ಲ್ಯಾಪ್‌ಟಾಪ್ ಕೀಬೋರ್ಡ್, ಸ್ಕ್ರೀನ್ ಮತ್ತು ಮೌಸ್‌ ಕ್ಲೀನ್ ಮಾಡುವುದು ಹೇಗೆ?

|

ನಿಮ್ಮ ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್ ಅನ್ನು ಸ್ವಚ್ಚಗೊಳಿಸುವುದರಿಂದ ಅದರ ಜೀವಿತಾವಧಿ ಮಾತ್ರ ಹೆಚ್ಚಾಗುವುದಿಲ್ಲ. ಇದರಿಂದ ನಿಮ್ಮ ಜೀವಿತಾವಧಿ ಕೂಡ ಹೆಚ್ಚಾಗುತ್ತದೆ. ಏಕೆಂದರೆ, ಲ್ಯಾಪ್‌ಟಾಪ್ ಕೀಬೋರ್ಡ್ ಮತ್ತು ಮೌಸ್‌ಗಳು ಸೂಕ್ಷ್ಮಜೀವಿಗಳಿಗೆ ಸಂತಾನೋತ್ಪತ್ತಿ ನೀಡುತ್ತವೆ. ಇದರಿಂದ ರೋಗ ಬರುವ ಅಪಾಯ ಹೆಚ್ಚಿರುತ್ತದೆ. ಹಾಗಾಗಿಯೇ, ಆಗಾಗ್ಗೆ ನೀವು ಹೆಚ್ಚು ಸ್ಪರ್ಶಿಸುವ ನಿಮ್ಮ ಲ್ಯಾಪ್‌ಟಾಪ್ ಕೀಬೋರ್ಡ್, ಮಾನಿಟರ್ ಮತ್ತು ಮೌಸ್ ಅನ್ನು ಸ್ವಚ್ಚಗೊಳಿಸಲು ರೋಗ ನಿಯಂತ್ರಣ ಕೇಂದ್ರವು ಶಿಫಾರಸು ಮಾಡುತ್ತದೆ ಎಂದರೆ ಆಶ್ಚರ್ಯವೇನಿಲ್ಲ.

ಲ್ಯಾಪ್‌ಟಾಪ್ ಕೀಬೋರ್ಡ್, ಸ್ಕ್ರೀನ್ ಮತ್ತು ಮೌಸ್‌ ಕ್ಲೀನ್ ಮಾಡುವುದು ಹೇಗೆ?

ನಿಮಗೆ ಗೊತ್ತಾ?, ನಮ್ಮ ಕಣ್ಣಿಗೆ ಕಾಣುವಂತೆ ಕಂಪ್ಯೂಟರ್ ಕೀಬೋರ್ಡ್ ಮತ್ತು ಮೌಸ್‌ಗಳು ಕೇವಲ ಧೂಳಿನಿಂದ ಮಾತ್ರ ಕೊಳೆಯಾಗಿರುವುದಿಲ್ಲ. ಅವುಗಳ ಮೇಲೆ ಮಿಲಿಯನ್‌ನಷ್ಟು ಸೂಕ್ಷ್ಮಜೀವಿಗಳು ನಮಗೆ ಕಾಣಿಸದಂತೆ ಮನೆ ಮಾಡಿಕೊಂಡಿರುತ್ತವೆ. ಆದರೆ, ಇವುಗಳನ್ನು ಕೊಲ್ಲಲು ನಾವು ನೀರು, ಸೋಪುಗಳನ್ನು ಬಳಕೆ ಮಾಡಲು ಸಾಧ್ಯವೇ ಇಲ್ಲ. ಹಾಗಾಗಿ, ಇಂದಿನ ಲೇಖನದಲ್ಲಿ ಕಂಪ್ಯೂಟರ್ ಕೀಬೋರ್ಡ್ ಮತ್ತು ಮೌಸ್‌ಗಳನ್ನು ಸ್ವಚ್ಚಗೊಳಿಸುವುದು ಹೇಗೆ ಎಂಬುದನ್ನು ನಾನು ತಿಳಿಸಿಕೊಡುತ್ತೇನೆ. ಮುಂದಿನ ತಂತ್ರಗಳನ್ನು ನೀವು ಪಾಲಿಸಿ.!

ಬ್ಯಾಟರಿ ಸಂಪರ್ಕ ಕಡಿತಗೊಳಿಸಿ.

ಬ್ಯಾಟರಿ ಸಂಪರ್ಕ ಕಡಿತಗೊಳಿಸಿ.

ಕೀಬೋರ್ಡ್, ಮಾನಿಟರ್ ಮತ್ತು ಮೌಸ್ ಯಾವುದೇ ಆಗಿರಲಿ ನಿಮ್ಮ ಲ್ಯಾಪ್‌ಟಾಪ್ ಸ್ವಚ್ಚಗೊಳಿಸುವ ಮುನ್ನ ಅದರ ಬ್ಯಾಟರಿ ಸಂಪರ್ಕ ಕಡಿತಗೊಳಿಸಿಸುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ. ನೀವು ಬ್ಯಾಟರಿ ತೆರೆಯದೇ ಲ್ಯಾಪ್‌ಟಾಪ್‌ನ ಯಾವುದೇ ಬಿಡಿಭಾಗವನ್ನು ಸ್ವಚ್ಚಗೊಳಿಸಲು ಸಾಧ್ಯವೇ ಇಲ್ಲ ಎಂಬುದು ತಿಳಿದಿರಲಿ. ಹಾಗಾಗಿ, ಇದು ನಿಮಗೆ ಮುಖ್ಯ ಸೂಚನೆ.

ಕೀಬೋರ್ಡ್ ಕ್ಲೀನ್ ಮಾಡುವುದು

ಕೀಬೋರ್ಡ್ ಕ್ಲೀನ್ ಮಾಡುವುದು

ಬ್ಯಾಟರಿ ಸಂಪರ್ಕ ಕಡಿತಗೊಳಿಸಿದ ನಂತರ ಕೀಬೋರ್ಡ್ ಮೇಲೆ ನಿಧಾನವಾಗಿ ಗಾಳಿಯನ್ನು ಊದಿ (ಚಿಕ್ಕ ಗಾಳಿ ಪಂಪ್ ಇದ್ದರೆ ಒಳ್ಳೆಯದು). ಇದು ಕೀಲಿಗಳ ನಡುವೆ ಸಿಲುಕಿರುವ ಕೆಲವು ವಸ್ತುಗಳನ್ನು ಅನ್ನು ಸಡಿಲಗೊಳಿಸುತ್ತದೆ. ನಂತರ ಕಿವಿಯನ್ನು ಸ್ವಚ್ಚಗೊಳಿಸಲು ಇರುವ ಹತ್ತಿ ಸ್ವ್ಯಾಬನ್ನು ಮದ್ಯದಿಂದ ತೇವಗೊಳಿಸಿ. ನಂತರ ಕೀಲಿಗಳ ನಡುವೆ ಅದರಿಂದ ಕ್ಲೀನ್ ಮಾಡಿ.

