Home
ಟೆಕ್ ನೌಕರಿ

WhatsApp: ಇಂಟರ್ನೆಟ್ ಇಲ್ಲದೆ ಚಾಟ್ ಮಾಡುವುದು ಹೇಗೆ? ಈ ವಿಧಾನ ಬಳಸಿ

WhatsApp Proxy: ವಾಟ್ಸಪ್ (WhatsApp) ತನ್ನ ಬಳಕೆದಾರರಿಗೆ ಹಲವು ಫೀಚರ್ಸ್‌ಗಳನ್ನು ನೀಡುತ್ತದೆ. ವಾಟ್ಸಪ್ ಮೂಲಕ ಚಾಟಿಂಗ್, ಕರೆ, ವಿಡಿಯೋ ಕರೆಯಂತಹ ಹಲವು ಸೌಲಭ್ಯಗಳು ಲಭ್ಯವಿದೆ. ಆದರೆ, ವಾಟ್ಸಪ್ ಕಾರ್ಯನಿರ್ವಹಿಸಲು ಇಂಟರ್ನೆಟ್ ಅಗತ್ಯವಿದೆ. ಕೆಲವು ಪ್ರದೇಶಗಳಲ್ಲಿ ನೆಟ್‌ವರ್ಕ್‌ ಸಮಸ್ಯೆಯಿಂದ ಇಂಟರ್ನೆಟ್ ಸೌಲಭ್ಯ ಲಭ್ಯವಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ನಾವು ಹೇಳುವ ಟ್ರಿಕ್ ಬಳಸಿ ನೀವು ಇಂಟರ್ನೆಟ್ ಇಲ್ಲದಿದ್ದರೂ ಕೂಡ ವಾಟ್ಸಪ್‌ನಲ್ಲಿ ಚಾಟಿಂಗ್ ಮಾಡಬಹುದು.

ಪ್ರಸ್ತುತ ಮೊಬೈಲ್ ಹೊಂದಿರುವ ಎಲ್ಲರೂ ಸಹ ಮೆಸೇಜ್ ಕಳುಹಿಸಲು ವಾಟ್ಸಪ್ ಅನ್ನು ಬಳಸುತ್ತಾರೆ. ಆದರೆ, ಬಹುತೇಕರಿಗೆ ಇಂಟರ್‌ನೆಟ್ ಇಲ್ಲದಿದ್ದರೂ ವಾಟ್ಸಪ್‌ನಲ್ಲಿ ಮೆಸೇಜ್‌ ಕಳುಹಿಸಬಹುದು ಎಂಬ ವಿಷಯ ತಿಳಿದಿಲ್ಲ. ಕೆಲವರಿಗೆ ಮಾತ್ರ ಇದರ ಬಗ್ಗೆ ತಿಳಿದಿದೆ. ಹೌದು, ಇಂಟರ್ನೆಟ್ ಇಲ್ಲದಿದ್ದರೂ ವಾಟ್ಸಪ್‌ನಲ್ಲಿ ಮೆಸೇಜ್ ಕಳುಹಿಸಬಹುದು. ಹಾಗಿದ್ರೆ, ಇಂಟರ್ನೆಟ್ ಇಲ್ಲದೆ ವಾಟ್ಸಪ್ ಬಳಸುವುದು ಹೇಗೆ? ಎನ್ನುವುದನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ.

