ಲ್ಯಾಪ್‌ಟಾಪ್ ಸ್ಕ್ರೀನ್ ಸ್ವಚ್ಛಗೊಳಿಸಲು ಕೆಲ ಟಿಪ್ಸ್

ನೀವು ನಿಮ್ಮ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಸ್ವಚ್ಛಗಿಳಿಸುವ ಆಲೋಚನೆಯಲ್ಲಿದ್ದೀರ? ಅಂದಹಾಗೆ ಕಂಪ್ಯೂಟರ್ ಸ್ವಚ್ಚಗೊಳಿಸುವಾಗ ಸ್ವಲ್ಪ ಎಚ್ಚರಿಕೆಯಂದ ಮಾಡಬೇಕಾಗುತ್ತದೆ ಏಕೆಂದರೆ ಸ್ವಲ್ಪ್ಪ ಹೆಚ್ಚು ಕಡಿಮೆಯಾದಲ್ಲಿ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ನ ಸ್ಕ್ರೀನ್ ಮೇಲೆ ಪ್ರಭಾವ ಉಂಟಾಗಿ ಹಾಳಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅಂದಹಾಗೆ ಈಗೆಲ್ಲಾ ಮಾರುಕಟ್ಟೆಗೆ ಬರುತ್ತಿರುವ ಕಂಪ್ಯೂಟರ್ ಹಾಗೂ ಲ್ಯಾಪ್‌ಟಾಪ್‌ಗಳಲ್ಲಿ ಎಲ್‌ಸಿಡಿ ಅಥವಾ ಟಿಎಫ್‌ಟಿ ಸ್ಕ್ರೀನ್‌ಗಳನ್ನು ನೀಡಲಾಗುತ್ತಿದ್ದು ಇವು ಸಾಮಾನ್ಯ ಸ್ಕ್ರೀನ್‌ಗಳಿಗಿಂತಲೂ ತೀರಾ ಸೂಕ್ಷ್ಮವಾಗಿರುತ್ತವೆ.
ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್ ಸ್ಕ್ರೀನ್ ಸ್ವಚ್ಛಗೊಳಿಸಲು ಶುಭ್ರ ಹಾಗೂ ಮೃದುವಾದ ಹತ್ತಿಯಿಂದ ಮಾಟಲಾದ ಬಟ್ಟೆ ಬಳಸುವುದು ಸೂಕ್ತ. ಏಕೆಂದರೆ ಯಾವುದಾದರು ಒಂದು ಬಟ್ಟೆ ತೆಗೆದುಕೊಂಡೊ ಅದರಿಂದ ಶುಭ್ರಗೊಳಿಸಲು ಮುಂದಾದರೆ ಅದರಲ್ಲಿನ ಸಣ್ಣ ಸಣ್ಣ ಧೂಳಿನಿಂದಾಗಿ ಕಂಪ್ಯೂಟರ್‌ನ ಪರದೆಯ ಮೇಲೆ ಸ್ಕ್ರಾಚ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ.
ಸ್ಕ್ರೀನ್ ಸ್ವಚ್ಚಗಿಳಿಸಲು ಕೆಲ ಸಲಹೆಗಳು:
- ಸಾದಾರಣ ನೀರಿನಿಂದ ಸ್ಕ್ರೀನ್ ವರಿಸುವ ಬದಲು ಅರ್ಧ ಭಾಗ ನೀರು ಹಾಗೂ ಇನ್ನರ್ಧ ಭಾಗ ವಿನಿಗರ್ ಬೆರಸಿ ಮಿಶ್ರಣ ಮಾಡಿ ಸ್ಕ್ರೀನ್ ಸ್ವಚ್ಛಗೊಳಿಸಿ.
- ಸ್ಕ್ರೀನ್ ಸ್ವಚ್ಛಗೊಳಿಸಲು ಸಾಧ್ಯವಾದಷ್ಟು ಮೈಕ್ರೋಫೈಬರ್ ಬಟ್ಟೆಯನ್ನೇ ಬಳಸಿ.
- ಶೇಕಡ 91 ರಷ್ಟು ಪ್ರಮಾಣದ ಆಲ್ಕೋಹಾಲ್‌ನಿಂದ ಸ್ಕ್ರೀನ್ ಸ್ವಚ್ಛಗೊಳಿಸಿದಲ್ಲಿ ಯಾವುದೇ ತೊಂದರೆಯಾಗುವುದಿಲ್ಲಾ.
- ಸ್ಕ್ರೀನ್ ಮೇಲಿನ ಕಲೆಗಳನ್ನು ಒರಿಸುವಲ್ಲಿ ಹೆಚ್ಚು ಬಲಪ್ರಯೋಗಿಸಲು ಮುಂದಾಗಬೇ ಬದಲಾಗಿ ನಿಧಾವಾಗಿ ಸುರುಳಿಯಾಕಾರದಲ್ಲಿ ಸ್ವಚ್ಛಗೊಳಿಸಿ.
ಫೋನ್‌ನಲ್ಲಿ ಬ್ಯಾಟರಿ ಪವರ್ ಉಳಿಸುವುದು ಹೇಗೆ?
ಸ್ಮಾರ್ಟ್‌ಫೋನ್ ಮೂಲಕ ಭೂತಗಳನ್ನು ಹುಡುಕುವುದು ಹೇಗೆ?
Comments
Best Mobiles in India


Click it and Unblock the Notifications








