ನಿಮಗಿಷ್ಟವಾದ ವೆಬ್ಸೈಟ್ ನ ಡೆಸ್ಕ್ ಟಾಪ್ ಶಾರ್ಟ್ ಕಟ್ ಮಾಡುವುದು ಹೇಗೆ?

Posted By: Staff
ನಿಮಗಿಷ್ಟವಾದ ವೆಬ್ಸೈಟ್ ನ ಡೆಸ್ಕ್ ಟಾಪ್ ಶಾರ್ಟ್ ಕಟ್ ಮಾಡುವುದು ಹೇಗೆ?
ಇಂಟರ್ನೆಟ್ ನಲ್ಲಿ ನಿಮಗೆ ಬೇಕಾದ್ದನ್ನು ಹುಡುಕುವಾಗ ಒಳ್ಳೆಯ ವೆಬ್ಸೈಟ್ ಗಳು ಕಂಡರೆ ನೀವು ಮಾಡುವ ಮೊದಲ ಕೆಲಸ ಏನೆಂದರೆ ಅದನ್ನು bookmark ಮಾಡುತ್ತೀರ ತಾನೇ?

ಈಗ ಅದಕ್ಕಿಂತಾ ಉತ್ತಮವಾದ ಹಾಗು ವೇಗವಾದ ವಿಧಾನವೊಂದಿದೆ. ಅದೇನೆಂದರೆ ನೀವು ಆ ವೆಬ್ಸೈಟ್ ನ short cut ಅನ್ನು ನಿಮ್ಮ desktop ಗೆ create ಮಾಡಿಕೊಂಡು ನಿಮಗೆ ಬೇಕಾದಾಗ ನಿಮಗಿಷ್ಟವಾದ ವೆಬ್ಸೈಟ್ ಅನ್ನು ನೋಡಬಹುದು.

ಇದನ್ನು ಗೂಗಲ್ ಕ್ರೋಮ್ ಬ್ರೌಸರ್ ನಲ್ಲಿ ಮಾಡಲು ಈ ಹಂತಗಳನ್ನು ಪಾಲಿಸಿ:

1) ಮೊದಲಿಗೆ ಗೂಗಲ್ ಕ್ರೋಮ್ ಅನ್ನು ಓಪನ್ ಮಾಡಿ ಅದರಲ್ಲಿ ಆ ವೆಬ್ಸೈಟ್ ಅನ್ನು ಓಪನ್ ಮಾಡಿ.

2) ಕ್ರೋಮ್ ನ ಬಲ ಭಾಗದ ಮೇಲೆ ಕಾಣುವ ಸ್ಪಾನರ್ ಇಮೇಜ್ ಮೇಲೆ ಕ್ಲಿಕ್ ಮಾಡಿ.

3) tools ಮೇಲೆ ಕ್ಲಿಕ್ ಮಾಡಿ Create Application Shortcuts ಮೇಲೆ ಕ್ಲಿಕ್ ಮಾಡಿ.

4) ಆಗ ಹೊಮ್ಮುವ ವಿಂಡೋ ಮೇಲೆ ನೀವು ಎಲ್ಲಿಗೆ ಯಾ ವೆಬ್ಸೈಟ್ ನ shortcut ಬೇಕೋ ಅದರ ಮೇಲೆ ಕ್ಲಿಕ್ ಮಾಡಿ.

5) ಇದನ್ನು ಮಾಡಿ Create ಮೇಲೆ ಕ್ಲಿಕ್ ಮಾಡಿ.

Read more about:
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot