Just In
- 43 min ago
ವಿವೋ X60 ಪ್ರೊ ಪ್ಲಸ್ ಸ್ಮಾರ್ಟ್ಫೋನ್ ಲಾಂಚ್!..ಬೆಲೆ ಎಷ್ಟು?..ಫೀಚರ್ಸ್ ಏನು?
- 15 hrs ago
ಮೈಕ್ರೋಸಾಫ್ಟ್ ಸರ್ಫೇಸ್ ಲ್ಯಾಪ್ಟಾಪ್ ಗೋ ಲಾಂಚ್!..ಬೆಲೆ ಎಷ್ಟು?
- 16 hrs ago
ಏರ್ಟೆಲ್ನಿಂದ ಎರಡು ಹೊಸ ರೀಚಾರ್ಜ್ ಪ್ಯಾಕ್ ಲಾಂಚ್!..ಪ್ರಯೋಜನಗಳೆನು?
- 17 hrs ago
ಭಾರತದಲ್ಲಿ JBL C115 ಇಯರ್ಬಡ್ಸ್ ಲಾಂಚ್!..21 ಗಂಟೆಗಳ ಪ್ಲೇಬ್ಯಾಕ್ ವಿಶೇಷ!
Don't Miss
- Sports
ಸ್ಟೀವ್ ಸ್ಮಿತ್ ಮತ್ತೆ ನಾಯಕನಾಗುವ ಸಾಧ್ಯತೆಯ ಬಗ್ಗೆ ಪ್ರತಿಕ್ರಿಯಿಸಿದ ಇಯಾನ್ ಚಾಪೆಲ್
- News
ಮಧ್ಯರಾತ್ರಿ 1 ರಿಂದ 3 ಗಂಟೆವರೆಗೆ UPI ಪಾವತಿ ಸಮಸ್ಯೆ ಎದುರಾಗಲಿದೆ: ಕಾರಣ ಏನು?
- Finance
ಎಲ್ ಪಿಜಿ ಸಿಲಿಂಡರ್ ಉಚಿತವಾಗಿ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ
- Automobiles
ಜನರ ಅಸೂಯೆಗೆ ಬಲಿಪಶುವಾದ ಸೂಪರ್ ಬೈಕ್ ಸವಾರ
- Movies
KSRTC ಬಸ್ಸಿನಲ್ಲಿ ನಿರ್ಮಾಣವಾದ ವಿಶೇಷ ಸ್ತ್ರೀ ಶೌಚಾಲಯ ಪರಿಶೀಲಿಸಿದ ನಟಿ ಶ್ರುತಿ
- Lifestyle
ಚಳಿಗಾಲದಲ್ಲಿ ಚರ್ಮದ ರಕ್ಷಣೆಗೆ ಈ ಆಹಾರಗಳನ್ನು ಸೇವಿಸುವುದನ್ನು ಮರೆಯಬೇಡಿ..
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನೆಟ್‌ಫ್ಲಿಕ್ಸ್‌ನಲ್ಲಿ ಹಿಸ್ಟರ್ ಕ್ಲಿಯರ್ ಮಾಡಲು ಹೀಗೆ ಮಾಡಿರಿ!
ಪ್ರಸ್ತುತ ಓಟಿಟಿ ಅಪ್ಲಿಕೇಶನ್‌ಗಳ ಜನಪ್ರಿಯತೆ ಹೆಚ್ಚಿದ್ದು, ವೆಬ್ ಸಿರೀಸ್ ಕಾರ್ಯಕ್ರಮಗಳು ಸಿಕ್ಕಾಪಟ್ಟೆ ಟ್ರೆಂಡಿಂಗ್‌ನಲ್ಲಿವೆ. ಈ ನಿಟ್ಟಿನಲ್ಲಿ ಬಳಕೆದಾರರು ಹೆಚ್ಚಾಗಿ ಓಟಿಟಿ ತಾಣಗಳಲ್ಲಿಯೇ ಮಗ್ನರಾಗಿರುತ್ತಾರೆ. ಆ ಪೈಕಿ ನೆಟ್‌ಫ್ಲಿಕ್ಸ್ ತಾಣ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದು, ಭಿನ್ನ ರೀತಿಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತ ಸಾಗಿದೆ. ಈ ತಾಣಗಳಲ್ಲಿ ಬಳಕೆದಾರರು ತಮಗೆ ಬೇಕಾದ ಕಾರ್ಯಕ್ರಮ/ಕಂಟೆಂಟ್ ಸರ್ಚ್ ಮಾಡಿರುತ್ತಾರೆ. ಹೀಗೆ ಸರ್ಚ್ ಮಾಡಿರುವ ಹಿಸ್ಟರಿ ಕ್ಲಿಯರ್ ಮಾಡಬಹುದಾಗಿದೆ.

