ಚಾರ್ಜರ್ ಇಲ್ಲದೆಯೇ ಮೊಬೈಲ್ ಚಾರ್ಜ್ ಮಾಡುವುದು ಹೇಗೆ?

By Shwetha

    ಈಗಂತೂ ದಿನನಿತ್ಯದ ಕೆಲಸಕಾರ್ಯಗಳು ಯಾವಮಟ್ಟಿಗೆ ಇರುತ್ತವೆ ಎಂದರೆ ನಮ್ಮ ಮೊಬೈಲ್‌ ಫೋನ್‌ ಚಾರ್ಜ್‌ ಮಾಡಲೂ ಕೂಡಾ ಸಮಯವಿರುವುದಿಲ್ಲ. ಈ ರೀತಿ ಶರವೇಗದಿ ಸಾಗುತ್ತಿರುವ ದೈನಂದಿನ ಚಟುಚಟಿಕೆಗಳಲ್ಲಿ ಅಂತೂ ಇಂತೂ ಸ್ವಲ್ಪ ಕಾಲ ಮೊಬೈಲ್‌ ಫೋನ್‌ ಚಾರ್ಜ್‌ಮಾಡಲು ಮುಂದಾದಾಗ ಪವರ್‌ಕಟ್‌ ಆದರಂತೂ ತಲೆ ಸಿಡಿದು ಹೋದಂತಾಗುತ್ತದೆ.

    ಇಂತಹ ಸಂದರ್ಭದಲ್ಲಿ ಮೊಬೈಲ್‌ ಫೋನ್‌ ಚಾರ್ಜ್‌ ಮಾಡುವುದಾದರೂ ಹೇಗೆ? ಮೊಬೈಲ್‌ ಫೋನ್‌ ಇಲ್ಲದೇ ಹೋದಲ್ಲಿ ಯಾವ ಕೆಲಸವನ್ನೂ ಕೂಡ ಸರಿಯಾಗಿ ಮಾಡಲಾಗದಷ್ಟು ಅವಲಂಬಿತರಾಗಿ ಬಿಟ್ಟಿದ್ದೇವೆ. ಅದಕ್ಕಾಗಿಯೇ ಗಿಜ್‌ಬಾಟ್ ಇಂದು ಪವರ್‌ ಕಟ್‌ ಸಂದರ್ಭಗಳಲ್ಲಿ ಮೊಬೈಲ್‌ ಫೋನ್‌ಗಳನ್ನು ಯಾವ ರೀತಿ ಚಾರ್ಜ್‌ ಮಾಡಿಕೊಳ್ಳಬಹುದು ಎಂಬುದನ್ನು ಕುರಿತ ಸುಲಭ ಹಾಗೂ ಸರಳ ವಿಧಾನವನ್ನು ನಿಮಗೆ ತಿಳಿಸಲಿದೆ.

    ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

    #1

    ಅಂದಹಾಗೆ ನೀವು ಆಗಿಂದ್ದಾಗೆ ಊರಿಂದ ಊರಿಗೆ ಹೆಚ್ಚು ಪ್ರಯಾಣ ಬೆಳೆಸುವವರಾಗಿದ್ದರೆ ನಿಮ್ಮ ಬಳಿ ಸದಾ ಒಂದು ಬ್ಯಾಕಪ್‌ ಬ್ಯಾಟರಿ ಇಟ್ಟು ಕೊಳ್ಳುವುದು ಸೂಕ್ತ. ಈ ಬ್ಯಾಕಪ್‌ ಬ್ಯಾಟರಿಯ ಮೂಲಕ ನೀವು ನಿಮ್ಮ ಮೊಬೈಲ್‌ ಫೋನ್‌ ಅಷ್ಟೇ ಅಲ್ಲಾ ಕ್ಯಾಮೆರಾ, ಲ್ಯಾಪ್‌ಟಾಪ್‌ ಹಾಗೂ ಟ್ಯಾಬ್ಲೆಟ್‌ಗಳನ್ನೂ ಕೂಡಾ ಚಾರ್ಜ್‌ ಮಾಡಿಕೊಳ್ಳಬಹುದಾಗಿದೆ. ಇಂತಹ ಬ್ಯಾಕಪ್‌ ಬ್ಯಾಟರಿಗಳು ಮಾರು ಲಭ್ಯವಿದ್ದು ಗ್ರಾಹಕರು ಖರಿದಿಸಿ ಕೊಳ್ಳಬಹುದಾಗಿದೆ. ಅಂದಹಾಗೆ ವಿವಿಧ ಗಾತ್ರಗಳಲ್ಲಿ ಲಭ್ಯವಿರುವ ಈ ಬ್ಯಾಕಪ್‌ ಬ್ಯಾಟರಿಗಳಲ್ಲಿ ಹೆಚ್ಚಿನ ಪವರ್‌ ಸ್ಟೋರ್‌ ಮಾಡಿ ಇಡಬಹುದಾಗಿದೆ.

    #2

    ಮುಂಬರುವ ದಿನಗಳಲ್ಲಿ ಪವರ್‌ ಶಾರ್ಟೇಜ್‌ನಂತಹ ಸಮಸ್ಯೆಗಳು ಹೆಚ್ಚಾಗಬಹುದು ಅದಕ್ಕಾಗಿ ಮಾರುಕಟ್ಟೆಯಲ್ಲಿ ವಿವಿಧ ಗ್ಯಾಜೆಟ್‌ಗಳ ಚಾರ್ಜಿಂಗ್‌ಗಾಗಿ ಲಭ್ಯವಿರುವಂತಹ ಸೋಲಾರ್‌ ಚಾರ್ಜರ್‌ ಖರೀದಿಸಿಕೊಳ್ಳುವುದು ಉತ್ತಮ. ಸುಲಭವಾಗಿ ಕೊಂಡೊಯ್ಯಬಹುದಾದ ಈ ಸೋಲಾರ್‌ ಚಾರ್ಜರ್‌ ಅನ್ನು ಯುಎಸ್‌ಬಿ ಮೂಲಕ ಕನೆಕ್ಟ್‌ ಮಾಡಿಕೊಳ್ಳ ಬಹುದಾಗಿದೆ.

    #3

    ಲ್ಯಾಪ್‌ಟಾಪ್‌ ಮೂಲಕ ಮೋಬೈಲ್‌ ಫೋನ್‌ ಚಾರ್ಜ್‌ ಮಾಡಿಕೊಳ್ಳುವುದು ಅತ್ಯಂತ ಸುಲಭದ ಮಾರ್ಗವಾಗಿದೆ. ನಿಮ್ಮ ಬಳಿ ಲ್ಯಾಪ್‌ ಟಾಪ್‌ ಇದ್ದು ಅದರಲ್ಲಿ ಕಾರ್ಯನಿರ್ವಹಿಸುತ್ತಿರುವ ವೇಳೆ ಡೇಟಾ ಕೇಬಲ್‌ ಮೂಲಕ ನಿಮ್ಮ ಮೊಬೈಲ್‌ ಫೋನ್‌ಗೆ ಕನೆಕ್ಟ್‌ ಮಾಡಿ ಚಾರ್ಜ್‌ ಮಾಡಿಕೊಳ್ಳ ಬಹುದಾಗಿದೆ. ಹೀಗಾಗಿ ನಿಮ್ಮ ಕೆಲಸದ ವೇಳೆಯಲ್ಲಿಯೇ ನಿಮ್ಮ ಫೋನ್‌ ಚಾರ್ಜ್‌ ಮಾಡಿಕೊಂಡಂತಾಗುತ್ತದೆ. ಫೋನ್‌ ಚಾರ್ಜ್‌ ಮಾಡಲೆಂದೇ ಪ್ರತ್ಯೇಕ ಸಮಯ ತೆಗೆಯುವ ಅವಧ್ಯಕತೆ ಇರುವುದಿಲ್ಲ.

