ಆನ್‌ಲೈನ್‌ನಲ್ಲಿ ಪಿಡಿಎಫ್ ಫೈಲ್ ಅನ್ನು ವರ್ಡ್ ಫೈಲ್ ಆಗಿ ಪರಿವರ್ತಿಸುವುದು ಹೇಗೆ?
ಪ್ರಸ್ತುತ ದಿನಗಳಲ್ಲಿ ಬಳಕೆದಾರರು ದಾಖಲೆಗಳನ್ನು ಪಿಡಿಎಫ್ ಫೈಲ್ ರೂಪದಲ್ಲಿ ಬಳಸುತ್ತಾರೆ. ಡಾಕ್ಯುಮೆಂಟ್ ಪಿಡಿಎಫ್ ಫೈಲ್ ಫಾರ್ಮ್ಯಾಟ್‌ನಲ್ಲಿ ಇದ್ದರೆ ಬೇರೆಯವರಿಗೆ ಶೇರ್ ಮಾಡುವುದು ಸುಲಭವಾಗಲಿದೆ. ಅಲ್ಲದೆ ಸುರಕ್ಷತೆಯ ದೃಷ್ಟಿಯಿಂದಲೂ ಇದು ಉತ್ತಮವಾಗಿದೆ. ಆದರೆ ಪಡಿಎಫ್ ಫೈಲ್‌ನಲ್ಲಿ ಯಾವುದೇ ಮಾಹಿತಿಯನ್ನು ನೀವು ಎಡಿಟ್ ಮಾಡಲು ಬಯಸಿದರೆ ಅದು ಸಾದ್ಯವಾಗುವುದಿಲ್ಲ. ನೀವು ಪಿಡಿಎಫ್ ಫೈಲ್‌ನಲ್ಲಿ ಎಡಿಟ್ ಮಾಡಬೇಕಾದರೆ ಆ ಫೈಲ್ ಅನ್ನು ನೀವು ವರ್ಡ್ ಫೈಲ್ ಆಗಿ ಕನ್ವರ್ಟ್ ಮಾಡಬೇಕಾಗುತ್ತದೆ.

ಹೌದು, ಬಹುತೇಕ ಬಳಕೆದಾರರು ದಾಖಲೆಗಳನ್ನು ಪಿಡಿಎಫ್ ಫೈಲ್‌ನಲ್ಲಿ ಸೆಂಡ್ ಮಾಡುತ್ತಾರೆ. ಆದರೆ ಪಿಡಿಎಫ್ ಫೈಲ್‌ನಲ್ಲಿ ನೀವು ಎಡಿಟ್ ಮಾಡಬೇಕಾದರೆ ಅದನ್ನು ವರ್ಡ್ ಫೈಲ್‌ಗೆ ಕನ್ವರ್ಟ್ ಮಾಡಬೇಕಾಗುತ್ತದೆ. ಇನ್ನು ಪಿಡಿಎಫ್ ಫೈಲ್ ಅನ್ನು ವರ್ಡ್ ಫೈಲ್‌ಗೆ ಬದಲಾಯಿಸಲು ಆನ್‌ಲೈನ್‌ನಲ್ಲಿ ಹಲವು ಆಯ್ಕೆಗಳಿವೆ. ಇವುಗಳ ಮೂಲಕ ನೀವು ಸುಲಭವಾಗಿ ಪಿಡಿಎಫ್‌ನಿಂದ ವರ್ಡ್ ಫೈಲ್‌ಗೆ ಬದಲಾಯಿಸಬಹುದಾಗಿದೆ.

