Home
ಟೆಕ್ ನೌಕರಿ

ಪಿಡಿಎಫ್ ಫೈಲ್ ಗಾತ್ರವನ್ನು ಕಡಿಮೆ ಮಾಡುವುದು ಹೇಗೆ ಗೊತ್ತಾ?

ಇತ್ತೀಚಿನ ದಿನಗಳಲ್ಲಿ ಡಿಜಿಟಲ್‌ ಡಾಕ್ಯುಮೆಂಟ್‌ಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ನಿಮ್ಮ ದಾಖಲೆಗಳನ್ನ ಡಿಜೀಟಲಿಕರಣ ಮಾಡಿ ಪಿಡಿಎಫ್‌ ಫೈಲ್‌ ಮಾದರಿಯಲ್ಲಿ ಸಂಗ್ರಹಿಸಿಟ್ಟುಕೊಳ್ಳುವುದು ಉತ್ತಮ. ಇನ್ನು ಪಿಡಿಎಫ್ ಮಾದರಿಯ‌ಲ್ಲಿ ಇರುವ ನಿಮ್ಮ ಡಾಕ್ಯುಮೆಂಟ್‌ ಯಾವ ಗಾತ್ರದಲ್ಲಿ ಇರಬೇಕು, ಹೇಗೆ ಇರಬೇಕು ಅನ್ನೊದು ಕೂಡ ಬಹುಮುಖ್ಯವಾಗುತ್ತದೆ. ಅದರಲ್ಲೂ ಅನೇಕ ಸರ್ಕಾರಿ ವೆಬ್‌ಸೈಟ್‌ಗಳು ಈ ಪಿಡಿಎಫ್ ಫೈಲ್ ಗಾತ್ರದ ನಿರ್ಬಂಧವನ್ನು ಹೊಂದಿದ್ದು, ಅದು ನಿರ್ದಿಷ್ಟ ಮಿತಿಗಿಂತ ಹೆಚ್ಚಿನ ಫೈಲ್ ಗಾತ್ರದೊಂದಿಗೆ ಪಿಡಿಎಫ್ ಅನ್ನು ಅಪ್‌ಲೋಡ್ ಮಾಡಲು ನಿಮಗೆ ಅನುಮತಿಸುವುದಿಲ್ಲ.

ಪಿಡಿಎಫ್‌

ಹೌದು, ಸರ್ಕಾರಿ ವೆಬ್‌ಸೈಟ್‌ಗಳಲ್ಲಿ ಕೆಲವೊಮ್ಮೆ ನೀವು ಅಪ್‌ಲೋಡ್‌ ಮಾಡುವ ಪಿಡಿಎಫ್‌ ಡಾಕ್ಯುಮೆಂಟ್‌ ಇಂತಿಷ್ಟೇ ಗಾತ್ರದಲ್ಲಿ ಇರಬೇಕು ಅನ್ನೊ ನಿರ್ಬಂಧ ಇರುತ್ತದೆ. ಅಂತಹ ಸನ್ನಿವೇಶದಲ್ಲಿ ಪಿಡಿಎಫ್‌ ಗಾತ್ರವನ್ನ ಹೇಗೆ ಕುಗ್ಗಿಸುವುದು ಹೇಗೆ ಅನ್ನೊದು ಕೆಲವರಿಗೆ ಗೊತ್ತೇ ಆಗೋದಿಲ್ಲ. ಪಿಡಿಎಫ್ ಅನ್ನು ಸಂಕುಚಿತಗೊಳಿಸಲು ಮತ್ತು ಅದರ ಫೈಲ್ ಗಾತ್ರವನ್ನು ಕಡಿಮೆ ಮಾಡಲು ಅವಕಾಶವಿದೆ. ಹಾಗಾದ್ರೆ ಪಿಡಿಎಫ್‌ ಗಾತ್ರವನ್ನ ಹೇಗೆ ಕಡಿಮೆ ಮಾಡೋದು? ಅದನ್ನು ಹೇಗೆ ಮಾಡಬೇಕು? ಪಿಡಿಎಫ್ ಫೈಲ್‌ಗಳ ಗಾತ್ರವನ್ನ ಕಡಿಮೆ ಮಾಡಲು ಅನುಮತಿಸುವ ಕೆಲವು ಅತ್ಯುತ್ತಮ ವಿಧಾನಗಳನ್ನು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಪಿಡಿಎಫ್ ಫೈಲ್‌ ಗಾತ್ರವನ್ನು ಆನ್‌ಲೈನ್‌ ಕಡಿಮೆ ಮಾಡುವುದು ಹೇಗೆ?

ಪಿಡಿಎಫ್ ಫೈಲ್‌ ಗಾತ್ರವನ್ನು ಆನ್‌ಲೈನ್‌ ಕಡಿಮೆ ಮಾಡುವುದು ಹೇಗೆ?

ನಿಮ್ಮಲ್ಲಿ ಲಭ್ಯವಿರುವ ಪಿಡಿಎಫ್‌ ಡಾಕ್ಯುಮೆಂಟ್‌ ಅನ್ನು ನೀವು ಯಾವುದಾದರೂ ಸರ್ಕಾರಿ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡುವಾಗ ಗಾತ್ರದ ಸಮಸ್ಯೆ ಎದುರಾದರೆ ನೀವಿನ್ನು ಚಿಂತಿಸಬೇಕಿಲ್ಲ. ಏಕೆಂದರೆ ಆನ್‌ಲೈನ್‌ನಲ್ಲಿಯೇ ಪಿಡಿಎಫ್‌ ಫೈಲ್‌ ಗಾತ್ರವನ್ನ ನಿಮ್ಮ ಅವಶ್ಯಕತೆಗೆ ತಕ್ಕಂತೆ ಕಡಿಮೆ ಮಾಡಿಕೊಳ್ಳುವ ಅವಕಾಶಗಳು ಲಭ್ಯವಿದೆ. ಅದರಲ್ಲೂ ವಿಂಡೋಸ್ 10, ಮ್ಯಾಕೋಸ್, ಆಂಡ್ರಾಯ್ಡ್ ಮತ್ತು ಐಒಎಸ್ ನಲ್ಲಿ ಪಿಡಿಎಫ್‌ ಗಾತ್ರವನ್ನ ಕಡಿಮೆ ಮಾಡುವುದಕ್ಕೆ ಅತ್ಯುತ್ತಮ ಅವಕಾಶಗಳನ್ನ ನೀಡಲಾಗಿದೆ. ಆದರೆ ಅದನ್ನ ಮಾಡಬೇಕದಾರೆ ನೀವು ಕೆಲ ಹಂತಗಳನ್ನು ಅನುಸರಿಸಬೇಕಿದೆ.

ಪಿಡಿಎಫ್

ಹಂತ:1 Ilovepdf.com ಗೆ ಭೇಟಿ ನೀಡಿ ಮತ್ತು ಕಂಪ್ರೆಸ್ ಪಿಡಿಎಫ್ ಒತ್ತಿರಿ.
ಹಂತ:2 ಮುಂದಿನ ಪುಟದಲ್ಲಿ, ಪಿಡಿಎಫ್ ಫೈಲ್ ಅನ್ನು ಟ್ಯಾಪ್ ಮಾಡಿ> ನಿಮ್ಮ ಆಯ್ಕೆಯನ್ನು ಮಾಡಿ> ಆಯ್ಕೆ ಟ್ಯಾಪ್ ಮಾಡಿ.
ಹಂತ:3 ನಂತರ, ನಿಮ್ಮ ಆದ್ಯತೆಗೆ ಅನುಗುಣವಾಗಿ ಕಡಿಮೆ ಗಾತ್ರದ ಮಟ್ಟವನ್ನು ಆರಿಸಿ ಮತ್ತು ಸಂಕುಚಿತ ಪಿಡಿಎಫ್ ಟ್ಯಾಪ್ ಮಾಡಿ.
ಹಂತ:4 ಮುಂದಿನ ಪುಟದಲ್ಲಿ, ನಿಮ್ಮ ಡಿವೈಸ್‌ನಲ್ಲಿ ಫೈಲ್ ಅನ್ನು ಸೇವ್‌ ಮಾಡಲು ಕಂಪ್ರೆಸ್ಡ್‌ ಮಾಡಿದ ಪಿಡಿಎಫ್ ಡೌನ್‌ಲೋಡ್ ಮಾಡಿ ಟ್ಯಾಪ್ ಮಾಡಿ.

