Home
ಟೆಕ್ ನೌಕರಿ

PM-ಕಿಸಾನ್ ಸಮ್ಮಾನ್ ನಿಧಿ ಹಣ ಬಂದಿದೆಯಾ ಎಂದು ತಿಳಿಯಲು ಈ ಕ್ರಮ ಅನುಸರಿಸಿ?

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಯೋಜನೆಗಳಲ್ಲಿ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆ ಕೂಡ ಒಂದು. ರೈತರಿಗೆ ನೆರವಾಗುವ ಈ ಯೋಜನೆಯಡಿಯಲ್ಲಿ ಪ್ರತಿ ವರ್ಷ ಆರು ಸಾವಿರ ರೂ,ಗಳ ಸಹಾಯಧನ ಸಿಗಲಿದೆ. ಆರು ಸಾವಿರ ರೂ,ಗಳನ್ನು ಎರಡು ಸಾವಿರ ರೂ,ಗಳಂತೆ ಮೂರು ಕಂತುಗಳಲ್ಲಿ ನೀಡಲಾಗುತ್ತಿದೆ. ಸದ್ಯ ಕೇಂದ್ರ ಸರ್ಕಾರ ಪಿಎಂ-ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 9 ನೇ ಕಂತನ್ನು ಬಿಡುಗಡೆ ಮಾಡಿದೆ. ಅದರಂತೆ 19,500 ಕೋಟಿ ರೂ,ಗಳನ್ನು ನೇರವಾಗಿ 9.75 ಕೋಟಿಗೂ ಹೆಚ್ಚು ಫಲಾನುಭವಿ ರೈತ ಕುಟುಂಬಗಳ ಖಾತೆಗಳಿಗೆ ವರ್ಗಾಯಿಸಲಾಗಿದೆ. ಪ್ರತಿ PM-Kisan ಖಾತೆಗೆ 2,000ರೂ,ಗಳನ್ನು ವರ್ಗಾಯಿಸಲಾಗಿದೆ.

ಕಿಸಾನ್

ಹೌದು, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 9ನೇ ಕಂತು ಬಿಡುಗಡೆ ಆಗಿದೆ. ಫಲಾನುಭವಿ ರೈತರ ಖಾತೆಗ ನೇರವಾಗಿ ಎರಡು ಸಾವಿರ ರೂ,ಗಳನ್ನು ಜಮೆ ಮಾಡಲಾಗಿದೆ. ಇನ್ನು ನಿಮ್ಮ ಖಾತೆಗೆ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಹಣ ಬಂದಿದೆಯಾ ಅನ್ನೊದನ್ನ ಪರಿಶೀಲಿಸಲು ಬ್ಯಾಂಕ್‌ಗೆ ಹೋಗಬೇಕಾಗುತ್ತದೆ. ಆದರೆ ನೀವು ಬ್ಯಾಂಕ್‌ಗೆ ಹೋಗದೆ ರೈತರು PM ಕಿಸಾನ್‌ ಸಮ್ಮಾನ್ ನಿಧಿ ಯೋಜನೆಯ ಹಣ ಬಂದಿದೆಯಾ ಅನ್ನೊನ್ನ ಮನೆಯಿಂದಲೇ ತಿಳಿಯಬಹುದಾಗಿದೆ. ಇದಕ್ಕಾಗಿ ನೀವು pmkisan.gov.in ಲಿಂಕ್‌ ಅನ್ನು ಬಳಸಬಹುದಾಗಿದೆ. ಹಾಗಾದ್ರೆ ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ಸ್ಟೇಟಸ್‌ ಅನ್ನು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ತಿಳಿಯುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಮುಂದೆ ಓದಿರಿ.

PM ಕಿಸಾನ್ ಸಮ್ಮಾನ್ ನಿಧಿ ಫಲಾನುಭವಿ ಸ್ಟೇಟಸ್‌ ಅನ್ನು ಪರಿಶೀಲಿಸುವುದು ಹೇಗೆ?

PM ಕಿಸಾನ್ ಸಮ್ಮಾನ್ ನಿಧಿ ಫಲಾನುಭವಿ ಸ್ಟೇಟಸ್‌ ಅನ್ನು ಪರಿಶೀಲಿಸುವುದು ಹೇಗೆ?

