ವೀಡಿಯೊಗಳನ್ನು MP3 ಫೈಲ್‌ಗೆ ಕನ್ವರ್ಟ್‌ ಮಾಡಲು ಹೀಗೆ ಮಾಡಿ?

|

ಮ್ಯೂಸಿಕ್‌ ಅನ್ನು ಆಲಿಸುತ್ತಾ ಕಾಲ ಕಳೆಯದವರೂ ಯಾರು ಇಲ್ಲ. ಅದರಲ್ಲೂ ದೃಶ್ಯರೂಪದಲ್ಲಿ ಹಾಡನ್ನು ನೋಡುತ್ತಾ ಕೇಳುತ್ತಾ ಸವಿಯೋದೆ ಚಂದ. ಆದರೂ ಕೆಲವು ಸಂದರ್ಭದಲ್ಲಿ ವೀಡಿಯೋ ಮ್ಯೂಸಿಕ್‌ ಅನ್ನು ಆಡಿಯೋ ರೂಪದಲ್ಲಿ ಕೇಳುವ ಆಸೆಯಾಗೋದು ಸಾಮಾನ್ಯ. ಇದಕ್ಕಾಗಿಯೇ ವೀಡಿಯೋವನ್ನು ಆಡಿಯೋ ಕನ್ವರ್ಟ್‌ ಮಾಡುವ ಅನೇಕ ಅಪ್ಲಿಕೇಶನ್‌ಗಳು ಲಭ್ಯವಿವೆ. ಇವುಗಳ ಮೂಲಕ ನಿಮ್ಮ ವೀಡಿಯೋವನ್ನು MP3 ಸ್ವರೂಪಕ್ಕೆ ಕನ್ವರ್ಟ್‌ ಮಾಡುವುದು ಸುಲಭವಾಗಿದೆ.

ವೀಡಿಯೋ

ಹೌದು, ವೀಡಿಯೋ ಫೈಲ್‌ ಅನ್ನು MP3 ಫೈಲ್ ಆಗಿ ಕನ್ವರ್ಟ್‌ ಮಾಡಬಹುದಾಗಿದೆ. ವೀಡಿಯೋಗಳನ್ನು ಸ್ಟೋರೇಜ್‌ ಮಾಡುವುದರಿಂದ ನಿಮ್ಮ ಫೋನ್‌ನಲ್ಲಿ ಸ್ಪೇಸ್‌ ಸಮಸ್ಯೆ ಸೃಷ್ಟಿಯಾಗಬಹುದು. ಆದರೆ ಆಡಿಯೋ ಸ್ವರೂಪದಲ್ಲಿ ಸ್ಟೋರೇಜ್‌ ಸಮಸ್ಯೆ ಕಂಡುಬರುವುದಿಲ್ಲ. ಆದರಿಂದ ನಿಮ್ಮ ನೆಚ್ಚಿನ ವೀಡಿಯೋ ಹಾಡುಗಳನ್ನ MP3 ರೂಪದಲ್ಲಿ ಕನ್ವರ್ಟ್‌ ಬದಲಾಯಿಸಬಹುದು. ಹಾಗಾದ್ರೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ವೀಡಿಯೋಗಳನ್ನು MP3ಗೆ ಕನ್ವರ್ಟ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವೀಡಿಯೋ

ವೀಡಿಯೋದಲ್ಲಿರುವ ಆಡಿಯೋವನ್ನು MP3 ಸ್ವರೂಪಕ್ಕೆ ಕನ್ವರ್ಟ್‌ ಮಾಡುವುದಕ್ಕೆ ಅಡೋಬ್ ಮೀಡಿಯಾ ಎನ್‌ಕೋಡರ್ ಉತ್ತಮ ಆಯ್ಕೆಯಾಗಿದೆ. ಅಡೋಬ್ ಮೀಡಿಯಾ ಎನ್‌ಕೋಡರ್ ಬಳಸಿ ವೀಡಿಯೊವನ್ನು MP3 ಗೆ ಪರಿವರ್ತಿಸುವುದು ಸುಲಭವಾಗಿದೆ. ಆದರಿಂದ ಹೆಚ್ಚಿನ ಜನರು ವಿಡಿಯೊವನ್ನು ಆಡಿಯೋಗೆ ಕನ್ವರ್ಟ್‌ ಮಾಡಲು ಅಡೋಬ್ ಅನ್ನು ಬಳಸುತ್ತಾರೆ. ಅಡೋಬ್ ಮೀಡಿಯಾ ಎನ್‌ಕೋಡರ್ ಮೂಲಕ ನೀವು ವಿಡಿಯೊವನ್ನು MP3ಗೆ ಕನ್ವರ್ಟ್‌ ಮಾಡುವುದಕ್ಕೆ ಕೆಳಗಿನ ಹಂತಗಳಲ್ಲಿ ತಿಳಿಯಿರಿ.

