ಆಂಟಿವೈರಸ್ ವರ್ಕ್‌ ಆಗುತ್ತಿದೆಯೋ, ಇಲ್ಲವೋ: ಚೆಕ್‌ ಮಾಡುವುದು ಹೇಗೆ?

Written By:

ಕಂಪ್ಯೂಟರ್‌ ಮತ್ತು ಲ್ಯಾಪ್‌ಟಾಪ್‌ ಬಳಸುವವರು ತಮ್ಮ ಡಿವೈಸ್‌ಗಳ ಸುರಕ್ಷತೆಗಾಗಿ ಆಂಟಿವೈರಸ್‌(Antivirus) ಬಳಸುವುದು ಅಗತ್ಯ ಚಟುವಟಿಕೆಯಾಗಿದೆ. ಸಿಸ್ಟಮ್‌ಗಳಲ್ಲಿನ ವೈರಸ್‌ ಪತ್ತೆ ಹಚ್ಚಿ ವೈರಸ್‌ ಹೋಗಲಾಡಿಸುವ ಕೆಲಸವನ್ನು ಆಂಟಿವೈರಸ್‌ ಹೋಗಲಾಡಿಸುತ್ತವೆ. ಸಮಸ್ಯೆ ಏನಪ್ಪಾ ಅಂದ್ರೆ ಕೆಲವರ ಸಿಸ್ಟಮ್‌ನಲ್ಲಿ ಆಂಟಿವೈರಸ್ ಇದ್ದರು ಸಹ ವೈರಸ್‌ಗಳು ಮಾತ್ರ ಹೋಗದೇ, ಡಿವೈಸ್‌ಗಳಿಗೆ ದಿನದಿಂದ ದಿನಕ್ಕೆ ಸಮಸ್ಯೆಯನ್ನು ಹೆಚ್ಚು ಮಾಡುತ್ತಿರುತ್ತವೆ.


ಓದರಿ:'ಪಾನ್‌ ಕಾರ್ಡ್‌'ಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಹೇಗೆ?

ಹೌದು, ಇದು ನಿಜವೂ ಹೌದು. ಕಂಪ್ಯೂಟರ್‌ ಮತ್ತು ಲ್ಯಾಪ್‌ಟಾಪ್‌ ಬಳಕೆದಾರರಿಗೆ ಆಂಟಿವೈರಸ್‌ ಬಳಸುವುದು ಗೊತ್ತೇ ವಿನಃ, ಅದು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆಯೇ ಎಂಬುದನ್ನು ತಿಳಿಯಲು ಮಾತ್ರ ಗೊತ್ತಿಲ್ಲಾ. ಆದ್ದರಿಂದ ಇಂದು ಗಿಜ್‌ಬಾಟ್‌ ಕಂಪ್ಯೂಟರ್‌ ಮತ್ತು ಲ್ಯಾಪ್‌ಟಾಪ್‌ಗಳಲ್ಲಿ ಆಂಟಿವೈರಸ್ ವೈರಸ್‌ಗಳನ್ನು ಪತ್ತೆ ಹಚ್ಚಲು ಸಾಮರ್ಥ್ಯ ಹೊಂದಿದೆಯೇ ಮತ್ತು ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ತಿಳಿಯಲು ಸರಳ ಸಲಹೆಗಳನ್ನು ನೀಡುತ್ತಿದೆ. ಕೇವಲ ನೋಟ್‌ಪ್ಯಾಡ್‌ ಮೂಲಕ ಆಂಟಿವೈರಸ್‌ ಕೆಲಸ ಮಾಡುತ್ತಿದೆಯೇ, ಇಲ್ಲವೋ ಎಂದು ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹಂತ 1

ಹಂತ 1

ಆಂಟಿವೈರಸ್ ಪರಿಶೀಲನೆ

ನಿಮ್ಮ ಸಿಸ್ಟಮ್‌ನಲ್ಲಿ Start ಮೇಲೆ ಕ್ಲಿಕ್‌ ಮಾಡಿ. Notepad ಎಂದು ಟೈಪ್‌ ಮಾಡಿ ಎಂಟರ್‌ ಮಾಡಿ.

ಹಂತ 2

ಹಂತ 2

ಆಂಟಿವೈರಸ್ ಪರಿಶೀಲನೆ

ನೋಟ್‌ಪ್ಯಾಡ್‌ ಓಪನ್‌ ಆದ ನಂತರ ಈ X5O!P%@AP[4PZX54(P^)7CC)7}$TECHHACKS-ANTIVIRUS-TEST-FILE!$H+H*ಕೋಡ್‌ ಅನ್ನು ನೋಟ್‌ಪ್ಯಾಡ್‌ನಲ್ಲಿ ಪೇಸ್ಟ್‌ ಮಾಡಿ.

 ಹಂತ 3

ಹಂತ 3

ಆಂಟಿವೈರಸ್ ಪರಿಶೀಲನೆ

ಈಗ ಈ ಪೈಲ್‌ ಅನ್ನು Techviral Antivirus Testing File.exe ಎಂದು ಸೇವ್‌ (save) ಮಾಡಿ.

ಹಂತ 4

ಹಂತ 4

ಆಂಟಿವೈರಸ್ ಪರಿಶೀಲನೆ

ಹಂತ 3 ರಲ್ಲಿ ಸೇವ್ ಮಾಡಿದ ಫೈಲ್‌ ಅನ್ನು ನಿಮ್ಮ ಆಂಟಿವೈರಸ್‌ನಲ್ಲಿ ಸ್ಕ್ಯಾನ್‌ ಮಾಡಿ. ಆಂಟಿವೈರಸ್‌ ಪತ್ತೆ ಮಾಡಿತೆ ಎಂಬುದನ್ನು ಪರೀಕ್ಷಿಸಿ. ಆಂಟಿವೈರಸ್ ಆ ಫೈಲ್‌ ಅನ್ನು ಪತ್ತೆ (detect) ಮಾಡಿದರೆ ಸರಿಯಾಗಿ ಕೆಲಸ ಮಾಡುತ್ತಿದೆ ಎಂದರ್ಥ. ಪತ್ತೆ ಮಾಡದಿದ್ದಲ್ಲಿ ಶೀಘ್ರವಾಗಿ ನೀವು ಆಂಟಿವೈರಸ್‌ ಅನ್ನು ಬದಲಾವಣೆ ಮಾಡಬೇಕಾಗುತ್ತದೆ.
ಆಂಟಿವೈರಸ್‌ ಕಾರ್ಯ ದಕ್ಷತೆ ಪರಿಶೀಲನೆ ಹೇಗೆ?

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ನ ಲೇಖನಗಳನ್ನು ಫೇಸ್‌ಬುಕ್‌ನಲ್ಲಿ ಓದಲು ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ವೆಬ್‌ಸೈಟ್‌ ಗಿಜ್‌ಬಾಟ್‌.ಕನ್ನಡ.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
How To Check Whether Your Antivirus Working Perfectly Or Not. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot