ಆನ್‌ಲೈನ್‌ನಲ್ಲಿ ಮೋಸ ಆಗಿದೆಯಾ?..ಕೂಡಲೇ ಹೀಗೆ ಮಾಡಿ
ಇಂದಿನ ಡಿಜಿಟಲ್ ಪ್ರಪಂಚದಲ್ಲಿ ಆನ್‌ಲೈನ್ ವಂಚನೆ ಅನ್ನೋದು ಸಾಮಾನ್ಯವಾಗಿಬಿಟ್ಟಿದೆ. ಪ್ರತಿನಿತ್ಯವೂ ಒಂದಿಲ್ಲೊಂದು ಕಡೆ ಆನ್‌ಲೈನ್ ವಂಚನೆ ವರದಿಯಾಗುತ್ತಲೇ ಇದೆ. ಇದಕ್ಕೆ ಭಾರತವೂ ಕೂಡ ಹೊರತಾಗಿಲ್ಲ, ಇದೇ ಕಾರಣಕ್ಕೆ ಭಾರತ ಸರ್ಕಾರ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್ ಅನ್ನು ರೂಪಿಸಿದೆ.
ಹೌದು, ಭಾರತ ಸರ್ಕಾರ ಸೈಬರ್ ವಂಚಕರಿಂದ ರಕ್ಷಣೆಗಾಗಿ ಹೊಸ ಪೋರ್ಟಲ್ ಅನ್ನು ಕ್ರಿಯೆಟ್ ಮಾಡಿದೆ. ನೀವು ವಂಚಕರಿಂದ ವಂಚನೆಗೆ ಒಳಗಾಗಿದ್ದರೆ ಸೈಬರ್ ಕ್ರೈಮ್ ದೂರು ದಾಖಲಿಸಬಹುದಾಗಿದೆ. ಹಾಗಾದ್ರೆ ಸೈಬರ್ ಕ್ರೈಂ ರಿಪೋರ್ಟಿಂಗ್ ಪೋರ್ಟಲ್‌ನಲ್ಲಿ ದೂರು ದಾಖಲಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಭಾರತ ದೇಶ ಡಿಜಿಟಲೀಕರಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಇದಕ್ಕೆ ತಕ್ಕಂತೆ ಭಾರತದಲ್ಲಿ ಡಿಜಿಟಲ್ ವಹಿವಾಟುಗಳ ಪ್ರಮಾಣ ಹೆಚ್ಚಾಗಿದೆ. ಆದರೆ ಇದೇ ಸಂದರ್ಭದಲ್ಲಿ ಭಾರತದಲ್ಲಿ ಆನ್‌ಲೈನ್ ಸ್ಕ್ಯಾಮ್‌ಗಳ ಪ್ರಮಾಣ ಕೂಡ ಹೆಚ್ಚಾಗಿದೆ. ಜನರಿಗೆ ಹಲವು ರೀತಿಯಲ್ಲಿ ವಂಚನೆ ಮಾಡಿ ಟೋಪಿ ಹಾಕುವ ಸೈಬರ್ ವಂಚಕರು ಹೆಚ್ಚುತ್ತಲೇ ಇದ್ದಾರೆ. ಅಷ್ಟೇ ಅಲ್ಲ ಪ್ರತಿಭಾರಿಯೂ ಹೊಸ ರೀತಿಯಲ್ಲಿ ಸಾಮಾನ್ಯ ಜನರಿಗೆ ವಂಚನೆ ಮಾಡುವುದು ನಡೆಯುತ್ತಿದೆ. ಇದನ್ನು ನಿವಾರಿಸುವುದಕ್ಕಾಗಿಯೇ ಭಾರತ ಸರ್ಕಾರ ಹೊಸ ಪೋರ್ಟಲ್ ಅನ್ನು ಪರಿಚಯಿಸಿದೆ.
ನೀವು ಆನ್‌ಲೈನ್‌ನಲ್ಲಿ ಮೋಸ ಹೋಗಿದ್ದರೆ, ನೀವು ಆನ್‌ಲೈನ್‌ನಲ್ಲಿ ಹಣವನ್ನು ಕಳೆದುಕೊಂಡಿದ್ದರೆ ಈ ಪೋರ್ಟಲ್‌ನಲ್ಲಿ ದೂರು ದಾಖಲಿಸಬಹುದಾಗಿದೆ. ಅಲ್ಲದೆ ಪಾರ್ಟ್ ಜಾಬ್ ಆಫರ್, ಯೂಟ್ಯೂಬ್ ವೀಡಿಯೊ ಲೈಕ್ ಮಾಡಿ ಹಣ ಪಡೆಯುವ ಆಮಿಷದ ಸ್ಕ್ಯಾಮ್‌ಗಳು ಹೀಗೆ ಯಾವುದೇ ಸೈಬರ್ ಸ್ಕ್ಯಾಮ್ ಮೂಲಕ ನೀವು ಹಣ ಕಳೆದುಕೊಂಡಿದ್ದರೆ, ಇಲ್ಲವೇ ನಿಮಗೆ ಸಮಸ್ಯೆ ಆಗುತ್ತಿದ್ದರೆ ನೀವು ಕೂಡಲೇ ಸೈಬರ್ ಕ್ರೈಂ ರಿಪೋರ್ಟಿಂಗ್ ಪೋರ್ಟಲ್‌ನಲ್ಲಿ ದೂರು ದಾಖಲಿಸಬಹುದಾಗಿದೆ.
ಇನ್ನು ನೀವು ಸೈಬರ್ ಹ್ಯಾಕರ್‌ಗಳಿಂದ ವಂಚನೆಗೆ ಒಳಗಾಗಿ ದೂರು ದಾಖಲಿಸಬೇಕಾದರೆ ನೇರವಾಗಿ ಪೊಲೀಸ್ ಠಾಣೆಗೆ ಹೋಗಬಹುದು ಅಥವಾ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್‌ಗೆ ಭೇಟಿ ನೀಡಬಹುದು. ನೀವು ವಂಚನೆಗೆ ಒಳಗಾದ 24 ಗಂಟೆಗಳ ಒಳಗೆ ವರದಿ ಮಾಡಿದರೆ ತಕ್ಷಣವೇ ಕಾರ್ಯಪ್ರವೃತ್ತರಾಗಲು ಸಾಧ್ಯವಾಗಲಿದೆ. ಆದರಿಂದ ನೀವು ಸೈಬರ್ ಕ್ರೈಂ ರಿಪೋರ್ಟಿಂಗ್ ಪೋರ್ಟಲ್‌ನಲ್ಲಿ ವಂಚನೆ ನಡೆದ ತಕ್ಷಣವೇ ರಿಪೋರ್ಟ್ ಮಾಡುವುದು ಉತ್ತಮವಾಗಿದೆ.
ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್‌ನಲ್ಲಿ ರಿಪೋರ್ಟ್ ಮಾಡುವುದು ಹೇಗೆ?
