ವಾಟ್ಸಾಪ್ ನಲ್ಲಿ ಕ್ಯೂಆರ್ ಕೋಡ್ ಕ್ರಿಯೆಟ್ ಮಾಡುವುದು ಹೇಗೆ?
ವಾಟ್ಸಾಪ್ ವಿಶ್ವದಲ್ಲೇ ಅತಿ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿರುವ ಜನಪ್ರಿಯ ಇನ್ಸಟಮಟ್ ಮೆಸೇಜಿಂಗ್ ಆಪ್. ಈಗಾಗಲೇ ತನ್ನ ಬಳಕೆದಾರರಿಗೆ ಹಲವು ಅನುಕೂಲಕರ ಫೀಚರ್ಸ್‌ಗಳನ್ನ ಪರಿಚಯಿಸಿದೆ. ಕಾಲಕ್ಕೆ ತಕ್ಕಂತೆ ಹೊಸ ಹೊಸ ಅಪ್ಡೇಟ್ ಫೀಚರ್ಸ್‌ಗಳನ್ನ ಪರಿಚಯಿಸುತ್ತಲೇ ಬಂದಿದೆ. ಇನ್ನು 2020 ರಲ್ಲಿಯೂ ಹಲವು ಅನುಕೂಲಕರ ಫಿಚರ್ಸ್ ಪರಿಚಯಿಸಿದೆ. ಇದರಲ್ಲಿ ವಾಟ್ಸಾಪ್ ಕ್ಯೂಆರ್ ಕೋಡ್ ಫೀಚರ್ಸ್ ಕೂಡ ಒಂದಾಗಿದೆ. ಕ್ಯೂಆರ್ ಕೋಡ್ ಮೂಲಕ ಕಂಟ್ಯಾಕ್ಟ್‌ಗಳನ್ನ ವಾಟ್ಸಾಪ್‌ಗೆ ಸೇರಿಸುವುದು ಇನ್ನಷ್ಟು ಸುಲಭಗೊಳಿಸಿದೆ.

ಹೌದು, ವಾಟ್ಸಾಪ್ ಈಗಾಗಲೇ ಬಳಕೆದಾರರಿಗೆ ಕ್ಯೂಆರ್ ಕೋಡ್ ಫೀಚರ್ಸ್ ಪರಿಚಯಿಸಿದೆ. ಕ್ಯೂಆರ್ ಕೋಡ್ ಬಳಸಿ ಬಳಕೆದಾರರಿಗಾಗಿ ಹೊಸ ಸಂಪರ್ಕಗಳನ್ನು ಸೇರಿಸಲು ಅವಕಾಶವನ್ನು ನೀಡಿದೆ. ವಾಟ್ಸಾಪ್ ಮೆಸೇಜ್ ಕಳುಹಿಸಲು ನೀವು ನಿಮ್ಮ ಕಂಟ್ಯಾಕ್ಟ್ ಅನ್ನು ಸೇವ್ ಮಾಡುವುದನ್ನು ಬೈಪಾಸ್ ಮಾಡುತ್ತದೆ. ಇನ್ನು ವಾಟ್ಸಾಪ್ ಕ್ಯೂಆರ್ ಕೋಡ್‌ಗಳನ್ನು ಆಂಡ್ರಾಯ್ಡ್ ಮತ್ತು ಐಒಎಸ್ ಎರಡರಿಂದಲೂ ಕೆಲವು ಸರಳ ಹಂತಗಳಲ್ಲಿ ಕ್ರಿಯೆಟ್ ಮಾಡಬಹುದು ಮತ್ತು ಸ್ಕ್ಯಾನ್ ಮಾಡಬಹುದು. ಹಾಗಾದ್ರೆ ನಿಮ್ಮ ಸ್ಮಾರ್ಟ್‌ಫೋನ್ ಬಳಸಿ ನೀವು ಕ್ಯೂಆರ್ ಕೋಡ್‌ಗಳನ್ನು ಕ್ರಿಯೆಟ್ ಮಾಡುವುದು ಮತ್ತು ಸ್ಕ್ಯಾನ್ ಮಾಡವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇನ್ನು ವಾಟ್ಸಾಪ್ QR ಕೋಡ್ ಮೂಲಕ ಇನ್ನೊಬ್ಬರ QR ಕೋಡ್ ಅನ್ನು ಸ್ಕ್ಯಾನ್ ಮಾಡಿದರೆ, ಆ ವ್ಯಕ್ತಿಯ ಕಂಟ್ಯಾಕ್ಟ್ ನಂಬರ್ ನಿಮ್ಮ ಕಂಟ್ಯಾಕ್ಟ್ ಲಿಸ್ಟ್‌ನಲ್ಲಿ ಸ್ವಯಂಚಾಲಿತವಾಗಿ ಆಡ್ ಆಗಲಿದೆ. ನೀವು ವಾಟ್ಸಾಪ್‌ನಲ್ಲಿ ಯಾರನ್ನಾದರೂ ಸೇರಿಸಲು ಬಯಸಿದರೆ ಇದು ಬಹಳ ಸುಲಭವಾದ ಮಾರ್ಗವಾಗಿ ಕಾರ್ಯನಿರ್ವಹಿಸುತ್ತದೆ. ಇದಕ್ಕಾಗಿ ನೀವು ಅನುಸರಿಸಬೇಕಾದ ಮಾರ್ಗಗಳನ್ನ ಕೆಳಗಿನ ಹಂತಗಳಲ್ಲಿ ತಿಳಿಯಿರಿ.

