Home
ಟೆಕ್ ನೌಕರಿ

Google ನಲ್ಲಿ ನಿಮ್ಮ ಆನ್‌ಲೈನ್ ಆಕ್ಟಿವಿಟಿಯನ್ನು ನಿರ್ವಹಿಸುವುದು ಹೇಗೆ ಗೊತ್ತಾ?

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಇವತ್ತಿನ ಜಮಾನದಲ್ಲಿ ಯಾವುದೇ ಮಾಹಿತಿ ಬೇಕಿದ್ದರೂ ಮೊದಲು ನೆನಪಾಗೊದೆ ಗೂಗಲ್‌. ಅಷ್ಟರ ಮಟ್ಟಿಗೆ ನಮ್ಮ ನಿಮ್ಮ ನಡುವೆ ಗೂಗಲ್‌ ಜನಪ್ರಿಯತೆಯನ್ನ ಪಡೆದುಕೊಮಡಿದೆ. ಇನ್ನು ಗೂಗಲ್‌ನಲ್ಲಿ ನೀವು ಎಷ್ಟು ಮಾಹಿತಿ ತೆಗೆಯುತ್ತಿರೋ ಅಷ್ಟು ಗೂಗಲ್‌ ಕುಡ ನಿಮ್ಮ ಬಗ್ಗೆ ತಿಳಿದುಕೊಳ್ಳಲಿದೆ. ಅಷ್ಟೇ ಅಲ್ಲ ನಿಮ್ಮ ಇಷ್ಟದ ವಿಷಯಗಳ ಬಗ್ಗೆ ಗೂಗಲ್‌ ತನ್ನಲ್ಲೇ ಲೆಕ್ಕಾಚಾರ ಹಾಕಿಕೊಳ್ಳಲಿದೆ. ಅಷ್ಟೇ ಅಲ್ಲ ನೀವು ಯಾರು, ನಿಮಗೆಯಾವ ವಿಷಯ ಇಷ್ಟ, ನೀವು ಎಲ್ಲಿದ್ದೀರಿ ಇದೆಲ್ಲಾ ಹೇಗೆ ಸಾದ್ಯ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌

ಹೌದು, ಗೂಗಲ್‌ ನೀವು ಸರ್ಚ್‌ ಮಾಡುವ ವಿಚಾರಗಳು, ನೀವು ಡೌನ್‌ಲೋಡ್ ಮಾಡಿದ ಅಪ್ಲಿಕೇಶನ್‌ಗಳು ಮತ್ತು ನೀವು ಆಡಿದ ಎಲ್ಲಾ ಗೇಮ್‌ಗಳ ಬಗ್ಗೆ ತನ್ನಲ್ಲಿ ಮಾಹಿತಿಯನ್ನ ಉಳಿಸಿಕೊಳ್ಳಲಿದೆ. ನೀವು ಸರ್ಚ್‌ ಹಿಸ್ಟರಿ ಡಿಲೀಟ್‌ ಮಾಡಿದ್ದರು ಕುಡ ತನ್ನಲ್ಲಿ ಈ ಮಾಹಿತಿಯನ್ನ ಇಟ್ಟುಕೊಂಡಿರುತ್ತದೆ. ಅಷ್ಟೆ ಅಲ್ಲ ನೀವು ಆನ್‌ಲೈನ್‌ನಲ್ಲಿ ಹುಡುಕುತ್ತಿರುವ ಎಲ್ಲ ವಿಷಯಗಳು ಯಾವುವು ಅನ್ನೊದನ್ನ ಸಹ ಇದು ತಿಳಿದುಕೊಂಡಿರುತ್ತದೆ. ಸರಳವಾಗಿ ಹೇಳುವುದಾದರೆ, ನಿಮ್ಮ ಬಗ್ಗೆ Googleಗೆ ಎಲ್ಲವೂ ತಿಳಿದಿರುತ್ತದೆ. ಇದೆಲ್ಲಾ ಹೇಗೆ ಸಾದ್ಯ ಈ ರೀತಿ ಗೂಗಲ್‌ನಲ್ಲಿ ಉಳಿದುಕೊಳ್ಳುವ ಮಾಹಿತಿಯನ್ನ ಹೇಗೆ ಸಂಗ್ರಹಿಸಬೇಕು ಎಂದು ಬಳಕೆದಾರರು ಸೂಚಿಸಲು ಸಾದ್ಯ ಇದೆಯಾ ಇದೆಲ್ಲದರ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌

ಸದ್ಯ ಗೂಗಲ್‌ ತನ್ನ ಬಳಕೆದಾರರ ಯಾವೆಲ್ಲಾ ವಿಚಾರಗಳನ್ನ ಸರ್ಚ್‌ ಮಾಡುತ್ತಾನೆ. ಯಾವುದನ್ನ ಡೌನ್‌ಲೋಡ್‌ ಮಾಡುತ್ತಾನೆ. ಯಾವ ವಿಚಾರವನ್ನ ಹೆಚ್ಚು ವೀಕ್ಷಿಸುತ್ತಾನೆ. ಆತನ ಅಭಿರುಚಿ ಏನು, ಅನ್ನೊದನ್ನ ಗೂಗಲ್‌ ಚೆನ್ನಾಗಿ ತಿಳಿದುಕೊಂಡಿರುತ್ತದೆ. ಆದರೆ ಗೂಗಲ್ ನಿಮಗೆ ವ್ಯಾಪಕವಾದ ನಿಯಂತ್ರಣಗಳನ್ನು ಒದಗಿಸುತ್ತಿರುವುದರಿಂದ ಗೂಗಲ್ ಯಾವ ಮಾಹಿತಿಯನ್ನು ಸಂಗ್ರಹಿಸಬೇಕೆಂದು ನಿಖರವಾಗಿ ಆಯ್ಕೆ ಮಾಡಲು ಬಳಕೆದಾರರಿಗೆ ಅವಕಾಶ ನೀಡುತ್ತದೆ. ಅಲ್ಲದೆ ಗೂಗಲ್‌ ಈ ಮಾಹಿತಿಯನ್ನು ಎಷ್ಟು ಸಮಯದವರೆಗೆ ಸಂಗ್ರಹಿಸಬೇಕೆಂದು ಸಹ ಬಳಕೆದಾರರು ಆಯ್ಕೆ ಮಾಡಲು ಅವಕಾಶವನ್ನ ನೀಡಲಾಗಿದೆ. ಆದ್ದರಿಂದ, Google ನೊಂದಿಗೆ ನಿಮ್ಮ ಆನ್‌ಲೈನ್ ಚಟುವಟಿಕೆಯನ್ನು ನೀವು ಹೇಗೆ ನಿರ್ವಹಿಸಬಹುದು ಅನ್ನೊದನ್ನ ಹಂತಹಂತವಾಗಿ ತಿಳಿದುಕೊಳ್ಳೋಣ ಬನ್ನಿರಿ.

Google

ಹಂತ 1: ನಿಮ್ಮ Google ಖಾತೆಗೆ ಸೈನ್ ಇನ್ ಮಾಡಿ.

ಹಂತ 2: ‘Manage your data and personalisation' ಆಯ್ಕೆಯನ್ನು ಕ್ಲಿಕ್ ಮಾಡಿ.

ಹಂತ 3: ಚಟುವಟಿಕೆ ನಿಯಂತ್ರಣಗಳಿಗೆ ಕೆಳಗೆ ಸ್ಕ್ರಾಲ್ ಮಾಡಿ ಮತ್ತು ವೆಬ್ ಮತ್ತು ಅಪ್ಲಿಕೇಶನ್ ಚಟುವಟಿಕೆ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಹಂತ 4: ನಿಮ್ಮ ಯಾವುದೇ ಆನ್‌ಲೈನ್ ಅಥವಾ ಅಪ್ಲಿಕೇಶನ್ ಆಧಾರಿತ ಮಾಹಿತಿಯನ್ನು Google ಸಂಗ್ರಹಿಸಲು ನೀವು ಬಯಸದಿದ್ದರೆ ವೆಬ್ ಮತ್ತು ಅಪ್ಲಿಕೇಶನ್ ಚಟುವಟಿಕೆ ಬಟನ್ ಅನ್ನು ಟಾಗಲ್ ಮಾಡಿ.