ಹಂತ:1 PM ಕಿಸಾನ್ ಸಮ್ಮಾನ್‌ ನಿಧಿ ಸ್ಟೇಟಸ್‌ ಪರಿಶೀಲಿಸಲು https://pmkisan.gov.in/beneficiarystatus.aspx ಲಿಂಕ್‌ ತೆರೆಯಿರಿ.
ಹಂತ:2 ನಿಮ್ಮ PM ಕಿಸಾನ್ ಸಮ್ಮಾನ್ ನಿಧಿ ಫಲಾನುಭವಿ ಸ್ಟೇಟಸ್‌ ಅನ್ನು ಪರೀಕ್ಷಿಸಲು ಆಧಾರ್ ಸಂಖ್ಯೆ, ಖಾತೆ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆ ಅಗತ್ಯವಿದೆ.
ಹಂತ:3 ಲಿಂಕ್ ನಲ್ಲಿ, ನಿಮಗೆ ಬೇಕಾದ ಟ್ಯಾಬ್ ಅನ್ನು ಆರಿಸಿ ಮತ್ತು ಅದರ ಮೇಲೆ ಕ್ಲಿಕ್ ಮಾಡಿ. ನಿಮ್ಮ ಆಧಾರ್ ಸಂಖ್ಯೆ, ಖಾತೆ ಸಂಖ್ಯೆ, ಮೊಬೈಲ್ ಸಂಖ್ಯೆ ನಮೂದಿಸಿ.
ಹಂತ:4 'ಡೇಟಾ ಪಡೆಯಿರಿ' ಮೇಲೆ ಟ್ಯಾಪ್ ಮಾಡಿ.

ಈ ಮೂಲಕ ನಿಮ್ಮ ಖಾತೆಗೆ ಫ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಬಂದಿದೆಯಾ ಇಲ್ಲವೇ ಅನ್ನೊದರ ಬಗ್ಗೆ ತಿಳಿದುಕೊಳ್ಳಬಹುದಾಗಿದೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆ ವಿಶೇಷತೆ ಏನು?

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆ ವಿಶೇಷತೆ ಏನು?

* ಈ ಯೋಜನೆಯನ್ನು ಕೇಂದ್ರ ಸರ್ಕಾರವು ಫೆಬ್ರವರಿ 2019 ರಲ್ಲಿ ಘೋಷಿಸಿದೆ.
* ಡಿಸೆಂಬರ್ 2018-ಮಾರ್ಚ್ 2019 ರ ಅವಧಿಗೆ ಮೊದಲ ಕಂತನ್ನು ಬಿಡುಗಡೆ ಮಾಡಲಾಗಿದೆ.
* ಕಿಸಾನ್‌ ಸಮ್ಮಾನ್‌ ನಿಧಿಯನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ.
* ಇತ್ತೀಚಿನ ಪಾವತಿಯೊಂದಿಗೆ, ಸರ್ಕಾರವು ಇದುವರೆಗೆ ಸುಮಾರು 7 1.57 ಲಕ್ಷ ಕೋಟಿಗಳನ್ನು ರೈತರಿಗೆ ವರ್ಗಾಯಿಸಿದೆ.

ಹಣ

ಇನ್ನು ಒಂಬತ್ತನೇ ಕಂತಿನ ಹಣವನ್ನು ಬಿಡುಗಡೆ ಮಾಡಿದ ನಂತರ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಖಾರಿಫ್ ಬೆಳೆಗಳ ಬಿತ್ತನೆ ಉತ್ತುಂಗದಲ್ಲಿದ್ದ ಸಮಯದಲ್ಲಿ ಈ ಮೊತ್ತವು ಸಣ್ಣ ರೈತರಿಗೆ ಉಪಯುಕ್ತವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅಲ್ಲದೆ "ಮುಂಬರುವ 25 ವರ್ಷಗಳಲ್ಲಿ ನಾವು ಭಾರತವನ್ನು ಎಲ್ಲಿ ನೋಡಬೇಕೆಂಬುದನ್ನು ನಿರ್ಧರಿಸಲು ನಾವು ಈ ಅವಕಾಶವನ್ನು ಬಳಸಿಕೊಳ್ಳಬೇಕು ಅನ್ನೊದನ್ನ ಪ್ರಧಾನ ಮಂತ್ರಿ ಹೇಳಿಕೊಂಡಿದ್ದಾರೆ. ಇನ್ನು ದೇಶವು ಸ್ವಾತಂತ್ರ್ಯದ 100 ವರ್ಷಗಳನ್ನು ಪೂರೈಸಿದಾಗ, 2047 ರಲ್ಲಿ ಭಾರತದ ಸ್ಥಿತಿಯನ್ನು ನಿರ್ಧರಿಸುವಲ್ಲಿ ನಮ್ಮ ಕೃಷಿ ಮತ್ತು ನಮ್ಮ ರೈತರು ದೊಡ್ಡ ಪಾತ್ರವನ್ನು ಹೊಂದಿರುತ್ತಾರೆ ಅನ್ನೊ ಅಭಿಪ್ರಾಯವನ್ನು ಮೋದಿ ವ್ಯಕ್ತಪಡಿಸಿದ್ದಾರೆ.

Best Mobiles in India

English summary
During the event, where PM Modi transferred the funds, he also interacted with many beneficiaries of the government's schemes including PM-KISAN and ₹1 lakh crore agriculture infrastructure fund.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+