ಬಳಸಿದ ಐಫೋನ್ ಖರೀದಿಯಲ್ಲಿ, ಕಳ್ಳತನದ್ದೋ/ಇಲ್ಲವೋ ಪತ್ತೆ ಹೇಗೆ?
ಮೊಬೈಲ್ ಖರೀದಿಸುವವರಲ್ಲಿ ಇಂದಿಗೂ ಸಹ ಬಳಸಿದ ಫೋನ್ ಕೊಳ್ಳುವ ವರ್ಗವಿರುವುದನ್ನು ಮರೆಯೋಹಾಗಿಲ್ಲಾ. ಬಳಸಿದ ಫೋನ್ ಕೊಳ್ಳುವವರ ಪಟ್ಟಿಯಲ್ಲಿ ಐಫೋನ್ ಖರೀಸುವವರು ಸಹ ಇದ್ದಾರೆ ಎಂಬುದು ಸಾಮಾನ್ಯ. ಅಂದಹಾಗೆ ನೀವೇನಾದ್ರು ಸೆಕೆಂಡ್ ಹ್ಯಾಂಡ್ ಅಂದ್ರೆ ಬಳಸಿದ ಐಫೋನ್ ಖರೀದಿಸಲು ಹೋದಲ್ಲಿ ಜೋಪಾನ. ಕಾರಣ ಇಂದು ಎಷ್ಟೋ ಜನರು ಬಳಸಿದ ಐಫೋನ್ ಕೊಳ್ಳುವಲ್ಲಿ ಕಳ್ಳತನವಾಗಿರುವ ಐಫೋನ್ ಅನ್ನು ಮಾರಾಟ ಮಾಡುತ್ತಾರೆ. ಕಳ್ಳತನದ ಐಫೋನ್ ಕೊಳ್ಳುವವರಿಗೆ ಅಥವಾ ಮೊದಲೇ ಫೋನ್ ಕಳ್ಳತನವಾದ ಫೋನ್ ಎಂಬುದನ್ನು ಖಚಿತಪಡಿಸಿಕೊಳ್ಳದೇ ಖರೀದಿಸುವುದು ಎಂದಿಗೂ ಸಮಸ್ಯೆ. ಹಾಗಾದ್ರೆ ಫೋನ್ ಕಳ್ಳತನದ್ದೇ ಇಲ್ಲವೋ ಎಂದು ತಿಳಿಯುವುದು ಹೇಗೆ ?
ಯಾವುದೇ ಐಫೋನ್ ಕಳ್ಳತನದ್ದೇ ಇಲ್ಲವೋ ಎಂಬುದನ್ನು ಸರಳವಾಗಿ ಪತ್ತೆ ಹಚ್ಚಲು ಆಪಲ್ "Activation Lock Status Checker" ಎಂಬ ವೆಬ್‌ಸೈಟ್ ಅಭಿವೃದ್ದಿಗೊಳಿಸಿದೆ. ಇದರಿಂದ ಸುಲಭವಾಗಿ ಬಳಸಿದ ಐಫೋನ್ ಖರೀದಿ ಮಾಡುವವರು ಐಫೋನ್ ಕಳ್ಳತನವಾದ ಐಫೋನೋ ಅಥವಾ ಇಲ್ಲವೋ ಎಂಬುದನ್ನು ತಿಳಿಯಬಹುದು. ಅದು ಹೇಗೆ ಎಂದು ಇಂದಿನ ಲೇಖನದಲ್ಲಿ ತಿಳಿಯಿರಿ.

ಕಳವಾದ ಐಫೋನ್ ಪತ್ತೆ ಹೇಗೆ?
ಐಫೋನ್ ಬಳಕೆದಾರರು ತಮ್ಮ ಐಫೋನ್ ಕಳವಾದರೆ ಇತರರು ಬಳಸದಂತೆ ಅದರಲ್ಲಿರುವ ಡೇಟಾ ದುರ್ಬಳಕೆ ಆಗದಂತೆ ಸುರಕ್ಷತೆ ಕಾಪಾಡಿಕೊಳ್ಳಲು "Activation Lock Status Checker" ಅನ್ನು ಅಭಿವೃದ್ದಿ ಪಡಿಸಿದೆ. ಇದರ ಸಹಾಯದಿಂದ ಐಫೋನ್ ಬಳಕೆದಾರ IMEI ಅಥವಾ ಫೋನ್ ಸೀರಿಯಲ್ ನಂಬರ್ ನೀಡಿ "Activation Lock" ಆನ್ ಮಾಡಬಹುದು.

ಕಳವಾದ ಐಫೋನ್ ಪತ್ತೆ ಹೇಗೆ?
ಬಳಸಿದ ಐಫೋನ್ ಕೊಳ್ಳುವವರು ಕಳ್ಳತನ ಫೋನ್ ಹೌದು/ಅಲ್ಲವೋ ಎಂಬುದನ್ನು ಖಚಿತ ಪಡಿಸಿಕೊಳ್ಳಲು "Activation Lock Status Checker" ವೆಬ್‌ಸೈಟ್‌ಗೆ ಭೇಟಿ ನೀಡಿ.

ಕಳವಾದ ಐಫೋನ್ ಪತ್ತೆ ಹೇಗೆ?
Activation Lock Status Checker ಸೈಟ್‌ನಲ್ಲಿ IMEI ಅಥವಾ ಆಪಲ್ ಸೀರಿಯಲ್ ನಂಬರ್ ನೀಡಿ ಎಂಟರ್ ಬಟನ್ ಪ್ರೆಸ್ ಮಾಡಿ. ಆದ Activation Lock: ON ಸ್ಟೇಟಸ್ ಬಂದರೆ ಅದು ಹಿಂದಿನ ಐಫೋನ್ ಮಾಲಿಕನನ್ನು ಸಂಪರ್ಕಸಿ ಎಂದು ಹೇಳುತ್ತದೆ.

ಕಳವಾದ ಐಫೋನ್ ಪತ್ತೆ ಹೇಗೆ?
ಐಫೋನ್ ಹಿಂದಿನ ಮಾಲಿಕ ಯಾವಾಗ Find My iPhone ಫೀಚರ್ ಬಳಸಿದ ತಕ್ಷಣ ಆಟೋಮೆಟಿಕ್ ಆಗಿ Activation Lock ಆನ್ ಆಗುತ್ತದೆ. ಪುನಃ ಅದು ಅವ ನಿಗೆ ಮಾತ್ರ ಫೋನ್ ಮತ್ತೆ ಬಳಸಲು ಅವಕಾಶ ನೀಡುತ್ತದೆ.



Click it and Unblock the Notifications