WhatsApp: ಇಂಟರ್ನೆಟ್ ಇಲ್ಲದೆ ಚಾಟ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

ಇಂಟರ್ನೆಟ್ ಇಲ್ಲದೆ ಚಾಟ್ ಮಾಡುವ ವಿಧಾನ

ವಾಟ್ಸಪ್ ಅಪ್ಲಿಕೇಶನ್ ತನ್ನ ಬಳಕೆದಾರರಿಗೆ ಪ್ರಾಕ್ಸಿ ಫೀಚರ್ (Proxy feature) ಅನ್ನು ನೀಡಿದೆ. ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಕಳೆದ ವರ್ಷ ಈ ವೈಶಿಷ್ಟ್ಯವನ್ನು ಪರಿಚಯಿಸಿದರು. ಈ ವೈಶಿಷ್ಟ್ಯದ ಮೂಲಕ ನೀವು ಇಂಟರ್ನೆಟ್ ಇಲ್ಲದೆಯೂ ವಾಟ್ಸಪ್‌ನಲ್ಲಿ ಚಾಟ್ (ಮೆಸೇಜ್‌) ಮಾಡಬಹುದು. ನೀವು ಇದರ ಲಾಭ ಪಡೆಯಲು, ನಿಮ್ಮ ಮೊಬೈಲ್‌ನಲ್ಲಿ ಪ್ರಾಕ್ಸಿ ಫೀಚರ್‌ ಅನ್ನು ಸಕ್ರಿಯಗೊಳಿಸಬೇಕು. ನಿಮ್ಮ ಮೊಬೈಲ್‌ನಲ್ಲಿರುವ ವಾಟ್ಸಪ್‌ ಇತ್ತೀಚಿನ ಆವೃತ್ತಿಯಾಗಿರಬೇಕು ಅಥವಾ ಆವೃತ್ತಿಯನ್ನು ಹೊಂದಿರಬೇಕು

ಪ್ರಾಕ್ಸಿ ಫೀಚರ್ ಸಕ್ರಿಯಗೊಳಿಸುವುದು ಹೇಗೆ?

  1. ಮೊದಲಿಗೆ ನಿಮ್ಮ ಫೋನಿನಲ್ಲಿ ವಾಟ್ಸಪ್ ಅಪ್ಲಿಕೇಶನ್‌ ತೆರೆಯಿರಿ.
  2. ವಾಟ್ಸಪ್‌ನ ಬಲಭಾಗದಲ್ಲಿ ಮೂರು ಚುಕ್ಕೆಗಳು ಕಾಣುತ್ತವೆ. ನೀವು, ಅದರ ಮೇಲೆ ಕ್ಲಿಕ್ ಮಾಡಬೇಕು.
  3. ಇದಾದ ಬಳಿಕ, ಸೆಟ್ಟಿಂಗ್‌ಗಳಿಗೆ ಹೋಗಬೇಕು.
  4. ಇಲ್ಲಿ ನೀವು, ಸ್ಟೋರೇಜ್ ಮತ್ತು ಡೇಟಾವನ್ನು ಆಯ್ಕೆ ಮಾಡಿ.
  5. ಬಳಿಕ ಅಲ್ಲಿ ನಿಮಗೆ ಪ್ರಾಕ್ಸಿ ಆಯ್ಕೆ ಕಾಣುತ್ತದೆ. ಅದರ ಮೇಲೆ ಟ್ಯಾಪ್ ಮಾಡಬೇಕು.
  6. ಇದಾದ ಬಳಿಕ, ನಿಮ್ಮ ಪ್ರಾಕ್ಸಿ ವಿಳಾಸವನ್ನು ನಮೂದಿಸಬೇಕು. ಜೊತೆಗೆ, ಅದರ ಮೇಲೆ ಕ್ಲಿಕ್ ಮಾಡಬೇಕು.
  7. ಪ್ರಾಕ್ಸಿ ವಿಳಾಸವನ್ನು ಉಳಿಸಿದ ನಂತರ, ನಿಮಗೆ ಹಸಿರು (ಗ್ರೀನ್) ಬಣ್ಣದ ಮಾರ್ಕ್ ಗೋಚರಿಸುತ್ತದೆ. ಅಂದರೆ, ಪ್ರಾಕ್ಸಿ ವಿಳಾಸವನ್ನು ಸೇರಿಸಲಾಗಿದೆ ಎಂದರ್ಥ. ಹೀಗೆ ಮಾಡಿದರೆ ಪ್ರಾಕ್ಸಿ ಫೀಚರ್‌ ಸಕ್ರಿಯಗೊಳ್ಳುತ್ತದೆ.

