Home
ಟೆಕ್ ನೌಕರಿ

Google ನಲ್ಲಿ ಗೂಗಲ್‌ ಪೀಪಲ್ ಕಾರ್ಡ್‌ ಅನ್ನು ಕ್ರಿಯೆಟ್‌ ಮಾಡುವುದು ಹೇಗೆ?

ಗೂಗಲ್‌ ಸರ್ಚ್‌ನಲ್ಲಿ ನಿಮ್ಮ ಹೆಸರನ್ನು ಸರ್ಚ್‌ ಮಾಡಿದಾಗ ನಿಮ್ಮದೇ ಮಾಹಿತಿ ಗೂಗಲ್‌ ನಲ್ಲಿ ಕಂಡರೆ ಏನೋ ಒಂದು ರೀತಿಯ ಆನಂದ. ಗೂಗಲ್‌ ಸರ್ಚ್‌ನಲ್ಲಿ ಸಾಧನೆ ಮಾಡಿದವರ ಹೆಸರು ಮಾತ್ರ ಕಾಣಸಿಗುತ್ತದೆ, ಸಾಮಾನ್ಯ ವ್ಯಕ್ತಿಗಳಾದ ನಮ್ಮ ಹೆಸರು ಎಲ್ಲಿ ಸಿಗುತ್ತದೆ ಎನ್ನುವ ಬೇಸರ ಇದ್ದೆ ಇರುತ್ತೆ. ಆದರೆ ಬಳಕೆದಾರರ ಇಂತಹ ಆಸೆಯನ್ನ ಈಡೇರಿಸುವುದಕ್ಕೆ ಗೂಗಲ್‌ ಪೀಪಲ್ ಕಾರ್ಡ್ಸ್ ಅನ್ನು ಪರಿಚಯಿಸಿದೆ. ಈ ಮೂಲಕ ಬಳಕೆದಾರರು ತಮ್ಮನ್ನು ತಾವು ಗೂಗಲ್‌ ಸರ್ಚ್‌ನಲ್ಲಿ ಹುಡುಕಿಕೊಳ್ಳಬಹುದಾಗಿದೆ. ಸಾಮಾನ್ಯವಾಗಿ ಗೂಗಲ್‌ ಪಿಪಲ್ಸ್‌ ಕಾರ್ಡ್‌ ಉದ್ಯಮಿಗಳು ಮತ್ತು ಸೆಲ್ಪ ವರ್ಕರ್ಸ್‌ ಗಳಿಗಾಗಿ ಮಾಡಿದ ವರ್ಚುವಲ್ ವ್ಯವಹಾರ ಕಾರ್ಡ್‌ಗಳಾಗಿವೆ.

ಗೂಗಲ್‌

ಹೌದು, ಗೂಗಲ್‌ ತನ್ನ ಬಳಕೆದಾರರಿಗೆ ಗೂಗಲ್‌ ಪಿಪಲ್ಸ್‌ ಕಾರ್ಡ್‌ ಅನ್ನು ಪರಿಚಯಿಸಿದೆ. ಈ ಫೀಚರ್ಸ್‌ ಅನ್ನು ಬಳಸಿಕೊಂಡು, ಜನರು ತಮಗಾಗಿ ವರ್ಚುವಲ್ ವಿಸಿಟಿಂಗ್ ಕಾರ್ಡ್‌ಗಳನ್ನು ಕ್ರಿಯೆಟ್‌ ಮಾಡಿಕೊಳ್ಳಬಹುದಾಗಿದೆ. ಅಷ್ಟೇ ಅಲ್ಲ ಯಾರಾದರೂ Google ನಲ್ಲಿ ನಿಮ್ಮ ಹೆಸರನ್ನು ಸರ್ಚ್‌ ಮಾಡಿದಾಗ ಅಲ್ಲಿ ನೀವು ನೀಡಿರುವ ಮಾಹಿತಿಯನ್ನ ತೋರಿಸುತ್ತದೆ. ಈ ಸಾರ್ವಜನಿಕ ಪ್ರೊಫೈಲ್‌ಗಳು ವೃತ್ತಿಪರರಿಗೆ ಒಂದೇ ಸ್ಥಳದಲ್ಲಿ ಸಂಗ್ರಹವಾಗಿರುವ ಎಲ್ಲಾ ಪ್ರಮುಖ ನಿಖರ ಮಾಹಿತಿಗಾಗಿ ಒಂದು ನಿಲುಗಡೆ ನೀಡುವ ಗುರಿಯನ್ನು ಹೊಂದಿದೆ. ಹಾಗಾದ್ರೆ ಗೂಗಲ್‌ನಲ್ಲಿ ಪಿಪಲ್ಸ್‌ ಕಾರ್ಡ್ ಅನ್ನು ರಚಿಸುವುದು ಹೇಗೆ? ಇದರ ಬಗ್ಗೆ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌

ಜನರು ತಮ್ಮ ಹೆಸರನ್ನು ಗೂಗಲ್‌ ಸರ್ಚ್‌ನಲ್ಲಿ ನೋಡಬೇಕಾದರೆ, ನಿಮ್ಮ ಮಾಹಿತಿಯನ್ನ ಗೂಗಲ್‌ ಸರ್ಚ್‌ನಲ್ಲಿ ಬೇರೆಯವರು ಸಹ ತಿಳಿಯಬೇಕಾದರೆ ನಿವು ಗೂಗಲ್‌ನಲ್ಲಿ ಪಿಪಲ್ಸ್‌ ಕಾರ್ಡ್‌ಕ್ರಿಯೆಟ್‌ ಮಾಡಬೇಕಿದೆ. ಇನ್ನು ಗೂಗಲ್‌ ಪಿಪಲ್ಸ್‌ ಕಾರ್ಡ್‌ ಕ್ರಿಯೆಟ್‌ ಮಾಡುವುದು Google ಖಾತೆಗೆ ಸೈನ್ ಇನ್ ಮಾಡುವಷ್ಟು ಸುಲಭವಾಗಿದೆ. ಇದರಿಂದ Google ಪೀಪಲ್ ಕಾರ್ಡ್‌ ಅನ್ನು ಕ್ರಿಯೆಟ್‌ ಮಾಡುವುದು ಹೇಗೆ ಅನ್ನೊದನ್ನ ಹಂತಹಂತವಾಗಿ ತಿಳಿದುಕೊಳ್ಳೋಣ ಬನ್ನಿರಿ.

