Home
ಟೆಕ್ ನೌಕರಿ

ಗೂಗಲ್‌ ಪೇ ಮೂಲಕ ನಿಮ್ಮ CIBIL ಸ್ಕೋರ್‌ ತಿಳಿಯುವುದು ಹೇಗೆ?

ಇಂದಿನ ದಿನಗಳಲ್ಲಿ ನೀವು ಯಾವುದೇ ಬ್ಯಾಂಕ್‌ನಲ್ಲಿ ಸಾಲ ತೆಗೆದುಕೊಳ್ಳಬೇಕಾದರೆ ನಿಮ್ಮ ಸಿಬಿಲ್‌ ಸ್ಕೋರ್‌ ಉತ್ತಮವಾಗಿರಬೇಕಾಗುತ್ತದೆ. ಜೊತೆಗೆ ಯಾವುದೇ ಕ್ರೆಡಿಟ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಬೇಕಾದರೂ ಕೂಡ ನಿಮ್ಮ ಸಿಬಿಲ್‌ ಸ್ಕೋರ್‌ ಅನ್ನು ಗಮನಿಸಬೇಕಾದ ಅನಿವಾರ್ಯತೆಯಿದೆ. ಅದರಂತೆ ಪ್ರತಿಯೊಬ್ಬರೂ ಸಿಬಿಲ್‌ ಸ್ಕೋರ್‌ ಉತ್ತಮವಾಗಿಟ್ಟುಕೊಳ್ಳಲು ಬಯಸುತ್ತಾರೆ.

ಹೌದು, ಸಿಬಿಲ್‌ ಸ್ಕೋರ್‌ ಉತ್ತಮವಾಗಿಟ್ಟುಕೊಳ್ಳುವುದು ಅನಿವಾರ್ಯವಾಗಿದೆ. ಇನ್ನು ನಿಮ್ಮ ಸಿಬಿಲ್‌ ಸ್ಕೋರ್‌ ಎಷ್ಟಿದೆ ಅಂತಾ ತಿಳಿದುಕೊಳ್ಳುವುದು ತುಂಬಾ ಸುಲಭವಿದೆ. ಇದಕ್ಕಾಗಿ ನೀವು ಜನಪ್ರಿಯ ಯುಪಿಐ ಪಾವತಿ ಅಪ್ಲಿಕೇಶನ್‌ ಗೂಗಲ್‌ ಪೇ ಅನ್ನು ಸಹ ಬಳಸಬಹುದಾಗಿದೆ. ಹಾಗಾದ್ರೆ ಗೂಗಲ್‌ ಪೇ ಮೂಲಕ ನಿಮ್ಮ ಸಿಬಿಲ್‌ ಸ್ಕೋರ್‌ ಚೆಕ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌ ಪೇ ಮೂಲಕ ನಿಮ್ಮ CIBIL ಸ್ಕೋರ್‌ ತಿಳಿಯುವುದು ಹೇಗೆ?

ಗೂಗಲ್‌ ಪೇ ತನ್ನ ಬಳಕೆದಾರರಿಗೆ ಆನ್‌ಲೈನ್‌ ಶಾಪಿಂಗ್‌ ಮಾಡುವುದಕ್ಕೆ, ಬಿಲ್‌ಗಳನ್ನು ಪಾವತಿಸುವುದಕ್ಕೆ, ರೀಚಾರ್ಜ್‌ ಮಾಡುವುದಕ್ಕೆ ಮಾತ್ರವಲ್ಲದೆ ತಮ್ಮ ಬ್ಯಾಂಕ್‌ ಖಾತೆಯಿಂದ ನೇರವಾಗಿ ಹಣ ವರ್ಗಾಯಿಸುವುದಕ್ಕೆ ಕೂಡ ಅವಕಾಶವನ್ನು ನೀಡಿದೆ. ಇದಿಷ್ಟೇ ಅಲ್ಲದೆ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಬಳಕೆದಾರರು ಸುಲಭವಾಗಿ ಸಿಬಿಲ್‌ ಸ್ಕೋರ್‌ ಪರಿಶೀಲಿಸುವುದಕ್ಕೆ ಅವಕಾಶ ನೀಡಿದೆ. ಅಷ್ಟೇ ಅಲ್ಲ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಸುಧಾರಿಸಲು ಏನು ಮಾಡಬಹುದು ಅನ್ನೊದರ ಬಗ್ಗೆ ಶಿಫಾರಸುಗಳನ್ನು ಸಹ ನೀಡಲಿದೆ. ಇದಕ್ಕಾಗಿ ನೀವು ಕೆಳಗಿನ ಹಂತಗಳನ್ನು ಅನುಸರಿಸಿ.

