ಟೆಲಿಗ್ರಾಮ್‌ನಲ್ಲಿ ಚಾಟ್‌ಗಳನ್ನು ಕಸ್ಟಮೈಸ್ ಮಾಡುವುದು ಹೇಗೆ?

|

ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್‌ಗಳಲ್ಲಿ ಟೆಲಿಗ್ರಾಮ್ ಕೂಡ ಒಂದಾಗಿದೆ. ವಾಟ್ಸಾಪ್‌ನ ಪ್ರಬಲ ಪ್ರತಿಸ್ಫರ್ಧಿಯಾಗಿ ಟೆಲಿಗ್ರಾಮ್‌ ಗುರುತಿಸಿಕೊಂಡಿದೆ. ಆದರಲ್ಲೂ ವಾಟ್ಸಾಪ್‌ನ ಹೊಸ ಸೇವಾ ನಿಯಮ ವಿವಾದದ ನಂತರ ಇನ್ನಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಇತ್ತೀಚಿನ ದಿನಗಳಲ್ಲಿ ವಾಟ್ಸಾಪ್‌ನ ಹೊಸ ಗೌಪ್ಯತೆ ನೀತಿಯ ವಿವಾದದಿಂದಾಗಿ ಹೆಚ್ಚಿನ ಬಳಕೆದಾರರನ್ನು ಟೆಲಿಗ್ರಾಮ್‌ ತನ್ನತ್ತ ಸೆಳೆಯುತ್ತಿದೆ. ಅದರಲ್ಲೂ ಈ ತಿಂಗಳ ಆರಂಭದಲ್ಲಿ ಅಪ್ಲಿಕೇಶನ್ ಐದು ಮಿಲಿಯನ್ ಮಾರ್ಕ್ ಅನ್ನು ಮುಟ್ಟಿದೆ, ಕಳೆದ ಕೆಲವು ದಿನಗಳಲ್ಲಿ 25 ಮಿಲಿಯನ್ ಹೊಸ ಬಳಕೆದಾರರನ್ನು ಪಡೆದುಕೊಂಡಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ನ ಹೊಸ ಸೇವಾ ನಿಯಮ ವಿವಾದದ ನಂತರ ಟೆಲಿಗ್ರಾಮ್‌ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದೆ. ವಾಟ್ಸಾಪ್‌ನ ಮಾದರಿಯ ಅನೇಕ ಫೀಚರ್ಸ್‌ಗಳನ್ನು ಪರಿಚಯಿಸಿರುವ ಟೆಲಿಗ್ರಾಮ್‌ ಬಳಕೆದಾರರನ್ನ ಸೆಳೆಯುತ್ತಿದೆ. ಇದರಲ್ಲಿ ಕಸ್ಟಮ್‌ ಚಾಟ್‌ ಫೀಚರ್ಸ್‌ ಕೂಡ ಒಂದಾಗಿದೆ. ಹಾಗಾದ್ರೆ ಟೆಲಿಗ್ರಾಮ್‌ ಅಪ್ಲಿಕೇಶನ್‌ನಲ್ಲಿ ನಿಮ್ಮ ಇಚ್ಚೆಯಂತೆ ಚಾಟ್‌ಗಳನ್ನು ಕಸ್ಟಮೈಸ್ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ಹಂತಹಂತವಾಗಿ ತಿಳಿಸಿಕೊಡ್ತಿವಿ ಓದಿರಿ.

ಟೆಲಿಗ್ರಾಮ್‌ನಲ್ಲಿ ಚಾಟ್‌ಗಳನ್ನು ಕಸ್ಟಮೈಸ್ ಮಾಡುವುದು ಹೇಗೆ?

ಟೆಲಿಗ್ರಾಮ್‌ನಲ್ಲಿ ಚಾಟ್‌ಗಳನ್ನು ಕಸ್ಟಮೈಸ್ ಮಾಡುವುದು ಹೇಗೆ?

ಹಂತ 1: ಟೆಲಿಗ್ರಾಮ್ ಅಪ್ಲಿಕೇಶನ್ ತೆರೆಯಿರಿ.