ಆನ್‌ಲೈನ್

ಹಂತ 5: ನಿಮ್ಮ ಆನ್‌ಲೈನ್ ಚಟುವಟಿಕೆಯ ಡೇಟಾವನ್ನು ಸ್ವಯಂಚಾಲಿತವಾಗಿ ಅಳಿಸಿದಾಗ 3 ತಿಂಗಳು ಅಥವಾ 18 ತಿಂಗಳುಗಳನ್ನು ಮಿತಿಯಾಗಿ ಹೊಂದಿಸಲು automatically erased ಬಟನ್ ಟ್ಯಾಪ್ ಮಾಡಿ.

ಹಂತ 6: ನಿಮ್ಮ ಸಂಪೂರ್ಣ ಆನ್‌ಲೈನ್ ಚಟುವಟಿಕೆಯ date-wise ದಾಖಲೆಯನ್ನು ನೋಡಲು Manage Activity ಬಟನ್ ಟ್ಯಾಪ್ ಮಾಡಿ.

ಹಂತ 7: individual entries, ಅಳಿಸಲು, ಪ್ರತಿ ಐಟಂನ ಪಕ್ಕದಲ್ಲಿರುವ ಹ್ಯಾಂಬರ್ಗರ್ ಮೆನು ಕ್ಲಿಕ್ ಮಾಡಿ ನಂತರ delete ಬಟನ್ ಕ್ಲಿಕ್ ಮಾಡಿ.

ಹಂತ 8: ನಿರ್ದಿಷ್ಟ ದಿನಾಂಕದಿಂದ ನಮೂದುಗಳನ್ನು ಅಳಿಸಲು, ಪ್ರತ್ಯೇಕ ದಿನಾಂಕದ ಪಕ್ಕದಲ್ಲಿರುವ trash ಬಟನ್ ಕ್ಲಿಕ್ ಮಾಡಿ.

ಗೂಗಲ್

ಹಂತ 9: ಎಲ್ಲಾ ನಮೂದುಗಳನ್ನು ಅಳಿಸಲು, ಹುಡುಕಾಟ ಪಟ್ಟಿಯ ಬಲ ಮೂಲೆಯಲ್ಲಿರುವ ಹ್ಯಾಂಬರ್ಗರ್ ಮೆನು ಕ್ಲಿಕ್ ಮಾಡಿ> click on Delete Activity by > select the Custom Range button>ದಿನಾಂಕಗಳನ್ನು ಸೇರಿಸಿ ಮತ್ತು ಮುಂದಿನ ಬಟನ್ ಕ್ಲಿಕ್ ಮಾಡಿ.

ಹೀಗೆ ಮಾಡುವುದರಿಂದ ನೀವು ಆನ್‌ಲೈನ್‌ನಲ್ಲಿ ನಿರ್ವಹಿಸುವ ಚಟುವಟಿಕೆಗಳನ್ನ ಗೂಗಲ್‌ನಲ್ಲಿ ನಿರ್ವಹಿಸಬಹುದಾಗಿದೆ. ಗೂಗಲ್‌ ನಿಮ್ಮ ಯಾವ ವಿಚಾರಗಲನ್ನ ಗಮನಿಸಬೇಕು. ಯಾವುದನ್ನ ತಿಳಿದುಕೊಳ್ಳಬಾರದು ಅನನ್ಒದನ್ನ ನಿರ್ವಹಣೆ ಮಾಡಬಹುದಾಗಿದೆ.

Best Mobiles in India

English summary
Google offers its users controls that enable them to set their online activity data such that it is automatically deleted within 3 or 18 months.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+