ಹೌದು, ನೆಟ್‌ಫ್ಲಿಕ್ಸ್ ಜನಪ್ರಿಯ ವೆಬ್ ಸಿರೀಸ್ ಶೋ ಮತ್ತು ಹೊಸ ಸಿನಿಮಾಗಳಿಂದ ವೀಕ್ಷಕ ಸಮೂಹವನ್ನು ತನ್ನತ್ತ ಸೆಳೆದಿದೆ. ಇನ್ನು ಬಳಕೆದಾರರು ನೆಟ್‌ಫ್ಲಿಕ್ಸ್ ಆಪ್‌ನ ಸರ್ಚ್ ಆಯ್ಕೆಯಲ್ಲಿ ತಮಗೆ ಬೇಕಾದ ವಿಡಿಯೊಗಳನ್ನು/ ಕಾರ್ಯಕ್ರಮಗಳ ಹೆಸರುಗಳನ್ನು ಜಾಲಾಡಿರುತ್ತಾರೆ. ಬಳಕೆದಾರರು ಏನೆಲ್ಲಾ ಸರ್ಚ್ ಮಾಡಿದ್ದಾರೆ ಎನ್ನುವುದು ಹಿಸ್ಟರಿಯಲ್ಲಿ ಸ್ಟೋರ್ ಆಗಿರುತ್ತದೆ. ಆದ್ರೆ ಈ ಸರ್ಚ್ ಹಿಸ್ಟರಿ ಕ್ಲಿಯರ್ ಮಾಡಲು ಅವಾಕಶ ನೀಡಲಾಗಿದೆ. ಹಾಗಾದರೇ ಸರ್ಚ್ ಹಿಸ್ಟರಿ ಕ್ಲಿಯರ್ ಮಾಡಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಐಫೋನ್‌ನಲ್ಲಿ ಈ ಹೀಗೆ ಮಾಡಿರಿ
* ನೆಟ್‌ಫ್ಲಿಕ್ಸ್ ತೆರೆದು ಬಲಗಡೆಯ ಸೈನ್‌ಇನ್ ಆಯ್ಕೆ ಮೂಲಕ ಲಾಗ್‌ಇನ್ ಆಗಿರಿ.
* ನಂತರ ಮೆನು ಆಯ್ಕೆಯನ್ನು ಕ್ಲಿಕ್ ಮಾಡಿರಿ
* ನಿಮ್ಮ ಖಾತೆಯನ್ನು ಟ್ಯಾಪ್ ಮಾಡಿರಿ
* ಸರ್ಚ್ ಹಿಸ್ಟರಿ ಡಿಲೀಟ್ ಮಾಡುವ ಪ್ರೊಫೈಲ್ ಸೆಲೆಕ್ಟ್ ಮಾಡಿ
* ಆನಂತರ ಮತ್ತೆ ಮೆನು ಆಯ್ಕೆ ಒತ್ತಿರಿ ಮತ್ತು ಅಕೌಂಟ್ ಟ್ಯಾಪ್ ಮಾಡಿ
* ಆಗ ವ್ಯೂವಿಂಗ್ ಆಕ್ಟಿವಿಟಿ ಆಯ್ಕೆ ಕಾಣಿಸುತ್ತದೆ.
* ಮೈ ಆಕ್ಟಿವಿಟಿಯ ಆಯ್ಕೆ ಕ್ಲಿಕ್ ಮಾಡಿ ಮತ್ತು ಹೈಡ್ (Hide) ಆಲ್ ಒತ್ತಿರಿ.

ಡೆಸ್ಕ್‌ಟಾಪ್‌ನಲ್ಲಿ ಈ ಹಂತಗಳನ್ನು ಅನುಸರಿಸಿ
* ನೆಟ್‌ಫ್ಲಿಕ್ಸ್ ತೆರೆದು, ನಿಮ್ಮ ಖಾತೆಯನ್ನು ಟ್ಯಾಪ್ ಮಾಡಿರಿ.
* ಕೆಳಭಾಗದ ಬಲಭಾಗದಲ್ಲಿ ಕಾಣುವ 'ಮೋರ್' ಆಯ್ಕೆ ಕ್ಲಿಕ್ಕ್ ಮಾಡಿ.
* ನಂತರ ಅಕೌಂಟ್ ಆಯ್ಕೆಯನ್ನು ಸೆಲೆಕ್ಟ್ ಮಾಡಿ.
* ಸ್ಕ್ರೋಲ್ ಡೌನ್ ಮಾಡಿ, 'ವ್ಯೂವಿಂಗ್ ಆಕ್ಟಿವಿಟಿ' ಟ್ಯಾಪ್ ಮಾಡಿರಿ
* ವ್ಯೂವಿಂಗ್ ಹಿಸ್ಟರಿಯನ್ನು 'ಹೈಡ್ ಆಲ್'(Hide all) ಒತ್ತಿರಿ.

ಆಂಡ್ರಾಯ್ಡ್ ಫೋನಿನಲ್ಲಿ ಈ ಕ್ರಮ ಅನುಸರಿಸಿರಿ
ಆಂಡ್ರಾಯ್ಡ್ ಡಿವೈಸ್‌ನಲ್ಲಿ ನಿಮ್ಮ ನೆಟ್‌ಫ್ಲಿಕ್ಸ್ ಖಾತೆಗೆ ಲಾಗ್ ಇನ್ ಆಗಿರಿ. ನಂತರ ಬಲ ಭಾಗದ ಬಾಟಮ್‌ನಲ್ಲಿ ಕಾಣುವ 'ಮೋರ್' ಟ್ಯಾಬ್ ಆಯ್ಕೆ ಸೆಲೆಕ್ಟ್ ಮಾಡಿರಿ. ಆನಂತರ 'ಅಕೌಂಟ್' ಆಯ್ಕೆ ಮೇಲೆ ಕ್ಲಿಕ್ ಮಾಡಿ. ಆಗ ಕಾಣಿಸುವ 'ವ್ಯೂವಿಂಗ್ ಆಕ್ಟಿವಿಟಿ' ಆಯ್ಕೆಯನ್ನು ಒತ್ತಿರಿ. ಆನಂತರ 'ಹೈಡ್ ಆಲ್' ಆಯ್ಕೆಯನ್ನು ಸೆಲೆಕ್ಟ್ ಮಾಡಿ ವೀಕ್ಷಿಸಿದ ಎಲ್ಲ ಹಿಸ್ಟರಿಯನ್ನು ಕಾಣದಂತೆ ತಡೆಯಬಹುದು. ಅಥವಾ ಒಂದೊಂದೆ ಡಿಲೀಟ್ ಸಹ ಮಾಡಬಹುದಾಗಿದೆ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190