Home
ಟೆಕ್ ನೌಕರಿ

ಫೋನ್​ ಕಾಲ್‌ಗಳನ್ನು ಬೇರೆಯವರು ಕದ್ದು ಕೇಳಿಸಿಕೊಳ್ಳುತ್ತಿದ್ದಾರೆಯೇ? ಈ ಟಿಪ್ಸ್​ ಮೂಲಕ ಪತ್ತೆ ಮಾಡಿ!

ನಿತ್ಯ ವಂಚನೆ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಅಂತೆಯೇ ವಂಚನೆಗೆ (Cyber Fraud) ಒಳಗಾಗುವರೂ ಇದ್ದಾರೆ. ದಿನದಿಂದ ದಿನಕ್ಕೆ ಹೊಸ ಬಗೆಯ ವಂಚನೆಗಳು ಬೆಳಕಿಗೆ ಬರುತ್ತಿದ್ದು, ನಾವು ಸ್ವಲ್ಪ ಎಚ್ಚರದಿಂದರಬೇಕು. ಅಪರಿಚಿತ ಸಂಖ್ಯೆಗಳಿಂದ ಬರುವ ಕರೆಗಳೂ (Unknown Calls) ಸಹ ಅಪಾಯಕಾರಿ. ಇದಲ್ಲದೇ, ನಿಮ್ಮ ಫೋನ್​ ಕರೆಗಳನ್ನು (Phone call) ಬೇರೊಬ್ಬರು ಕದ್ದು ಕೇಳುತ್ತಿದ್ದಾರೆ ಅಥವಾ ನಿಮ್ಮ ಮೆಸೇಜ್​ಗಳನ್ನು ಓದುತ್ತಿದ್ದಾರೆ ಎಂಬ ಅನುಮಾನ ಇದೆಯೇ? ಹಾಗಾದ್ರೆ, ಈಗಲೇ ನಾವು ತಿಳಿಸುವ ಸಿಂಪಲ್ ಟಿಪ್ಸ್​ ಫಾಲೋ ಮಾಡಿ, ಇದನ್ನು ಸುಲಭವಾಗಿ ಪತ್ತೆ ಹಚ್ಚಿ.

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್​ ಬಳಸುವವರ ಸಂಖ್ಯೆ ಹೆಚ್ಚಾಗಿದೆ. ಚಾಟಿಂಗ್​, ಕರೆ, ಗೇಮ್ಸ್​ ಸೇರಿದಂತೆ ಪ್ರತಿಯೊಂದು ಸೌಲಭ್ಯವನ್ನು ಮೊಬೈಲ್​ನಲ್ಲೇ ಇರುತ್ತದೆ. ಹಾಗಾಗಿ, ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಮೊಬೈಲ್​ ಬಳಕೆ ಹೆಚ್ಚಾಗಿದೆ. ಇತ್ತ, ಮೊಬೈಲ್​ ಹ್ಯಾಕ್​ ಪ್ರಕರಣಗಳೂ ಹೆಚ್ಚು ಬೆಳಕಿಗೆ ಬರುತ್ತಿವೆ.

ಫೋನ್ ಕಾಲ್ ಫಾರ್ವರ್ಡ್ ಆಗಿದೆಯೇ ಎಂದು ತಿಳಿದುಕೊಳ್ಳುವುದು ಹೇಗೆ?

ಅದರಲ್ಲೂ ನಮಗೆ ತಿಳಿಯದ ಹಾಗೆಯೇ ನಮ್ಮ ಕರೆಗಳನ್ನು ಬೇರೊಬ್ಬರು ಕೇಳಿಸಿಕೊಳ್ಳುವುದು. ನಮ್ಮ ಮೆಸೇಜ್​ಗಳನ್ನು ಓದುವುದು ಹೆಚ್ಚಾಗಿದೆ. ನಿಮಗೂ ಇಂತಹ ಅನುಭವ ಆಗಿದ್ದರೆ ಕೂಡಲೇ ಎಚ್ಚೆತ್ತುಕೊಳ್ಳಿ. ಮುಂದೆ ಆಗಬಹುದಾದ ಅನಾಹುತಗಳಿಂದ ಪಾರಾಗಿ. ಹಾಗಿದ್ರೆ, ಮೊಬೈಲ್​ ಮೂಲಕವೇ ನಮ್ಮ ಕರೆ ಫಾರ್ವರ್ಡ್ ಅನ್ನು ಹೇಗೆ ಪತ್ತೆ ಹಚ್ಚಬಹುದು ಅನ್ನೋದನ್ನು ತಿಳಿಯಲು ಮುಂದೆ ಓದಿ.

