ಫೇಸ್‌ಬುಕ್‌ ಖಾತೆ ಡಿಲೀಟ್‌ ಮಾಡುವುದು ಹೇಗೆ?

By Super
|
ಫೇಸ್‌ಬುಕ್‌ ಖಾತೆ ಡಿಲೀಟ್‌ ಮಾಡುವುದು ಹೇಗೆ?

ಸಾಮಾಜಿ ತಾಣ ಫೇಸ್‌ಬುಕ್‌ ಇತ್ತೀಚೆಗೆ ಎಷ್ಟು ಜನಪ್ರಿಯತೆ ಪಡೆದಿದೆ ಎಂದರೆ ಫೇಸ್‌ಬುಕ್‌ ಬಿಟ್ಟಿರರಾರೆ ಎಂಬುವವರಿದ್ದಾರೆ ಹಾಗೆಯೇ ಕೆಲ ಮಂದಿ ಫೇಸ್‌ಬುಕ್‌ ಸಹವಾಸ ಸಾಕಪ್ಪ ಸಾಕು ಎಂದು ತಮ್ಮ ಖಾತೆ ಡಿಲೀಟ್‌ ಮಾಡುವವರೂ ಕೂಡ ಇದ್ದಾರೆ. ಅಂದ ಹಾಗೆ ನೀವು ಕೂಡ ಫೇಸ್‌ಬುಕ್‌ ಖಾತೆ ಡಿಲೀಟ್‌ ಮಾಡೋದು ಹೇಗೆ ಎಂದು ಆಲೋಚಿಸುತ್ತಿದ್ದೀರ? ನೀವು ನಿಮ್ಮ್ ಫೇಸ್‌ಬಿಕ್‌ ಖಾತೆ ಡಿಲೀಟ್‌ ಮಾಡಲು ಈ ಕೆಳಗಿನ ಮಾರ್ಗ ಅನುಸರಿಸಿ.

ಫೇಸ್‌ಬುಕ್‌ ತನ್ನಯ ಫೀಚರ್ಸ್‌ನಲ್ಲಿ ಅಕೌಂಟ್‌ ಡಿಲೀಟ್‌ ಮಾಡುವ ಆಯ್ಕೆಗಳನ್ನು ನೀಡಿಲ್ಲ, ಒಂದು ವೇಳೆ ನೀವು ಪ್ರಯತ್ನಿಸಿದರೂ ಕೂಡ ಕೇವಲ ನಿಮ್ಮ ಅಕೌಂಟ್‌ ಡಿಆಕ್ಟಿವೇಟ್‌ ಮಾಡಲು ಮಾತ್ರ ಸಾಧ್ಯ ವಾಗುತ್ತದೆ.ಆದರೆ ನಿಮ್ಮ ಪಿಕ್ಚರ್‌ಗಳು ಹಾಗೂ ಇತರೆ ಎಲ್ಲಾ ವಚಾರಗಳು ಸರ್ವರ್‌ನಲ್ಲಿ ಹಾಗೆಯೇ ಉಳಿದಿರುತ್ತದೆ. ಹಾಗಿದ್ದಲ್ಲಿ ಬನ್ನಿ ನಿಮ್ಮ ಫೇಸ್‌ಬುಕ್‌ ಅಕೌಂಟ್‌ ಡಿಲೀಟ್‌ ಮಾಡುವುದು ಹೇಗೆ ಎಂದು ತಿಳಿದು ಕೊಳ್ಳೋಣ.

  • ಮೊದಲಿಗೆ ನಿಮ್ಮ ಅಕೌಂಟ್‌ಗೆ ಲಾಗ್‌ ಇನ್‌ ಮಾಡಿ.

  • ನಂತರ ನಿಮ್ಮ ಅಕೌಂಟ್‌ ಡಿಲೀಟ್‌ ಮಾಡಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.

ಫೇಸ್‌ಬುಕ್‌ ಅಕೌಂಟ್‌ ಡಿಲೀಟ್‌ ಲಿಂಕ್‌

ನೀವು ನಿಮ್ಮ ಫೇಸ್‌ಬುಕ್‌ನಲ್ಲಿ ಲಾಗ್‌ಇನ್‌ ಆಗಿಲ್ಲದೇ ಇದ್ದಲ್ಲಿ ಮೊದಲಿಗೆ ಲಾಗ್‌ಇನ್‌ ಮಾಡಿಕೊಳ್ಳ ಬೇಕು. ಇದಾದನಂತರ ನೀವು ಸಬ್ಮಿಟ್‌ ಬಟನ್‌ ಪ್ರೆಸ್‌ ಮಾಡಬೇಕು. ಇದಾದ ನಂತರ ನೀವು ಎರಡು ವಾರಗಳವರೆಗೆ ಫೇಸ್‌ಬುಕ್‌ಗೆ ಮತ್ತೆ ಲಾಗ್‌ಇನ್‌ ಆಗಲು ಪ್ರಯತ್ನಿಸ ಬಾರದು. ಎರಡು ವಾರಗಳನಂತರ ನಿಮ್ಮ ಫೇಸ್‌ಬುಕ್‌ ಅಕೌಂಟ್‌ ಯಶಸ್ವಿಯಾಗಿ ಡಿಲೀಟ್‌ ಆಗುತ್ತದೆ.

ಫೇಸ್‌ ಬುಕ್‌ ಡಿಲೀಟ್‌ ಮಾಡುವುದು ಹೇಗೆ ಎಂಬುದರ ವಿಡಿಯೋ ವೀಕ್ಷಿಸಿ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X