ಆಂಡ್ರಾಯ್ಡ್‌ನಲ್ಲಿ ವಾಟ್ಸಾಪ್ ಕ್ಯೂಆರ್ ಕೋಡ್‌ಗಳನ್ನು ಕ್ರಿಯೆಟ್ ಮಾಡುವುದು ಹೇಗೆ?
ಹಂತ:1 ವಾಟ್ಸಾಪ್ ತೆರೆಯಿರಿ ಮತ್ತು ಮೇಲಿನ ಬಲ ಮೂಲೆಯಲ್ಲಿರುವ ಮೂರು ಚುಕ್ಕೆಗಳನ್ನು ಟ್ಯಾಪ್ ಮಾಡಿ.
ಹಂತ:2 ಸೆಟ್ಟಿಂಗ್ಸ್ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:3 ಸೆಟ್ಟಿಂಗ್ಸ್ ಮೆನು ಒಳಗೆ, ನಿಮ್ಮ ಹೆಸರಿನ ಬಲಭಾಗದಲ್ಲಿರುವ ಕ್ಯೂಆರ್ ಕೋಡ್ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:4 ಇಲ್ಲಿ ನೀವು ಮೈ ಕೋಡ್ ಮತ್ತು ಸ್ಕ್ಯಾನ್ ಕೋಡ್ ಎಂಬ ಎರಡು ಆಯ್ಕೆಗಳನ್ನು ನೋಡುತ್ತೀರಿ.
ಹಂತ:5 ಮೈ ಕೋಡ್ ಪೇಜ್ ಸ್ಕ್ರೀನ್‌ಶಾಟ್ ಅನ್ನು ನೀವು ಶೇರ್ ಮಾಡಬಹುದು ಅಥವಾ ನಿಮ್ಮ ಸಂಪರ್ಕವನ್ನು ಪಡೆಯಲು ಬೇರೊಬ್ಬರು ಅದನ್ನು ಸ್ಕ್ಯಾನ್ ಮಾಡಬಹುದು.
ಹಂತ:6 ಕ್ಯೂಆರ್ ಕೋಡ್ ಸ್ಕ್ಯಾನರ್ ತೆರೆಯಲು, ಇತರರ ವಾಟ್ಸಾಪ್ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಲು ನೀವು ಸ್ಕ್ಯಾನ್ ಕೋಡ್ ಪೇಜ್‌ಅನ್ನು ಬಳಸಬಹುದು.
ಹಂತ:7 ಕೋಡ್ ಅನ್ನು ಸ್ಕ್ಯಾನ್ ಮಾಡಿದ ನಂತರ ಸಂಪರ್ಕವನ್ನು ವಾಟ್ಸಾಪ್‌ಗೆ ಸೇರಿಸಲಾಗುತ್ತದೆ.
ಹಂತ:8 ನೀವು ಕೋಡ್‌ನ ಸ್ಕ್ರೀನ್‌ಶಾಟ್ ಹೊಂದಿದ್ದರೆ, ನೀವು ಸ್ಕ್ಯಾನ್ ಕೋಡ್ ಪೇಜ್ ಒಳಗೆ ಗ್ಯಾಲರಿ ಐಕಾನ್ ಅನ್ನು ಟ್ಯಾಪ್ ಮಾಡಬಹುದು, ಇಲ್ಲಿ ನೀವು ಅದನ್ನು ಸ್ಕ್ಯಾನ್ ಮಾಡಲು ಕೋಡ್ ಅನ್ನು ಆಯ್ಕೆ ಮಾಡಬಹುದು.