ಮಾನಿಟರ್ ಕ್ಲೀನ್ ಮಾಡುವುದು

ಮಾನಿಟರ್ ಕ್ಲೀನ್ ಮಾಡುವುದು

ಧೂಳನ್ನು ತೆಗೆದುಹಾಕಲು ಗಾಳಿಯಿಂದ ನಿಮ್ಮ ಪರದೆಯನ್ನು ಸಿಂಪಡಿಸಿ. ವಿನೆಗರ್ ದ್ರಾವಣವನ್ನು ಮೃದುವಾದ ಮೈಕ್ರೋಫೈಬರ್ ಬಟ್ಟೆಯಿಂದ ನೆನೆಸಿ ಪರದೆಯನ್ನು ನಿಧಾನವಾಗಿ ಒರೆಸಿ. ಈ ಬಟ್ಟೆಗಳು ಕಂಪ್ಯೂಟರ್ ಪೂರೈಕೆ ಮಳಿಗೆಗಳು ಅಥವಾ ಆನ್‌ಲೈನಿನಲ್ಲಿ ಲಭ್ಯವಿದೆ. ವಿನೆಗರ್ ಜೊತೆಗೆ ಮದ್ಯ ಹಾಗೂ ಹತ್ತಿಯ ಸಹಾಯದಿಂದಲೂ ಪರದೆಯನ್ನು ಸ್ವಚ್ಚಗೊಳಿಸಬಹುದು.

ಮೌಸ್ ಕ್ಲೀನ್ ಮಾಡುವುದು.

ಮೌಸ್ ಕ್ಲೀನ್ ಮಾಡುವುದು.

ನಿಮ್ಮ ಲ್ಯಾಪ್‌ಟಾಪ್‌ನಲ್ಲಿ ನೀವು ಬಾಹ್ಯ ಮೌಸ್ ಹೊಂದಿದ್ದರೆ ಅದನ್ನು ಸ್ವಚ್ಚಗೊಳಿಸಲು ಮರೆಯಬೇಡಿ. ನಿಮ್ಮ ಲ್ಯಾಪ್‌ಟಾಪ್ ಅನ್ನು ಸ್ವಚ್ಚಗೊಳಿಸಲು ಇದು ಸುಲಭವಾದ ಭಾಗವಾಗಿದ್ದು, ವಿನೆಗರ್ ದ್ರಾವಣದೊಂದಿಗೆ ಹತ್ತಿಯನ್ನು ನೆನೆಸಿ ನಿಮ್ಮ ಮೌಸ್ ಅನ್ನು ಕ್ಲೀನ್ ಮಾಡಿ. ನಿಮ್ಮ ಮೌಸ್ ಸ್ವಚ್ಚಗೊಳಿಸುವ ಮೊದಲು ಅದನ್ನು ಲ್ಯಾಪ್‌ನಿಂದ ತೆರೆಯುವುದನ್ನು ಮರೆಯಬೇಡಿ.

ಒಣಗಿದ ನಂತರ ಬ್ಯಾಟರಿ ಜೋಡಿಸಿ

ಒಣಗಿದ ನಂತರ ಬ್ಯಾಟರಿ ಜೋಡಿಸಿ

ಹೀಗೆ ನೀವು ಕಂಪ್ಯೂಟರ್ ಬಿಡಿಭಾಗಗಳನ್ನು ಸ್ವಚ್ಚಗೊಳಿಸಿದ ನಂತರ ಅವುಗಳು ಸಂಪೂರ್ಣವಾಗಿ ಒಣಗಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇದಾದ ನಂತರವಷ್ಟೇ ಲ್ಯಾಪ್‌ಟಾಪ್‌ಗೆ ಬ್ಯಾಟರಿಯನ್ನು ಜೋಡಿಸಿ. ಹೀಗೆ ಮಾಡುವುದರಿಂದ ನಿಮ್ಮ ಲ್ಯಾಪ್‌ಟಾಪ್ ಸುರಕ್ಷಿತವಾಗಿರುತ್ತದೆ. 15 ದಿನಗಳಿಗೊಮ್ಮೆಯಾದರೂ ಹೀಗೆ ಲ್ಯಾಪ್‌ಟಾಪ್ ಕ್ಲೀನ್ ಮಾಡುವುದನ್ನು ಮರೆಯದಿರಿ.

Best Mobiles in India

English summary
While you're cleaning the keyboard and mouse, take the opportunity to clean your laptop screen as well. Cleaning your screen will make it much easier and pleasanter to get your work done. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X