Home
ಟೆಕ್ ನೌಕರಿ

ಐಫೋನ್‌ನಲ್ಲಿ ಬ್ಯಾಟರಿ ಹೆಲ್ತ್‌ ಅನ್ನು ಪರಿಶೀಲಿಸುವುದು ಹೇಗೆ ಗೊತ್ತಾ ?

ಇತ್ತೀಚಿನ ದಿನಗಳಲ್ಲಿ ಟೆಕ್‌ ವಲಯದಲ್ಲಿ ಸಾಕಷ್ಟು ವಿಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನ ನಾವು ಕಾಣಬಹುದಾಗಿದೆ. ಬಳಕೆದಾರರು ತಮ್ಮಗಿಷ್ಟವಾದ ನೆಚ್ಚಿನ ಬ್ರಾಂಡ್‌ ಸ್ಮಾರ್ಟ್‌ಫೊನ್‌, ಐಫೋನ್‌ಗಳನ್ನ ಆಯ್ಕೆ ಮಾಡಿಕೊಂಡು ಬಳಸುತ್ತಾರೆ. ಇದರಲ್ಲಿ ಐಫೋನ್‌ ಕೂಡ ಒಂದಾಗಿದ್ದು, ಜನಪ್ರಿಯ ಬ್ರಾಂಡ್‌ ಆಗಿ ಗುರುತಿಸಿಕೊಂಡಿದೆ. ಇನ್ನು ಐಫೋನ್‌ ಬಳಸುವ ಬಳಕೆದಾರರು ತಮ್ಮ ಐಫೋನ್‌ನಲ್ಲಿ ಸಾಕಷ್ಟು ಅಪ್ಲಿಕೇಶನ್‌ಗಳನ್ನು ಬಳಸುತ್ತಾರೆ. ಜೊತೆಗೆ ಪ್ರತಿದಿನವೂ ಈ ಡಿವೈಸ್‌ಗಳಲ್ಲಿ ಸಾಕಷ್ಟು ಸಂಕೀರ್ಣ ಕಾರ್ಯಗಳನ್ನು ನಿರ್ವಹಿಸುತ್ತಾರೆ. ಇದೆಲ್ಲವೂ ಫೋನ್‌ಗಳ ಬ್ಯಾಟರಿ ಸಾಮರ್ಥ್ಯದ ಮೇಲೆ ನಿರ್ಧಾರವಾಗಲಿದೆ.

ಐಫೋನ್‌

ಹೌದು, ಸ್ಮಾರ್ಟ್‌ಫೋನ್‌, ಇಲ್ಲವೇ ಐಫೋನ್‌ ಬಳಕೆದಾರರು ತಮ್ಮ ಹೆಚ್ಚುವರಿ ಕಾರ್ಯಗಳನ್ನ ನಿರ್ವಹಿಸಬೇಕಾದರೆ ಫೋನ್‌ಗಳಲ್ಲಿ ಬ್ಯಾಟರಿ ಸಾಮರ್ಥ್ಯ ಉತ್ತಮವಾಗಿರಬೇಕಾದ ಅನಿವಾರ್ಯತೆ ಇದೆ. ಇದಕ್ಕಾಗಿ ಬಿಗ್‌ ಬ್ಯಾಟರಿ ಸಾಮರ್ಥ್ಯದ ಫೋನ್‌ಗಳತ್ತ ಗ್ರಾಹಕರು ಮನಸ್ಸು ಮಾಡುತ್ತಿದ್ದಾರೆ. ಅದರಲ್ಲೂ ನೀವು ದುಬಾರಿ ಐಫೋನ್ ಅಥವಾ ಬಜೆಟ್ ಆಂಡ್ರಾಯ್ಡ್ ಡಿವೈಸ್‌ ಅನ್ನು ಖರೀದಿಸಬೇಕು ಎಂದುಕೊಂಡಿದ್ದರೆ, ದೀರ್ಘಾವಧಿಯಲ್ಲಿ ನೀವು ಉತ್ತಮ ಬ್ಯಾಟರಿ ಅವಧಿಯನ್ನು ಮತ್ತು ಬ್ಯಾಟರಿ ಸುರಕ್ಷತೆಯನ್ನು ಪಡೆಯಬಹುದು ಹೇಗೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಇದನ್ನು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಐಫೋನ್‌