ಗೂಗಲ್‌ ಪೇನಲ್ಲಿ ನಿಮ್ಮ ಸಿಬಿಲ್‌ ಸ್ಕೋರ್‌ ಅನ್ನು ಉಚಿತವಾಗಿ ಪರಿಶೀಲಿಸುವುದು ಹೇಗೆ?
* ಮೊದಲಿಗೆ ನಿಮ್ಮ ಫೋನ್‌ನಲ್ಲಿ ಗೂಗಲ್‌ ಪೇ ಅಪ್ಲಿಕೇಶನ್‌ ತೆರೆಯಿರಿ
* ನಂತರ ಮ್ಯಾನೇಜ್‌ ಯುವರ್‌ ಮನಿ ಟ್ಯಾಬ್‌ (Manage your money tab) ಅನ್ನು ಟ್ಯಾಪ್ ಮಾಡಿರಿ
* ಇದೀಗ ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಟ್ಯಾಪ್ ಮಾಡಿ
* ಇದರಲ್ಲಿ ನಿಮ್ಮ CIBIL ಸ್ಕೋರ್ ಅನ್ನು ಉಚಿತವಾಗಿ ಪರಿಶೀಲಿಸಿ ಆಯ್ಕೆ ಕಾಣಲಿದೆ
* ನಂತರ ನಿಮ್ಮ ಪ್ಯಾನ್ ಕಾರ್ಡ್‌ನಲ್ಲಿರುವಂತೆ ಹೆಸರು ಮತ್ತು ಕೊನೆಯ ಹೆಸರನ್ನು ನಮೂದಿಸಿರಿ.
* ಇದೀಗ ಕಂಟಿನ್ಯೂ ಆಯ್ಕೆಯನ್ನು ಟ್ಯಾಪ್ ಮಾಡಿ
* ನಂತರ ನಿಮ್ಮ ಗುರುತನ್ನು ಪರಿಶೀಲಿಸಲು ನಿಮ್ಮನ್ನು ಕೇಳಲಾಗುತ್ತದೆ
* ಇದರಲ್ಲಿ ನೀವು ನಿಮ್ಮ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ವಿಳಾಸವನ್ನು ನಮೂದಿಸಬೇಕಾಗುತ್ತದೆ
* ಇದೆಲ್ಲವನ್ನು ಮಾಡಿದ ನಂತರ ನಿಮ್ಮ ಸಿಬಿಲ್‌ ಸ್ಕೋರ್‌ ಅನ್ನು ತಿಳಿದುಕೊಳ್ಳಬಹುದಾಗಿದೆ.

ಏನಿದು CIBIL ಸ್ಕೋರ್ ?
ಇಂದು ನೀವು ಯಾವುದೇ ಬ್ಯಾಂಕ್‌ನಿಂದ ಸಾಲ ಪಡೆದುಕೊಳ್ಳಬೇಕಾದರೂ ಕೂಡ ಸಿಬಿಲ್‌ ಸ್ಕೋರ್‌ ಉತ್ತಮವಾಗಿರಬೇಕಾಗುತ್ತದೆ. ಅದರಲ್ಲೂ CIBIL ಸ್ಕೋರ್ 300 ಮತ್ತು 900 ನಡುವಿನ ಮೂರು-ಅಂಕಿಯ ಸಂಖ್ಯೆಯಾಗಿದೆ. ಇದು ನಿಮ್ಮ ಕ್ರೆಡಿಟ್ ಅರ್ಹತೆಯನ್ನು ಪ್ರತಿಬಿಂಬಿಸಲಿದೆ. ಇನ್ನು ಸಿಬಿಲ್‌ ಸ್ಕೋರ್‌ ಅನ್ನು ನಿಮ್ಮ ಕ್ರೆಡಿಟ್ ಖಾತೆಗಳು, ಪಾವತಿ ಇತಿಹಾಸ ಮತ್ತು ವಿಚಾರಣೆಗಳಂತಹ ಮಾಹಿತಿಯ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ.