ಕರೆ ಅಥವಾ ಮೆಸೇಜ್‌ ಮಾಡಲು ಸಾಧ್ಯವೇ?

ಪ್ರಾಕ್ಸಿ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಿದ ಬಳಿಕ ನಿಮಗೆ ಕರೆಗಳು ಅಥವಾ ಮೆಸೇಜ್‌ಗಳನ್ನು ಮಾಡಲು ಸಾಧ್ಯವಾಗದಿರಬಹುದು. ಆಗ, ನೀವು ದೀರ್ಘವಾಗಿ ಒತ್ತುವ ಮೂಲಕ ಪ್ರಾಕ್ಸಿ ವಿಳಾಸವನ್ನು ತೆಗೆದುಹಾಕಬಹುದು. ಅಲ್ಲದೇ, ಹೊಸ ಪ್ರಾಕ್ಸಿ ವಿಳಾಸವನ್ನು ಹೊಸದಾಗಿ ಸೇರಿಸಬಹುದು. ಈ ಸಂದರ್ಭದಲ್ಲಿ ನೀವು ಪ್ರಾಕ್ಸಿ ವಿಳಾಸವನ್ನು ಅಧಿಕೃತ ಮೂಲದಿಂದ ಮಾತ್ರ ಸೇರಿಸಬೇಕು. ವಾಸ್ತವವಾಗಿ, ಪ್ರಾಕ್ಸಿ ನೆಟ್‌ವರ್ಕ್‌ನಲ್ಲಿ ನೀವು ಸಾಮಾಜಿಕ ಜಾಲತಾಣ ಮಾಧ್ಯಮಗಳು ಅಥವಾ ಸರ್ಚ್ ಇಂಜಿನ್‌ಗಳ ಸಹಾಯದಿಂದ ಇಂಟರ್ನೆಟ್ ಇಲ್ಲದೆ ಮೆಸೇಜ್ ಅಥವಾ ಕರೆ ಮಾಡಬಹುದು.

ವಾಟ್ಸಪ್‌ನ ಈ ವೈಶಿಷ್ಟ್ಯದ ಬಗ್ಗೆ ಹಲವರ ಮನಸ್ಸಿನಲ್ಲಿ ಪ್ರಶ್ನೆ ಉದ್ಭವಿದೆ. ಈ ಫೀಚರ್‌ ಸುರಕ್ಷಿತವಾಗಿದೆಯೇ? ಅಥವಾ ಇಲ್ಲವೇ? ಎಂಬ ಗೊಂದಲವಿವೆ. ಮೆಟಾ ಕಂಪನಿಯು ಈ ಫೀಚರ್‌ ಬಗ್ಗೆ ಸ್ಪಷ್ಟಪಡಿಸಿದೆ. ವಾಟ್ಸಪ್‌ ಬಳಕೆದಾರರಿಗೆ ಈ ಫೀಚರ್‌ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಭರವಸೆ ನೀಡಿದೆ. ಈ ಫೀಚರ್‌ ಮೂಲಕ ಯಾವುದೇ ಅನ್ಯವ್ಯಕ್ತಿಗಳು ನಿಮ್ಮ ಕರೆ ಅಥವಾ ಮೆಸೇಜ್‌ಗಳಿಗೆ ಪ್ರವೇಶಿಸಲು ಸಾಧ್ಯವಿಲ್ಲ. ನೀವು, ಇಂಟರ್ನೆಟ್ ಇಲ್ಲದೆಯೇ ಚಾಟ್ ಮಾಡಲು ಬಯಸಿದರೆ ಈ ವೈಶಿಷ್ಟದ ಪ್ರಯೋಜನ ಪಡೆಯಬಹುದು.

Best Mobiles in India

English summary
You can send messages even without internet with the help of proxy feature in WhatsApp: know details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+