ಐಫೋನ್‌ಗಳ ಬ್ಯಾಟರಿ ಆರೋಗ್ಯ ವಿಭಾಗದಲ್ಲಿ, ಗರಿಷ್ಠ ಕಾರ್ಯಕ್ಷಮತೆ ಸಾಮರ್ಥ್ಯ ಮತ್ತು ನಿಮ್ಮ ಬ್ಯಾಟರಿಯ ಗರಿಷ್ಠ ಸಾಮರ್ಥ್ಯವನ್ನು ನೀವು ತಿಳಿದುಕೊಳ್ಳುವುದು ಉತ್ತಮ. ಐಫೋನ್ ಬಳಕೆದಾರರು ಕಡಿಮೆ ಸಾಮರ್ಥ್ಯದ ಬ್ಯಾಟರಿ ಹೊಂದಿದ್ದರೆ, ಅವರು ಚಾರ್ಜಿಂಗ್‌ ನಡುವೆ ಕಡಿಮೆ ಗಂಟೆಗಳ ಬಳಕೆಯನ್ನು ಪಡೆಯುತ್ತಾರೆ ಎಂದರ್ಥ. ಆದರೆ ನಾವು ನೀವು ನೋಡುವಂತೆ, ನಿಮ್ಮ ಐಫೋನ್ ಬ್ಯಾಟರಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವಾಗ ನಿಮ್ಮ ಬ್ಯಾಟರಿ ಕಾರ್ಯದಕ್ಷತೆ ಉತ್ತಮವಾಗಿರಲಿದೆ. ಅಲ್ಲದೆ ನೀವು ಅಗತ್ಯ ವಿಲ್ಲದ ಸಮಯದಲ್ಲಿ ಐಫೋನ್‌ನಲ್ಲಿನ ಪ್ಲೇಸ್‌ ಹೆಲ್ಪ್‌ಮಾಡುವ ಆಪ್‌ಗಳನ್ನು ಮಾಡುವಆಪ್ ಮೂಲಕ ನಿಮ್ಮ ಐಫೋನ್‌ನ ಬ್ಯಾಟರಿ ಅವಧಿಯನ್ನು ಸುಧಾರಿಸಬಹುದಾಗಿದೆ.

ಬ್ಯಾಟರಿ ಅವಧಿ

ಇದಲ್ಲದೆ ಬ್ಯಾಟರಿ ಅವಧಿಯನ್ನು ಉಳಿಸಲು ನೀವು ಸೆಟ್ಟಿಂಗ್‌ಗಳ ವಿಭಾಗದಲ್ಲಿ ಲೋ ಪವರ್ ಮೋಡ್ ಅನ್ನು ಸಹ ಉಪಯೋಗಿಸಬಹುದಾಗಿದೆ. ಅಷ್ಟೇ ಅಲ್ಲ ಉತ್ತಮ ಬ್ಯಾಟರಿ ಅವಧಿಯನ್ನು ಪಡೆಯಲು ಐಫೋನ್ ಬಳಕೆದಾರರು ಡಾರ್ಕ್ ಮೋಡ್ ಅನ್ನು ಬಳಸಬಹುದು. ಜೊತೆಗೆ ಐಫೋನ್‌ನ ಬ್ಯಾಟರಿ ವಿಭಾಗದಲ್ಲಿ ಒಬ್ಬರು ತಮ್ಮ ಪರದೆಯ ಸಮಯದ ವಿವರಗಳನ್ನು ಪರಿಶೀಲಿಸಬಹುದು ಮತ್ತು ಯಾವ ಅಪ್ಲಿಕೇಶನ್ ಹೆಚ್ಚಾಗಿ ಬ್ಯಾಟರಿಯನ್ನು ಬರಿದಾಗಿಸುತ್ತಿದೆ ಎಂಬುದರ ಬಗ್ಗೆ ಸಹ ತಿಳಿದುಕೊಳ್ಳಬಹುದು. ಯಾವುದೇ ಅನಗತ್ಯ ಅಪ್ಲಿಕೇಶನ್ ನಿಮ್ಮ ಬ್ಯಾರಿ ಪವರ್‌ ಅನ್ನು ಕಡಿಮೆ ಮಾಡುತ್ತಿದ್ದರೆ ಅಂತಹ ಅಪ್ಲಿಕೇಶನ್‌ ಬ್ಯಾಟರಿ ಪವರ್‌ ಬಳಸದಂತೆ ತಡೆಯಬಹುದಾಗಿದೆ. ಈ ಮೂಲಕ ನಿಮ್ಮ ಐಫೋನ್‌ನಲ್ಲಿ ಬ್ಯಾಟರಿ ಹೆಲ್ತ್‌ ಅನ್ನು ಪರಿಶೀಲಿಸಬಹುದಾಗಿದೆ.

ಐಫೋನ್‌ನಲ್ಲಿ ಬ್ಯಾಟರಿ ಹೆಲ್ತ್‌ ಅನ್ನು ಪರಿಶೀಲಿಸುವುದು ಹೇಗೆ ?

ಐಫೋನ್‌ನಲ್ಲಿ ಬ್ಯಾಟರಿ ಹೆಲ್ತ್‌ ಅನ್ನು ಪರಿಶೀಲಿಸುವುದು ಹೇಗೆ ?

ಹಂತ 1: ಸೆಟ್ಟಿಂಗ್‌ಗಳಿಗೆ ಹೋಗಿ.

ಹಂತ 2: ಬ್ಯಾಟರಿಯನ್ನು ಟ್ಯಾಪ್ ಮಾಡಿ. ನೀವು ಡಿಸ್ಪ್ಲೇ ಟೈಂ ವಿವರವನ್ನು ಪರಿಶೀಲಿಸಬಹುದು.

ಹಂತ 3: ಬ್ಯಾಟರಿ ಆರೋಗ್ಯ ಪಟ್ಟಿಯೂ ಇದೆ, ಹೆಚ್ಚಿನ ವಿವರಗಳಿಗಾಗಿ ನೀವು ಅದನ್ನು ಟ್ಯಾಪ್‌ಮಾಡಿ.

Best Mobiles in India

English summary
Apple says that if iPhone users witness lower capacity, this will mean that they will get fewer hours of usage between charges.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+