'ಉಮಂಗ್' ಆಪ್‌ನಲ್ಲಿ 'ಪಿಎಫ್' ಮಾಹಿತಿ ಪಡೆಯುವುದು ಹೇಗೆ ಗೊತ್ತಾ?

|

ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಮತ್ತು ನ್ಯಾಶನಲ್‌ ಇ-ಗವರ್ನೆನ್ಸ್ ವಿಭಾಗ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಮೊಬೈಲ್‌ ಅಪ್ಲಿಕೇಷನ್ 'ಉಮಂಗ್'ನಲ್ಲಿ ನೀವೀಗ ಭವಿಷ್ಯನಿಧಿ (ಪಿಎಫ್‌) ವಿವರಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದಾದ ಆಯ್ಕೆ ದೊರೆತಿದೆ. ಕೇವಲ ಒಂದೇ ಆಪ್‌ ಮೂಲಕ 100ಕ್ಕೂ ಹೆಚ್ಚು ಸೌಲಭ್ಯಗಳನ್ನು ಪಡೆಯಬಹುದಾಗಿರುವ ಉಮಂಗ್ ಆಪ್‌ನಲ್ಲಿ ಈಗ 'ಇಪಿಎಫ್'ನ ಎಲ್ಲಾ ಸೌಲಭ್ಯಗಳನ್ನು ಸಹ ತರಲಾಗಿದೆ.

ಹೌದು, ಕೇಂದ್ರ ಸರಕಾರ ಬಿಡುಗಡೆಗೊಳಿಸಿರುವ ಉಚಿತ ಜನಪ್ರಿಯ ಮೊಬೈಲ್‌ ಆಪ್‌ 'ಉಮಂಗ್' ಮೂಲಕ ನೀವು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಹಲವು ಯೋಜನೆಗಳ ವಿವರಗಳನ್ನು ಪಡೆಯಬಹುದಾಗಿದ್ದು, ಇದೀಗ ಪ್ರತ್ಯೇಕ ಮೊಬೈಲ್‌ ಆಪ್‌ಗಳನ್ನು ಡೌನ್‌ಲೋಡ್‌ ಮಾಡದೆಯೇ ಪಿಎಫ್ ಮಾಹಿತಿ ಪಡೆಯಬಹುದು. ನಾನಾ ಕಂಪನಿಗಳಲ್ಲಿ ಉದ್ಯೋಗ ಮಾಡಿದ್ದರೂ ಸಹ ನಿಮ್ಮ ಪಿಎಫ್ ಖಾತೆಗೆ ಎಷ್ಟು ಹಣ ಜಮೆಯಾಗಿದೆ ಎಂಬೆಲ್ಲಾ ಮಾಹಿತಿಗಳು ನಿಮಗೆ ಈಗ ಸುಲಭವಾಗಿ ಸಿಗುತ್ತದೆ.

'ಉಮಂಗ್' ಆಪ್‌ನಲ್ಲಿ 'ಪಿಎಫ್' ಮಾಹಿತಿ ಪಡೆಯುವುದು ಹೇಗೆ ಗೊತ್ತಾ?

ಇದಕ್ಕಾಗಿ ನೀವು ಸಕ್ರಿಯವಾದ ಯುಎಎನ್ (ಯುನಿವರ್ಸಲ್ ಅಕೌಂಟ್ ನಂಬರ್‌) ಪಡೆದಿರಬೇಕು ಮತ್ತು ಇದರ ಜೊತೆಗೆ ಇಪಿಎಫ್‌ಒ ಜತೆ ನೋಂದಾಯಿತ ಮೊಬೈಲ್‌ ಸಂಖ್ಯೆ ಹೊಂದಿದ್ದರೆ ಸಾಕಾಗುತ್ತದೆ. ಹೀಗಿದ್ದರೆ ಈ ಸೇವೆ ನಿಮಗೆ ಉಮಂಗ್ ಆಪ್‌ನ ಮೂಲಕ ಲಭ್ಯವಿದೆ. ಹಾಗಾದರೆ, ಮೊಬೈಲ್‌ ಅಪ್ಲಿಕೇಷನ್ 'ಉಮಂಗ್' ಆಪ್‌ನಲ್ಲಿ ಇಪಿಎಫ್ ಬ್ಯಾಲೆನ್ಸ್ ಅನ್ನು ನೋಡಬಹುದಾದ ವಿಧಾನಗಳು ಯಾವುವು ಎಂಬುದನ್ನು ಮುಂದಿನ ಸ್ಲೈಡರ್‌ಗಳ ಮೂಲಕ ಓದಿ ತಿಳಿಯಿರಿ.

