ವಾಟ್ಸ್ಆಪ್ ಗ್ರೂಪ್‌ಗಳ ಕಿರಿಕಿರಿಗೆ ಬ್ರೇಕ್ ಹಾಕುವುದು ಹೇಗೆ?

|

ನಮ್ಮ ಜೀವನದ ಅವಿಬಾಜ್ಯ ಸಂವಹನ ಮಾಧ್ಯಮವಾಗಿ ಬಳಕೆಯಾಗುತ್ತಿರುವ ವಾಟ್ಸ್ಆಪ್ ಬಳಕೆಯಲ್ಲಿ ಕಿರಿಕಿರಿ ಎನಿಸುವುದು ವಾಟ್ಸ್ಆಪ್ ಗ್ರೂಪ್‌ಗಳಿಂದ. ಆರಂಭದಲ್ಲಿ ವಾಟ್ಸ್ಆಪ್ ಗ್ರೂಪ್‌ಗೆ ಒಬ್ಬರೇ ಆಡ್ಮಿನ್ ಇರುತ್ತಿದ್ದರು. ಈಗ ಹಾಗಿಲ್ಲ, ಗ್ರೂಪ್ ರಚಿಸಿದವರು ಎಷ್ಟು ಜನರನ್ನು ಬೇಕಾದರೂ ಆಡ್ಮಿನ್ ಆಗಿ ಆಯ್ಕೆ ಮಾಡಿಕೊಳ್ಳಬಹುದು. ಹೀಗಾಗಿ ನೀವು ಒಂದು ಗ್ರೂಪ್‌ನಿಂದ ಎಕ್ಸಿಟ್ ಆದರೂ, ಅಷ್ಟೂ ಆಡ್ಮಿನ್‌ಗಳಲ್ಲಿ ಯಾರಾದರೊಬ್ಬರು ಮತ್ತೆ ಆ ಗ್ರೂಪಿಗೆ ಸೇರಿಸಬಹುದು. ಅವರಲ್ಲಿ ಎಲ್ಲರನ್ನೂ ಬ್ಲಾಕ್ ಮಾಡುವುದು ಆಗದ ಹೋಗದ ಮಾತು.

ವಾಟ್ಸ್ಆಪ್ ಗ್ರೂಪ್‌ಗಳ ಕಿರಿಕಿರಿಗೆ ಬ್ರೇಕ್ ಹಾಕುವುದು ಹೇಗೆ?

ಇನ್ನು ಕೆಲವೊಮ್ಮೆ ನಿಮ್ಮ ಸ್ನೇಹಿತರು ನಿಮ್ಮನ್ನು ಒಂದಲ್ಲ ಒಂದು ಗ್ರೂಪಿಗೆ ಸೇರಿಸುತ್ತಾರೆ. ನಿಮ್ಮ ಅನುಮತಿಯಿಲ್ಲದೆಯೇ ಸೇರಿಸುವುದು ನಿಮಗೆ ಕಿರಿಕಿರಿ ಉಂಟು ಮಾಡುತ್ತದೆ. ಆದರೆ, ಅವರ ದಾಕ್ಷಿಣ್ಯಕ್ಕೋ, ಆತ್ಮೀಯತೆಗೋ ಆ ಗ್ರೂಪಿನಿಂ ನಿರ್ಗಮಿಸುವುದು ಸಾಧ್ಯವಾಗುತ್ತಿಲ್ಲ ಅಲ್ಲವೇ?..ಚಿಂತಿಸಬೇಡಿ. ಇಂತಹ ಸಮಸ್ಯೆಗೆ ವಾಟ್ಸ್ಆಪ್ ಆಪ್‌ನಲ್ಲೇ ಪರಿಹಾರವೂ ಇದೆ. ಇಲ್ಲ ಸಲ್ಲದ ಫಾರ್ವರ್ಡ್ ಸಂದೇಶಗಳು, ಫೇಕ್ ಸುದ್ದಿಗಳು ಜತೆಗೆ ಗುಡ್‌ಮಾರ್ನಿಂಗ್ ಮತ್ತು ಗುಡ್ ನೈಟ್‌ಗಳಿಗಷ್ಟೇ ಸೀಮಿತವಾಗುವಂತಹ ಗ್ರೂಪ್‌ಗಳಿಂದ ನೀವು ದೂರ ಉಳಿಯಬಹುದು.

ಇದಕ್ಕಾಗಿ ವಾಟ್ಸ್ಆಪ್ ತೆರೆಯಿರಿ. ಅಲ್ಲಿ ಕಾಣಿಸುವ ಮೂರು ಚುಕ್ಕಿಗಳನ್ನು ಕ್ಲಿಕ್ ಮಾಡಿ. ಅದರಲ್ಲಿ ಸೆಟ್ಟಿಂಗ್ಸ್ ಆಯ್ಕೆ ಮಾಡಿಕೊಳ್ಳಿ. ನಂತರ ಮೇಲ್ಭಾಗದಲ್ಲಿ ಕಾಣಿಸುವ 'ಅಕೌಂಟ್' ಆಯ್ಕೆ ಮಾಡಿ, ನಂತರ 'ಪ್ರೈವೆಸಿ' ಕ್ಲಿಕ್ ಮಾಡಿಕೊಳ್ಳಿ. ಇದರ ಕೆಳಗೆ ನೋಡಿದರೆ, Groups ಅಂತ ಬರೆದಿರುತ್ತದೆ. ಅದನ್ನು ಕ್ಲಿಕ್ ಮಾಡಿ. ಅದರಲ್ಲಿಯೂ ಮೂರು ಆಯ್ಕೆಗಳಿವೆ. ನಿಮ್ಮನ್ನು ಯಾವುದೇ ಗ್ರೂಪಿಗೆ ಯಾರೆಲ್ಲಾ ಸೇರಿಸಬಹುದು ಎಂದು ಅಲ್ಲೇ ಆಯ್ದುಕೊಳ್ಳಬಹುದು. Nobody ಆಯ್ಕೆ ಮಾಡಿದರೆ, ಯಾರೂ ಕೂಡ ನಿಮ್ಮನ್ನು ಮತ್ತೆ ಮತ್ತೆ ಗ್ರೂಪಿಗೆ ಸೇರಿಸುವುದು ಸಾಧ್ಯವಾಗುವುದಿಲ್ಲ.