ವೀಡಿಯೋ ಮ್ಯೂಸಿಕ್‌ ಅನ್ನು MP3ಗೆ ಕನ್ವರ್ಟ್‌ ಮಾಡೋದು ಹೇಗೆ?

ವೀಡಿಯೋ ಮ್ಯೂಸಿಕ್‌ ಅನ್ನು MP3ಗೆ ಕನ್ವರ್ಟ್‌ ಮಾಡೋದು ಹೇಗೆ?

ಹಂತ:1 ಮೊದಲಿಗೆ ಅಡೋಬ್ ಮೀಡಿಯಾ ಎನ್‌ಕೋಡರ್ ತೆರೆಯಿರಿ.
ಹಂತ:2 ನಂತರ ನೀವು ಕ್ಯೂ ವಿಂಡೋಗೆ ಪರಿವರ್ತಿಸಲು ಬಯಸುವ ವೀಡಿಯೊ ಫೈಲ್ ಅನ್ನು ಡ್ರ್ಯಾಗ್‌ ಮಾಡಿ.
ಹಂತ:3 ಡ್ರಾಪ್‌ಡೌನ್ ಬಾಣದ ಗುರುತಿನ ಮೇಲೆ ಕ್ಲಿಕ್ ಮಾಡಿ ಮತ್ತು MP3 ಫರ್ಮಾಟ್‌ ಆಯ್ಕೆಮಾಡಿ.
ಹಂತ:4 ನಿಮ್ಮ ಫೈಲ್ ಸೇವ್‌ ಮಾಡಲು ಔಟ್‌ಪುಟ್ ಫೈಲ್ ಅಡಿಯಲ್ಲಿ ನೀಲಿ ಟೆಕ್ಸ್ಟ್‌ ಅನ್ನು ಕ್ಲಿಕ್ ಮಾಡಿ.
ಹಂತ:5 ಇದೀಗ ನೀವು ಆಯ್ಕೆ ಮಾಡಿದ ಫೈಲ್ ಅನ್ನು ಕನ್ವರ್ಟ್‌ ಮಾಡಲು ಮೇಲಿನ ಬಲ ಮೂಲೆಯಲ್ಲಿರುವ ಹಸಿರು ಪ್ಲೇ ಬಟನ್ ಅನ್ನು ಕ್ಲಿಕ್ ಮಾಡಿ.
ಹೀಗೆ ಮಾಡುವ ಮೂಲಕ ವೀಡಿಯೋವನ್ನು ಮ್ಯೂಸಿಕ್‌ಗೆ ಕನ್ವರ್ಟ್‌ ಮಾಡಬಹುದಾಗಿದೆ.

ಯೂಟ್ಯೂಬ್‌

ಇದಲ್ಲದೆ ಯೂಟ್ಯೂಬ್‌ ವೀಡಿಯೊಗಳನ್ನು ಥರ್ಡ್‌ ಪಾರ್ಟಿ ಅಪ್ಲಿಕೇಶನ್‌ಗಳ ಮೂಲಕ MP3ಗೆ ಕನ್ವರ್ಟ್‌ ಮಾಡಬಹುದಾಗಿದೆ. ಆದರೆ ನೀವು ಇಲ್ಲಿ ಗಮನಿಸಬೇಕಾದ ಮುಖ್ಯ ವಿಚಾರವೊಂದಿದೆ. ನೀವು ನಿಮ್ಮ ಸ್ವಂತ ವೀಡಿಯೋ ಆಗಿದ್ದರೆ ಯಾವುದೇ ಕಾಪಿರೈಟ್ಸ್‌ ಉಲ್ಲಂಘನೆಯ ಭಯವಿಲ್ಲದೆ ಕನ್ವರ್ಟ್‌ ಮಾಡಬಹುದಾಗಿದೆ. ಆದರೆ ಬೇರೆಯವರ ವೀಡಿಯೋಗಳನ್ನ MP3ಗೆ ಕನ್ವರ್ಟ್‌ ಮಾಡುವಾಗ ಕಾಪಿರೈಟ್ಸ್‌ ಬಗ್ಗೆ ಎಚ್ಚರಿಕೆಯಿಂದ ಇರಬೇಕಾದ ಅಗತ್ಯವಿದೆ. ಇದಲ್ಲದೆ ಯೂಟ್ಯೂಬ್‌ ವೀಡಿಯೊಗಳನ್ನು MP3ಗೆ ಕನ್ವರ್ಟ್‌ ಮಾಡಲು ಬಯಸುವ ವೆಬ್‌ಸೈಟ್‌ಗಳ ಬಗ್ಗೆಯೂ ಎಚ್ಚರಿಕೆ ವಹಿಸಬೇಕು. ಏಕೆಂದರೆ ಎಲ್ಲಾ ವೆಬ್‌ಸೈಟ್‌ಗಳು ವಿಶ್ವಾಸಾರ್ಹವಲ್ಲ. ಏಕೆಂದರೆ ಕೆಲವು ನಕಲಿ ವೆಬ್‌ಸೈಟ್‌ಗಳ ಮೂಲಕ ನಿಮ್ಮ ಡಿವೈಸ್‌ಗೆ ಮಾಲ್‌ವೇರ್‌ ಅಟ್ಯಾಕ್‌ ಆಗುವ ಸಾಧ್ಯತೆ ಇದೆ. ಆದರಿಂದ ನೀವು ವೀಡಿಯೋವನ್ನು ಮ್ಯೂಸಿಕ್‌ಗೆ ಕನ್ವರ್ಟ್‌ ಮಾಡಲು ವಿಶ್ವಾಸಾರ್ಹ ವೆಬ್‌ಸೈಟ್‌ ಬಳಸಬೇಕು.