ಆನ್‌ಲೈನ್‌ನಲ್ಲಿ ಪಿಡಿಎಫ್ ಫೈಲ್ ಅನ್ನು ವರ್ಡ್ ಫೈಲ್ ಆಗಿ ಪರಿವರ್ತಿಸುವುದು ತುಂಬಾ ಸರಳವಾಗಿದೆ. ಸದ್ಯ ಆನ್‌ಲೈನ್‌ನಲ್ಲಿ ಹಲವಾರು ಪಿಡಿಎಫ್ ಟು ವರ್ಡ್ ಕನ್ವರ್ಟ್ ಮಾಡುವ ವೆಬ್‌ಸೈಟ್‌ಗಳು ಲಭ್ಯವಿದೆ. ಇವುಗಳಲ್ಲಿ https://smallpdf.com/pdf-to-word, https://www.freepdfconvert.com/pdf-to-word, https://www.adobe.com/in/acrobat/online/pdf -to-word.html, https://simplypdf.com/ ಪ್ರಮುಖವಾಗಿವೆ. ಈ ವೆಬ್‌ಸೈಗಳು ಆನ್‌ಲೈನ್‌ನಲ್ಲಿ ಲಭ್ಯವಿರುವ ಕೆಲವು ಉಚಿತ ಪಿಡಿಎಫ್ - ವರ್ಡ್ ಕನ್ವರ್ಟ್ ವೆಬ್‌ಸೈಟ್‌ಗಳಾಗಿವೆ. ಈ ವೆಬ್‌ಸೈಟ್‌ಗಳಲ್ಲಿ ಹೆಚ್ಚಿನವು ಒಂದೇ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಹಾಗಾದ್ರೆ ಈ ವೆಬ್‌ಸೈಟ್‌ಗಳಲ್ಲಿ ಪಿಡಿಎಫ್ ಫೈಲ್ ಅನ್ನು ವರ್ಡ್‌ಗೆ ಬದಲಾಯಿಸುವುದಕ್ಕೆ ಯಾವ ಕ್ರಮ ಅನುಸರಿಸಬೇಕು ಅನ್ನೊದನ್ನ ಕೆಳಗಿನ ಹಂತಗಳಲ್ಲಿ ತಿಳಿಯಿರಿ.

ಆನ್‌ಲೈನ್‌ನಲ್ಲಿ ಪಿಡಿಎಫ್ ಅನ್ನು ವರ್ಡ್ ಫೈಲ್‌ಗೆ ಪರಿವರ್ತಿಸುವುದು ಹೇಗೆ?
ಹಂತ 1: ಪಿಡಿಎಫ್ ಫೈಲ್ ಅನ್ನು ವರ್ಡ್‌ಗೆ ಪರಿವರ್ತಿಸಲು ನೀವು ಬಯಸುವ ಅನೇಕ ಉಚಿತ ವೆಬ್‌ಸೈಟ್‌ಗಳಲ್ಲಿ ಯಾವುದು ಸೂಕ್ತ ಎಂದು ಮೊದಲು ಕಂಡುಹಿಡಿಯಿರಿ.
ಹಂತ 2: ನಂತರ ನಿಮ್ಮ ಆಯ್ಕೆಯ ವೆಬ್‌ಸೈಟ್ ತೆರೆಯಿರಿ.
ಹಂತ 3: ನೀವು ಪರಿವರ್ತಿಸಲು ಬಯಸುವ ಪಿಡಿಎಫ್ ಫೈಲ್ ಅನ್ನು ಆಯ್ಕೆ ಮಾಡಿ. ನಿಮ್ಮ PC ಯಿಂದ ನೀವು ಫೈಲ್ ಅನ್ನು ಆಯ್ಕೆ ಮಾಡಬಹುದು.
ಹಂತ 4: ಫೈಲ್ ಅನ್ನು ಅಪ್‌ಲೋಡ್ ಮಾಡಿದ ನಂತರ, ಕನ್ವರ್ಟ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ 5: ವೆಬ್‌ಸೈಟ್ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ, ಫೈಲ್ ಪರಿವರ್ತನೆಗೊಳ್ಳಲು ಕಾಯಿರಿ.
ಹಂತ 6: ಫೈಲ್ ಅನ್ನು ಪರಿವರ್ತಿಸಿದ ನಂತರ ವೆಬ್‌ಸೈಟ್ ತಿಳಿಸುತ್ತದೆ.
ಇದೀಗ ನೀವು ಕನ್ವರ್ಟ್ ಮಾಡಿದ ವರ್ಡ್ ಫೈಲ್ ಅನ್ನು ಡೌನ್‌ಲೋಡ್ ಮಾಡಲು ಸಾಧ್ಯವಾಗುತ್ತದೆ. ಪರಿವರ್ತಿತ ಫೈಲ್ ಕಳುಹಿಸಲು ಕೆಲವು ವೆಬ್‌ಸೈಟ್‌ಗಳು ಇಮೇಲ್ ಐಡಿ ಕೇಳಿದರೆ, ಕೆಲವು ವೆಬ್‌ಸೈಟ್‌ಗಳಲ್ಲಿ ವರ್ಡ್ ಫೈಲ್ ಅನ್ನು ನೇರವಾಗಿ ಡೌನ್‌ಲೋಡ್ ಮಾಡಬಹುದಾಗಿದೆ.


Click it and Unblock the Notifications