ಹಂತ 2: ಸೆಟ್ಟಿಂಗ್‌ಗಳನ್ನು ಪ್ರವೇಶಿಸಲು ಅಪ್ಲಿಕೇಶನ್‌ನ ಕೆಳಗಿನ ಬಲ ಮೂಲೆಯಲ್ಲಿರುವ (IOSನಲ್ಲಿ) ಗೇರ್ ಐಕಾನ್ ಟ್ಯಾಪ್ ಮಾಡಿ.

ಹಂತ 3: ಅಪಿಯರೆನ್ಸ್ ಆಯ್ಕೆಯನ್ನು ಟ್ಯಾಪ್ ಮಾಡಿ.

ಹಂತ 4: ಡಾರ್ಕ್ ಮೋಡ್ ಹೇಗೆ ಕಾಣುತ್ತದೆ ಎಂಬುದನ್ನು ಆಧರಿಸಿ ‘ನೈಟ್' ಅಥವಾ ‘ಟಿಂಟೆಡ್ ನೈಟ್' ಆಯ್ಕೆಯನ್ನು ಆರಿಸಿ.

ಚಾಟ್

ಹಂತ 5: ಮುಂದಿನ ವಿಭಾಗದಲ್ಲಿ, ಚಾಟ್ ಬಬಲ್‌ ಬಣ್ಣವನ್ನು ಆರಿಸಿ.

ಹಂತ 6: ಚಾಟ್ ಬ್ಯಾಕ್‌ಗ್ರೌಂಡ್‌ ಆಯ್ಕೆಯನ್ನು ಟ್ಯಾಪ್ ಮಾಡಿ.

ಹಂತ 7: ನಿಮ್ಮ ಟೆಲಿಗ್ರಾಮ್ ಬ್ಯಾಕ್‌ಗ್ರೌಂಡ್‌ ಸಾಲಿಡ್‌ ಕಲರ್‌ ಆರಿಸಲು ‘ ಸೆಟ್‌ ಎ ಕಲರ್‌ ' ಆಯ್ಕೆಯನ್ನು ಟ್ಯಾಪ್ ಮಾಡಿ.

ಹಂತ 8: ಬ್ಯಾಕ್‌ಗ್ರೌಂಡ್‌ ಆರ್ಟ್‌ ಆಯ್ಕೆ ಮಾಡಲು ಪ್ಯಾಟರ್ನ್ ಆಯ್ಕೆಯನ್ನು ಟ್ಯಾಪ್ ಮಾಡಿ. ನಂತರ ಸೆಟ್ ಪ್ಯಾಟರ್ನ್ ಇಂಟೆನ್ಸಿಟಿ ಆಯ್ಕೆ ಮಾಡಿ.

ಹಂತ 9: ಸೆಟ್ ಬಟನ್ ಟ್ಯಾಪ್ ಮಾಡಿ.

ಚಾಟ್

ಇದಲ್ಲದೆ ಇದಕ್ಕೆ ಪರ್ಯಾಯವಾಗಿ, ಅಪ್ಲಿಕೇಶನ್‌ನಲ್ಲಿ ಲಭ್ಯವಿರುವ ಚಿತ್ರಗಳಲ್ಲಿ ಒಂದನ್ನು ನಿವು ನಿಮ್ಮ ಚಾಟ್ ಬ್ಯಾಕ್‌ಗ್ರೌಂಡ್‌ ಆಗಿ ಬಳಸಬಹುದು.

ಹಂತ 10: ‘ಚಾಟ್ ಬ್ಯಾಕ್‌ಗ್ರೌಂಡ್‌' ಆಯ್ಕೆಯನ್ನು ಟ್ಯಾಪ್ ಮಾಡಿದ ನಂತರ, ನೀವು ಬಳಸಲು ಬಯಸುವ ಚಿತ್ರದ ಮೇಲೆ ಟ್ಯಾಪ್ ಮಾಡಿ.

ಹಂತ 11: ನೀವು ಇಷ್ಟಪಡುವದನ್ನು ಆಧರಿಸಿ ಬ್ಲರ್‌ ಮತ್ತು ಚಲನೆಯ ಆಯ್ಕೆಗಳನ್ನು ಟ್ಯಾಪ್ ಮಾಡಿ.

ಹಂತ 12: ಸೆಟ್ ಬಟನ್ ಟ್ಯಾಪ್ ಮಾಡಿ.

Best Mobiles in India

Read more about:
English summary
how to customise chats in telegram messenger.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X