ಸಿಬಿಲ್‌ ಸ್ಕೋರ್‌ ಎಷ್ಟಿದ್ದರೆ ಉತ್ತಮ?
ಸಾಮಾನ್ಯವಾಗಿ 700 ರಿಂದ 900 ಅಂಕಗಳವರೆಗೆ ಇದ್ರೆ, ಇದನ್ನು ಉತ್ತಮ ಸಿಬಿಲ್ ಸ್ಕೋರ್ ಎನ್ನಲಾಗುತ್ತದೆ. ಇದು ನೀವು ಕ್ರೆಡಿಟ್-ಸಿದ್ಧ ಮತ್ತು ಕ್ರೆಡಿಟ್‌ ಅರ್ಹರು ಸೂಚಿಸುತ್ತದೆ. ಇನ್ನು 600 ಅಂಕಗಳಿಂತ ಕಡಿಮೆ ಇದ್ರೆ, ಇದು ತೀರಾ ಕಡಿಮೆ ಸಿಬಿಲ್ ಸ್ಕೋರ್ ಆಗಿರುತ್ತದೆ.

ಗೂಗಲ್‌ ಪೇ ಮೂಲಕ ನಿಮ್ಮ CIBIL ಸ್ಕೋರ್‌ ತಿಳಿಯುವುದು ಹೇಗೆ?

ಸಿಬಿಲ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಸಿಬಿಲ್‌ ಸ್ಟೋರ್‌ ಚೆಕ್ ಮಾಡುವುದು ಹೇಗೆ?
* ಮೊದಲಿಗೆ ಸಿಬಿಲ್‌ ನ ಅಧಿಕೃತ ವೆಬ್‌ಸೈಟ್‌ಗೆ ಹೋಗಿ.
* ಇದರಲ್ಲಿ 'ನಿಮ್ಮ ಸಿಬಿಲ್‌ ಸ್ಕೋರ್ ಪಡೆಯಿರಿ' ಬಟನ್ ಮೇಲೆ ಟ್ಯಾಪ್‌ ಮಾಡಿ.
* ಇದೀಗ ಹೆಸರು, ಇಮೇಲ್ ಐಡಿ, ಫೋನ್ ಸಂಖ್ಯೆ, ಪಿನ್ ಕೋಡ್, ಜನ್ಮ ದಿನಾಂಕ ಮುಂತಾದ ನಿಮ್ಮ ವೈಯಕ್ತಿಕ ವಿವರಗಳನ್ನು ನಮೂದಿಸಿರ
* ನಂತರ, ನಿಮ್ಮ ಗುರುತಿನ ದಾಖಲೆಗಳನ್ನು ನಮೂದಿಸಿರಿ
* ಇದೀಗ 'ಸ್ವೀಕರಿಸಿ ಮತ್ತು ಮುಂದುವರಿಸಿ' ಕ್ಲಿಕ್ ಮಾಡಿ.
* ಬಳಿಕ, ನಿಮ್ಮ ಮೊಬೈಲ್ ಫೋನ್‌ನಲ್ಲಿ ಓಟಿಪಿ ಅನ್ನು ಸ್ವೀಕರಿಸುತ್ತೀರಿ.
* ಇದೀಗ ಓಟಿಪಿ ಅನ್ನು ನಮೂದಿಸಿ ಹಾಗೂ ಮುಂದುವರಿಸಿ ಆಯ್ಕೆ ಕ್ಲಿಕ್ ಮಾಡಿ.
* ನಂತರ ನೀವು 'ಡ್ಯಾಶ್‌ಬೋರ್ಡ್‌ಗೆ ಹೋಗಿ' ಕ್ಲಿಕ್ ಮಾಡಿ.
* ಇದು ನಿಮ್ಮನ್ನು ವೆಬ್‌ಸೈಟ್‌ಗೆ ಮರುನಿರ್ದೇಶಿಸಲಾಗುತ್ತದೆ - myscore.cibil.com
* 'ಸದಸ್ಯರ ಲಾಗಿನ್' ಆಯ್ಕೆ ಮಾಡಿ.
* ನೀವು ಲಾಗ್ ಇನ್ ಮಾಡಿದ ಬಳಿಕ, ನಿಮ್ಮ ಸಿಬಿಲ್‌ ಸ್ಕೋರ್ ಅನ್ನು ನೀವು ಚೆಕ್‌ ಮಾಡಬಹುದು.

ಮೊದಲ ಸಲ ಸಿಬಿಲ್‌ ಸ್ಕೋರ್‌ ಚೆಕ್‌ ಮಾಡುವವರು ಒದಗಿಸಬೇಕಾದ ಕಡ್ಡಾಯ ಮಾಹಿತಿ
* ನಿಮ್ಮ ಪೂರ್ಣ ಹೆಸರು
* ದೂರವಾಣಿ ಸಂಖ್ಯೆ
* ಇಮೇಲ್ ಐಡಿ ವಿವರ
* PAN ಕಾರ್ಡ್‌ ವಿವರ

Best Mobiles in India

English summary
How to check CIBIL score via Google Pay for free: Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+