ಆನ್‌ಲೈನ್‌ನಲ್ಲಿ PAN Card ಸ್ಟೇಟಸ್ ಚೆಕ್ ಮಾಡುವುದು ಹೇಗೆ?..ಸಂಪೂರ್ಣ ಮಾಹಿತಿ!
ಭಾರತದಲ್ಲಿ ಪ್ಯಾನ್ ಕಾರ್ಡ್ (PAN Card) ಅತ್ಯಂತ ಪ್ರಮುಖ ಗುರುತಿನ ದಾಖಲೆಗಳಲ್ಲಿ ಒಂದಾಗಿದೆ. ಶಾಶ್ವತ ಖಾತೆ ಸಂಖ್ಯೆ (Permanent Account Number) ಎಂಬುದರ ಸಂಕ್ಷಿಪ್ತ ರೂಪವಾಗಿರುವ ಈ ಪ್ರಮುಖ ದಾಖಲೆಯು, ಬ್ಯಾಂಕ್ ಖಾತೆ ತೆರೆಯುವಾಗ, ದೊಡ್ಡ ಮೊತ್ತದ ಹಣಕಾಸು ವ್ಯವಹಾರ ಮಾಡುವಾಗ ಅಥವಾ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವಾಗ ಪ್ಯಾನ್ ಕಾರ್ಡ್ ಕಡ್ಡಾಯವಾಗಿ ಬೇಕಾಗುತ್ತದೆ. ಪ್ಯಾನ್ ಕಾರ್ಡ್ ಅನ್ನು ಭಾರತದಲ್ಲಿನ ನಾಗರಿಕರಿಗೆ ಮಾತ್ರವಲ್ಲದೆ, ಅನಿವಾಸಿ ಭಾರತೀಯರಿಗೆ (NRI) ಹಾಗೂ ವಿದೇಶಿ ನಾಗರಿಕರಿಗೂ ನೀಡಲಾಗುತ್ತದೆ.
ನೀವು ಹೊಸ ಪ್ಯಾನ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದ್ದರೆ ಅಥವಾ ಹಳೆಯದನ್ನು ಮರುಮುದ್ರಿಸಲು (Reprint) ವಿನಂತಿ ಮಾಡಿದ್ದರೆ, ಅದರ ಸ್ಥಿತಿಯನ್ನು( ಸ್ಟೇಟಸ್) ಆನ್‌ಲೈನ್‌ನಲ್ಲಿ ಸುಲಭವಾಗಿ ಪರಿಶೀಲಿಸಬಹುದು. ನೀವು ಆನ್‌ಲೈನಿನಲ್ಲಿ NSDL (National Securities Depository Limited) ಮತ್ತು UTITSL (UTI Infrastructure Technology and Services Limited) ಎಂಬ ಎರಡು ಅಧಿಕೃತ ಸಂಸ್ಥೆಗಳ ಮೂಲಕ ಪ್ಯಾನ್ ಕಾರ್ಡ್ ಸ್ಟೇಟಸ್ ಅನ್ನು ಪರಿಶೀಲಿಸಲು ಸಾಧ್ಯವಿದೆ. ಈ ಕುರಿತ ಸಂಪೂರ್ಣ ಹಂತ--ಹಂತದ ಮಾರ್ಗದರ್ಶಿಯು ಈ ಕೆಳಕಂಡಂತಿದೆ.
NSDL ಮೂಲಕ ಪ್ಯಾನ್ ಕಾರ್ಡ್ ಸ್ಟೇಟಸ್ ಪರಿಶೀಲಿಸುವ ವಿಧಾನ
ಮೊದಲು NSDL PAN ಟ್ರ್ಯಾಕಿಂಗ್ ಪುಟಕ್ಕೆ ಭೇಟಿ ನೀಡಿ.
"Application Type" ವಿಭಾಗದಲ್ಲಿ PAN - New / Change Request ಆಯ್ಕೆಮಾಡಿ.
ನಂತರ ನಿಮ್ಮ Acknowledgement Number ಅನ್ನು ನಮೂದಿಸಿ. ಈ ಸಂಖ್ಯೆ ನಿಮಗೆ NSDL ನಿಂದ ಬಂದ ಇಮೇಲ್‌ನಲ್ಲಿ ದೊರೆಯುತ್ತದೆ.
ಕೆಳಗಿನ Captcha Code ನಮೂದಿಸಿ ಮತ್ತು "Submit" ಬಟನ್ ಒತ್ತಿರಿ.
ಈಗ ನಿಮ್ಮ ಪ್ಯಾನ್ ಕಾರ್ಡ್ ಅರ್ಜಿಯ ಸ್ಥಿತಿ ಪ್ರದರ್ಶಿಸಲಾಗುತ್ತದೆ. ಅದು ಪ್ರಕ್ರಿಯೆಯಲ್ಲಿ ಇದೆಯೋ ಅಥವಾ ಪೂರ್ಣಗೊಂಡಿದೆಯೋ ಎಂಬುದನ್ನು ನೀವು ನೋಡಬಹುದು.

UTITSL ಮೂಲಕ ಪ್ಯಾನ್ ಕಾರ್ಡ್ ಸ್ಟೇಟಸ್ ಪರಿಶೀಲಿಸುವ ವಿಧಾನ
ಮೊದಲು UTITSL PAN ಸ್ಟೇಟಸ್ ಪೇಜ್‌ಗೆ ತೆರಳಿ.
ನಿಮಗೆ ಇಮೇಲ್ ಮೂಲಕ ಬಂದ Application Coupon Number ನಮೂದಿಸಿ.
ಬದಲಿಗೆ ನಿಮ್ಮ ಪ್ಯಾನ್ ಸಂಖ್ಯೆಯನ್ನೂ ಬಳಸಬಹುದು.
Captcha Code ನಮೂದಿಸಿ ಮತ್ತು "Submit" ಕ್ಲಿಕ್ ಮಾಡಿ.
ಈಗ ನಿಮ್ಮ ಅರ್ಜಿಯ ಪ್ರಸ್ತುತ ಸ್ಥಿತಿ - ಪ್ಯಾನ್ ಕಾರ್ಡ್ ಮುದ್ರಣಗೊಂಡಿದೆಯೇ, ರವಾನೆಯಾಗಿದೆಯೇ ಅಥವಾ ಇನ್ನೂ ಪ್ರಕ್ರಿಯೆಯಲ್ಲಿ ಇದೆಯೇ ಎಂಬ ಮಾಹಿತಿ ಕಾಣುತ್ತದೆ.
ಈ ರೀತಿಯಾಗಿ, NSDL ಅಥವಾ UTITSL ಮೂಲಕ ನೀವು ಯಾವುದೇ ಸಮಯದಲ್ಲೂ ನಿಮ್ಮ ಪ್ಯಾನ್ ಕಾರ್ಡ್ ಅರ್ಜಿಯ ಸ್ಥಿತಿಯನ್ನು ಆನ್‌ಲೈನ್‌ನಲ್ಲಿ ಸುಲಭವಾಗಿ ಪರಿಶೀಲಿಸಬಹುದು. ಬ್ಯಾಂಕ್ ಅಥವಾ ಕಚೇರಿಗೆ ಭೇಟಿ ನೀಡುವ ಅಗತ್ಯ ಇಲ್ಲ. ನಿಮ್ಮ ಅರ್ಜಿ ಪೂರ್ಣಗೊಂಡ ನಂತರ, ಹೊಸ ಅಥವಾ ಮರುಮುದ್ರಿತ ಪ್ಯಾನ್ ಕಾರ್ಡ್ ನಿಮ್ಮ ನೋಂದಾಯಿತ ವಿಳಾಸಕ್ಕೆ ಪೋಸ್ಟ್ ಮೂಲಕ ಕಳುಹಿಸಲಾಗುತ್ತದೆ. ಪ್ಯಾನ್ ಕಾರ್ಡ್ ನಿಮ್ಮ ಹಣಕಾಸು ಚಟುವಟಿಕೆಗಳ ಪ್ರಮುಖ ಗುರುತು ಆಗಿರುವುದರಿಂದ, ಅದನ್ನು ಸದಾ ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಅತಿ ಮುಖ್ಯ.


Click it and Unblock the Notifications








