒತ್ತಿರಿ.
ಹಂತ 3: ಕರೆ ಸಂಪರ್ಕ ಕಡಿತಗೊಳ್ಳುತ್ತದೆ, ನಂತರ ಮರುಹೊಂದಿಸುವ ಪಾಸ್‌ವರ್ಡ್ ಲಿಂಕ್ ಅನ್ನು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಗೆ ಕಳುಹಿಸಲಾಗುತ್ತದೆ.
ಹಂತ 4: ಇಲ್ಲಿ, ನೀವು ಮರುಹೊಂದಿಸುವ ಪಾಸ್ವರ್ಡ್ ಲಿಂಕ್ ಅನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಪಾಸ್ವರ್ಡ್ ಅನ್ನು ಬದಲಾಯಿಸಬಹುದು ಮತ್ತು ಅದನ್ನು ದೃಡೀಕರಿಸಬಹುದು. ಗಮನಿಸಿ, ಈ ಲಿಂಕ್ 10 ನಿಮಿಷಗಳಲ್ಲಿ ಮುಕ್ತಾಯಗೊಳ್ಳುತ್ತದೆ.

ಪೇಟಿಎಂ

ಇದಲ್ಲದೆ ನೀವು ನೀವು ಪೇಟಿಎಂ ಮೊಬೈಲ್ ಅಪ್ಲಿಕೇಶನ್‌ನಲ್ಲಿಯೇ ಪಾಸ್‌ವರ್ಡ್ ಅನ್ನು ರಿಸೆಟ್‌ ಮಾಡಬಹುದು. ಅದಕ್ಕಾಗಿ ನೀವು ನಿಮ್ಮ ಪ್ರೊಫೈಲ್> ಸೆಟ್ಟಿಂಗ್‌ಗಳು> ಖಾತೆ ಸೆಟ್ಟಿಂಗ್‌ಗಳನ್ನು ಬದಲಾಯಿಸಿ. ಇಲ್ಲಿ, 'ಪಾಸ್‌ವರ್ಡ್ ಬದಲಿಸಿ' ಎಂಬ ಆಯ್ಕೆಯನ್ನು ಕಾಣಬಹುದು, ಅದನ್ನು ಬದಲಾಯಿಸುವ ಮೊದಲು ನಿಮ್ಮ ಪ್ರಸ್ತುತ ಪಾಸ್‌ವರ್ಡ್ ಅನ್ನು ಒದಗಿಸಿ. ಒಂದು ವೇಳೆ ನೀವು ನಿಮ್ಮ ಪಾಸ್‌ವರ್ಡ್ ಅನ್ನು ನೀವು ಮರೆತಿದ್ದರೆ, ಮೇಲಿನ ಹಂತಗಳನ್ನು ಅನುಸರಿಸಬೇಕಾಗುತ್ತದೆ.

Best Mobiles in India

Read more about:
English summary
Mobile banking has become the go-to platform for majority of day-to-day transactions globally. Payment platforms like Google Pay, Paytm, and others have further credited our accounts with additional cashback offers.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X