ಆಧಾರ್ ಜೊತೆ ಪ್ಯಾನ್‌ ಲಿಂಕ್ ಆಗಿದೆಯೇ ಎಂಬುದನ್ನು ಹೀಗೆ ತಿಳಿಯಿರಿ!

|

ಇದೇ ಮಾರ್ಚ್ 31ರ ಒಳಗೆ ಆಧಾರ್ ಜೊತೆ ಪ್ಯಾನ್‌ ಅನ್ನು ಜೋಡಣೆ ಮಾಡಬೇಕು ಎಂದು ಆದಾಯ ತೆರಿಗೆ ಇಲಾಖೆಯು ಮಾಧ್ಯಮಗಳಿಗೆ ನೀಡಿರುವ ಜಾಹೀರಾತಿನಲ್ಲಿ ತಿಳಿಸಿದೆ. ಆಧಾರ್ ಜೊತೆ ಪ್ಯಾನ್ ಕಾರ್ಡ್ ಜೋಡಣೆ ಮಾಡದೇ ಹೋದರೆ ಪ್ಯಾನ್‌ ಅಮಾನ್ಯವಾಗುವ ಸಾಧ್ಯತೆಗಳು ಇಲ್ಲ ಎಂದು ಹೇಳಲಾಗಿದೆಯಾದರೂ, ಈ ಎರಡನ್ನೂ ಲಿಂಕ್‌ ಮಾಡದೇ ಹೋದರೆ ಹಣಕಾಸು ವ್ಯವಹಾರಗಳಿಗೆ ತೊಡಕಾಗುವ ಸಾಧ್ಯತೆಗಳು ಹೆಚ್ಚಿವೆ ಎಂದು ಹಣಕಾಸು ತಜ್ಷರು ಎಚ್ಚರಿಸಿದ್ದಾರೆ.

ಆಧಾರ್ ಜೊತೆ ಪ್ಯಾನ್‌ ಲಿಂಕ್ ಆಗಿದೆಯೇ ಎಂಬುದನ್ನು ಹೀಗೆ ತಿಳಿಯಿರಿ!

ಈ ಮೊದಲು ಆಧಾರ್ ಮತ್ತು ಪ್ಯಾನ್‌ ಕಾರ್ಡ್ ಜೋಡಣೆಗೆ 2018ರ ಜೂ.30 ಕಡೆಯ ದಿನವಾಗಿತ್ತು. ಆದರೆ, ಈಗ ಆ ಗಡುವನ್ನು ವಿಸ್ತರಿಸಿರುವ ಆದಾಯ ತೆರಿಗೆ ಇಲಾಖೆ ಮಾ.31ಕ್ಕೆ ಮುಂದೂಡಿದೆ. ಒಂದು ವೇಳೆ ನಿಮ್ಮ ಪ್ಯಾನ್‌ ಕಾರ್ಡ್ ಮತ್ತು ಆಧಾರ್ ಈಗಾಗಲೇ ಲಿಂಕ್‌ ಆಗಿದ್ದರೆ, ಅವುಗಳ ಲಿಂಕ್ ಆಗಿರುವ ಮಾಹಿತಿಯನ್ನು ತಿಳಿಯಲು ಆದಾಯ ತೆರಿಗೆ ಇಲಾಖೆ ಅವಕಾಶ ಮಾಡಿಕೊಟ್ಟಿದೆ. ಹಾಗಾದರೆ, ಆಧಾರ್ ಜೊತೆ ಪ್ಯಾನ್ ಲಿಂಕ್ ಆಗಿದೆ ಎಂಬುದನ್ನು ತಿಳಿಯುವುದು ಹೇಗೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಆಧಾರ್ ಜೊತೆ ಪ್ಯಾನ್ ಲಿಂಕ್ ಆಗಿದೆಯೇ? ಸ್ಟೆಪ್ 1

ಆಧಾರ್ ಜೊತೆ ಪ್ಯಾನ್ ಲಿಂಕ್ ಆಗಿದೆಯೇ? ಸ್ಟೆಪ್ 1

ಆಧಾರ್ ಜೊತೆ ಪ್ಯಾನ್ ಲಿಂಕ್ ಆಗಿದೆ ಎಂಬುದನ್ನು ತಿಳಿಯಲು ಆದಾಯ ತೆರಿಗೆ ಇಲಾಖೆಯ ಅಧಿಕೃತ ಇ-ಫೈಲಿಂಗ್ ವೆಬ್‌ಸೈಟ್ ತೆರೆಯಿರಿ (https://www.incometaxindiaefiling.gov.in/)

ಲಿಂಕ್

ಲಿಂಕ್

ವೆಬ್‌ಸೈಟ್‌ನ ತೆರೆದ ನಂತರ ಎಡಭಾಗದಲ್ಲಿರುವ Link Aadhaar ಎನ್ನುವುದನ್ನು ಕ್ಲಿಕ್‌ ಮಾಡಿ. ಆ ಪುಟದಲ್ಲಿ 'ನೀವು ಈಗಾಗಲೇ ಲಿಂಕ್‌ ಮಾಡಿದ್ದರೆ, ಅದನ್ನು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

ಆಧಾರ್ ಜೊತೆ ಪ್ಯಾನ್ ಲಿಂಕ್ ಆಗಿದೆಯೇ? ಸ್ಟೆಪ್ 3

ಆಧಾರ್ ಜೊತೆ ಪ್ಯಾನ್ ಲಿಂಕ್ ಆಗಿದೆಯೇ? ಸ್ಟೆಪ್ 3

Link Aadhaar ಅನ್ನುವುದನ್ನು ಕ್ಲಿಕ್‌ ಮಾಡಿದ ನಂತರ ನಿಮ್ಮ ಪ್ಯಾನ್‌ ಮತ್ತು ಆಧಾರ್ ಸಂಖ್ಯೆಯನ್ನು ಅಲ್ಲಿ ಕೊಟ್ಟಿರುವ ಖಾಲಿ ಬಾಕ್ಸ್‌ಗಳಲ್ಲಿ ಭರ್ತಿ ಮಾಡಿ.

ಆಧಾರ್ ಜೊತೆ ಪ್ಯಾನ್ ಲಿಂಕ್ ಆಗಿದೆಯೇ? ಸ್ಟೆಪ್ 4

ಆಧಾರ್ ಜೊತೆ ಪ್ಯಾನ್ ಲಿಂಕ್ ಆಗಿದೆಯೇ? ಸ್ಟೆಪ್ 4

ನಿಮ್ಮ ಪ್ಯಾನ್‌ ಮತ್ತು ಆಧಾರ್ ಸಂಖ್ಯೆಯನ್ನು ಕ್ಲಿಕ್ ಮಾಡಿದ ನಂತರ View Link Aadhaar Status ಅನ್ನುವುದನ್ನು ಕ್ಲಿಕ್‌ ಮಾಡಿದರೆ ಲಿಂಕ್ ಆಗಿರುವ ಬಗ್ಗೆ ಮಾಹಿತಿ ತಿಳಿಯುತ್ತದೆ.

ಆಧಾರ್ ಜೊತೆ ಪ್ಯಾನ್ ಲಿಂಕ್ ಮಾಡುವುದು ಹೇಗೆ?

ಆಧಾರ್ ಜೊತೆ ಪ್ಯಾನ್ ಲಿಂಕ್ ಮಾಡುವುದು ಹೇಗೆ?

ಒಂದು ವೇಳೆ ನಿಮ್ಮ ಪ್ಯಾನ್‌ ಮತ್ತು ಆಧಾರ್ ಲಿಂಕ್ ಆಗಿರದಿದ್ದರೆ, ನೀವು Link Aadhaar ಆಯ್ಕೆಯಲ್ಲೇ ಕೆಲ ಮಾಹಿತಿಗಳನ್ನು ಭರ್ತಿ ಮಾಡಿ ಪ್ಯಾನ್‌ ಮತ್ತು ಆಧಾರ್ ಲಿಂಕ್ ಮಾಡಬಹುದು.

Best Mobiles in India

English summary
How to Check Your PAN Card is Linked with Aadhaar Card or Not. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X