ಐಫೋನ್‌ಗಳಲ್ಲಿ ವಾಟ್ಸಾಪ್ ಕ್ಯೂಆರ್ ಕೋಡ್‌ಗಳನ್ನು ಕ್ರಿಯೆಟ್ ಮಾಡುವುದು ಹೇಗೆ?
ಹಂತ:1 ವಾಟ್ಸಾಪ್ ತೆರೆಯಿರಿ ಮತ್ತು ಕೆಳಭಾಗದಲ್ಲಿರುವ ಸೆಟ್ಟಿಂಗ್ಸ್ ಟ್ಯಾಬ್ ಅನ್ನು ಟ್ಯಾಪ್ ಮಾಡಿ.
ಹಂತ:2 ನಿಮ್ಮ ಹೆಸರಿನ ಪಕ್ಕದಲ್ಲಿ ಗೋಚರಿಸುವ QR ಕೋಡ್ ಅನ್ನು ಟ್ಯಾಪ್ ಮಾಡಿ.
ಹಂತ:3 ನಿಮ್ಮ ಕ್ಯೂಆರ್ ಕೋಡ್ ಅನ್ನು ತೋರಿಸಲು ನೀವು ಬಯಸಿದರೆ ಕ್ಯೂಆರ್ ಕೋಡ್ ಪರದೆಯ ಒಳಗೆ ಟ್ಯಾಪ್ ಮಾಡಬೇಕಾಗುತ್ತೆ.

ಇನ್ನು ನಿಮ್ಮ ವಾಟ್ಸಾಪ್ ಕ್ಯೂಆರ್ ಕೋಡ್ ಸಾಕಷ್ಟು ಜನರಿಗೆ ಲಭ್ಯವಾಉತ್ತಿದ್ದು, ಅಪರಿಚಿತರಿಗೂ ಲಭ್ಯವಾಗಿದೆ ಎಂದು ನೀವು ಭಾವಿಸಿದರೆ. ಮೈ ಕೋಡ್ ಪೇಜ್‌ಗೆ ಹೋಗಿ ಅದರಲ್ಲಿರುವ ಮೇಲಿನ ಬಲ ಮೂಲೆಯಲ್ಲಿರುವ ಮೂರು-ಡಾಟ್ ಐಕಾನ್ ಅನ್ನು ಟ್ಯಾಪ್ ಮಾಡಬೇಕು. ಅದರಲ್ಲಿ ನೀವು ನಿಮ್ಮ ಕ್ಯೂಆರ್ ಕೋಡ್ ಅನ್ನು ರಿ ಸೆಟ್ ಮಾಡಬಹುದು. ನೀವು ರಿ ಸೆಟ್ ಮಾಡಿದ QR ಕೋಡ್ ಆಯ್ಕೆಯನ್ನು ಆಯ್ಕೆ ಮಾಡಬಹುದು. ಇದು ನಿಮ್ಮ ಹಿಂದಿನ ಕ್ಯೂಆರ್ ಕೋಡ್ ಅನ್ನು ಅನೂರ್ಜಿತಗೊಳಿಸುತ್ತದೆ ಮತ್ತು ನಂತರ ನಿಮಗಾಗಿ ರಚಿಸಲಾದ ಹೊಸ ಕೋಡ್ ಅನ್ನು ಶೇರ್ ಮಾಡಲು ಅವಕಾಶ ನೀಡಲಿದೆ.


Click it and Unblock the Notifications








