Home
ಟೆಕ್ ನೌಕರಿ

PF ಅಕೌಂಟ್‌ನಲ್ಲಿ ನಿಮ್ಮ ಮೊಬೈಲ್‌ ನಂಬರ್‌ ಬದಲಾಯಿಸಬೇಕೆ? ಈ ಕ್ರಮಗಳನ್ನು ಅನುಸರಿಸಿ!

ದುಡಿಯುವ ವರ್ಗಕ್ಕೆ ನೌಕರರ ಭವಿಷ್ಯ ನಿಧಿ(PF) ಅನ್ನೊದು ಕಷ್ಟಕಾಲಕ್ಕೆ ಆರ್ಥಿಕ ನೆರವು ನೀಡಲಿದೆ. ಇದೇ ಕಾರಣಕ್ಕೆ ಪ್ರತಿಯೊಬ್ಬ ಕಾರ್ಮಿಕನು ಕೂಡ ಪಿಎಫ್‌ ಬಗ್ಗೆ ತನ್ನದೇ ಆದ ಕನಸುಗಳನ್ನು ಇಟ್ಟುಕೊಂಡಿರುತ್ತಾನೆ. ನಿವೃತ್ತಿಯ ನಂತರ ಮಾತ್ರವಲ್ಲ, ನಿವೃತ್ತಿಗೂ ಮೊದಲೇ ಕಷ್ಟಕಾಲದಲ್ಲಿ ಪಿಎಫ್‌ ಹಣವನ್ನು ಪಡೆದುಕೊಳ್ಳುವುದಕ್ಕೆ ಕೂಡ ಅವಕಾಶವಿದೆ.

ಹೌದು, ಉದ್ಯೋಗಿಗಳು ತಮ್ಮ ಪಿಎಫ್‌ ಖಾತೆಯಿಂದ ಹಣ ವಿತ್‌ಡ್ರಾ ಮಾಡಲು ಕೆವೈಸಿ ಮಾಹಿತಿಯನ್ನು ನಮೂದಿಸುವುದು ಕಡ್ಡಾಯವಾಗಿದೆ. ಇದರಲ್ಲಿ ಬ್ಯಾಂಕ್ ಖಾತೆಯ ವಿವರ, ಪ್ಯಾನ್ ಕಾರ್ಡ್‌ ಮಾಹಿತಿ ಒದಗಿಸುವುದು ಅಗತ್ಯವಾಗಿದೆ. ಒಂದು ವೇಳೆ ಈಗಾಗಲೇ ನೀವು ರಿಜಿಸ್ಟರ್‌ ಮಾಡಿರುವ ಮೊಬೈಲ್‌ ಸಂಖ್ಯೆಯನ್ನು ಬದಲಾಯಿಸುವುದಕ್ಕೆ ಬಯಸಿದರೆ, ಅದಕ್ಕೂ ಕೂಡ ಅವಕಾಶವಿದೆ. ಹಾಗಾದ್ರೆ ನಿಮ್ಮ ಪಿಎಫ್‌ ಖಾತೆಯಲ್ಲಿ ಮೊಬೈಲ್‌ ನಂಬರ್‌ ಬದಲಾಯಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

PF ಅಕೌಂಟ್‌ನಲ್ಲಿ ನಿಮ್ಮ ಮೊಬೈಲ್‌ ನಂಬರ್‌ ಬದಲಾಯಿಸಬೇಕೆ? ಈ ಕ್ರಮ  ಅನುಸರಿಸಿ!

