Home
ಟೆಕ್ ನೌಕರಿ

ನಿಮ್ಮ ಸಾಮಾನ್ಯ ವೆಹಿಕಲ್ ನ್ನು ಸ್ಮಾರ್ಟ್ ವೆಹಿಕಲ್ ಆಗಿ ಪರಿವರ್ತಿಸುವುದು ಹೇಗೆ?

By Gizbot Bureau

ನಿಮ್ಮ ವಾಯ್ಸ್ ಕಮಾಂಡ್ ಗಳಿಗೆ ಪ್ರತಿಕ್ರಿಯಿಸುವ ಮತ್ತು ನಿಮಗೆ ಅಗತ್ಯವಿರುವ ಎಲ್ಲವನ್ನೂ ಡ್ರೈವ್ ಮಾಡುತ್ತಿರುವಾಗಲೇ ಅಪ್ ಡೇಟ್ ಮಾಡುವಂತ ಸ್ಮಾರ್ಟ್ ವೆಹಿಕಲ್ ಗಳನ್ನು ಹೊಂದುವುದು ಈಗಿನ ಜಮಾನದಲ್ಲಿ ಬಹಳ ಅಗತ್ಯ. ನಾವಿಲ್ಲಿ ನಿಮ್ಮ ಸಾಮಾನ್ಯ ವಾಹನವನ್ನು ಹೇಗೆ ಸ್ಮಾರ್ಟ್ ವೆಹಿಕಲ್ ಆಗಿ ಪರಿವರ್ತಿಸಿಕೊಳ್ಳಬಹುದು ಎಂಬ ಬಗ್ಗೆ ಸಿಂಪಲ್ ಪರಿಹಾರವೊಂದನ್ನು ನೀಡುತ್ತಿದ್ದೇವೆ. ನಿಮಗೆ ಹೆಚ್ಚು ಖರ್ಚು ಮಾಡಿಸದೆ ಕೈಗೆಟುಕುವ ಬೆಲೆಯಲ್ಲಿ ಈ ಡಿವೈಸ್ ನಿಮ್ಮ ವೆಹಿಕಲ್ ನ್ನು ಸ್ಮಾರ್ಟ್ ವೆಹಿಕಲ್ ಆಗಿ ಪರಿವರ್ತಿಸಿ ಆಲ್ ವೋಸ್ಟ್ ಸ್ಮಾರ್ಟ್ ವೆಹಿಕಲ್ ಮಾಡುವ ಎಲ್ಲಾ ಕೆಲಸಗಳನ್ನು ಮಾಡುತ್ತದೆ. ಯಾವುದು ಆ ಡಿವೈಸ್? ಹೇಗೆ ಕಾರ್ಯ ನಿರ್ವಹಿಸುತ್ತದೆ. ಹೇಗೆ ನಿಮ್ಮ ವೆಹಿಕಲ್ ಗೆ ಅದನ್ನು ಅಳವಡಿಸುವುದು ಇತ್ಯಾದಿ ಎಲ್ಲಾ ಮಾಹಿತಿಗಳನ್ನು ಈ ಲೇಖನ ಒಳಗೊಂಡಿದೆ.

