ಆನ್‌ಲೈನ್‌ ಮೂಲಕ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸುವುದು ಹೇಗೆ?

|

ಭಾರತದಲ್ಲಿ ಹದಿನೆಂಟು ವರ್ಷ ತುಂಬಿದ ಪ್ರತಿಯೊಬ್ಬರೂ ಕೂಡ ಮತದಾನದ ಹಕ್ಕನ್ನು ಪಡೆಯಲು ಅರ್ಹರಾಗಿರುತ್ತಾರೆ. ಹದಿನೆಂಟು ವರ್ಷ ತುಂಬಿದ ನಾಗರೀಕರು ಮತದಾನ ಮಾಡುವುದಕ್ಕಾಗಿ ವೊಟರ್‌ ಐಡಿಯನ್ನು ನೀಡಲಾಗುತ್ತದೆ. ಈ ವೋಟರ್‌ ಐಡಿ ಮತದಾನ ಮಾಡುವಾಗ ಮಾತ್ರವಲ್ಲ ಸರ್ಕಾರದ ಸೌಲಭ್ಯಗಳನ್ನು ಪಡೆಯುವುದಕ್ಕೂ ಪ್ರಮುಖ ದಾಖಲೆಯಾಗಿ ಬಳಸಬಹುದಾಗಿದೆ. ಇನ್ನು ಭಾರತದಂತಹ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ ಸ್ಥಳೀಯ ಮಟ್ಟದ ಚುನಾವಣೆಗಳಿಂದ ಹಿಡಿದು, ರಾಷ್ಟ್ರಮಟ್ಟದ ಚುನಾವಣೆಗಳು ಕಾಲಕಾಲಕ್ಕೆ ನಡೆಯುತ್ತಲೇ ಇರುತ್ತವೆ. ಆದರಿಂದ ಭಾರತ ಸರ್ಕಾರ ಕೂಡ ಮತದಾರರ ಚೀಟಿ ಪಡೆಯುವುದಕ್ಕೆ ಹಲವು ಅನುಕೂಲಕರ ವ್ಯವಸ್ಥೆಯನ್ನು ಸಹ ಮಾಡಿದೆ.

ವೋಟರ್‌ ಐಡಿ

ಹೌದು, ವೋಟರ್‌ ಐಡಿ ಭಾರತದ ಚುನಾವಣಾ ಆಯೋಗ ಮತ ​​ಚಲಾಯಿಸಲು ಅರ್ಹರಾಗಿರುವ ಎಲ್ಲ ವ್ಯಕ್ತಿಗಳಿಗೆ ನೀಡಿದ ಫೋಟೋ ಗುರುತಿನ ಚೀಟಿಯಾಗಿದೆ. ಚುನಾವಣೆಯ ಸಮಯದಲ್ಲಿ, ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರ ಪಟ್ಟಿಯನ್ನು ತಯಾರಿಸುವುದು ಸವಾಲಿನ ಕೆಲಸವಾಗಿದೆ. ಮತದಾನಕ್ಕೆ ಅರ್ಹರಾದವರನ್ನು ನೋಂದಾಯಿಸುವ ಕೆಲಸವನ್ನು ಮಾಡುತ್ತಲೇ ಬಂದಿದೆ. ಅಲ್ಲದೆ ಚುನಾವಣೆಯ ಸಮಯದಲ್ಲಿ ಮತದಾನದ ಹಕ್ಕನ್ನು ಕಳೆದುಕೊಳ್ಳದಂತೆ ಮಾಡುತ್ತಾ ಬಂದಿದೆ. ಇದಕ್ಕಾಗಿ ಇತ್ತಿಚಿನ ದಿನಗಳಲ್ಲಿ ಆನ್‌ಲೈನ್‌ ಮೂಲಕವೂ ವೋಟರ್‌ ಐಡಿ ಪಡೆಯುವ ಹಾಗೂ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸುವುದಕ್ಕೆ ಅವಕಾಶ ಕಲ್ಪಿಸಿದೆ. ಹಾಗಾದ್ರೆ ಆನ್‌ಲೈನ್‌ ಮೂಲಕ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆನ್‌ಲೈನ್‌ ಮೂಲಕ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸುವುದು ಹೇಗೆ?

ಆನ್‌ಲೈನ್‌ ಮೂಲಕ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸುವುದು ಹೇಗೆ?

