‌ಫೋನ್‌ನಲ್ಲಿ ಕ್ಲಿಯರ್‌ ಆಗಿರುವ Notificationಗಳನ್ನ ಮತ್ತೆ ಪರಿಶೀಲಿಸುವುದು ಹೇಗೆ!

|

ಟೆಕ್ನಾಲಜಿ ಮುಂದುವರೆದಂತೆ ಸ್ಮಾರ್ಟ್‌ಫೋನ್‌ ವಲಯದಲ್ಲೂ ಸಾಕಷ್ಟು ಆಪ್ಡೇಟ್‌ ಆಗುತ್ತಲೇ ಇದೆ. ಇನ್ನು ನೀವು ಯಾವುದೇ ಆಪ್‌ ಆಧಾರಿತ ಸೇವೆಯಿರಲಿ, ನ್ಯೂಸ್‌ ಆಪ್‌ ಇರಲಿ, ಇಲ್ಲವೇ ಯಾವುದೇ ಮಾಹಿತಿ ನೀಡುವ ಸೇವೆಯ ಪೋರ್ಟಲ್‌ಗಳಿರಲಿ ನಿಮ್ಮ ಸ್ಮಾರ್ಟ್‌ಫೋನ್‌ಗಳಿಗೆ ನೊಟೀಫೀಕೇಷನ್‌ ಬರುತ್ತೆ. ಇನ್ನು ನಿಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿ ಬರುವ ಎಲ್ಲಾ ಅಧಿಸೂಚನೆಗಳನ್ನು ನೀವು ಓದಲೇ ಬೇಕು ಅಂತೇನಿಲ್ಲ. ನಿಮಗಿಷ್ಟವಿಲ್ಲದೆ ಹೊದರೆ ಅದನ್ನು ಡಿಲೀಟ್‌ ಮಾಡುವ ಅಥವಾ ಕ್ಲಿಯರ್‌ ಮಾಡುವ ಅವಕಾಶವನ್ನು ಸಹ ನೀಡಲಾಗಿದೆ. ಆದರೆ ನಿಮಗರಿವಿಲ್ಲದೆ ಬಹುಮುಖ್ಯವಾದ ನೊಟೀಫೀಕೇಷನ್‌ ಕ್ಲಿಯರ್‌ ಮಾಡಿದ್ದರೆ ಅದನ್ನು ಮರಳಿ ಪಡೆಯುವುದು ಹೇಗೆ ಅನ್ನೊದನ್ನ ತಿಳಿಯೋಣ ಬನ್ನಿರಿ.

ನೊಟೀಫಿಕೇಷನ್

ಹೌದು, ನಿಮ್ಮ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ನಲ್ಲಿ ನಿಮಗರಿವಿಲ್ಲದೆ ಬಹುಮುಖ್ಯವಾದ ನೊಟೀಫಿಕೇಷನ್‌ ಅನ್ನು ಆಕಸ್ಮಿಕವಾಗಿ ಕ್ಲಿಯರ್‌ ಮಾಡಿದ್ದರೆ ಅದು ನಿಮಗೆ ಮತ್ತೆ ಪಡೆಯುವ ಅವಕಾಶ ಸಹ ಇದೆ. ಸದ್ಯ ನೊಟೀಫಿಕೇಷನ್‌ಗಳು ಫೋನ್‌ನ ಅತ್ಯಗತ್ಯ ಭಾಗವಾಗಿದೆ, ಇದು ಬಳಕೆದಾರರು ಮತ್ತು ಡಿವೈಸ್‌ ನಡುವಿನ ಕೊಂಡಿಯಾಗಿದೆ. ನೀವು ಇನ್ನೊಬ್ಬರಿಂದ ಪ್ರಮುಖ ಸಂದೇಶವನ್ನು ಅಥವಾ ಯಾವುದೇ ಅಪ್ಲಿಕೇಶನ್‌ನಿಂದ ಎಚ್ಚರಿಕೆಯನ್ನು ಸ್ವೀಕರಿಸಿದ್ದರೆ, ಅದರ ಬಗ್ಗೆ ನಿಮಗೆ ತಕ್ಷಣ ತಿಳಿದಿರುವುದಿಲ್ಲ. ಆದರೆ ನೊಟೀಫಿಕೇಷನ್‌ ಮೂಲಕ ತಿಳಿಯಬಹುದಾಗಿರುತ್ತೆ. ಇದರಿಂದ ನೀವು ಈಗಾಗಲೇ ಕ್ಲಿಯರ್‌ ಮಾಡಿರುವ ನೊಟೀಫಿಕೇಷನ್‌ ಅನ್ನು ಮರಳಿ ಪಡೆಯುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನೊಟೀಫಿಕೇಷನ್

ನೀವು ನಿಮ್ಮ Android ಫೋನ್‌ನಲ್ಲಿ ಬಂದಿರುವ ನೊಟೀಫಿಕೇಷನ್‌ಗಳ ಹಿಸ್ಟರಿಯನ್ನು ವೀಕ್ಷಿಸಲು ಅವಕಾಶ ಇದೆ. ಆದರೆ ನೀವು ಈಗಾಗಲೇ ಕ್ಲಿಯರ್‌ ಮಾಡಿರುವ ನೊಟೀಫಿಕೇಷನ್‌ ಅನ್ನು ಸಹ ಪಡೆದುಕೊಳ್ಳುವುದಕ್ಕೆ ಅವಕಾಶವಿದೆ. ಆದರೆ ಆಂಡ್ರಾಯ್ಡ್ 10 ನಲ್ಲಿ ಈ ಫೀಚರ್ಸ್‌ಅನ್ನು ನೇರವಾಗಿ ಎಂಟ್ರಿ ನೀಡಲು ಅವಕಾಶವಿಲ್ಲ. ಹಾಗಂತ ಚಿಂತಿಸುವ ಅಗತ್ಯವಿಲ್ಲ. ನೊಟೀಫಿಕೇಷನ್‌ ಹಿಸ್ಟರಿಯನ್ನ ಪರಿಶೀಲಿಸಲು ಗೂಗಲ್ ನಿಮಗೆ ಅವಕಾಶ ನೀಡುತ್ತದೆ. ಇದಕ್ಕಾಗಿ "ನೊಟೀಫಿಕೇಷನ್‌ ಹಿಸ್ಟರಿ" ಫೀಚರ್ಸ್‌ ಅನ್ನು second developer preview ಗುರುತಿಸಲಾಗಿದೆ. ಇದರಲ್ಲಿ ನೀವು ಇತ್ತೀಚೆಗೆ ವಜಾಗೊಳಿಸಿರುವ ಎಲ್ಲಾ ಅಧಿಸೂಚನೆಗಳ ಪಟ್ಟಿಯನ್ನ ಕಾಣಬಹುದಾಗಿದೆ.

ಅಧಿಸೂಚನೆ

ಪ್ರಸ್ತುತ, ನೀವು ಮಿಸ್‌ ಮಾಡಿಕೊಂಡಿರುವ ಪ್ರತಿಯೊಂದು ಸಂದೇಶ ಅಥವಾ ನವೀಕರಣವನ್ನು ಅಧಿಸೂಚನೆ ಲಾಗ್ ವಿಜೆಟ್‌ನಲ್ಲಿ ಕಾಣಬಹುದಾಗಿದೆ. ಆದರೆ, ನಿಮ್ಮ ಫೋನ್‌ನಲ್ಲಿ ಈ ಫೀಚರ್ಸ್‌ ಲಭ್ಯವಿಲ್ಲದಿದ್ದರೆ, ನೀವು Google Playstore ನಲ್ಲಿ "Notification History Log" ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದಾಗಿದೆ. ಇದು ಉತ್ತಮ ಅಪ್ಲಿಕೇಶನ್ ಆಗಿದ್ದು, ಇದು ಸ್ಟಾಕ್ ಅಧಿಸೂಚನೆ ಲಾಗ್ ಆಯ್ಕೆಗಿಂತ ಹೆಚ್ಚಿನ ವಿವರಗಳನ್ನು ನಿಮಗೆ ನೀಡುತ್ತದೆ. ಇದು ಟ್ವಿಟರ್, ವಾಟ್ಸಾಪ್ ಮತ್ತು ಇತರ ಅಪ್ಲಿಕೇಶನ್‌ಗಳ ಪೂರ್ಣ ಸಂದೇಶಗಳನ್ನು ಪರಿಶೀಲಿಸಲು ನಿಮಗೆ ಅನುಮತಿಸುತ್ತದೆ.

ಅಪ್ಲಿಕೇಶನ್

ನಿರ್ದಿಷ್ಟ ಅಪ್ಲಿಕೇಶನ್ ಅನ್ನು ತೆರೆಯುವ ಆಯ್ಕೆಯನ್ನು ಇದರಲ್ಲಿ ನಿಮಗೆ ಆಯ್ಕೆ ನೀಡುವ ಕಾರಣ ನೀವು ಈ ಅಪ್ಲಿಕೇಶನ್ ಅನ್ನು ಕ್ಲೋಸ್‌ ಮಾಡುವ ಅಗತ್ಯವಿಲ್ಲ . ಅಲ್ಲದೆ ಈ ಅಪ್ಲಿಕೇಶನ್‌ ಅಲ್ಲಿ ಡಾರ್ಕ್ ಥೀಮ್ ಆಯ್ಕೆಯು ಸಹ ಲಭ್ಯವಿದೆ. ಅನಿಯಮಿತ ಅಧಿಸೂಚನೆಗಳನ್ನು ಸಂಗ್ರಹಿಸಿ ಮತ್ತು ಸುಧಾರಿತ ಫಿಲ್ಟರ್‌ಗಳಂತಹ ಫೀಚರ್ಸ್‌ಗಳನ್ನ ನೀಡಲಾಗಿದೆ.

ಫೋನ್‌ನಲ್ಲಿ ಕ್ಲಿಯರ್‌ ಆಗಿರುವ Notificationಗಳನ್ನ ಮತ್ತೆ ಪರಿಶೀಲಿಸುವುದು  ಹೇಗೆ!

ಫೋನ್‌ನಲ್ಲಿ ಕ್ಲಿಯರ್‌ ಆಗಿರುವ Notificationಗಳನ್ನ ಮತ್ತೆ ಪರಿಶೀಲಿಸುವುದು ಹೇಗೆ!

ಹಂತ 1: ನಿಮ್ಮ ಹೋಮ್‌ ಸ್ಕ್ರೀನ್‌ನಲ್ಲಿ ಲಾಂಗ್‌ ಪ್ರೆಸ್‌ ಮಾಡಿ ಮತ್ತು "ವಿಜೆಟ್‌ಗಳು" ಟ್ಯಾಪ್ ಮಾಡಿ.

ಹಂತ 2: ನಂತರ ನೀವು ಕೆಳಗೆ ಸ್ಕ್ರಾಲ್ ಮಾಡಿ "ಸೆಟ್ಟಿಂಗ್‌ಗಳು" ವಿಜೆಟ್ ಅನ್ನು ಕಂಡುಹಿಡಿಯಬೇಕು. ಅದನ್ನು ಲಾಂಗ್‌ ಪ್ರೆಸ್‌ ಮಾಡಿ , ಮತ್ತು ಅದನ್ನು ನಿಮ್ಮ ಹೋಮ್‌ಸ್ಕ್ರೀನ್‌ನಲ್ಲಿ ಇರಿಸಿ. ಅದರ ಶಾರ್ಟ್‌ಕಟ್ ರಚಿಸಲು "Notification Log ಲಾಗ್" ಅನ್ನು ಟ್ಯಾಪ್ ಮಾಡಿ.

ಹಂತ 3: ವಿಜೆಟ್ ಟ್ಯಾಪ್ ಮಾಡಿ ಮತ್ತು ನೀವು ಇತ್ತೀಚೆಗೆ ಕ್ಲಿಯರ್‌ ಮಾಡಿರುವ "Notificationಗಳನ್ನ ಸ್ಕ್ರಾಲ್ ಮಾಡಿ.

Best Mobiles in India

English summary
The "Notification History Log" app is a great app, which will offer you more details than the stock Notification Log option.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X