ನಿಮ್ಮ ಪಿಎಫ್‌ ಅಕೌಂಟ್‌ಗಾಗಿ ನೀಡಿರುವ ಮೊಬೈಲ್‌ ಸಂಖ್ಯೆ ಬದಲಾಯಿಸುವುದಕ್ಕೆ ಅವಕಾಶವಿದೆ. ಹಾಗಂತ ಅದನ್ನು ಏಕಾಏಕಿ ಬದಲಾಯಿಸುವುದಕ್ಕೆ ಸಾಧ್ಯವಿಲ್ಲ. ಇದಕ್ಕಾಗಿ ನೀವು ಕೆಲವು ಹಂತಗಳನ್ನು ಅನುಸರಿಸಬೇಕಾಗುತ್ತದೆ. ನೀವು ನಿಮ್ಮ ಮೊಬೈಲ್‌ ನಂಬರ್‌ ಬದಲಾಯಿಸುವುದರಿಂದ ನಿಮಗೆ ಯಾವುದೇ ರೀತಿಯ ಸಮಸ್ಯೆ ಆಗುವುದಿಲ್ಲ ಅನ್ನೊದನ್ನ ಇಲ್ಲಿ ಗಮನಿಸಬೇಕು. ಇದು ಖಾತೆಯಲ್ಲಿ ಮಾಡಲಾಗುತ್ತಿರುವ ಎಲ್ಲಾ ವಹಿವಾಟುಗಳು ಮತ್ತು ಠೇವಣಿಗಳ ಬಗ್ಗೆ ನಿಗಾ ಇಡಲು ಅನುವು ಮಾಡಿಕೊಡುತ್ತದೆ.

ಅಂದರೆ ಇತರ ಯಾವುದೇ ಬ್ಯಾಂಕ್ ಖಾತೆಗಳಂತೆ, ಯುಎಎನ್ ಸಹ ಸದಸ್ಯರು ಸಕ್ರಿಯ ಫೋನ್ ಸಂಖ್ಯೆಯನ್ನು ನೋಂದಾಯಿಸಿಕೊಳ್ಳಬೇಕಾಗುತ್ತದೆ. ಹಾಗಾದ್ರೆ EPFO ಪೋರ್ಟಲ್ ಬಳಸಿ ನಿಮ್ಮ ಫೋನ್ ಸಂಖ್ಯೆಯನ್ನು ಹೇಗೆ ಬದಲಾಯಿಸಬಹುದು ಅನ್ನೊದನ್ನ ಈ ಕೆಳಗಿನ ಹಂತಗಳ ಮೂಲಕ ತಿಳಿದುಕೊಳ್ಳಬಹುದು.

PF ಅಕೌಂಟ್‌ನಲ್ಲಿ ನಿಮ್ಮ ಮೊಬೈಲ್‌ ನಂಬರ್‌ ಬದಲಾಯಿಸಬೇಕೆ? ಈ ಕ್ರಮ  ಅನುಸರಿಸಿ!

PF ಅಕೌಂಟ್‌ನಲ್ಲಿ ನಿಮ್ಮ ಮೊಬೈಲ್‌ ನಂಬರ್‌ ಅನ್ನು ಬದಲಾಯಿಸುವುದು ಹೇಗೆ?
ಹಂತ:1 ಮೊದಲಿಗೆ Https://www.epfindia.gov.in/site_en/index.php ಗೆ ಭೇಟಿ ನೀಡಿ
ಹಂತ:2 ಇದೀಗ ನಿಮ್ಮ ಯುಎಎನ್ ಮತ್ತು ಪಾಸ್‌ವರ್ಡ್ ಬಳಸಿ ಲಾಗಿನ್ ಮಾಡಿ
ಹಂತ:3 ಇದರಲ್ಲಿ ಮ್ಯಾನೇಜ್ ಟ್ಯಾಬ್ ಕ್ಲಿಕ್ ಮಾಡಿ
ಹಂತ:4 ಡ್ರಾಪ್-ಡೌನ್ ಮೆನುವಿನಿಂದ ಸಂಪರ್ಕ ವಿವರಗಳ ಆಯ್ಕೆಯನ್ನು ಆರಿಸಿ
ಹಂತ:5 ಇದರಲ್ಲಿ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಿ ಚೆಕ್‌ಬಾಕ್ಸ್ ಆಯ್ಕೆಯನ್ನು ಆರಿಸಿ
ಹಂತ:6 ಇದೀಗ ನಿಮ್ಮ ಹೊಸ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು ಅದನ್ನು ಖಚಿತಪಡಿಸಲು ಮರು ನಮೂದಿಸಿ
ಹಂತ:7 ನಂತರ ಒಟಿಪಿ ಸ್ವೀಕರಿಸಲು ಗೆಟ್ ಆಥರೈಸೇಶನ್ ಪಿನ್ ಬಟನ್ ಕ್ಲಿಕ್ ಮಾಡಿ
ಹಂತ:8 ಇದೀಗ, ಹಿಂದಿನ ಹಂತದಲ್ಲಿ ನಮೂದಿಸಲಾದ ನಿಮ್ಮ ಹೊಸ ಮೊಬೈಲ್ ಸಂಖ್ಯೆಯಲ್ಲಿ ಸ್ವೀಕರಿಸಿದ ಒಟಿಪಿ ನಮೂದಿಸಿ ಮತ್ತು ಬದಲಾವಣೆಗಳನ್ನು ಉಳಿಸು ಬಟನ್ ಕ್ಲಿಕ್ ಮಾಡಿ ಹಂತ:9 ಇದರ ನಂತರ, ಸಂಪರ್ಕ ವಿವರಗಳನ್ನು ಯಶಸ್ವಿಯಾಗಿ ನವೀಕರಿಸಲಾಗಿದೆ ಎಂದು ಹೊಸ ಸಂದೇಶ ಕಾಣಿಸುತ್ತದೆ.