ಮ್ಯಾಕ್‌ನಲ್ಲಿ ಪಿಡಿಎಫ್ ಫೈಲ್‌ ಗಾತ್ರವನ್ನು ಕಡಿಮೆ ಮಾಡುವುದು ಹೇಗೆ?

ಮ್ಯಾಕ್‌ನಲ್ಲಿ ಪಿಡಿಎಫ್ ಫೈಲ್‌ ಗಾತ್ರವನ್ನು ಕಡಿಮೆ ಮಾಡುವುದು ಹೇಗೆ?

ಇನ್ನು ನಿಮ್ಮ ಬಳಿ ಮ್ಯಾಕ್ ಹೊಂದಿದ್ದರೆ, ಪಿಡಿಎಫ್ ಫೈಲ್‌ಗಳ ಗಾತ್ರವನ್ನ ಕಡಿಮೆ ಮಾಡಲು ನಿಮಗೆ ಆನ್‌ಲೈನ್ ವೆಬ್‌ಸೈಟ್ ಅಥವಾ ಯಾವುದೇ ಮೂರನೇ ಅಪ್ಲಿಕೇಶನ್ ಅಗತ್ಯವಿಲ್ಲ. ಬದಲಾಗಿ, ಮ್ಯಾಕ್ ಬಳಕೆದಾರರು ಸ್ಥಳೀಯವಾಗಿ ಪಿಡಿಎಫ್‌ಗಳನ್ನು ಆಫ್‌ಲೈನ್‌ನಲ್ಲಿಯೇ ಗಾತ್ರವನ್ನು ಕಡಿಮೆ ಮಾಡಬಹುದು. ಮ್ಯಾಕ್‌ನಲ್ಲಿ ಪಿಡಿಎಫ್‌ ಫೈಲ್‌ ಗಾತ್ರವನ್ನ ಕಡಿಮೆಗೊಳಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.

ಪಿಡಿಎಫ್‌

ಹಂತ:1 ನೀವು ಗಾತ್ರವನ್ನ ಕಡಿಮೆ ಮಾಡಲು ಬಯಸುವ ಪಿಡಿಎಫ್‌ ಫೈಲ್‌ ಅನ್ನು ಪ್ರಿವ್ಯೂವ್‌ ತೆರೆಯಬೇಕು
ಹಂತ:2 ಫೈಲ್ ಲೋಡ್ ಆದ ನಂತರ, ಫೈಲ್> ಕ್ಲಿಕ್ ಮಾಡಿ export ಕ್ಲಿಕ್ ಮಾಡಿ.
ಹಂತ:3 ನಂತರ ಫೈಲ್ ಗಾತ್ರವನ್ನು ಕಡಿಮೆ ಮಾಡಲು Quartz ಫಿಲ್ಟರ್ ಅನ್ನು ಬದಲಾಯಿಸಿ.
ಹಂತ:4 ಇದಾದ ನಂತರ ಮುಂದುವರಿಯಲು ಸೇವ್‌ ಬಟನ್‌ ಒತ್ತಿ ಮತ್ತು ನಿಮ್ಮ ಸಿಸ್ಟಂನಲ್ಲಿ ಕಡಿಮೆ ಗಾತ್ರದ ಪಿಡಿಎಫ್ ಫೈಲ್ ಅನ್ನು ಸೇವ್‌ ಮಾಡಿ.

ವಿಂಡೋಸ್ 10 ನಲ್ಲಿ ಪಿಡಿಎಫ್ ಫೈಲ್‌ ಗಾತ್ರ ಕಡಿಮೆ ಮಾಡುವುದು ಹೇಗೆ?