ವಾಟ್ಸ್ಆಪ್ ಗ್ರೂಪ್‌ಗಳ ಕಿರಿಕಿರಿಗೆ ಬ್ರೇಕ್ ಹಾಕುವುದು ಹೇಗೆ?

ಇನ್ನು Groups ಆಯ್ಕೆಯಲ್ಲಿಯೂ ಮೂರು ಆಯ್ಕೆಗಳಿರುವುದನ್ನು ನೀವು ನೋಡಬಹುದು. ಅದರಲ್ಲಿ ನಿಮ್ಮನ್ನು ಯಾವುದೇ ಗ್ರೂಪಿಗೆ ಯಾರೆಲ್ಲಾ ಸೇರಿಸಬಹುದು ಎಂದು ನೀವು ಆಯ್ದುಕೊಳ್ಳಬಹುದು. Nobody ಆಯ್ಕೆ ಮಾಡಿದರೆ, ಯಾರೂ ಕೂಡ ನಿಮ್ಮನ್ನು ಮತ್ತೆ ಮತ್ತೆ ಗ್ರೂಪಿಗೆ ಸೇರಿಸುವುದು ಸಾಧ್ಯವಾಗುವುದಿಲ್ಲ. ಗ್ರೂಪಿಗೆ ಸೇರಲೇಬೇಕೆಂದಿದ್ದರೆ, ಆಡ್ಮಿನ್ ಅಥವಾ ಬೇರೆ ಯಾವುದೇ ಸದಸ್ಯರು ನಿಮಗೆ ಖಾಸಗಿಯಾಗಿ ಒಂದು ಲಿಂಕ್ ಕಳುಹಿಸಬಹುದು ಮತ್ತು ಅದರ ಮೂಲಕ ನಿಮಗಿಷ್ಟವಿದ್ದರೆ ಆ ಗ್ರೂಪಿಗೆ ಸೇರಿಕೊಳ್ಳಬಹುದು.

ಶಿಯೋಮಿಗೆ ಫುಲ್‌ಸ್ಟಾಪ್ ಇಡಲಿದೆಯೇ ಹೊಸ 'ಗ್ಯಾಲಕ್ಸಿ ಎಂ 30ಎಸ್'?ಶಿಯೋಮಿಗೆ ಫುಲ್‌ಸ್ಟಾಪ್ ಇಡಲಿದೆಯೇ ಹೊಸ 'ಗ್ಯಾಲಕ್ಸಿ ಎಂ 30ಎಸ್'?

ಇನ್ನು ಅಲ್ಲಿಯೇ ನೀವು ಯಾವ ಸಮಯದಲ್ಲಿ ಕೊನೆಯ ಬಾರಿಗೆ ವಾಟ್ಸ್ಆಪ್‌ನಲ್ಲಿ ಸಕ್ರಿಯವಾಗಿದ್ದಿರಿ (Last Seen) ಎಂದು ನಿಮ್ಮ ಸಂಪರ್ಕ ಸಂಖ್ಯೆ ಇರುವ ಎಲ್ಲರಿಗೂ ತಿಳಿಯುವಂತೆ ಕಾಣಿಸುವ ಆಯ್ಕೆ ಇರುತ್ತದೆ. ಅದನ್ನು ಕ್ಲಿಕ್ ಮಾಡಿ, Nobody ಆಯ್ಕೆ ಮಾಡಿಕೊಂಡರೆ ಬೇರೆಯವರಿಗೆ ಯಾರಿಗೂ ಈ ಮಾಹಿತಿ ಕಾಣಿಸುವುದಿಲ್ಲ. ಅಥವಾ ನಿಮ್ಮ 'ಸಂಪರ್ಕ ಸಂಖ್ಯೆಯ ಪಟ್ಟಿಯಲ್ಲಿರುವವರಿಗೆ ಮಾತ್ರ', ಇಲ್ಲವೇ ಎಲ್ಲರಿಗೂ ಕಾಣಿಸಲಿ ಎಂದು ನೀವು ಸೆಟ್ಟಿಂಗ್ಸ್ ಬದಲಿಸಿಕೊಳ್ಳಬಹುದು. ಇದರಿಂದಮೆಸೇಜ್ ನೋಡಿ ರಿಪ್ಲೈ ಮಾಡದಿದ್ದರೂ ಅವರಿಗೆ ತಿಳಿಯುವುದಿಲ್ಲ.

Best Mobiles in India

English summary
Under the new controls, a WhatsApp user will be able to go to Settings > Accounts > Privacy > Groups in the app and then select from three options.to know more visit to kannada.gizot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X