Google Pay ಅಕೌಂಟ್‌ ಅನ್ನು ಡಿಆಕ್ಟಿವೇಟ್‌ ಮಾಡುವುದು ಹೇಗೆ?

|

ಭಾರತದಲ್ಲಿ ಡಿಜಿಟಲ್‌ ಪೇಮೆಂಟ್‌ ವ್ಯವಸ್ಥೆ ದಿನೇ ದಿನೇ ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಅದರಲ್ಲೂ ಕೊರೊನಾ ವೈರಸ್‌ ಆವರಿಸಿದ ನಂತರ ದೇಶದೆಲ್ಲೆಡೆ ಯುಪಿಐ ಪಾವತಿ ಹೆಚ್ಚಳವಾಗಿದೆ. ಸದ್ಯ ಗೂಗಲ್ ಪೇ ಭಾರತದಲ್ಲಿ ಆನ್‌ಲೈನ್ ಪಾವತಿ ಮಾಡುವ ಜನಪ್ರಿಯ ಆಪ್‌ಗಳಲ್ಲಿ ಒಂದಾಗಿದೆ. ಈ ಯುಪಿಐ ಅಪ್ಲಿಕೇಶನ್ ಕಳೆದ ಕೆಲವು ವರ್ಷಗಳಲ್ಲಿ ಭಾರಿ ಸಂಖ್ಯೆಯಲ್ಲಿ ಬಳಕೆದಾರರನ್ನ ಪಡೆದುಕೊಂಡಿದೆ. ಅಲ್ಲದೆ ಪೇಟಿಎಂ ಮತ್ತು ಫೋನ್‌ಪೇಗಳ ವಿರುದ್ಧ ಭಾರಿ ಪೈಪೋಟಿಯನ್ನು ನೀಡುತ್ತಿದ್ದು, ಗ್ರಾಹಕರನ್ನು ಆಕರ್ಷಿಸುವುದಕ್ಕಾಗಿ ಕ್ಯಾಶ್‌ಬ್ಯಾಕ್ ನೀಡುತ್ತಿದೆ. ಇದು ಜನಸಾಮಾನ್ಯರಲ್ಲಿ ಅದರ ಜನಪ್ರಿಯತೆಗೆ ಒಂದು ಕಾರಣವಾಗಿದೆ.

ಗೂಗಲ್‌ಪೇ

ಹೌದು, ಗೂಗಲ್‌ಪೇ ಅಪ್ಲಿಕೇಶನ್‌ ಭಾರತದಲ್ಲಿ ಜನಪ್ರಿಯ ಯುಪಿಐ ಪಾವತಿ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಈ ಅಪ್ಲಿಕೇಶನ್ ಬಳಸಿ ನೀವು ಇತರ ಸಂಪರ್ಕಗಳಿಗೆ ಹಣವನ್ನು ವರ್ಗಾಯಿಸುವುದು ಮಾತ್ರವಲ್ಲ, ವ್ಯಾಪಾರಿಗಳಿಗೆ ಪಾವತಿ ಮಾಡಬಹುದು, ಬಿಲ್‌ಗಳನ್ನು ಪಾವತಿಸಬಹುದು ಮತ್ತು ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾಯಿಸಬಹುದು. ಇನ್ನು ಈ ಅಪ್ಲಿಕೇಶನ್‌ ಸಾಕಷ್ಟು ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸಿ ಬಳಕೆದಾರರನ್ನ ಆಕರ್ಷಿಸುತ್ತಲೇ ಇದೆ. ಒಂದು ವೇಳೆ ನೀವು ಗೂಗಲ್‌ ಪೇ ಅಕೌಂಟ್‌ ಬಳಸುವುದನ್ನು ನಿಲ್ಲಿಸಲು ಬಯಸಿದರೆ ಗೂಗಲ್‌ಪೇ ಅಕೌಂಟ್‌ ಅನ್ನು ಡಿಆಕ್ಟಿವೇಟ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಮುಂದೆ ಓದಿರಿ.