Google ಪೀಪಲ್ ಕಾರ್ಡ್‌ ಅನ್ನು ಕ್ರಿಯೆಟ್‌ ಮಾಡುವುದು ಹೇಗೆ?

Google ಪೀಪಲ್ ಕಾರ್ಡ್‌ ಅನ್ನು ಕ್ರಿಯೆಟ್‌ ಮಾಡುವುದು ಹೇಗೆ?

ಹಂತ:1 ಪೀಪಲ್ ಕಾರ್ಡ್ ರಚಿಸುವುದು ತುಂಬಾ ಸರಳವಾಗಿದ್ದು, ಮೊದಲು ನೀವು ನಿಮ್ಮ Google ಖಾತೆಗೆ ಸೈನ್ ಇನ್ ಆಗಬೇಕು.

ಹಂತ:2 ನಂತರ ನೀವು Google ಸರ್ಚ್‌ನಲ್ಲಿ ನಿಮ್ಮ ಹೆಸರನ್ನು ಸರ್ಚ್‌ ಮಾಡುವುದಕ್ಕಾಗಿ Add me to Search ಅನ್ನು ಟೈಪ್ ಮಾಡಿ

ಸ್ಟಾರ್ಟ್‌

ಹಂತ:3 ನಂತರ "ಸ್ಟಾರ್ಟ್‌" ಎಂಬ ಹೊಸ ಆಯ್ಕೆಯನ್ನು ಕೇಳುತ್ತದೆ, ಅದರ ಮೇಲೆ ಟ್ಯಾಪ್ ಮಾಡಿ

ಹಂತ:4 ಇದು ಬಳಕೆದಾರರನ್ನು ವಿವರಗಳನ್ನು ಒದಗಿಸಲು ಕೇಳುವ ಫಾರ್ಮ್ ಅನ್ನು ತೆರೆಯುತ್ತದೆ

ಹಂತ:5 ಈಗ ನಿಮಗೆ ಬೇಕಾದಲ್ಲಿ ನಿಮ್ಮ ಇಮೇಜ್‌ ಅನ್ನು ಆಡ್‌ ಮಾಡಿ, ನಿಮ್ಮದೇ ಆದ ವಿವರಣೆಯನ್ನು ಸೇರಿಸಿ, ನಿಮ್ಮ ವೆಬ್‌ಸೈಟ್‌ಗಳು ಮತ್ತು ಸಾಮಾಜಿಕ ಪ್ರೊಫೈಲ್‌ಗಳಿಗೆ ಲಿಂಕ್‌ಗಳನ್ನು ಸೇರಿಸಿ ಮತ್ತು ಫೋನ್ ಸಂಖ್ಯೆ ಮತ್ತು ಇಮೇಲ್ ಐಡಿ ಅನ್ನು ಸೇರಿಸಿ. ಇದೀಗ ನಿಮ್ಮ ಕಾರ್ಡ್‌ ಕ್ರಿಯೆಟ್‌ ಆಗಲಿದೆ.

ಗೂಗಲ್

ಗೂಗಲ್ ಪ್ರಕಾರ, ಬಳಕೆದಾರರು ಹೆಚ್ಚು ಮಾಹಿತಿಯನ್ನು ಒದಗಿಸಿದರೆ, ಇತರ ಜನರು ಅವರನ್ನು ಹುಡುಕಲು ಸುಲಭವಾಗುತ್ತದೆ. ಅಲ್ಲದೆ ಬಳಕೆದಾರರು ನೀಡುವ ವೈಯಕ್ತಿಕ ಮಾಹಿತಿಯನ್ನು ದುರುಪಯೋಗಪಡಿಸಿಕೊಳ್ಳುವುದನ್ನು ತಪ್ಪಿಸಲು ಗೂಗಲ್‌ ಕಠಿಣ ಕ್ರಮಗಳನ್ನು ಸಹ ತೆಗೆದುಕೊಂಡಿದೆ. ಇದೇ ಕಾರಣಕ್ಕೆ ಬಳಕೆದಾರರಿಗೆ ಪ್ರತಿ ಖಾತೆಗೆ ಒಂದು ಪೀಪಲ್ ಕಾರ್ಡ್ ಕ್ರಿಯೆಟ್‌ ಮಾಡಲು ಮಾತ್ರ ಅನುಮತಿಸುತ್ತದೆ. ಇದಲ್ಲದೆ, ಬಳಕೆದಾರರಿಗೆ ಯಾವುದೇ ಮೋಸದ ವಿಷಯವನ್ನು ಕಂಡರೆ ಕಂಪನಿಗೆ ಪ್ರತಿಕ್ರಿಯೆ ನೀಡಲು ಮತ್ತು ಖಾತೆಗಳನ್ನು ವರದಿ ಮಾಡಲು ಆಯ್ಕೆಗಳನ್ನು ಸಹ ನೀಡಲಾಗಿದೆ.

Best Mobiles in India

English summary
Creating a People Card is as easy as signing into your Google account. You need to follow simple steps below to sign up for Google People Cards.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+