ಯಾವುದೇ ಸಾಮಾನ್ಯ ವೆಹಿಕಲ್ ನ್ನು ಸ್ಮಾರ್ಟ್ ವೆಹಿಕಲ್ ಆಗಿ ಪರಿವರ್ತಿಸಿ

ಯಾವುದೇ ಸಾಮಾನ್ಯ ವೆಹಿಕಲ್ ನ್ನು ಸ್ಮಾರ್ಟ್ ವೆಹಿಕಲ್ ಆಗಿ ಪರಿವರ್ತಿಸಿ

ಮಾರುಕಟ್ಟೆಯಲ್ಲಿ ಹಲವಾರು ರೀತಿಯ ವೆಹಿಕಲ್ ಗಳಿಗೆ ಅಳವಡಿಸಬಹುದಾದ ಇನ್ಫೋಮೇಟಿಕ್ ಸಿಸ್ಟಮ್ ಗಳು ಲಭ್ಯವಿದೆ. ನಾವಿಲ್ಲಿ ಇತ್ತೀಚೆಗೆ ಬಿಡುಗಡೆಗೊಂಡಿರುವ ಪೈಯೋನೀರ್ DMH-Z5290BT ಬಗ್ಗೆ ಹೇಳುತ್ತಿದ್ದೇವೆ. ಸಾಮಾನ್ಯ ವೆಹಿಕಲ್ ನ್ನು ಸ್ಮಾರ್ಟ್ ವೆಹಿಕಲ್ ಆಗಿ ಪರಿವರ್ತಿಸುವುದಕ್ಕೆ ಬೇಕಾಗುವ ಹೆಚ್ಚಿನ ಎಲ್ಲಾ ರೀತಿಯ ವೈಶಿಷ್ಟ್ಯತೆಗಳನ್ನು ಕೂಡ ಇದು ನೀಡುತ್ತದೆ. ನೀವಿಲ್ಲಿ ಗಮನಿಸಬೇಕಾಗಿರುವ ಅಂಶವೇನೆಂದರೆ ಯಾವುದೇ ಸ್ಮಾರ್ಟ್ ಕಾರಿನ ಎಕೋಸಿಸ್ಟಮ್ ನ್ನು ನಿರ್ಮಿಸುವುದು ಧ್ವನಿ-ಆಧಾರಿತ ಪ್ರತಿಕ್ರಿಯೆಗಳಿಂದ. ಸ್ಮಾರ್ಟ್ ಕಾರುಗಳಲ್ಲಿ ವಾಯ್ಸ್ ಕಮಾಂಡ್ ಗಳೇ ಹೈಲೆಟ್.

ಆಂಡ್ರಾಯ್ಡ್ ಆಟೋ

DMH-Z5290BT ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇಗೆ ಬೆಂಬಲವನ್ನು ನೀಡುತ್ತದೆ. ನೀವು ರಸ್ತೆಯಲ್ಲಿ ಗಮನವನ್ನು ಕೇಂದ್ರೀಕರಿಸಿ ಡ್ರೈವ್ ಮಾಡುತ್ತಿರುವಾಗ ನಿಮ್ಮ ವೆಹಿಕಲ್ ವಾಯ್ಸ್ ಕಮಾಂಡ್ ಮೂಲಕ ಹಲವು ರೀತಿಯ ಕೆಲಸವನ್ನು ನಿರ್ವಹಿಸುವುದಕ್ಕೆ ಇದು ಅನುವು ಮಾಡಿಕೊಡುತ್ತದೆ.ವೆಹಿಕಲ್ಲಿನ ಇನ್ಫೋಟೈನ್ಮೆಂಟ್ ಸಿಸ್ಟಮ್ ವೆಬ್ ಲಿಂಕ್ ಮೂಲಕ ಇದನ್ನು ಸಾಧಿಸುತ್ತದೆ.ವೆಬ್ ಲಿಂಕ್ ಅನೇಬಲ್ ಮಾಡಿ ಸ್ಮಾರ್ಟ್ ಕಾರಿನ ಇಕೋಸಿಸ್ಟಮ್ ನ್ನು ಸೃಷ್ಟಿಸುವುದಕ್ಕೆ ಏನು ಮಾಡಬೇಕು? ಯಾವ ಹಂತಗಳನ್ನು ಅನುಸರಿಸಬೇಕು ಎಂಬ ಬಗ್ಗೆ ವಿವರಣೆಯನ್ನು ಈ ಕೆಳಗೆ ನೀಡಲಾಗಿದೆ.

ಆಂಡ್ರಾಯ್ಡ್ ಡಿವೈಸ್ ನಲ್ಲಿ ಪೈಯೋನೀರ್ DMH-Z5290BT ಜೊತೆಗೆ ಅನುಸರಿಸಬೇಕಾಗಿರುವ ಹಂತಗಳು:

ಆಂಡ್ರಾಯ್ಡ್ ಡಿವೈಸ್ ನಲ್ಲಿ ಪೈಯೋನೀರ್ DMH-Z5290BT ಜೊತೆಗೆ ಅನುಸರಿಸಬೇಕಾಗಿರುವ ಹಂತಗಳು:

• ಗೂಗಲ್ ಪ್ಲೇ ಸ್ಟೋರ್ ಮೂಲಕ ವೆಬ್ ಲಿಂಕ್ ಹೋಸ್ಟ್ ನ್ನು ಡೌನ್ ಲೋಡ್ ಮಾಡಿ.