    #4

    ನಿಮ್ಮ ಕಾರ್‌ನಲ್ಲಿ ಖಚೇರಿಗೆ ತೆರಳುತ್ತಿರುವ ಸಂದರ್ಭದಲ್ಲೇ ನಿಮ್ಮ ಮೊಬೈಲ್‌ ಫೋನ್‌ ಕೂಡಾ ಚಾರ್ಜ್‌ ಮಾಡಿಕೊಳ್ಳ ಬಹುದಾಗಿದೆ ಇದಕ್ಕಾಗಿ ಡೇಟಾಕೇಬಲ್‌ ಒಂದನ್ನು ನಿಮ್ಮ ಕಾರ್‌ನ ಆಡಿಯೋ ಸಿಸ್ಟಂ ನಲ್ಲಿ ನೀಡಲಾಗಿರುವ ಯುಎಸ್‌ಬಿ ಪೋರ್ಟ್‌ಗೆ ಕನೆಕ್ಟ್‌ ಮಾಡಿ ನೀವು ಕಚೇರಿ ತಲುಪುವ ವೇಳೆಗೆ ನಿಮ್ಮ ಮೊಬೈಲ್‌ ಚಾರ್ಜ್‌ ಆಗಿರುತ್ತದೆ.

    #5

    ನಿಮ್ಮ ಫೋನ್‌ನಲ್ಲಿ ಹಿನ್ನಲೆಯಲ್ಲಿ ಚಾಲನೆಯಾಗುತ್ತಿರುವ ಅಪ್ಲಿಕೇಶನ್‌ಗಳನ್ನು ಆಫ್ ಮಾಡಿ ಅಂದರೆ ವೈಫೈ ಮತ್ತು ಬ್ಲ್ಯೂಟೂತ್

    #6

    ಸಾಧ್ಯವಾದಷ್ಟು ಫೋನ್ ಕರೆಯ ಬದಲಿಗೆ ಸಂದೇಶ ರವಾನೆಯನ್ನು ಆಯ್ಕೆಮಾಡಿಕೊಳ್ಳಿ.

    #7

    ಫೋನ್ ಪರದೆಯ ಬ್ರೈಟ್‌ನೆಸ್ ಅನ್ನು ಕಡಿಮೆ ಮಾಡಿಕೊಳ್ಳಿ (ಇದು ಲ್ಯಾಪ್‌ಟಾಪ್‌ಗೂ ಅನ್ವಯವಾಗುತ್ತದೆ)

    #8

    ನಿಮ್ಮ ಚಾರ್ಜ್ ಅನ್ನು ದೀರ್ಘ ಸಮಯದವರೆಗೆ ಇರಿಸುವಂತಹ ವಿನ್ಯಾಸಗೊಳಿಸಲಾದ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಿ.

    #9

    ಇಂಗ್ಲೇಡ್‌ನ ಯೂನಿವರ್ಸಿಟಿಯ ಸಂಶೋಧಕರು ಮೂತ್ರವನ್ನು ಬಳಸಿ ಫೋನ್ ಚಾರ್ಜ್ ಮಾಡುವ ವಿಧಾನವನ್ನು ಕೈಗೆತ್ತಿಕೊಂಡಿದ್ದಾರೆ. ಯೂರಿನ್ ಟ್ರಿಸಿಟಿ ಎಂಬ ಹೆಸರನ್ನು ಈ ಯೋಜನೆಗೆ ನೀಡಿದ್ದಾರೆ. ಮೈಕ್ರೊಬಯಲ್ ಫ್ಯುಯೆಲ್ ಸೆಲ್ಸ್‌ಗಳ ಮೇಲೆ ಮೂತ್ರ ಹರಿದಾಗ ಮೆಟಾಬಲಿಕ್ ಪ್ರಕ್ರಿಯೆ ಉಂಟಾಗುತ್ತದೆ.ಮೂತ್ರವನ್ನು ಮೈಕ್ರೊಬ್ಸ್ ಹೀರಿಕೊಂಡಂತೆ ಅವುಗಳು ಎಲೆಕ್ಟ್ರಾನ್ಸ್‌ಗಳನ್ನು ಬಿಡುಗಡೆ ಮಾಡುತ್ತವೆ

    #11

    ಗಾಳಿಯು ಶಕ್ತಿಯ ಮೂಲವಾಗಿದೆ. ಇದನ್ನು ಸಾಧಿಸಲೆಂದೇ ನೆದರ್ ಲ್ಯಾಂಡ್‌ನ ಸಂಶೋಧಕರು ಐಪ್ಯಾನ್ ಅನ್ನು ತಯಾರಿಸಿದ್ದಾರೆ. ಗಾಳಿಯನ್ನು ಬಳಸಿ ಇದು ಐಫೋನ್ ಅನ್ನು ಚಾರ್ಜ್ ಮಾಡುತ್ತದೆ. ಕಂಪ್ಯೂಟರ್‌ಗಳಲ್ಲಿ ಕಂಡುಬರುವ ಫ್ಯಾನ್‌ನ ಬಳಕೆಯನ್ನು ಇಲ್ಲಿ ಮಾಡಲಾಗಿದೆ.

    #11

    ಚೀನಾದ ವಿನ್ಯಾಸಕಾರರೊಬ್ಬರು ಸಾಫ್ಟ್ ಡ್ರಿಂಕ್ ಅನ್ನು ಬಳಸಿ ಫೋನ್ ಚಾರ್ಜ್ ಅನ್ವೇಷಣೆಯನ್ನು ಮಾಡಿದ್ದಾರೆ. ಸೋಡಾವು ಬಿಡುಗಡೆ ಮಾಡುವ ಶಕ್ತಿಯನ್ನು ವಿಶೇಷ ಕೋಶಕ್ಕೆ ವರ್ಗಾಯಿಸುವ ಮೂಲಕ ಇದನ್ನು ಪತ್ತೆಹಚ್ಚಲಾಗಿದೆ. ಸಕ್ಕರೆ ಮತ್ತು ಸೋಡಾ ಮತ್ತು ಕಾರ್ಬನ್‌ಗಳು ಮಿಳಿತಗೊಂಡಾಗ ಒಂದು ಶಕ್ತಿ ಹೊರಹೊಮ್ಮಿ ಇದರ ಮೂಲಕ ಫೋನ್ ಚಾರ್ಜ್ ಮಾಡಬಹುದಾಗಿದೆ.

    ಗಿಜ್‌ಬಾಟ್ ಲೇಖನಗಳು

    ಮೊಬೈಲ್‌ ಬಳಕೆಯಿಂದ ಪುರಷತ್ವ ಕುಂಠಿತ: ವಿಜ್ಞಾನಿಗಳ ಹೇಳಿಕೆ
    ವಾಟ್ಸಾಪ್‌ನಲ್ಲಿ ನಿಮ್ಮನ್ನು ಬ್ಲಾಕ್ ಮಾಡಿರುವವರು ಯಾರು?
    ಜೂನ್‌ 30 ರೊಳಗೆ 50 ಲಕ್ಷ Freedom 251 ಮೊಬೈಲ್‌ ಆಮದು: ಸರ್ಕಾರದ ಹೇಳಿಕೆ
    ಆನ್‌ಲೈನ್‌ನಲ್ಲಿ ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡುವುದು ಹೇಗೆ?

    ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

    English summary
    In this article we are giving some tips on how to charge your phone without charger here we are giving tips on how to save phone battery also.
    Opinion Poll

    ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more