ನಿಮ್ಮ ಮೊಬೈಲ್‌ ಕಳೆದು ಹೋದರೆ ಯುಪಿಐ ಪಾವತಿಗಳನ್ನು ಬ್ಲಾಕ್‌ ಮಾಡುವುದು ಹೇಗೆ?

|

ಇತ್ತೀಚಿನ ದಿನಗಳಲ್ಲಿ ಯುಪಿಐ ಆಧಾರಿತ ಪಾವತಿ ಸೇವೆ ನೀಡುವ ಅಪ್ಲಿಕೇಶನ್‌ಗಳು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಇದೇ ಕಾರಣಕ್ಕೆ ಸ್ಮಾರ್ಟ್‌ಫೋನ್‌ ಹೊಂದಿರುವ ಹೆಚ್ಚಿನ ಜನರು ಯುಪಿಐ ಪಾವತಿ ಅಪ್ಲಿಕೇಶನ್‌ಗಳನ್ನು ಹೊಂದಿರುತ್ತಾರೆ. ಆದರೆ ಒಂದು ವೇಳೆ ನಿಮ್ಮ ಮೊಬೈಲ್ ಫೋನ್ ಕಳೆದು ಹೋದರೆ ನಿಮ್ಮ ಯುಪಿಐ ಪಾವತಿಗಳನ್ನು ನಿಷ್ಕ್ರಿಯಗೊಳಿಸುವುದು ಕೂಡ ಪ್ರಮುಖ ಕಾರ್ಯವಾಗಿದೆ. ನಿಮ್ಮ ಯುಪಿಐ ಪಾವತಿ ಅಪ್ಲಿಕೇಶನ್‌ಗಳಿಗೆ ಲಿಂಕ್‌ ಮಾಡಿದ ಬ್ಯಾಂಕ್‌ ಖಾತೆಯ ವಿವರಗಳನ್ನು ತೆಗೆದು ಹಾಕುವುದು ಕೂಡ ಪ್ರಮುಖವಾಗಿದೆ.

ಯುಪಿಐ

ಹೌದು, ಭಾರತದಲ್ಲಿ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಪ್ರಮುಖ ಪಾವತಿ ವ್ಯವಸ್ಥೆಯಾಗಿ ಮಾರ್ಪಟ್ಟಿದೆ. ಬಿಲ್ ಪಾವತಿಗಳಿಂದ ಹಿಡಿದು ಒಂದು ಬ್ಯಾಂಕ್ ಖಾತೆಯಿಂದ ಇನ್ನೊಂದಕ್ಕೆ ಹಣವನ್ನು ವರ್ಗಾಯಿಸುವವರೆಗೆ, ಯುಪಿಐ ಅನ್ನು ಹಣದ ನೈಜ-ಸಮಯದ ವರ್ಗಾವಣೆಯ ಅಗತ್ಯವಿರುವ ಹೆಚ್ಚಿನ ಕಾರ್ಯಗಳಿಗೆ ಬಳಸಬಹುದು. ಆದರೆ, ನಿಮ್ಮ ಮೊಬೈಲ್ ಫೋನ್ ಅನ್ನು ನೀವು ಕಳೆದುಕೊಂಡರೆ ನಿಮ್ಮ ಲಿಂಕ್ ಮಾಡಿದ ಬ್ಯಾಂಕ್ ಖಾತೆಗಳಿಂದ ಯುಪಿಐ ಪಾವತಿಗಳನ್ನು ನಿಷ್ಕ್ರಿಯಗೊಳಿಸಲು ನೀವು ಯಾವೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡಿಜಿಟಲ್

ಸದ್ಯ ಭಾರತವನ್ನು ಡಿಜಿಟಲ್ ಆರ್ಥಿಕತೆಯನ್ನಾಗಿ ಪರಿವರ್ತಿಸುವ ಸಾಮೂಹಿಕ ಗುರಿಯ ಭಾಗವಾಗಿ ದೇಶದ ಎಲ್ಲಾ ಪ್ರಮುಖ ವಾಣಿಜ್ಯ ಬ್ಯಾಂಕುಗಳು ಯುಪಿಐ ಅನ್ನು ಬೆಂಬಲಿಸುತ್ತವೆ. ಆದರೆ ಡಿಜಿಟಲ್ ಪಾವತಿಗಳನ್ನು ಸಕ್ರಿಯಗೊಳಿಸುವ ವ್ಯವಸ್ಥೆಯಾಗಿ ಯುಪಿಐನ ಬೆಳವಣಿಗೆಯೊಂದಿಗೆ, ಬಳಕೆದಾರರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಉಳಿಸಲು ಏನು ಮಾಡಬೇಕು ಎಂಬುದನ್ನು ಅರ್ಥಮಾಡಿಕೊಳ್ಳುವುದು ಸಹ ಮುಖ್ಯವಾಗಿದೆ. ಒಂದು ವೇಳೆ ನಿಮ್ಮ ಮೊಬೈಲ್ ಫೋನ್ ಕಳೆದುಕೊಂಡರೆ ಯುಪಿಐ ಪಾವತಿಗಳನ್ನು ನಿಷ್ಕ್ರಿಯಗೊಳಿಸುವುದು ಹೇಗೆ ಅನ್ನೊದನ್ನ ತಿಳಿಯಲು ಕೆಳಗಿನ ಹಂತಗಳಲ್ಲಿ ತಿಳಿಯಿರಿ.

ನಿಮ್ಮ ಸ್ಮಾರ್ಟ್‌ಫೋನ್ ಕಳೆದುಕೊಂಡರೆ ಯುಪಿಐ ಪಾವತಿಗಳನ್ನು ನಿಷ್ಕ್ರಿಯಗೊಳಿಸುವುದು ಹೇಗೆ?

ನಿಮ್ಮ ಸ್ಮಾರ್ಟ್‌ಫೋನ್ ಕಳೆದುಕೊಂಡರೆ ಯುಪಿಐ ಪಾವತಿಗಳನ್ನು ನಿಷ್ಕ್ರಿಯಗೊಳಿಸುವುದು ಹೇಗೆ?

ನಿಮ್ಮ ಮೊಬೈಲ್ ಫೋನ್ ಅನ್ನು ನೀವು ಕಳೆದುಕೊಂಡರೆ ಯುಪಿಐ ವಹಿವಾಟುಗಳನ್ನು ಹೇಗೆ ನಿಷ್ಕ್ರಿಯಗೊಳಿಸಬಹುದು ಎಂಬ ಹಂತಗಳೊಂದಿಗೆ ಪ್ರಾರಂಭಿಸುವ ಮೊದಲು, ನಿಮ್ಮ ಯುಪಿಐ ಪಿನ್ ಅಥವಾ ಇತರ ಯಾವುದೇ ಸೂಕ್ಷ್ಮ ವಿವರಗಳನ್ನು ಪ್ರಕ್ರಿಯೆಯಲ್ಲಿ ಯಾರೊಂದಿಗೂ ಹಂಚಿಕೊಳ್ಳಬಾರದು ಅನ್ನೊದು ಕೂಡ ಪ್ರಮುಖವಾಗಿದೆ.

ಹಂತ:1 ನಿಮ್ಮ ನೆಟ್‌ವರ್ಕ್ ವಾಹಕದ ಗ್ರಾಹಕ ಆರೈಕೆ ಸೇವೆಗೆ ಕರೆ ಮಾಡುವ ಮೂಲಕ ನಿಮ್ಮ ಫೋನ್ ಸಂಖ್ಯೆಯನ್ನು ನಿರ್ಬಂಧಿಸಿ. ಇದು ನಿಮ್ಮ ಸಿಮ್ ಕಾರ್ಡ್ ಅಥವಾ ಕಳೆದುಹೋದ ಮೊಬೈಲ್ ಫೋನ್ ಬಳಸಿ ವಹಿವಾಟುಗಳನ್ನು ಪ್ರಾರಂಭಿಸುವುದನ್ನು ಕಳ್ಳರನ್ನು ನಿರ್ಬಂಧಿಸುತ್ತದೆ. ನಿಮ್ಮ ಪೂರ್ಣ ಹೆಸರು, ಬಿಲ್ಲಿಂಗ್ ವಿಳಾಸ, ಮತ್ತು ನಿಮ್ಮ ವಿನಂತಿಯೊಂದಿಗೆ ಮುಂದುವರಿಯುವ ಮೊದಲು ಪರಿಶೀಲನೆಗಾಗಿ ಪಾವತಿಸಿದ ಕೊನೆಯ ರೀಚಾರ್ಜ್ ಅಥವಾ ಬಿಲ್ ಮೊತ್ತದಂತಹ ನಿಮ್ಮ ವೈಯಕ್ತಿಕ ವಿವರಗಳನ್ನು ಒದಗಿಸಲು ನಿಮ್ಮನ್ನು ಕೇಳಬಹುದು.

ಹಂತ:2 ನಿಮ್ಮ ಖಾತೆಯಿಂದ ನಿಮ್ಮ ಫೋನ್ ಸಂಖ್ಯೆಯನ್ನು ನಿರ್ಬಂಧಿಸಲು ನಿಮ್ಮ ಬ್ಯಾಂಕ್ ಸಹಾಯವಾಣಿಗೆ ಕರೆ ಮಾಡಿ ಮತ್ತು ಯುಪಿಐ ಸೇವೆಯನ್ನು ನಿಷ್ಕ್ರಿಯಗೊಳಿಸಲು ಹೇಳಿ.

ಹಂತ:3 ನಿಮ್ಮ ಮೊಬೈಲ್ ಫೋನ್ ಕಳೆದು ಹೋಗಿರುವುದರ ಬಗ್ಗೆ ಎಫ್‌ಐಆರ್ ಫೈಲ್ ಮಾಡಿ.

ಮೊಬೈಲ್

ಇದಲ್ಲದೆ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಸೈಟ್‌ನಲ್ಲಿನ FAQ ಪುಟವು ಬಳಕೆದಾರರು ತಮ್ಮ ಮೊಬೈಲ್ ಫೋನ್ ಕಳೆದುಕೊಂಡರೆ ಮೊಬೈಲ್ ಸಂಖ್ಯೆಯನ್ನು ನಿರ್ಬಂಧಿಸುವ ಬಗ್ಗೆ ಮಾತನಾಡುತ್ತದೆ. ಆದಾಗ್ಯೂ, ಬಳಕೆದಾರರು ತಮ್ಮ ಯುಪಿಐ ಪ್ರವೇಶವನ್ನು ನಿರ್ಬಂಧಿಸಲು ಸೈಟ್‌ನಲ್ಲಿ ಯಾವುದೇ ಪರಿಹಾರೋಪಾಯಗಳು ಲಭ್ಯವಿಲ್ಲ.

Best Mobiles in India

English summary
You should not share your UPI PIN or any sensitive details with anyone during the process.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X