ವಿಂಡೋಸ್ 10 ನಲ್ಲಿ ಪಿಡಿಎಫ್ ಫೈಲ್‌ ಗಾತ್ರ ಕಡಿಮೆ ಮಾಡುವುದು ಹೇಗೆ?

ಪಿಡಿಎಫ್ ಫೈಲ್‌ಗಳ ಗಾತ್ರವನ್ನು ಆಫ್‌ಲೈನ್‌ನಲ್ಲಿ ಹಲವಾರು ಅಪ್ಲಿಕೇಶನ್‌ಗಳಿವೆ. ಅದರಲ್ಲಿ 4 ಡಾಟ್ಸ್ ಫ್ರೀ ಪಿಡಿಎಫ್ ಕಂಪ್ರೆಸ್ ಕೂಡ ಒಂದಾಗಿದೆ. ಇದು ವಿಂಡೋಸ್‌ 10 ನಲ್ಲಿ ಲಭ್ಯವಾಗಲಿದೆ. ಇನ್ನು ಇದರಲ್ಲಿ ಯಾವ ಮಾದರಿಯಲ್ಲಿ ಪಿಡಿಎಫ್‌ ಗಾತ್ರವನ್ನ ಕಡಿಮೆ ಮಾಡಬಹುದು ಅನ್ನೊದಕ್ಕೆ ಈ ಕೆಳಗಿನ ಹಂತಗಳನ್ನು ಅನುಸರಿಸಿ.

ವಿಂಡೋಸ್‌

ಹಂತ:1 ವಿಂಡೋಸ್‌ 10ನಲ್ಲಿ ಪಿಡಿಎಫ್‌ ಗಾತ್ರ ಸಂಕುಚಿತಗೊಳಿಸಲು 4 ಡಾಟ್ಸ್ ಫ್ರೀ ಪಿಡಿಎಫ್ ಆಪ್‌ ಅನ್ನು ಇನ್‌ಸ್ಟಾಲ್‌ ಮಾಡಿಕೊಳ್ಳಿ.
ಹಂತ:2 ನಂತರ ನೀವು ಸಂಕುಚಿತಗೊಳಿಸಲು ಬಯಸುವ ಪಿಡಿಎಫ್ ಸೇರಿಸಲು ಅಪ್ಲಿಕೇಶನ್ ತೆರೆಯಿರಿ ಮತ್ತು ಆಡ್‌ ಫೈಲ್ ಕ್ಲಿಕ್ ಮಾಡಿ. ಪಿಡಿಎಫ್ ಅನ್ನು ಹುಡುಕಿ ಮತ್ತು ಆಯ್ಕೆಮಾಡಿ> ಒಪನ್‌ ಕ್ಲಿಕ್ ಮಾಡಿ.
ಹಂತ:3 ನಂತರ ನಿಮ್ಮ ಪಿಡಿಎಫ್‌ ಫೈಲ್‌ ಗುಣಮಟ್ಟವನ್ನು ನೀವು ಎಷ್ಟು ಸಂಕುಚಿತಗೊಳಿಸಲು ಬಯಸುತ್ತೀರಿ ಎಂಬುದನ್ನು ಆರಿಸಿ.
ಹಂತ:4 ಇದಾದ ನಂತರ, ಪಿಡಿಎಫ್‌ ಫೈಲ್‌ ಅನ್ನು ಗಾತ್ರ ಕಡಿಮೆ ಮಾಡಿ. ಪಿಡಿಎಫ್ ಫೈಲ್ ಅನ್ನು ನಿಮ್ಮ ವಿಂಡೋಸ್ 10 ಕಂಪ್ಯೂಟರ್‌ನಲ್ಲಿ ಸೇವ್‌ ಮಾಡಿ.

Best Mobiles in India

English summary
Compress the PDF and reduce its file size; but how do you do that? In this guide, we take a look at some of the best methods that let you compress PDF files.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+