Google

Google Pay ಬಳಕೆದಾರರಿಗೆ ಕ್ಯಾಶ್‌ಬ್ಯಾಕ್‌ ಅನ್ನು ನೀಡುವ ಮೂಲಕ ಕಡಿಮೆ ಅವಧಿಯಲ್ಲಿ ಜನಪ್ರಿಯ ಗೊಂಡ ಯುಪಿಐ ಪಾವತಿ ಅಪ್ಲಿಕೇಶನ್‌. ಈ ಅಪ್ಲಿಕೇಶನ್‌ ಬಳಸಿ ನೀವು ವ್ಯಾಪಾರ ನಡೆಸಬಹುದು, ಖರೀದಿ ಮಾಡಬಹದು, ಬ್ಯಾಂಕ್‌ ಖಾತೆಗೆ ಹಣ ವರ್ಗಾವಣೆ ಮಾಡಬಹುದು, ಇದಲ್ಲದೆ ನಿಮ್ಮ ಸಂಪರ್ಕದಲ್ಲಿರುವ ಸ್ನೇಹಿತರಿಗೆ ಹಣ ಪಾವತಿ ಮಾಡಬಹುದು. ಜೊತೆಗೆ ಯಾವುದೇ ಮಾದರಿಯ ಬಿಲ್‌ಗಳನ್ನು ಸಹ ಪಾವತಿಸಬಹುದು. ಇದೆಲ್ಲದರ ಜೊತೆಎ ಈ ಪಾವತಿಗಳಿಗೆ ಕ್ಯಾಶ್‌ಬ್ಯಾಕ್‌ ಆಫರ್‌ ಸಹ ಲಭ್ಯವಾಗಲಿದೆ. ಇದು ಬಳಕೆದಾರರು ಗೂಗಲ್‌ಪೇ ನತ್ತ ಆಕರ್ಷನೆ ಒಳಗಾಲು ಮೂಲ ಕಾರಣವಾಗಿದೆ.

googlepay‌

ಇಷ್ಟೆಲ್ಲಾ ಉಪಯೋಗಗಳಿದ್ದರೂ ನೀವು ಯಾವುದೋ ಕಾರಣಕ್ಕೆ googlepay‌ ಅಕೌಂಟ್‌ ಅನ್ನು ಡಿಆಕ್ಟಿವೇಟ್‌ ಮಾಡಲು ಬಯಸಿದರೆ ಅದಕ್ಕೂ ಸಹ ಅವಕಾಶಗಳಿವೆ. ನೀವು ಕೇವಲ ಅಪ್ಲಿಕೇಶನ್‌ ಬಳಸುವುದನ್ನ ನಿಲ್ಲಿಸಿದ ಮಾತ್ರ ಡಿ ಆಕ್ಟಿವೇಟ್‌ ಆಗುವುದಿಲ್ಲ. ಇದಕ್ಕೆ ಬದಲಾಇ ನೀವು ಗೂಗಲ್‌ ಪೇ ಅಕೌಂಟ್‌ ಡಿ ಆಕ್ಟಿವೇಟ್‌ ಮಾಡಬೇಕಾದರೆ ಕೆಲವು ಸರಳ ಹಂತಗಳನ್ನು ಅನುಸರಿಸಬೇಕಿದೆ. ಹಾಗಾದ್ರೆ ಆ ಹಂತಗಳು ಯಾವುವು ಅನ್ನೊದನ್ನ ಈ ಕೆಳಗಿನ ಹಂತಗಳಲ್ಲಿ ತಿಳಿಯಿರಿ.

Google Pay ಖಾತೆಯನ್ನು ನಿಷ್ಕ್ರಿಯಗೊಳಿಸುವುದು ಹೇಗೆ?

Google Pay ಖಾತೆಯನ್ನು ನಿಷ್ಕ್ರಿಯಗೊಳಿಸುವುದು ಹೇಗೆ?

ಹಂತ 1: ನಿಮ್ಮ Google Pay ಖಾತೆಯನ್ನು ನಿಷ್ಕ್ರಿಯಗೊಳಿಸಲು ನೀವು ಯಾವುದೇ ನಿರ್ದಿಷ್ಟ ವೆಬ್‌ಸೈಟ್‌ಗೆ ಭೇಟಿ ನೀಡುವ ಅಗತ್ಯವಿಲ್ಲ. ಈ ವಿಧಾನವನ್ನು ಮೊಬೈಲ್ ಅಪ್ಲಿಕೇಶನ್‌ನಿಂದ ನೇರವಾಗಿ ಪೂರ್ಣಗೊಳಿಸಬಹುದು.
ಹಂತ 2: ಅಪ್ಲಿಕೇಶನ್ ತೆರೆದ ನಂತರ, ಮೇಲಿನ-ಎಡ ಮೂಲೆಯಲ್ಲಿ ನೀವು ಕಂಡುಹಿಡಿಯಬಹುದಾದ ನಿಮ್ಮ ಪ್ರೊಫೈಲ್‌ಗೆ ಹೋಗಿ.
ಹಂತ 3: 'Close account' ಎಂದು ಹೇಳುವ ಆಯ್ಕೆಯನ್ನು ನೀವು ಈಗ ನೋಡುತ್ತೀರಿ. ನಿಮ್ಮ ಖಾತೆಯನ್ನು ನಿಷ್ಕ್ರಿಯಗೊಳಿಸಲು ಈ ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ 4: ಮೇಲಿನ ಎಲ್ಲಾ ಹಂತಗಳು ಪೂರ್ಣಗೊಂಡ ನಂತರ, ನಿಮ್ಮ ಡಿವೈಸ್‌ನಿಂದ ಅಪ್ಲಿಕೇಶನ್ ಅನ್ನು ಅನ್‌ ಇನ್‌ಸ್ಟಾಲ್‌ ಮಾಡಿ.

Best Mobiles in India

English summary
Google Pay has become a popular mode of online payments in India.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X