* ಮೊದಲಿಗೆ https://cybercrime.gov.in ವೆಬ್‌ಸೈಟ್ ಮೂಲಕ ಸೈಬರ್ ಕ್ರೈಂ ರಿಪೋರ್ಟಿಂಗ್ ಪೋರ್ಟಲ್ ತೆರೆಯಿರಿ
* ನಂತರ ಪೋರ್ಟಲ್‌ನ ಮೇನ್‌ಪೇಜ್‌ನಲ್ಲಿ ಕಾಣಿಸುವ 'ಫೈಲ್ ಎ ಕಂಪ್ಲೇಂಟ್' ಅನ್ನು ಕ್ಲಿಕ್ ಮಾಡಿರಿ
* ಇದೀಗ ತೆರೆಯುವ ಪೇಜ್‌ನಲ್ಲಿ ಕಾಣಿಸುವ ನಿಯಮಗಳು ಮತ್ತು ಷರತ್ತುಗಳನ್ನು ಓದಿರಿ ಮತ್ತು ಅಕ್ಸೆಪ್ಟ್ ಮಾಡಿರಿ
* ನಂತರ 'ರಿಪೋರ್ಟ್' ಅದರ್ ಸೈಬರ್ ಕ್ರೈಮ್' ಆಯ್ಕೆಯ ಮೇಲೆ ಟ್ಯಾಪ್ ಮಾಡಿ
* ಇದರಲ್ಲಿ 'ಸಿಟಿಜನ್ ಲಾಗಿನ್' ಆಪ್ಶನ್ ಅನ್ನು ತೆರೆಯಿರಿ
* ನಂತರ ಹೆಸರು, ಇಮೇಲ್ ಮತ್ತು ಫೋನ್ ಸಂಖ್ಯೆ ಸೇರಿದಂತೆ ನಿಮ್ಮ ವಿವರಗಳನ್ನು ನಮೂದಿಸಬೇಕಾಗುತ್ತದೆ
* ಇದೀಗ ನಿಮ್ಮ ಮೊಬೈಲ್ ನಂಬರ್‌ಗೆ OTP ಬರಲಿದೆ ಅದನ್ನು ಸೂಕ್ತ ಜಾಗದಲ್ಲಿ ನಮೂದಿಸಿ
* ನಂತರ ಕ್ಯಾಪ್ಚಾವನ್ನು ಭರ್ತಿ ಮಾಡಿ ಮತ್ತು ಸಬ್ಮಿಟ್ ಬಟನ್ ಕ್ಲಿಕ್ ಮಾಡಿ.
* ಇದೀಗ ನೀವು ವರದಿ ಮಾಡಲು ಬಯಸುವ ಸೈಬರ್ ಕ್ರೈಂ ನ ವಿವರಗಳನ್ನು ಒದಗಿಸಬೇಕಾಗುತ್ತದೆ
* ಮಾಹಿತಿಯನ್ನು ಪರಿಶೀಲಿಸಿದ ನಂತರ, 'ಸಬ್ಮಿಟ್' ಬಟನ್ ಕ್ಲಿಕ್ ಮಾಡಿ.
* ಇದೀಗ ನಿಮ್ಮನ್ನು ಘಟನೆಯ ವಿವರಗಳ ಪೇಜ್‌ಗೆ ಕರೆದೊಯ್ಯಲಾಗುತ್ತದೆ
* ಇಲ್ಲಿ, ಸ್ಕ್ರೀನ್‌ಶಾಟ್‌ಗಳು ಅಥವಾ ಫೈಲ್‌ಗಳಂತಹ ಕ್ರೈಂ ವಿವರಗಳನ್ನು ಒದಗಿಸಬೇಕಾಗುತ್ತದೆ
* ನಂತರ, 'ಸೇವ್ ಆಂಡ್ ನೆಕ್ಸ್ಟ್' ಕ್ಲಿಕ್ ಮಾಡಿ.
* ಇದೀಗ ನೀವು ನೀಡಿರುವ ಮಾಹಿತಿಯನ್ನು ಪರಿಶೀಲಿಸಿ ಮತ್ತು 'ಸಬ್ಮಿಟ್' ಬಟನ್ ಕ್ಲಿಕ್ ಮಾಡಬೇಕಾಗುತ್ತದೆ.
* ನಂತರ ನಿಮ್ಮ ದೂರನ್ನು ಸ್ವೀಕರಿಸಿರುವುದರ ಬಗ್ಗೆ ಸಂದೇಶ ಬರಲಿದೆ.
ಇದರಲ್ಲಿ ನಿಮ್ಮ ದೂರಿನ ಐಡಿ, ದೂರು ಸ್ವಿಕರಿಸಿದ ದಿನಾಂಕದ ವಿವರಗಳನ್ನು ನಮೂದಿಸಲಾಗಿರುತ್ತದೆ.


Click it and Unblock the Notifications