ಫೋನ್ ಕಾಲ್ ಫಾರ್ವರ್ಡ್ ಆಗಿದೆಯೇ ಎಂದು ತಿಳಿದುಕೊಳ್ಳುವುದು ಹೇಗೆ?

ನಿಮ್ಮ ಫೋನ್ ಕರೆಗಳು ಮತ್ತು ಸಂದೇಶಗಳನ್ನು ಮತ್ತೊಂದು ನಂಬರ್‌ಗೆ ಫಾರ್ವರ್ಡ್ ಮಾಡಲಾಗುತ್ತಿದ್ದರೆ, ಅದನ್ನು ಮೊಬೈಲ್​ನಲ್ಲಿಯೇ ಪತ್ತೆ ಹಚ್ಚಬಹುದು. ಕೂಡಲೇ ಅದನ್ನು ಸ್ಥಗಿತಗೊಳಿಸಬಹುದು. ಮೊದಲು ನಿಮ್ಮ ಮೊಬೈಲ್‌ನಲ್ಲಿ *#21# ಎಂದು ಟೈಪ್ ಮಾಡಿ, ಡಯಲ್ ಮಾಡಿ. ನೀವು ಇದನ್ನು ಮಾಡಿದರೆ, ನಿಮ್ಮ ಮೊಬೈಲ್‌ನಲ್ಲಿ ಕಾಲ್‌ಗಳು ಮತ್ತು ಮೆಸೇಜ್‌ಗಳು ಫಾರ್ವರ್ಡ್ ಮಾಡಲಾಗುತ್ತಿದೆಯೇ? ಅಥವಾ ಇಲ್ಲವೇ? ಎಂದು ಡಿಸ್​ಪ್ಲೇ ಮೇಲೆ ಪ್ರದರ್ಶನವಾಗುತ್ತದೆ. ಈ ಮೂಲಕ ಫಾರ್ವರ್ಡ್ ಬಗ್ಗೆ ಖಚಿತಪಡಿಸಿಕೊಳ್ಳಬಹುದು.

ಕಾಲ್​ ಫಾರ್ವರ್ಡ್​ ಸ್ಟಾಪ್ ಮಾಡುವುದು ಹೇಗೆ?

ನಿಮ್ಮ ಫೋನ್ ಕರೆಗಳು ಮತ್ತು ಸಂದೇಶಗಳನ್ನು ಫಾರ್ವರ್ಡ್ ಮಾಡಲಾಗುತ್ತಿದ್ದರೆ. ಆಯ್ಕೆಯನ್ನು ಸಕ್ರಿಯಗೊಳಿಸಲಾಗಿದೆ ಎಂದು ತೋರಿಸುತ್ತದೆ.
ನಂತರ ತಕ್ಷಣವೇ ಆ ಆಯ್ಕೆಯನ್ನು ರದ್ದುಗೊಳಿಸಿ.
ಇದಕ್ಕಾಗಿ, ನಿಮ್ಮ ಮೊಬೈಲ್‌ ಕೀಪ್ಯಾಡ್‌ನಲ್ಲಿ ##002# ಎಂದು ಟೈಪ್ ಮಾಡಿ, ಡಯಲ್ ಮಾಡಿ.
ಕೂಡಲೇ ಫಾರ್ವರ್ಡ್ ಆಯ್ಕೆ ನಿಷ್ಕ್ರಿಯಗೊಳ್ಳುತ್ತದೆ. ಇದರಿಂದ ಮುಂದೆ ಆಗಬಹುದಾದ ಅನಾಹುತಗಳನ್ನು ತಪ್ಪಿಸಬಹುದು.

ಕಾಲ್ ಫಾರ್ವರ್ಡಿಂಗ್ ಹೇಗೆ ಮಾಡ್ತಾರೆ ಗೊತ್ತಾ?

ನಿಮ್ಮ ಮನೆಗೆ ಯಾರೋ ಅಪರಿಚಿತ ವ್ಯಕ್ತಿಗಳು ಬರಬಹುದು. ಇಲ್ಲವೇ ನಿಮ್ಮ ಮನೆಯಲ್ಲಿ ನಿಮಗೆ ಆಗದವರು ಇರಬಹುದು. ತುರ್ತಾಗಿ ಯಾರಿಗೋ (ಮನೆಯವರಿಗೆ ಅಥವಾ ಸಂಬಂಧಿಕರಿಗೆ) ಕಾಲ್ ಮಾಡಬೇಕು ಮೊಬೈಲ್ ಕೊಡಿ ಅಂತಾರೆ. ನೀವು ಒಂದು ಕ್ಷಣ ಯೋಚಿಸದೇ ಕೂಡಲೇ ಅವರ ಕೈಗೆ ಮೊಬೈಲ್​ ಕೊಡ್ತೀರಿ. ಒಂದು ವೇಳೆ ನಮ್ಮ ಮೊಬೈಲ್ ಪಡೆದ ವ್ಯಕ್ತಿ ವಂಚಕನಾಗಿದ್ದರೆ ಅನಾಹುತ ಕಟ್ಟಿಟ್ಟ ಬುತ್ತಿ. ನಮಗೆ ತಿಳಿಯದಂತೆ ಕ್ಷಣಾರ್ಧದಲ್ಲಿ ನಮ್ಮ ಮೊಬೈಲ್‌ನಲ್ಲಿ ಕಾಲ್ ಮತ್ತು ಮೆಸೇಜ್​​ ಫಾರ್ವರ್ಡ್ ಆಯ್ಕೆ ಆನ್ ಮಾಡ್ತಾರೆ. ಇದರಿಂದ ಸುಲಭವಾಗಿ ನಮ್ಮ ಫೋನ್ ಕಾಲ್‌ಗಳು ಮತ್ತು ಮೆಸೇಜ್‌ಗಳು ಅವರ ಮೊಬೈಲ್‌ಗೆ ಫಾರ್ವರ್ಡ್​ ಆಗುತ್ತವೆ.

ಒಮ್ಮೆ ನೀವು ಚೆಕ್‌ ಮಾಡಬಹುದು

  • ಮೊದಲಿಗೆ ನಿಮ್ಮ ಮೊಬೈಲ್ ಆನ್‌ ಮಾಡಿ
  • ಮೊಬೈಲ್‌ ಕೀ ಪ್ಯಾಡ್‌ನಲ್ಲಿ *401* ಎಂದು ಟೈಪ್ ಮಾಡಿ.
  • ಬಳಿಕ ಬೇರೆಯವರ ಮೊಬೈಲ್ ನಂಬರ್‌ ಟೈಪ್ ಮಾಡಿ ಡಯಲ್ ಮಾಡಿ.
  • ಕೂಡಲೇ ನಿಮ್ಮ ಎಲ್ಲಾ ಕಾಲ್‌ಗಳು ಮತ್ತು ಮೆಸೇಜ್‌ಗಳು ಆ ನಂಬರ್‌ಗೆ ಫಾರ್ವರ್ಡ್ ಆಗುತ್ತವೆ.
  • ಇದರಿಂದ ಕೇವಲ ಸಾಮಾನ್ಯ ಮೆಸೇಜ್‌ಗಳು ಮಾತ್ರವಲ್ಲದೆ, UPI ಮತ್ತು ಬ್ಯಾಂಕ್ ಖಾತೆಗೆ ಸಂಬಂಧಿಸಿದ OTPಗಳು ಆ ನಂಬರ್‌ಗೆ ರ್ವರ್ಡ್ ಆಗುತ್ತವೆ

ಒಟ್ನಲ್ಲಿ, ನಿಮ್ಮ ಫೋನ್ ಕಾಲ್‌ ನಿಮಗೆ ತಿಳಿಯದೆ ಫಾರ್ವರ್ಡ್ ಆಗಬಹುದು. ಇಲ್ಲವೇ, ಕೆಲವು ವ್ಯಕ್ತಿಗಳು ಉದ್ದೇಶಪೂರ್ವಕವಾಗಿ ಮಾಡಿರಬಹುದು. ಆಗಾಗ್ಗೆ ಸೆಟ್ಟಿಂಗ್‌ಗಳನ್ನು ಚೆಕ್‌ ಮಾಡಿಕೊಳ್ಳಿ. ಇಲ್ಲದಿದ್ದರೆ, ವಂಚನೆಗಳಿಗೆ ಗುರಿಯಾಗಬೇಕಾಗುತ್ತದೆ. ಬೇರೊಬ್ಬರು ನಿಮ್ಮ ಫೋನ್ ಕಾಲ್ ಅಥವಾ ಮೆಸೇಜ್‌ ಫಾರ್ವರ್ಡ್ ಮಾಡಿರುವ ಬಗ್ಗೆ ನಿಮಗೇನಾದರೂ ಅನುಮಾನಗಳಿದ್ದರೆ, ನಾವು ಈ ಮೇಲೆ ತಿಳಿಸಿರುವ ಟಿಪ್ಸ್​ ಫಾಲೋ ಮಾಡಿ ಪತ್ತೆ ಹಚ್ಚಿ. ಹ್ಯಾಕರ್​ಗಳಿಂದ ಪಾರಾಗಿ.

Best Mobiles in India

English summary
more people are listening to our calls and reading our messages without our knowledge. So know here how to locate our call forwarding through mobile. and escape from hackers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+