• ಒರಿಜಿನಲ್ ಯುಎಸ್ ಬಿ ಕೇಬಲ್ ಸಹಾಯದಿಂದ ವೆಹಿಕಲ್ಲಿನ ಇನ್ಫೋಟೈನ್ಮೆಂಟ್ ಸಿಸ್ಟಮ್ ನ್ನು ಆಂಡ್ರಾಯ್ಡ್ ಸ್ಮಾರ್ಟ್ ಫೋನಿಗೆ ಕನೆಕ್ಟ್ ಮಾಡಿ.

• ವೆಬ್ ಲಿಂಕ್ ಎಲ್ಲಾ ಅಪ್ಲಿಕೇಷನ್ ನ್ನು ಡಿವೈಸ್ ಗೆ ಡೌನ್ ಲೋಡ್ ಮಾಡಲಿ.

• ಆಪ್ಸ್ ಗಳ ಡೌನ್ ಲೋಡ್ ಆದ ನಂತರ, ನೀವು "ವೆಬ್ ಲಿಂಕ್" ಮತ್ತು "ಆಂಡ್ರಾಯ್ಡ್ ಆಟೋ" ಐಕಾನ್ ನ್ನು ನಿಮ್ಮ ವೆಹಿಕಲ್ ನ ಡಿಸ್ಪ್ಲೇಯಲ್ಲಿ ಗಮನಿಸುತ್ತೀರಿ.

• ಆಂಡ್ರಾಯ್ಡ್ ಆಟೋವನ್ನು ಟ್ಯಾಪ್ ಮಾಡುವ ಮೂಲಕ ನೀವು ವಾಯ್ಸ್ ಕಮಾಂಡ್ ಮೂಲಕ ನಿರ್ವಹಿಸಬಹುದಾದ ಹ್ಯಾಂಡ್ಸ್ ಫ್ರೀ ಗೂಗಲ್ ಅಸಿಸ್ಟೆಂಟ್, ಗೂಗಲ್ ಮ್ಯಾಪ್ಸ್, ವಾಟ್ಸ್ ಆಪ್ ಮತ್ತು ಇತ್ಯಾದಿ ಹಲವು ಅಪ್ಲಿಕೇಷನ್ ನ್ನು ವೆಹಿಕಲ್ಲಿನ ಸಿಸ್ಟಮ್ ಡಿಸ್ಪ್ಲೇಯಲ್ಲಿ ಮೂಲಕ ಬಳಸಬಹುದು.

• ಯುಟ್ಯೂಬ್, ಝೊಮೋಟೋ ಮತ್ತು ಇತರೆ ಹಲವು ಅಪ್ಲಿಕೇಷನ್ ನ್ನು ವೆಬ್ ಲಿಂಕ್ ಆಕ್ಸಿಸ್ ಮಾಡುವ ಮೂಲಕ ವೆಹಿಕಲ್ಲಿನ ಇನ್ಫೋಟೈನ್ಮೆಂಟ್ ಡಿಸ್ಪ್ಲೇಯಲ್ಲಿ ಬಳಸಬಹುದು. ಮೀಡಿಯಾ ಕಂಟೆಂಟ್ ಗಳನ್ನು ಯುಎಸ್ ಬಿ ಫೈಲ್ಸ್ ಮತ್ತು AUX-ಇನ್ ಕೇಬಲ್ ಗಳ ಮೂಲಕ ಆಕ್ಸಿಸ್ ಮಾಡಬಹುದು. ವೆಬ್ ಲಿಂಕ್ ನಲ್ಲಿ ನೀವು ಸ್ಮಾರ್ಟ್ ಫೋನ್ ಮೂಲಕ ವೆಹಿಕಲ್ಲಿನ ಸಿಸ್ಟಮ್ ಡಿಸ್ಪ್ಲೇಯಲ್ಲಿ ಸ್ಟ್ರೀಮ್ ಮಾಡುವ ವೀಡಿಯೋವನ್ನು ನೋಡುವುದಕ್ಕೂ ಕೂಡ ಅವಕಾಶ ನೀಡುತ್ತದೆ.

ಆಂಡ್ರಾಯ್ಡ್ ಆಟೋ ಬಳಸುವುದು ಹೇಗೆ?