ಯೂಟ್ಯೂಬ್ ವಿಡಿಯೋವನ್ನು MP3 ಗೆ ಕನ್ವರ್ಟ್‌ ಮಾಡುವುದು ಹೇಗೆ?

ಯೂಟ್ಯೂಬ್ ವಿಡಿಯೋವನ್ನು MP3 ಗೆ ಕನ್ವರ್ಟ್‌ ಮಾಡುವುದು ಹೇಗೆ?

ಹಂತ:1 ಯೂಟ್ಯೂಬ್ ವೀಡಿಯೋ ಡೌನ್‌ಲೋಡ್‌ ಮಾಡುವುದಕ್ಕೆ ಉತ್ತಮ ಅಪ್ಲಿಕೇಶನ್‌ ಸರ್ಚ್‌ ಮಾಡಿ, ಇದರಲ್ಲಿ ನೀವು ಟ್ಯೂಬ್‌ಮೇಟ್ ಅನ್ನು ಡೌನ್‌ಲೋಡ್‌ ಮಾಡಿ.
ಹಂತ:2 ಡೌನ್‌ಲೋಡ್ ಮಾಡಿ ಮತ್ತು ಇನ್‌ಸ್ಟಾಲ್‌ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
ಹಂತ:3 ನೀವು ವೀಡಿಯೊ ಪ್ಲೇ ಮಾಡಿದ ನಂತರ ಡೌನ್‌ಲೋಡ್ ಬಟನ್ ಅನ್ನು ಹುಡುಕಿ.
ಹಂತ:4 ವೀಡಿಯೊದ ರೆಸಲ್ಯೂಶನ್ ಆಯ್ಕೆಮಾಡಿ ಮತ್ತು ಫೈಲ್ ಅನ್ನು ಡೌನ್‌ಲೋಡ್ ಮಾಡಿ.
ಹಂತ:5 ವೀಡಿಯೊವನ್ನು ಡೌನ್‌ಲೋಡ್ ಮಾಡಿದ ನಂತರ ಹೋಮ್‌ಸ್ಕ್ರೀನ್‌ಗೆ ಹಿಂತಿರುಗಿ ಮತ್ತು 'ಆಯ್ಕೆಗಳು' ಟ್ಯಾಬ್ ಕ್ಲಿಕ್ ಮಾಡಿ.
ಹಂತ:6 'ಕನ್ವರ್ಟ್ ಟು MP3' ಮತ್ತು 'ಸೇವ್ MP3' ಸೇರಿದಂತೆ ಇನ್ನೂ ಎರಡು ಆಯ್ಕೆಗಳನ್ನು ಕಾಣಬಹುದಾಗಿದೆ.
ಹಂತ:7 ಇದೀಗ ನಿಮ್ಮ ಸ್ಮಾರ್ಟ್‌ಫೋನ್‌ನ ಆಂತರಿಕ ಸಂಗ್ರಹಣೆಯಲ್ಲಿ ಆಡಿಯೊ ಫೈಲ್ ಅನ್ನು ಉಳಿಸಲು ನೀವು ಬಯಸಿದರೆ ಎರಡನೆಯದನ್ನು ಆಯ್ಕೆ ಮಾಡಿ.
ಹಂತ:8 ಮೇಲೆ ತಿಳಿಸಿದ ಹಂತಗಳು ಪೂರ್ಣಗೊಂಡ ನಂತರ ನಿಮ್ಮ ಯುಟ್ಯೂಬ್‌ ವಿಡಿಯೋ ಇದೀಗ ನಿಮಗೆ MP3 ರೂಪದಲ್ಲಿ ಲಭ್ಯವಾಗಲಿದೆ.

Best Mobiles in India

English summary
You can convert a video to an MP3 file using Adobe Media Encoder, which can help save you storage space on your device.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X