PF ಅಕೌಂಟ್‌ನಲ್ಲಿ ನಿಮ್ಮ ಮೊಬೈಲ್‌ ನಂಬರ್‌ ಬದಲಾಯಿಸಬೇಕೆ? ಈ ಕ್ರಮ  ಅನುಸರಿಸಿ!

PF ಬ್ಯಾಲೆನ್ಸ್ ಚೆಕ್ ಮಾಡಲು ಈ ಕ್ರಮಗಳನ್ನು ಅನುಸರಿಸಿ!
* ಮೊದಲಿಗೆ ಅಧಿಕೃತ EPFO ವೆಬ್‌ಸೈಟ್‌ epfindia.gov.in.ಗೆ ಭೇಟಿ ನೀಡಿ
* ಡ್ಯಾಶ್‌ಬೋರ್ಡ್‌ನ ಮೇಲ್ಭಾಗದಲ್ಲಿ ಉಲ್ಲೇಖಿಸಲಾದ 'ಸರ್ವೀಸ್‌' ವಿಭಾಗದ ಮೇಲೆ ಕ್ಲಿಕ್ ಮಾಡಿ.
* ಈ ವಿಭಾಗದ ಅಡಿಯಲ್ಲಿ, 'ಉದ್ಯೋಗಿಗಳಿಗಾಗಿ' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
* ನಂತರ, ಹೊಸ ಪೇಜ್ ತೆರೆಯುತ್ತೆ, 'ಸರ್ವೀಸ್‌' ಆಯ್ಕೆಯಲ್ಲಿ ಕಾಣಿಸುವ 'ಸದಸ್ಯ ಪಾಸ್‌ಬುಕ್' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
* 'ಸದಸ್ಯ ಪಾಸ್‌ಬುಕ್' ಅನ್ನು ಆಯ್ಕೆ ಮಾಡಿದ ನಂತರ, ಚಂದಾದಾರರನ್ನು ಲಾಗಿನ್ ಪೇಜ್‌ಗೆ ನಿರ್ದೇಶಿಸಲಾಗುತ್ತದೆ.
* ಪಾಸ್‌ವರ್ಡ್‌ನೊಂದಿಗೆ UAN ವಿವರಗಳನ್ನು ನಮೂದಿಸಿ ಮತ್ತು ಕ್ಯಾಪ್ಚಾ ಕೋಡ್‌ಗೆ ಉತ್ತರಿಸಿ.
* ನಂತರ 'ಲಾಗಿನ್' ಕ್ಲಿಕ್ ಮಾಡಿ.
* ಇದರ ನಂತರ, ಚಂದಾದಾರರನ್ನು ಮುಖ್ಯ EPF ಖಾತೆಗೆ ನಿರ್ದೇಶಿಸಲಾಗುತ್ತದೆ, ಅಲ್ಲಿ ಉದ್ಯೋಗಿಗಳು ಮಾಹಿತಿ ಕಾಣಬಹುದು.

Best Mobiles in India

English summary
How To Change Your Registered Mobile number in a pf account
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+