ಆಂಡ್ರಾಯ್ಡ್ ಆಟೋ ಬಳಸುವುದು ಹೇಗೆ?

ಆಂಡ್ರಾಯ್ಡ್ ಆಟೋ ಸಾಮಾನ್ಯ ವೆಹಿಕಲ್ ಗಳಲ್ಲಿ ಸ್ಮಾರ್ಟ್ ಕಾರ್ ಫೀಚರ್ ಗನ ಅನುಭವವನ್ನು ಪಡೆಯುವುದಕ್ಕೆ ಅವಕಾಶ ಮಾಡಿಕೊಡುತ್ತದೆ. ಅದಕ್ಕಾಗಿ ನೀವು ಕಂಪ್ಯಾಟಿಬಲ್ ಆಗಿರುವ ಕಾರಿನ ಇನ್ಫೋಟೈನ್ಮೆಂಟ್ ಸಿಸ್ಟಮ್ ಗೆ ಪೈಯೋನೀರ್ DMH-Z5290BT ನ್ನು ಇನ್ಸ್ಟಾಲ್ ಮಾಡಬೇಕಾಗುತ್ತದೆ. ಡ್ರೈವಿಂಗ್ ನಲ್ಲಿ ಸುಲಭದ ಇಂಟರ್ಫೇಸ್ ಗಾಗಿ ಇದನ್ನು ನಿರ್ಮಿಸಲಾಗಿದೆ.

ಆಂಡ್ರಾಯ್ಡ್ ಆಟೋ ಮೂಲಕ ಸಾಮಾನ್ಯವಾಗಿ ಎಲ್ಲಾ ನೆಚ್ಚಿನ ಆಪ್ಸ್ ಗಳನ್ನು ಟಚ್ ಸ್ಕ್ರೀನ್ ಡಿಸ್ಪ್ಲೇ ಮೂಲಕ ವೆಹಿಕಲ್ ನಲ್ಲಿ ಬಳಕೆ ಮಾಡಬಹುದು. ಪೈಯೋನೀರ್ DMH-Z5290BT ಏಳು- ಇಂಚಿನ WVGA HD ಡಿಸ್ಪ್ಲೇಯನ್ನು ಹೊಂದಿದ್ದು ಕೆಪಾಸಿಟೀವ್ ಟಚ್ ಗೆ ಬೆಂಬಲ ನೀಡುತ್ತದೆ. ಡ್ರೈವಿಂಗ್ ನಲ್ಲಿ ಎಲ್ಲಾ ರೀತಿಯ ಪ್ರಮುಖ ಆಪ್ಸ್ ಗಳನ್ನು ಆಕ್ಸಿಸ್ ಮಾಡುವುದಕ್ಕೆ ಇದು ನೆರವು ನೀಡುತ್ತದೆ.

ದೊಡ್ಡ ಹೆಚ್ ಡಿ ಸ್ಕ್ರೀನಿನ ಡಿಸ್ಪ್ಲೇ ನೇವಿಗೇಷನ್, ಮೆಸೇಜಿಂಗ್, ಫೋನ್ ಕಾಂಟ್ಯಾಕ್ಟ್ಸ್, ಮ್ಯೂಸಿಕ್ ಮತ್ತು ಇತರೆ ಹಲವು ಅಪ್ಲಿಕೇಷನ್ ಗಳನ್ನು ಇದರಲ್ಲಿ ಆಕ್ಸಿಸ್ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಬ್ರೈಟ್ ಸ್ಕ್ರೀನ್ ಮತ್ತು ಅತ್ಯುತ್ತಮ ಕಾಂಟ್ರ್ಯಾಸ್ಟ್ ಲೆವೆಲ್ ಗಳನ್ನು ಇದು ಹೊಂದಿದೆ. ಬೇಸಿಗೆಯ ಬಿಸಿಲಿನಲ್ಲೂ ಕೂಡ ವೆಹಿಕಲ್ ನಲ್ಲಿ ಸ್ಕ್ರೀನ್ ನೋಡುವುದಕ್ಕೆ ಸಾಧ್ಯವಾಗುವಂತ ಅತ್ಯುತ್ತಮ ಡಿಸ್ಪ್ಲೇ ವ್ಯವಸ್ಥೆಯನ್ನು ಇದು ಹೊಂದಿರುತ್ತದೆ.

ಸರಳವಾದ ವಾಯ್ಸ್ ಕಮಾಂಡ್ ಮೂಲಕ ಕರೆಗಳನ್ನು ಮಾಡಲು, ಗೂಗಲ್ ಮ್ಯಾಪ್ ಆಕ್ಸಿಸ್ ಇತ್ಯಾದಿ:

ಸರಳವಾದ ವಾಯ್ಸ್ ಕಮಾಂಡ್ ಮೂಲಕ ಕರೆಗಳನ್ನು ಮಾಡಲು, ಗೂಗಲ್ ಮ್ಯಾಪ್ ಆಕ್ಸಿಸ್ ಇತ್ಯಾದಿ:

ಆಂಡ್ರಾಯ್ಡ್ ಆಟೋ ಸಹಾಯದಿಂದ ನೀವು ಆರಾಮದಾಯಕವಾಗಿ ಕರೆಗಳನ್ನು ಮಾಡಬಹುದು, ಮ್ಯೂಸಿಕ್ ಆಲಿಸಬಹುದು, ಫೋನ್ ಅಥವಾ ವಾಟ್ಸ್ ಆಪ್ ಮೆಸೇಜ್ ಗಳನ್ನು ಡ್ರೈವಿಂಗ್ ಮಾಡುತ್ತಿರುವಾಗಲೇ ಆಕ್ಸಿಸ್ ಮಾಡಬಹುದು ಮತ್ತು ವಾಯ್ಸ್ ಕಮಾಂಡ್ ಗಳ ಮೂಲಕ ನೀವು ದಾರಿ ತೋರಿಸುವುದಕ್ಕೆ ನಿಮ್ಮ ವೆಹಿಕಲ್ ನ ಇನ್ಫೋಟೈನ್ಮೆಂಟ್ ಸಿಸ್ಟಮ್ ಗೆ ತಿಳಿಸಬಹುದು. ಎಲ್ಲಾ ವ್ಯವಸ್ಥೆಯೂ ಕೂಡ ಸಿಂಪಲ್ ಗೂಗಲ್ ಅಸಿಸ್ಟೆಂಟ್ ನಂತೆ ಕಾರ್ಯ ನಿರ್ವಹಿಸುತ್ತದೆ.ಹೆಚ್ಚುವರಿಯಾಗಿ ಮ್ಯೂಸಿಕ್ ಪ್ಲೇಲಿಸ್ಟ್ ಮೂಲಕ ಮ್ಯೂಸಿಕ್ ಸ್ಟ್ರೀಮ್ ಮಾಡಬಹುದು, ಆಂಡ್ರಾಯ್ಡ್ ಆಟೋ ನಿಮಗೆ ಲೈಟ್ ಬ್ರಾಡ್ ಕಾಸ್ಟ್ ನ್ನು ಟ್ಯೂನ್ ಮಾಡುವುದಕ್ಕೂ ಬಿಡುತ್ತದೆ ಮತ್ತು ಟ್ಯೂನ್ ಇನ್ ರೇಡಿಯೋ,ಎಪಿಆರ್ ಒನ್ ಇತ್ಯಾದಿ ಆಪ್ ಗಳ ಮೂಲಕ ಇಂಟರ್ನೆಟ್ ರೇಡಿಯೋ ಆಲಿಸುವುದಕ್ಕೂ ಕೂಡ ಅವಕಾಶ ಮಾಡಿಕೊಡುತ್ತದೆ.

ಬಿಲ್ಟ್ ಇನ್ ಸ್ಪೋಟಿಫೈ ಮತ್ತು 1080P ವೀಡಿಯೋ ಪ್ಲೇಬ್ಯಾಕ್ ಸಪೋರ್ಟ್:

ಬಿಲ್ಟ್ ಇನ್ ಸ್ಪೋಟಿಫೈ ಮತ್ತು 1080P ವೀಡಿಯೋ ಪ್ಲೇಬ್ಯಾಕ್ ಸಪೋರ್ಟ್:

DMH-Z5290BT ಪೈಯೋನೀರ್ ನ ಹೊಸ ಎವಿ ರಿಸೀವರ್ ಜೊತೆಗೆ ಇಕ್ವಿಪ್ ಆಗಿರುತ್ತದೆ. ನಿಮ್ಮ ಫೋನ್ ನ್ನು ಮುಟ್ಟದೆಯೇ ಸ್ಪೋಟಿಫೈ ಮೂಲಕ ನಿಮ್ಮ ಮ್ಯೂಸಿಕ್ ಪ್ಲೇಲಿಸ್ಟ್ ನ್ನು ಬ್ರೌಸ್ ಮಾಡುವುದಕ್ಕೆ ಇದು ಅವಕಾಶ ನೀಡುತ್ತದೆ. ಅದಕ್ಕಾಗಿ ನೀವು ಬ್ಲೂಟೂತ್ ಮೂಲಕ ವೆಹಿಕಲ್ಲಿನ ಇನ್ಫೋಟೈನ್ಮೆಂಟ್ ಸಿಸ್ಟಮ್ ನ್ನು ಪೇರ್ ಮಾಡಿಕೊಳ್ಳಬೇಕಾಗುತ್ತದೆ ಅಷ್ಟೇ.

ಮುಂದಿನ ಬಾರಿ ನೀವು ಕೇವಲ ವೆಹಿಕಲ್ಲಿನಲ್ಲಿ ಕುಳಿತುಕೊಳ್ಳಬಹುದು ಮತ್ತು ಸಿಸ್ಟಮ್ ಗೆ ಸ್ವಿಚ್ ಆಗಬಹುದು. ಸ್ಪೋಟಿಫೈ ಸೆಕ್ಷನ್ ನ ಅಡಿಯಲ್ಲಿ ನಿಮ್ಮ ಕಾರಿನ ಇನ್ಫೋಟೈನ್ಮೆಂಟ್ ಸಿಸ್ಟಮ್ ನ ಡಿಸ್ಪ್ಲೇಯಲ್ಲಿ ಸ್ಪೋಟಿಫೈ ಪ್ಲೇಲಿಸ್ಟ್ ನಿಮಗೆ ಕಾಣುತ್ತದೆ.

ಯುಟ್ಯೂಬ್ ನ ಹೆಚ್ ಡಿ ಫಾರ್ಮೆಟ್ ನ ವೀಡಿಯೋಗಳನ್ನು ಕೂಡ ನೀವು ಪೈಯೋನೀರ್ DMH-Z5290BT ಮೂಲಕ ಸ್ಟ್ರೀಮ್ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಅದಕ್ಕಾಗಿ ನೀವು USB ಡ್ರೈವ್ಸ್ ಗಳನ್ನು ಬಳಸಬೇಕು.ಇದು ಸ್ಮಾರ್ಟ್ ಮೀಡಿಯಾ ಹಬ್ ನ್ನು ನಿಮ್ಮ ವೆಹಿಕಲ್ ನ ಒಳಗೆ ನಿರ್ಮಿಸುತ್ತದೆ ಮತ್ತು ನಿರಂತರವಾಗಿ ನಿಮ್ಮ ಸಾಮಾನ್ಯ ವೆಹಿಕಲ್ ನ್ನು ಸ್ಮಾರ್ಟ್ ವೆಹಿಕಲ್ ಆಗಿ ವರ್ತಿಸುವಂತೆ ಮಾಡುತ್ತದೆ.

ವೆಹಿಕಲ್ಲಿನ ಇನ್ಫೋಟೈನ್ಮೆಂಟ್ ಸಿಸ್ಟಮ್ ನ ಬೆಲೆ ಕಂಪೆನಿಯ ಅಧಿಕೃತ ವೆಬ್ ಸೈಟ್ ನಲ್ಲಿ 20,999 ರುಪಾಯಿ ಎಂದು ನಿಗದಿಗೊಳಿಸಲಾಗಿದೆ. ಆದರೆ ಆಫ್ ಲೈನ್ ಮಾರುಕಟ್ಟೆಯಲ್ಲಿ ಇದಕ್ಕಿಂತ ಕಡಿಮೆ ಬೆಲೆಯಲ್ಲಿ ನೀವು ಖರೀದಿಸುವುದಕ್ಕೆ ಅವಕಾಶವಿದೆ.

Best Mobiles in India

English summary
Pioneer DMH-Z5290BT is a car infotainment system that transforms your ordinary vehicle into a smart car. The music system is priced at Rs. 20,999 in the Indian market.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+