ಸ್ಟೆಪ್ 1

ಸ್ಟೆಪ್ 1

ನಿಮ್ಮ ಫೋನ್‌ನಲ್ಲಿ 'ಉಮಂಗ್' ಎಂದು ಟೈಪಿಸಿ ಆಪ್‌ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಿ. ಪ್ಲೇ ಸ್ಟೋರ್‌ಗಳಲ್ಲಿ 'UMANG' ಹುಡುಕಿದರೆ 'ಉಮಂಗ್' ಆಪ್ ಕಾಣಲಿದೆ.

ಸ್ಟೆಪ್ 2

ಸ್ಟೆಪ್ 2

'ಉಮಂಗ್' ಆಪ್ ಡೌನ್‌ಲೋಡ್ ಆದ ನಂತರ ಅದನ್ನು ಇನ್‌ಸ್ಟಾಲ್ ಮಾಡಿಕೊಳ್ಳಿ. ನಂತರ ಆಪ್‌ ಅನ್ನು ತೆರೆದು ಇಪಿಎಫ್‌ಒ ಆಯ್ಕೆಯನ್ನು ಕ್ಲಿಕ್‌ ಮಾಡಿ.

ಸ್ಟೆಪ್ 3

ಸ್ಟೆಪ್ 3

ಇಪಿಎಫ್‌ಒ ಪೇಜ್‌ ತೆರೆದಾಗ ಎಂಪ್ಲಾಯಿ ಅಂಡ್‌ ಎಂಪ್ಲಾಯರ್ ಸೆಂಟ್ರಿಕ್ ಸರ್ವಿಸ್‌, ಜನರಲ್‌ ಸರ್ವಿಸ್ ಅಂಡ್ ಪೆನ್ಷನರ್ ಸರ್ವಿಸ್‌ ಸೌಲಭ್ಯದ ಆಯ್ಕೆಗಳು ಅಲ್ಲಿರುತ್ತವೆ.

ಸ್ಟೆಪ್ 4

ಸ್ಟೆಪ್ 4

ನೀವು 'ಎಂಪ್ಲಾಯಿ ಸೆಂಟ್ರಿಕ್‌ ಸರ್ವಿಸ್' ಅನ್ನು ಕ್ಲಿಕ್‌ ಮಾಡಿ ಮುಂದುವರಿಯಿರಿ.

ಸ್ಟೆಪ್ 5

ಸ್ಟೆಪ್ 5

'ಎಂಪ್ಲಾಯಿ ಸೆಂಟ್ರಿಕ್‌ ಸರ್ವಿಸ್‌' ಅಡಿಯಲ್ಲಿ 'ವ್ಯೂ ಪಾಸ್‌ಬುಕ್‌' ಆಯ್ಕೆಯನ್ನು ಕ್ಲಿಕ್‌ ಮಾಡಿ. ನಿಮ್ಮ ಪಿಎಫ್ ಬ್ಯಾಲೆನ್ಸ್ ವಿವರಗಳನ್ನು ಅದರಲ್ಲಿ ತಿಳಿದುಕೊಳ್ಳಬಹುದು.

ಸ್ಟೆಪ್ 6

ಸ್ಟೆಪ್ 6

ವ್ಯೂವ್ ಪಾಸ್‌ಬುಕ್‌ ಟ್ಯಾಬ್‌ ಅನ್ನು ಕ್ಲಿಕ್‌ ಮಾಡಿದ ನಂತರ, ನಿಮ್ಮ ಯುಎಎನ್ ಸಂಖ್ಯೆಯನ್ನು ನಮೂದಿಸಬೇಕು. ನಂತರ 'ಗೆಟ್‌ ಒಟಿಪಿ' ಒತ್ತಿರಿ.

ಸ್ಟೆಪ್ 7

ಸ್ಟೆಪ್ 7

ನೋಂದಾಯಿತ ಮೊಬೈಲ್‌ನಲ್ಲಿ ಒಟಿಪಿ ಪಡೆಯುವಿರಿ. ನೀವು ಒಟಿಪಿಯನ್ನು ನಮೂದಿಸಿದ ನಂತರ ನಿಮ್ಮೆಲ್ಲ ಇಪಿಎಫ್‌ ಖಾತೆಗಳ ವಿವರ ಪಡೆಯಬಹುದು.

Best Mobiles in India

Read more about:
English summary
How to Check EPF Balance Using UMANG App?. The government of Indias integrated app to access all of its services called the UMANG App allows you to check your EPF balance. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X