ಹಂತ:1 ಮೊದಲಿಗೆ ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್ (NVSP) ವೆಬ್‌ಸೈಟ್‌ಗೆ ಭೇಟಿ ನೀಡಿ.
ಹಂತ:2 ಇದರಲ್ಲಿ ನೀವು ಅಧಿಕೃತ ವೆಬ್‌ಸೈಟ್ ಅನ್ನು ತೆರೆಯಬೇಕು.
ಹಂತ:3 ಇಲ್ಲಿ ಮೇನ್‌ ಪೇಜ್‌ನಲ್ಲಿ ಎಲೆಕ್ಟ್ರೋಲ್‌ ರೋಲ್‌ ಸರ್ಚ್‌ ಆಯ್ಕೆ ಲಭ್ಯವಾಗಲಿದೆ.
ಹಂತ:4 ನೀವು ಆ ಆಯ್ಕೆಯನ್ನು ಕ್ಲಿಕ್ ಮಾಡಿದರೆ ಹೊಸ ವೆಬ್‌ಪೇಜ್‌ ತೆರೆಯುತ್ತದೆ. ಇದರಲ್ಲಿ ನೀವು ನಿಮ್ಮ ಮಾಹಿತಿಯನ್ನು ನಮೂದಿಸಬೇಕು.
ಹಂತ:5 ನಂತರ, ಹೊಸ ವೆಬ್‌ಪೇಜ್‌ ಮತದಾರರ ಪಟ್ಟಿಯಲ್ಲಿ ಹೆಸರನ್ನು ಪರಿಶೀಲಿಸಲು ಎರಡು ಮಾರ್ಗಗಳನ್ನು ತೋರಿಸುತ್ತದೆ.
ಹಂತ:6 ಇದರಲ್ಲಿ ಮೊದಲ ಆಯ್ಕೆ ನೀವು ನಿಮ್ಮ ಹೆಸರು, ತಂದೆಯ / ಗಂಡನ ಹೆಸರು, ವಯಸ್ಸು, ಹುಟ್ಟಿದ ದಿನಾಂಕ ಮತ್ತು ಲಿಂಗವನ್ನು ನಮೂದಿಸಬೇಕು. ಈ ಮಾಹಿತಿಯನ್ನು ನಮೂದಿಸಿದ ನಂತರ, ನೀವು ನಿಮ್ಮ ರಾಜ್ಯ, ಜಿಲ್ಲೆ ಮತ್ತು ವಿಧಾನಸಭಾ ಕ್ಷೇತ್ರವನ್ನು ನಮೂದಿಸುವ ಮೂಲಕ ಪರಿಶೀಲಿಸಬಹುದು.
ಹಂತ:7 ಇನ್ನೊಂದು ಆಯ್ಕೆಯೆಂದರೆ EPIC ಸಂಖ್ಯೆಯ ಮೂಲಕ ಹುಡುಕುವುದು. ಈ ಪ್ರಕ್ರಿಯೆಯಲ್ಲಿ, ನೀವು ನಿಮ್ಮ EPIC ಸಂಖ್ಯೆ ಮತ್ತು ಸ್ಟೇಟಸ್‌ ಅನ್ನು ನಮೂದಿಸಬೇಕು.
ಹಂತ:8 ಈ ಎರಡೂ ಆಯ್ಕೆಗಳಲ್ಲಿ ವಿವರವನ್ನು ನಮೂದಿಸಿದ ನಂತರ, ಕೊನೆಯಲ್ಲಿ ಕ್ಯಾಪ್ಚಾ ಕೋಡ್ ಅನ್ನು ನಮೂದಿಸುವ ಮೂಲಕ ವೆಬ್‌ಸೈಟ್‌ನಲ್ಲಿ ಈ ಮಾಹಿತಿಯನ್ನು ಅಧಿಕೃತಗೊಳಿಸಬೇಕು.
ಹಂತ:9 ಈ ಮಾಹಿತಿಯು ಪೂರ್ಣಗೊಂಡ ನಂತರ, ವೆಬ್‌ಪೇಜ್‌ ನಿಮಗೆ ಮತದಾರರ ನೋಂದಣಿ ವಿವರಗಳನ್ನು ತೋರಿಸುತ್ತದೆ.

SMS ಮೂಲಕ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸುವುದು ಹೇಗೆ?

SMS ಮೂಲಕ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸುವುದು ಹೇಗೆ?

ಹಂತ:1 ಮೊಬೈಲ್ ಸಂದೇಶ ವಿಭಾಗದಲ್ಲಿ EPIC ಎಂದು ಟೈಪ್‌ ಮಾಡಿ.
ಹಂತ:2 ಈಗ ನಿಮ್ಮ ಮತದಾರರ ಗುರುತಿನ ಚೀಟಿ ಸಂಖ್ಯೆಯನ್ನು ಟೈಪ್ ಮಾಡಿ
ಹಂತ:3 ಈ SMS ಅನ್ನು 9211728082 ಅಥವಾ 1950 ಗೆ ಕಳುಹಿಸಿ.
ನೀವು ಸಂದೇಶವನ್ನು ಕಳುಹಿಸಿದ ನಂತರ ನಿಮ್ಮ ಮತಗಟ್ಟೆ ಸಂಖ್ಯೆ ಮತ್ತು ಹೆಸರು ಪ್ರತ್ಯುತ್ತರವಾಗಿ ಬರುತ್ತದೆ. ಒಂದು ವೇಳೆ ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲದೇ ಹೋದರೆ ನಿಮಗೆ ಯಾವುದೇ ರೀತಿಯ ದಾಖಲೆಗಳ ಉತ್ತರ ಬರುವುದಿಲ್ಲ.

ಆನ್‌ಲೈನ್‌ನಲ್ಲಿ ನಿಮ್ಮ ವೋಟರ್‌ ಐಡಿಯನ್ನು ಡೌನ್‌ಲೋಡ್ ಮಾಡುವುದು ಹೇಗೆ?

ಆನ್‌ಲೈನ್‌ನಲ್ಲಿ ನಿಮ್ಮ ವೋಟರ್‌ ಐಡಿಯನ್ನು ಡೌನ್‌ಲೋಡ್ ಮಾಡುವುದು ಹೇಗೆ?

ಹಂತ:1. NVSP ಸೈಟ್‌ಗೆ ಹೋಗಿ, ಲಾಗಿನ್ / ರಿಜಿಸ್ಟರ್ ಕ್ಲಿಕ್ ಮಾಡಿ. ನೋಂದಣಿಗಾಗಿ, ಒಟಿಪಿ ಮತ್ತು ಇತರ ಮೂಲ ವಿವರಗಳನ್ನು ಬಳಸಿಕೊಂಡು ನಿಮ್ಮ ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಲು ನಿಮ್ಮನ್ನು ಕೇಳಲಾಗುತ್ತದೆ. ನೋಂದಣಿ ಪ್ರಕ್ರಿಯೆಯನ್ನು ಮುಗಿಸಿ.
ಹಂತ:2. ನೋಂದಾಯಿಸಿದ ನಂತರ ಅಥವಾ ಲಾಗಿನ್ ಆದ ನಂತರ, ಮುಖಪುಟದಲ್ಲಿ ಇ-ಎಪಿಕ್ ಡೌನ್‌ಲೋಡ್ ಆಯ್ಕೆಯನ್ನು ಕ್ಲಿಕ್ ಮಾಡಿ. ಇಪಿಐಸಿ ಎಂದರೆ ಚುನಾವಣಾ ಫೋಟೋ ಗುರುತಿನ ಚೀಟಿ. ಹಂತ:3. ನಿಮ್ಮ ಇಪಿಐಸಿ ಸಂಖ್ಯೆ ಅಥವಾ ಫಾರ್ಮ್ ಉಲ್ಲೇಖ ಸಂಖ್ಯೆಯನ್ನು ಸೈಟ್ ಕೇಳುತ್ತದೆ. ನಿಮಗೆ ತಿಳಿದಿರುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ನೀವು ಸೇರಿರುವ ರಾಜ್ಯವನ್ನು ಆಯ್ಕೆ ಮಾಡಿ ಮತ್ತು ಹುಡುಕಾಟದ ಮೇಲೆ ಕ್ಲಿಕ್ ಮಾಡಿ.
ಹಂತ:4. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾದ ಒಟಿಪಿ ಮೂಲಕ ಮತ್ತೊಮ್ಮೆ ಪರಿಶೀಲಿಸಿ.
ಹಂತ:5. ಡೌನ್‌ಲೋಡ್ ಇ-ಇಪಿಐಸಿ ಕ್ಲಿಕ್ ಮಾಡುವ ಮೂಲಕ ನಿಮ್ಮ ಮತದಾರರ ಗುರುತಿನ ಚೀಟಿಯನ್ನು ಡೌನ್‌ಲೋಡ್ ಮಾಡಿ. ಮತದಾರರ ಗುರುತಿನ ದಾಖಲೆಯ ಪುರಾವೆಯಾಗಿ ಇದು ಮಾನ್ಯವೆಂದು ಪರಿಗಣಿಸಲಾಗಿದೆ. ಆದರೆ, ಈಗಿನಂತೆ, ಇದು 2020 ರ ನವೆಂಬರ್ ನಂತರ ನೋಂದಾಯಿಸಿದ ಹೊಸ ಮತದಾರರಿಗೆ ಮಾತ್ರ.

ಆನ್‌ಲೈನ್‌ ಮೂಲಕ ನಿಮ್ಮ ವೋಟರ್ ಐಡಿ ಕಾರ್ಡ್‌ ವಿಳಾಸವನ್ನು ಬದಲಾಯಿಸುವುದು ಹೇಗೆ?

ಆನ್‌ಲೈನ್‌ ಮೂಲಕ ನಿಮ್ಮ ವೋಟರ್ ಐಡಿ ಕಾರ್ಡ್‌ ವಿಳಾಸವನ್ನು ಬದಲಾಯಿಸುವುದು ಹೇಗೆ?

ಹಂತ:1 ಮೊದಲಿಗೆ ನೀವು www.nvsp.in ನಲ್ಲಿ ರಾಷ್ಟ್ರೀಯ ಮತದಾರರ ಸೇವೆಗಳ ಪೋರ್ಟಲ್‌ಗೆ ಲಾಗ್ ಇನ್ ಮಾಡಿ
ಹಂತ:2 ನಂತರ ಹೊಸ ಮತದಾರರ ನೋಂದಣಿ ಅಥವಾ AC ಯಿಂದ AC ಗೆ ವರ್ಗಾವಣೆಗಾಗಿ ಆನ್‌ಲೈನ್ ಅರ್ಜಿಯ ಅಡಿಯಲ್ಲಿ ನೀವು ಫಾರ್ಮ್ 6 ಅನ್ನು ಕ್ಲಿಕ್ ಮಾಡಬೇಕಾಗುತ್ತದೆ.
ಹಂತ:3 ನೀವು ಅದೇ ಕ್ಷೇತ್ರದೊಳಗೆ ಒಂದು ನಿವಾಸದಿಂದ ಇನ್ನೊಂದಕ್ಕೆ ಸ್ಥಳಾಂತರಗೊಂಡಿದ್ದರೆ, ಫಾರ್ಮ್ 8A ಕ್ಲಿಕ್ ಮಾಡಬೇಕಾಗುತ್ತದೆ.
ಹಂತ:4 ನಂತರ ನಿಮ್ಮ ಹೆಸರು, ಹುಟ್ಟಿದ ದಿನಾಂಕ, ರಾಜ್ಯ, ಕ್ಷೇತ್ರ, ಪ್ರಸ್ತುತ ಶಾಶ್ವತ ವಿಳಾಸ ಸೇರಿದಂತೆ ಅಗತ್ಯವಿರುವ ಎಲ್ಲಾ ವಿವರಗಳನ್ನು ಇಲ್ಲಿ ಭರ್ತಿ ಮಾಡಿ.
ಹಂತ:5 ಇಮೇಲ್ ವಿಳಾಸ ಮತ್ತು ಮೊಬೈಲ್ ಸಂಖ್ಯೆಯಂತಹ ಕೆಲವು ವಿವರಗಳು ಐಚ್ಛಿಕವಾಗಿದ್ದು, ನಿಮ್ಮ ಬಳಿಯಿದ್ದರೆ ತುಂಬಿರಿ.
ಹಂತ:6 ಭಾವಚಿತ್ರ, ವಿಳಾಸ ಪುರಾವೆ ಮತ್ತು ವಯಸ್ಸಿನ ಪುರಾವೆ ಸೇರಿದಂತೆ ಎಲ್ಲಾ ಮೂಲ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
ಹಂತ:7 ನಂತರ ಅಪ್‌ಲೋಡ್ ಮಾಡಿದ ಎಲ್ಲಾ ದಾಖಲೆಗಳೊಂದಿಗೆ ಫಾರ್ಮ್ ಅನ್ನು ಆನ್‌ಲೈನ್‌ನಲ್ಲಿ ಸಬ್ಮಿಟ್‌ ಮಾಡಿ.
ಹಂತ:8 ಈಗ, ಡಿಕ್ಲೆರೇಷನ್ ಆಯ್ಕೆಯನ್ನು ಭರ್ತಿ ಮಾಡಿ ಮತ್ತು ಕ್ಯಾಪ್ಚಾವನ್ನು ನಮೂದಿಸಿ.
ಹಂತ:9 ಇದಾದ ನಂತರ ಎಲ್ಲಾ ವಿವರಗಳನ್ನು ಪರಿಶೀಲಿಸಿ.
ಹಂತ:10 ಎಲ್ಲವನ್ನು ಪರಿಶೀಲಿಸಿದ ನಂತರ ಸಬ್ಮಿಟ್‌ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.

ಹೀಗೆ ಮಾಡುವ ಮೂಲಕ ನೀವು ನಿಮ್ಮ ವೋಟರ್‌ ಐಡಿಯ ವಿಳಾಸವನ್ನು ಬದಲಾಯಿಸಬಹುದಾಗಿದೆ.

Most Read Articles
Best Mobiles in India

English summary
Voter ID Card, also known as Electors Identity Card (EPIC), is a photo identity card issued by the Election Commission of India to all those persons who are eligible to vote.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X